AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Deepika Padukone : ಅನಂತ್ ಅಂಬಾನಿ ಸಂಗೀತ ಕಾರ್ಯಕ್ರಮದಲ್ಲಿ ಸೀರೆಯಲ್ಲಿ ಮಿಂಚಿದ ನಟಿ ದೀಪಿಕಾ, ಈ ಸೀರೆ ಬೆಲೆ ಎಷ್ಟು ಗೊತ್ತಾ?

ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯವರು ತಾಯಿಯಾಗುತ್ತಿರುವ ಖುಷಿಯ ನಡುವೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಸಂಗೀತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಡಿಂಪಲ್ ಬೆಡಗಿ ನೇರಳೆ ಬಣ್ಣದ ಸೀರೆಯಲ್ಲಿ ಮಿಂಚಿದ್ದು, ನಟಿಯ ಲುಕ್‌ ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಹಾಗಾದ್ರೆ ನಟಿಯು ಧರಿಸಿದ್ದ ಈ ಸೀರೆಯ ಬೆಲೆಯ ಬಗ್ಗೆ ತಿಳಿದರೆ ನೀವು ಆಶ್ಚರ್ಯ ಪಡುತ್ತೀರಾ.

Deepika Padukone : ಅನಂತ್ ಅಂಬಾನಿ ಸಂಗೀತ ಕಾರ್ಯಕ್ರಮದಲ್ಲಿ ಸೀರೆಯಲ್ಲಿ ಮಿಂಚಿದ ನಟಿ ದೀಪಿಕಾ, ಈ ಸೀರೆ ಬೆಲೆ ಎಷ್ಟು ಗೊತ್ತಾ?
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Jul 08, 2024 | 3:58 PM

Share

ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಾಯಿಯಾಗುತ್ತಿರುವ ವಿಚಾರವನ್ನು ಅನೌನ್ಸ್ ಮಾಡಿದಾಗಿನಿಂದಲೂ ನಟಿಯೂ ಬಾರಿ ಸುದ್ದಿಯಲ್ಲಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಕಲ್ಕಿ ಸಿನಿಮಾ ಪ್ರಮೋಷನ್‌ ವೇಳೆ ಬ್ಲ್ಯಾಕ್‌ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇದೀಗ ಗರ್ಭಿಣಿಯಾಗಿರುವ ದೀಪಿಕಾ ನೇರಳೆ ಬಣ್ಣದ ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದು ಸೀರೆಯ ಬೆಲೆಯ ವಿಚಾರವಾಗಿ ಸುದ್ದಿಯಾಗಿದ್ದಾರೆ.

ನೇರಳೆ ಬಣ್ಣ ಸೀರೆಯಲ್ಲಿ ಮಿಂಚಿದ ನಟಿ ದೀಪಿಕಾ ಪಡುಕೋಣೆ

ಜುಲೈ 5 ರಂದು ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮಂರ್ಚಂಟ್‌ ಸಂಗೀತ ಕಾರ್ಯಕ್ರಮದಲ್ಲಿ ನೇರಳೆ ಬಣ್ಣದ ಸೀರೆಯಲ್ಲಿ ನಟಿ ದೀಪಿಕಾ ಪಡುಕೋಣೆ ಮಿಂಚಿದ್ದರು. ಈ ಕಾರ್ಯಕ್ರಮದಲ್ಲಿ ಸಿಂಪಲ್ ಮೇಕಪ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದ ನಟಿಯು ಸೀರೆಗೆ ಮ್ಯಾಚ್ ಆಗುವಂತಹ ಪರ್ಲ್ ಚೋಕರ್ ಧರಿಸಿದ್ದರು. ಈ ಸೀರೆಯಲ್ಲಿ ಬೇಬಿ ಬಂಪ್ ಪೋಸ್ ನೀಡಿರುವ ನಟಿಯು ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಟಿಯ ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದು ಫ್ಯಾನ್ಸ್ ಫಿದಾ ಆಗಿದ್ದಾರೆ.

ಇದನ್ನೂ ಓದಿ: ರಣವೀರ್ ಸಿಂಗ್​ಗೆ ಗಂಡು ಮಗು ಬೇಕೋ ಅಥವಾ ಹೆಣ್ಣು ಮಗು? ನಟನ ಉತ್ತರ ಏನು?

ನಟಿ ದೀಪಿಕಾ ಧರಿಸಿದ್ದ ಸೀರೆಯ ಬೆಲೆ ಎಷ್ಟು

ಸಂಗೀತ್ ಕಾರ್ಯಕ್ರಮಕ್ಕೆ ನಟಿ ದೀಪಿಕಾರವರು ಧರಿಸಿದ್ದ ನೇರಳೆ ಬಣ್ಣದ ಸೀರೆಯನ್ನು ಡಿಸೈನರ್ ಕರಣ್ ಟೊರಾನಿ ವಿನ್ಯಾಸ ಮಾಡಿದ್ದಾರೆ. ಈ ನೇರಳೆ ಬಣ್ಣದ ಶಿಫಾನ್ ಸೀರೆಗೆ ಚಿನ್ನದ ಕಸೂತಿಯನ್ನು ಮಾಡಲಾಗಿದ್ದು, ಇದನ್ನು ತಯಾರಿಸಲು 3,400 ಗಂಟೆಗಳು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಈ ನಟಿಯು ಧರಿಸಿದ್ದ ಈ ಸೀರೆಯ ಬೆಲೆಯು ಸಾಕಷ್ಟು ಸುದ್ದಿಯಾಗುತ್ತಿದೆ. ಇದು ಟೊರಾನಿ ಕ್ಲಾಸಿಕ್ ಕಲೆಕ್ಷನ್‌ ಆಗಿದ್ದು, ಈ ಸೀರೆಯ ಬೆಲೆ 1,39,500 ರೂ ಆಗಿದ್ದು, ಬ್ಲೌಸ್ ಬೆಲೆ 46,500 ರೂ ಹಾಗೂ ಪೆಟ್ಟಿಕೋಟ್ ಬೆಲೆ 7,500 ರೂಪಾಯಿಯಂತೆ. ಒಟ್ಟಾರೆಯಾಗಿ ಈ ಸೀರೆಯ ಬೆಲೆ ಸರಿಸುಮಾರು 1 ಲಕ್ಷದ 92 ಸಾವಿರ ರೂಪಾಯಿ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.