ಒಂದೇ ತಿಂಗಳಲ್ಲಿ ಒಟಿಟಿಗೆ ಬರ್ತಿದೆ ಹಿಟ್ ಸಿನಿಮಾ; ಇಲ್ಲಿದೆ ವಿವರ

‘ಮಹಾರಾಜ’ ಸಿನಿಮಾ ಮೂಲ ತಮಿಳು ಚಿತ್ರ. ಇದನ್ನು ತಮಿಳಿನ ಜೊತೆಗೆ ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಡಬ್ ಮಾಡಿ ರಿಲೀಸ್ ಮಾಡಲಾಗುತ್ತಿದೆ. ಈ ಕಾರಣದಿಂದ ಸಿನಿಮಾದ ಬಗ್ಗೆ ಹೈಪ್ ಹೆಚ್ಚಿದೆ. 20 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾ ಸಸ್ಪೆನ್ಸ್ ಶೈಲಿಯಲ್ಲಿ ಮೂಡಿ ಬಂದಿದೆ.

ವಿಜಯ್
Follow us
|

Updated on: Jul 08, 2024 | 2:25 PM

ಇದು ಒಟಿಟಿ ಯುಗ. ಥಿಯೇಟರ್​ನಲ್ಲಿ ಸಿನಿಮಾ ರಿಲೀಸ್ ಆಗಿ ಎರಡೇ ವಾರಕ್ಕೆ ಒಟಿಟಿಗೆ ಬಂದ ಉದಾಹರಣೆ ಇದೆ. ಈಗ ತಮಿಳಿನಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದ ವಿಜಯ್ ಸೇತುಪತಿ ನಟನೆಯ ‘ಮಹರಾಜ’ ಸಿನಿಮಾ ಕೇವಲ ತಿಂಗಳ ಒಳಗೆ ಒಟಿಟಿಗೆ ಕಾಲಿಡುತ್ತಿದೆ. ಈ ಬಗ್ಗೆ ಒಟಿಟಿ ಕಡೆಯಿಂದ ಅಧಿಕೃತ ಘೋಷಣೆ ಆಗಿದೆ. ಸಿನಿಮಾ ಎಲ್ಲಿ, ಯಾವಾಗ ಪ್ರಸಾರ ಕಾಣುತ್ತಿದೆ ಎನ್ನುವ ಬಗ್ಗೆ ಇಲ್ಲಿದೆ ವಿವರ.

ನಿಧಿಲನ್​ ಸಾಮಿನಾಥನ್​ ಅವರು ‘ಮಹಾರಾಜ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾ ತಂಡದವರು ಈ ಚಿತ್ರದ ಯಶಸ್ಸನ್ನು ಆಚರಿಸಿಕೊಂಡಿದ್ದರು. ಈಗ ಸಿನಿಮಾ ನೆಟ್​ಫ್ಲಿಕ್ಸ್ ಮೂಲಕ ಪ್ರಸಾರ ಕಾಣುತ್ತಿದೆ. ಜುಲೈ 12ರಂದು ಈ ಸಿನಿಮಾ ಒಟಿಟಿಯಲ್ಲಿ ಪ್ರಸಾರ ಕಾಣಲಿದೆ. ಈ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

‘ಮಹಾರಾಜ’ ಸಿನಿಮಾ ಮೂಲ ತಮಿಳು ಚಿತ್ರ. ಇದನ್ನು ತಮಿಳಿನ ಜೊತೆಗೆ ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಡಬ್ ಮಾಡಿ ರಿಲೀಸ್ ಮಾಡಲಾಗುತ್ತಿದೆ. ಈ ಕಾರಣದಿಂದ ಸಿನಿಮಾದ ಬಗ್ಗೆ ಹೈಪ್ ಹೆಚ್ಚಿದೆ. 20 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾ ಸಸ್ಪೆನ್ಸ್ ಶೈಲಿಯಲ್ಲಿ ಮೂಡಿ ಬಂದಿದೆ.

