ಮತ್ತೆ ‘ಅರ್ಜುನ್ ರೆಡ್ಡಿ’ ಸ್ಟೈಲ್ನಲ್ಲಿ ವಿಜಯ್ ದೇವರಕೊಂಡ; ರಿಯಲ್ ರೌಡಿ ಅವತಾರ
ವಿಜಯ್ ದೇವರಕೊಂಡ ಅವರ ಹೊಸ ಚಿತ್ರ 'ಕಿಂಗ್ಡಮ್' ಸಾಂಗ್ ಪ್ರೋಮೋ ಬಿಡುಗಡೆಯಾಗಿದೆ. ಇದು ಅವರ ನಟನೆ 'ಅರ್ಜುನ್ ರೆಡ್ಡಿ'ಯನ್ನು ನೆನಪಿಸುತ್ತದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. 'ಲೈಗರ್' ಮತ್ತು 'ದಿ ಫ್ಯಾಮಿಲಿ ಮ್ಯಾನ್' ಚಿತ್ರಗಳ ನಂತರ ವಿಜಯ್ ಅವರು ಈ ಚಿತ್ರದ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡಲು ಸಿದ್ಧರಾಗಿದ್ದಾರೆ.

ವಿಜಯ್ ದೇವರಕೊಂಡ (Vijay Devarakonda) ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇದರಲ್ಲಿ ಅವರ ಲೈಫ್ನಲ್ಲಿ ಸ್ಪೆಷಲ್ ಎನಿಸಿಕೊಂಡಿದ್ದು ‘ಅರ್ಜುನ್ ರೆಡ್ಡಿ’ ಸಿನಿಮಾ. ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರು ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದರು. ಪ್ರೀತಿಗಾಗಿ ಸದಾ ಹಪಹಪಿಸುವ ಯುವಕನ ಪಾತ್ರದಲ್ಲಿ ವಿಜಯ್ ದೇವರಕೊಂಡ ಅವರು ಮಿಂಚಿದ್ದರು. ಈಗ ಅವರು ಮತ್ತದೇ ಅವತಾರ ತಾಳಿದರೇ ಎನ್ನುವ ಪ್ರಶ್ನೆ ಮೂಡುತ್ತಿದೆ. ಇದಕ್ಕೆ ಕಾರಣ ಆಗಿರೋದು ಅವರ ನಟನೆಯ ‘ಕಿಂಗ್ಡಮ್’ ಸಿನಿಮಾ.
ವಿಜಯ್ ದೇವರಕೊಂಡ ಅವರು ‘ಲೈಗರ್’ ಸೋಲಿನ ಬಳಿಕ ಸೈಲೆಂಟ್ ಆದರು. ಆ ಬಳಿಕ ಅವರು ‘ದಿ ಫ್ಯಾಮಿಲಿ ಸ್ಟಾರ್’ ಸಿನಿಮಾ ಮೂಡಿ ಬಂತು. ಈ ಚಿತ್ರ ಫ್ಲಾಪ್ ಆಯಿತು. ಆ ಬಳಿಕ ಒಂದೊಳ್ಳೆಯ ಸ್ಕ್ರಿಪ್ಟ್ಗಾಗಿ ಹುಡುಕಾಟ ನಡೆಸಿದರು. ಆಗ ಸಿಕ್ಕಿದ್ದೇ ‘ಕಿಂಗ್ಡಮ್’ ಚಿತ್ರ. ಈ ಸಿನಿಮಾದ ಶೂಟ್ ಮುಗಿದಿದ್ದು, ಈಗ ರಿಲೀಸ್ಗೂ ರೆಡಿ ಇದೆ. ಮೇ 30ರಂದು ಚಿತ್ರ ತೆರೆಮೇಲೆ ಬರುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
View this post on Instagram
‘ಜರ್ಸಿ’ ಹೆಸರಿನ ಸಿನಿಮಾ ಮಾಡಿ ಫೇಮಸ್ ಆದ ಗೌತಮ್ ತಿನ್ನನುರಿ ಜೊತೆ ವಿಜಯ್ ದೇವರಕೊಂಡ ‘ಕಿಂಗ್ಡಮ್’ ಹೆಸರಿನ ಸಿನಿಮಾ ಮಾಡಿದ್ದಾರೆ. ಭಾಗ್ಯಶ್ರೀ ಬೋರ್ಸೆ ಈ ಚಿತ್ರಕ್ಕೆ ನಾಯಕಿ. ಈ ಸಿನಿಮಾದ ಸಾಂಗ್ ಪ್ರೋಮೋ ರಿಲೀಸ್ ಆಗಿದ್ದು, ಲಿಪ್ ಲಾಕ್ ದೃಶ್ಯ ಗಮನ ಸೆಳೆದಿದೆ. ಇದನ್ನು ನೋಡಿದ ಅನೇಕರಿಗೆ ವಿಜಯ್ ಅವರಲ್ಲಿ ‘ಅರ್ಜುನ್ ರೆಡ್ಡಿ’ ಖದರ್ ಮತ್ತೆ ಕಾಣಿಸಿದೆ.
ಇದನ್ನೂ ಓದಿ: ವಿಜಯ್ ದೇವರಕೊಂಡಗೆ ನಾಯಕಿಯಾದ ಭಾಗ್ಯಶ್ರೀ ಬೋರ್ಸೆ, ಯಾರೀಕೆ?
‘ಕಿಂಗ್ಡಮ್’ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರು ಶಾರ್ಟ್ ಹೇರ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಟೀಸರ್ ಗಮನ ಸೆಳೆದಿದೆ. ಈ ಚಿತ್ರದ ‘ಹೃದಯಂ ಲೋಪಲ..’ ಹಾಡು ಬಿಡುಗಡೆ ಆಗಿದ್ದು, ಇದರ ಭಾಗವಾಗಿ ಈ ಟೀಸರ್ ಮೂಡಿ ಬಂದಿದೆ. ಇದನ್ನು ನೋಡಿದ ಅನೇಕರು ‘ರಿಯಲ್ ರೌಡಿ ಅವತಾರ’ ಎಂದು ಹೇಳಿದ್ದಾರೆ. ಅನೇಕರಿಗೆ ಅರ್ಜುನ್ ರೆಡ್ಡಿ ಕಾಣಿಸಿದ್ದಾನೆ. ಸಿನಿಮಾದ ಟ್ರೇಲರ್ ನೋಡಿದರೆ ಮುಂದೇನು ಎಂದು ತಿಳಿಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.