ಈ ಎರಡು ಬಿಗ್ ಬಜೆಟ್ ಚಿತ್ರಗಳ ಅವಧಿ ಬರೋಬ್ಬರಿ 3 ಗಂಟೆ

ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿರುವ ಎರಡು ಭಾರಿ ಬಜೆಟ್​ನ, ದೊಡ್ಡ ಸ್ಟಾರ್ ನಟರ ಸಿನಿಮಾಗಳ ಅವಧಿ 3 ಗಂಟೆಗಳ ಕಾಲ ಇರಲಿದೆ. 2:30 ಸಿನಿಮಾಗಳನ್ನೇ ಪ್ರೇಕ್ಷಕ ಬೋರು ಎನ್ನುತ್ತಿರುವ ಕಾಲದಲ್ಲಿ 3 ಗಂಟೆ ಸಿನಿಮಾ ಪ್ರೇಕ್ಷಕರ ಹಿಡಿದಿಡಲಿದೆಯೇ?

ಈ ಎರಡು ಬಿಗ್ ಬಜೆಟ್ ಚಿತ್ರಗಳ ಅವಧಿ ಬರೋಬ್ಬರಿ 3 ಗಂಟೆ
Follow us
| Updated By: ರಾಜೇಶ್ ದುಗ್ಗುಮನೆ

Updated on:Aug 26, 2024 | 7:05 AM

ಸದ್ಯ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಈಗಾಗಲೇ ಕನ್ನಡದಲ್ಲಿ ‘ಭೀಮ’, ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾಗಳು ರಿಲೀಸ್ ಆಗಿ ಯಶಸ್ಸು ಕಂಡಿವೆ. ಅತ್ತ ಹಿಂದಿಯಲ್ಲಿ ‘ಸ್ತ್ರೀ 2’ ಚಿತ್ರ ರಿಲೀಸ್ ಆಗುತ್ತಿದೆ. ತಮಿಳಿನಲ್ಲಿ ರಿಲೀಸ್ ಆದ ‘ರಾಯನ್’ ಚಿತ್ರ ಒಟಿಟಿಗೆ ಲಗ್ಗೆ ಇಟ್ಟಿದೆ. ಸದ್ಯ ಮುಂದಿನ ದಿನಗಳಲ್ಲಿ ಮತ್ತಷ್ಟು ಸಿನಿಮಾಗಳು ಬಿಡುಗಡೆಗೆ ರೆಡಿ ಇವೆ. ಈ ಪೈಕಿ ನಾನಿ ನಟನೆಯ ‘ಸರಿಪೋದಾ ಶನಿವಾರಂ’ ಹಾಗೂ ದಳಪತಿ ವಿಜಯ್ ನಟನೆಯ ‘ಗೋಟ್’ (GOAT) ಕೂಡ ಒಂದು. ಎರಡೂ ಚಿತ್ರಗಳ ಅವಧಿ ಸುಮಾರು 3 ಗಂಟೆ ಇದೆ.

ಇತ್ತೀಚಿನ ವರ್ಷಗಳಲ್ಲಿ ಸಿನಿಮಾದ ಅವಧಿ ಬಗ್ಗೆ ಜನರು ಹೆಚ್ಚು ಗಮನ ಹರಿಸುತ್ತಾರೆ. ಸಿನಿಮಾ ಎರಡೂವರೆ ಗಂಟೆ ಇದ್ದರೆ ಸಹಿಸಿಕೊಳ್ಳಬಹುದು, ಅದಕ್ಕೂ ಹೆಚ್ಚಿದ್ದರೆ ಹೇಗೆ ನೋಡೋದು ಎನ್ನುವ ಪ್ರಶ್ನೆ ಮೂಡುತ್ತದೆ. ಈಗ ರಿಲೀಸ್ ಆಗುತ್ತಿರುವ ಎರಡೂ ಸಿನಿಮಾಗಳ ಅವಧಿ ಸುಮಾರು 3 ಗಂಟೆ ಇದೆಯಂತೆ. ಇದು ಅವರ ಫ್ಯಾನ್ಸ್​ಗೆ ಖುಷಿ ಕೊಟ್ಟರೆ, ಕೆಲವರಿಗೆ ಚಿಂತೆಯನ್ನು ಉಂಟು ಮಾಡಿದೆ.