ಇದನ್ನೂ ಓದಿ: ವಿಜಯ್ ಸೇತುಪತಿ ನಟನೆಯ 50ನೇ ಸಿನಿಮಾ ‘ಮಹಾರಾಜ’ ಟ್ರೇಲರ್; ಮತ್ತೆ ಡಿಫರೆಂಟ್ ಪಾತ್ರ

ವಿಜಯ್ ಸೇತುಪತಿ ಮಹಾರಾಜ ಹೆಸರಿನ ಪಾತ್ರ ಮಾಡಿದ್ದಾರೆ. ಮಮತಾ ಮೋಹನ್​ದಾಸ್, ನಟರಾಜ್, ಭಾರತಿರಾಜ, ವಿನೋದ್ ಸಾಗರ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸುಧಾನ್ ಸುದರ್ಶನ್ ಹಾಗೂ ಜಗದೀಶ್ ಪಳನಿಸ್ವಾಮಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಬಾಲಿವುಡ್​ ನಿರ್ದೇಶಕ ಅನುರಾಗ್​ ಕಶ್ಯಪ್​ ಅವರು ಈ ಚಿತ್ರದಲ್ಲಿ ವಿಲನ್​ ಪಾತ್ರ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ಅಂಕೋಲಾ: ಹೆದ್ದಾರಿ ಮೇಲೆ ಗುಡ್ಡ ಕುಸಿದು 9 ಜನ ಮಣ್ಣಿನಡಿ ಸಿಲುಕಿರುವ ಶಂಕೆ

ಎಲ್​ಪಿಜಿ ಗ್ಯಾಸ್ ಕನೆಕ್ಷನ್ ಹೊಂದಿರುವವರು ಇಕೆವೈಸಿ ಅಪ್​ಡೇಟ್ ಮಾಡಬೇಕು!

ಅಶ್ವಥ್ ನಾರಾಯಣ ಲಂಚಕೋರರ ಪಿತಾಮಹ ಎಂದ ಶಿವಕುಮಾರ್, ಸಿಡಿದ ಬಿಜೆಪಿ ಶಾಸಕರು

ಪಾಕಿಸ್ತಾನದಲ್ಲಿ ಜೂನಿಯರ್ ಬುಮ್ರಾ: ವಿಡಿಯೋ ವೈರಲ್

ಹಾವೇರಿ: ವರದಾ ನದಿ ಉಕ್ಕಿ ಸೇತುವೆ ಮುಳುಗಡೆ, ಹರಿಯುವ ನದಿಯಲ್ಲೇ ವಾಹನ ಚಾಲನೆ

ಕುಮಾರಸ್ವಾಮಿ ಸಿನಿಮಾ ಶೈಲಿಯಲ್ಲಿ ಮಾತಾಡುತ್ತಾರೆ, ಗಾಂಭೀರ್ಯತೆ ಇಲ್ಲ:ಡಿಕೆಶಿ

ಕಳಸಾ-ಹೊರನಾಡು ನಡುವಿನ ಹೆಬ್ಬಾರೆ ಸೇತುವೆ ಜಲಾವೃತ,ಭದ್ರೆಯಲ್ಲಿ ಹೆಚ್ಚು ನೀರು

ದಕ್ಷಿಣ ಕರ್ನಾಟಕ 7 ಜಿಲ್ಲೆಗಳಲ್ಲಿ ನಿಲ್ಲದ ಮಳೆ ಅಬ್ಬರ, ಜನಜೀವನ ಅಸ್ತವ್ಯಸ್ತ

Legislative Session Live: ವಿಧಾನಸಭೆ ಅಧಿವೇಶನ; ಮಧ್ಯಾಹ್ನದ ಕಲಾಪ ಆರಂಭ

ವಿದ್ಯುತ್​​ ತಂತಿ ತಗುಲಿ ಹೆಬ್ಬಾವು ಸಾವು, ಆತ್ಮಹತ್ಯೆ ಎಂದ ನೆಟ್ಟಿಗರು