
ವಿಜಯ್ ದೇವರಕೊಂಡ ನಟನೆಯ ‘ಕಿಂಗ್ಡಮ್’ ಸಿನಿಮಾ (Vijay Deverakonda) ಮೊದಲ ದಿನವೇ ಬಾಕ್ಸ್ ಆಫೀಸ್ ಲೂಟಿ ಮಾಡಿದೆ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದೆ. ಈ ಚಿತ್ರದ ಮೂಲಕ ಅವರು ಗೆದ್ದು ಬೀಗಿದರು ಎಂದು ಅನೇಕರು ಹೇಳಿದ್ದಾರೆ. ಸಿನಿಮಾದ ಗಳಿಕೆ ದಿನ ಕಳೆದಂತೆ ಹೆಚ್ಚುವ ನಿರೀಕ್ಷೆ ಇದೆ. ವಿಜಯ್ ಮಾಸ್ ಅವತಾರ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಈ ಚಿತ್ರದ ಗೆಲುವು ಉಳಿದ ಸಿನಿಮಾಗಳ ಮೇಲೆ ಪ್ರಭಾವ ಬೀರುವ ನಿರೀಕ್ಷೆ ಇದೆ.
ವಿಜಯ್ ದೇವರಕೊಂಡ ಅವರು ‘ಲೈಗರ್’ ಸಿನಿಮಾ ಬಳಿಕ ಮಾಸ್ ಅವತಾರ ತಾಳಿರಲಿಲ್ಲ. ಈಗ ‘ಕಿಂಗ್ಡಮ್’ ಸಿನಿಮಾದಲ್ಲಿ ಅವರು ಸಖತ್ ಮಾಸ್ ರೂಪದಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರಿಗೆ ಇಷ್ಟ ಆಗಿದೆ. ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರ ಮೊದಲ ದಿನ ಭಾರತದಲ್ಲಿ 16.50 ಕೋಟಿ ರೂಪಾಯಿ ಬಾಚಿಕೊಂಡಿದೆ. ಮೊದಲ ದಿನ ಈ ಚಿತ್ರಕ್ಕೆ ಬಂಪರ್ ಕಲೆಕ್ಷನ್ ಆದಂತೆ ಆಗಿದೆ. ವಿಶ್ವ ಮಟ್ಟದಲ್ಲಿ ಸಿನಿಮಾ 33 ಕೋಟಿ ರೂಪಾಯಿ ಬಾಚಿಕೊಂಡಿದೆ.
Movie matram vere vere level 🔥🔥
“MANAM KOTTESAM”@gowtham19 em direction anna idi VD KGF@anirudhofficial BGM TOP NOTCH ⚡@TheDeverakonda 🛐#KingdomReview#KingdomMANAMKODTHUNAM#Kingdom pic.twitter.com/iqY3pvNiti— AA RUTHLESS 🗡️ (@mr_sai_varshith) July 31, 2025
‘ಕಿಂಗ್ಡಮ್’ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರು ಕಾನ್ಸ್ಟೇಬಲ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಗಂತ ಪಾತ್ರ ಇಷ್ಟಕ್ಕೆ ಸೀಮಿತ ಆಗಲ್ಲ. ಅವರು ನಂತರ ಸ್ಪೈ ಆಗುತ್ತಾರೆ. ಇದರ ಜೊತೆ ಅಣ್ಣನಿಗಾಗಿ ಹುಡಕಾಟ ನಡೆಸುವ ವ್ಯಕ್ತಿಯಾಗೂ ಕಾಣಿಸುತ್ತಾರೆ. ವಿಜಯ್ ದೇವರಕೊಂಡ ಅವರ ಈ ಚಿತ್ರ ಜನರ ಮನ ಗೆದ್ದಿದೆ.
ಇದನ್ನೂ ಓದಿ: ‘ಕಿಂಗ್ಡಮ್’ ಗೆಲುವು, ವಿಜಯ್ ದೇವರಕೊಂಡಗೆ ರಶ್ಮಿಕಾ ಹೇಳಿದ್ದೇನು?
‘ಕಿಂಗ್ಡಮ್’ ಚಿತ್ರವನ್ನು ಗೌತಮಿ ತಿನ್ನನುರಿ ಅವರು ನಿರ್ದೇಶನ ಮಾಡಿದ್ದಾರೆ. ನಾಗ ವಂಶಿ ಅವರು ಈ ಚಿತ್ರವನ್ನು ‘ಸಿತಾರಾ ಎಂಟರ್ಟೇನ್ಮೆಂಟ್’ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ವಿಜಯ್ ದೇವರಕೊಂಡ, ಸತ್ಯದೇವ್, ಭಾಗ್ಯಶ್ರೀ ಬೋರ್ಸೆ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ಬುಕ್ ಮೈ ಶೋನಲ್ಲಿ 8 ರೇಟಿಂಗ್ ಪಡೆದುಕೊಂಡಿದೆ. ಈ ಚಿತ್ರ ಅನಾಯಾಸವಾಗಿ 100 ಕೋಟಿ ರೂಪಾಯಿ ಗಳಿಕೆ ಮಾಡಬಹುದು ಎಂಬ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:26 am, Fri, 1 August 25