‘ಸರಿಪೋದಾ ಶನಿವಾರಂ’ ಸಿನಿಮಾನ ವಿವೇಕ್ ಅತ್ರೇಯಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಆ್ಯಕ್ಷನ್, ಎಮೋಷನ್ ಎಲ್ಲವೂ ಇದೆ. ಈ ಚಿತ್ರ ಆಗಸ್ಟ್ 29ರಂದು ಬಿಡುಗಡೆ ಕಾಣುತ್ತಿದೆ. ಇನ್ನು, ‘ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಚಿತ್ರವನ್ನು ವೆಂಕಟ್ ಪ್ರಭು ನಿರ್ದೇಶನ ಮಾಡುತ್ತಿದ್ದು, ಸೆಪ್ಟೆಂಬರ್ 5ರಂದು ಬಿಡುಗಡೆ ಆಗಲಿದೆ.

ಇದನ್ನೂ ಓದಿ:ದಳಪತಿ ವಿಜಯ್ ಪಕ್ಷದ ಧ್ವಜ ನೋಡಿ

ಸದ್ಯ ಎರಡೂ ಸಿನಿಮಾಗಳು ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಳಿಸಿದ್ದು U/A ಪ್ರಮಾಣಪತ್ರ ಪಡೆದಿದೆ. ‘ಗೋಟ್’ ಸಿನಿಮಾದ ಅವಧಿ 2 ಗಂಟೆ 59 ನಿಮಿಷ ಇದೆ. ನಾನಿ ಸಿನಿಮಾದ ಅವಧಿ ಎರಡು ಗಂಟೆ 50 ನಿಮಿಷ ಇದೆ.

‘ಸರಿಪೋದಾ ಶನಿವಾರಂ’ ಚಿತ್ರಕ್ಕೆ ಇಷ್ಟು ದೀರ್ಘ ಅವಧಿ ಬೇಕು ಎಂದು ತಂಡ ನಂಬಿದೆ. ಈ ಸಿನಿಮಾದಲ್ಲಿ ಆ್ಯಕ್ಷನ್ ಜೊತೆ ಸುಂದರ ಲವ್ ಸ್ಟೋರಿ ಕೂಡ ಇದೆ. ಆರಂಭದಲ್ಲಿ ಸಿನಿಮಾದ ಅವಧಿಯನ್ನು ಎರಡೂವರೆ ಗಂಟೆಗೆ ನಿಲ್ಲಿಸಲು ತಂಡ ಆಲೋಚಿಸಿತ್ತು. ಕೊನೆಗೆ 20 ನಿಮಿಷಗಳ ದೃಶ್ಯವನ್ನು ಸೇರಿಸಲಾಗಿದೆ.

ಇನ್ನು ದಳಪತಿ ವಿಜಯ್ ಸಿನಿಮಾಗಳ ಅವಧಿ ದೀರ್ಘ ಇದ್ದಷ್ಟು ಫ್ಯಾನ್ಸ್ ಎಂಜಾಯ್ ಮಾಡುತ್ತಾರೆ. ಅವರ ಈ ಮೊದಲಿನ ಸಿನಿಮಾಗಳ ಅವಧಿ 2 ಗಂಟೆ 50 ನಿಮಿಷ ದಾಟಿದ್ದೂ ಇದೆ. ಈಗ ‘ಗೋಟ್’ ಸಿನಿಮಾ ಇಷ್ಟು ದೀರ್ಘವಾದ ಬಗ್ಗೆ ಅವರ ಫ್ಯಾನ್ಸ್ಗೆ ಯಾವುದೇ ಚಿಂತೆ ಇಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:08 pm, Sun, 25 August 24