ಬಿಡುಗಡೆ ಆಯ್ತು, ‘ಗ್ರಾಮಾಯಣ’ ಟ್ರೈಲರ್, ಪಕ್ಕಾ ಹಳ್ಳಿ ಕತೆ

Gramayana movie: ‘ಗ್ರಾಮಾಯಣ’ ಸಿನಿಮಾದ ಟ್ರೈಲರ್ ಇಂದು (ಜೂನ್ 28) ರಿಲೀಸ್ ಆಗಿದೆ. ಟ್ರೈಲರ್ ಮೊದಲ ನೋಟದಲ್ಲಿಯೇ ಗಮನ ಸೆಳೆಯುತ್ತಿದ್ದು, ತಮಿಳಿನ ವೆಟ್ರಿಮಾರನ್ ಸಿನಿಮಾಗಳ ಫೀಲ್ ಕೊಡುತ್ತಿದೆ. ‘ಗ್ರಾಮಾಯಣ’ ಟ್ರೈಲರ್ ಹೆಸರಿಗೆ ತಕ್ಕಂತೆ ಪಕ್ಕಾ ಹಳ್ಳಿಯ ಕತೆಯನ್ನು ಒಳಗೊಂಡಿದ್ದು, ಪ್ರೀತಿ, ಪ್ರೇಮ, ದ್ವೇಷ, ರಾಜಕೀಯ, ಅಸೂಯೆ, ಕುಟುಂಬ, ಶ್ರದ್ಧೆ, ಭಕ್ತಿ ಎಲ್ಲವನ್ನೂ ಒಳಗೊಂಡ ಪ್ಯಾಕೇಜಿನಂತೆ ಭಾಸವಾಗುತ್ತಿದೆ.

ಬಿಡುಗಡೆ ಆಯ್ತು, ‘ಗ್ರಾಮಾಯಣ’ ಟ್ರೈಲರ್, ಪಕ್ಕಾ ಹಳ್ಳಿ ಕತೆ
Vinay Rajkumar

Updated on: Jun 28, 2026 | 10:31 PM

ವಿನಯ್ ರಾಜ್​​ಕುಮಾರ್ (Vinay Rajkuar) ನಟನೆಯ ‘ಗ್ರಾಮಾಯಣ’ ಸಿನಿಮಾ ಸೆಟ್ಟೇರಿ ವರ್ಷಗಳೇ ಆಗಿದ್ದವು, ಹಲವು ಅಡೆ-ತಡೆ, ಬದಲಾವಣೆಗಳ ಬಳಿಕ ಕೊನೆಗೂ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ‘ಗ್ರಾಮಾಯಣ’ ಸಿನಿಮಾದ ಟ್ರೈಲರ್ ಇಂದು (ಜೂನ್ 28) ರಿಲೀಸ್ ಆಗಿದೆ. ಟ್ರೈಲರ್ ಮೊದಲ ನೋಟದಲ್ಲಿಯೇ ಗಮನ ಸೆಳೆಯುತ್ತಿದ್ದು, ತಮಿಳಿನ ವೆಟ್ರಿಮಾರನ್ ಸಿನಿಮಾಗಳ ಫೀಲ್ ಕೊಡುತ್ತಿದೆ. ‘ಗ್ರಾಮಾಯಣ’ ಟ್ರೈಲರ್ ಹೆಸರಿಗೆ ತಕ್ಕಂತೆ ಪಕ್ಕಾ ಹಳ್ಳಿಯ ಕತೆಯನ್ನು ಒಳಗೊಂಡಿದ್ದು, ಪ್ರೀತಿ, ಪ್ರೇಮ, ದ್ವೇಷ, ರಾಜಕೀಯ, ಅಸೂಯೆ, ಕುಟುಂಬ, ಶ್ರದ್ಧೆ, ಭಕ್ತಿ ಎಲ್ಲವನ್ನೂ ಒಳಗೊಂಡ ಪ್ಯಾಕೇಜಿನಂತೆ ಭಾಸವಾಗುತ್ತಿದೆ.

‘ಗ್ರಾಮಾಯಣ’ ಸಿನಿಮಾದ ಟ್ರೈಲರ್​​ನಲ್ಲಿ ವಿನಯ್ ರಾಜ್​ಕುಮಾರ್ ಸೇರಿದಂತೆ ಹಲವು ಪಾತ್ರಗಳು ಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿವೆ. ವಿನಯ್, ಹಳ್ಳಿಯ ಮೊಂಡ, ಸಿಟ್ಟಿನ ಯುವಕನ ಪಾತ್ರದಲ್ಲಿ ನಟಿಸಿದ್ದಾರೆ. ಆ ಯುವಕನ ಪ್ರೇಯಸಿಯಾಗಿ ಮೇಘಾ ಶೆಟ್ಟಿ ನಟಿಸಿದ್ದಾರೆ. ಸಿನಿಮಾನಲ್ಲಿ ಲೂಸ್ ಮಾದ ಯೋಗಿ ಸಹ ಇದ್ದು, ನಾಯಕನ ಎದುರು ನಿಲ್ಲುವ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲದೆ, ನಾಯಕನ ಎದುರಾಳಿಯಾಗಿ ಇನ್ನೂ ಕೆಲವು ಪಾತ್ರಗಳಿದ್ದು, ಟ್ರೈಲರ್, ಸಿನಿಮಾದ ಬಗ್ಗೆ ಕುತೂಹಲ ಮೂಡಿಸಲು ಸಂಪೂರ್ಣ ಯಶಸ್ವಿ ಆಗಿದೆ.

Graamaayana Official Trailer | Vinay Rajkumar, Megha Shetty | Devanur Chandru | In Cinemas July 3

ಟ್ರೈಲರ್​​ ನೋಡಿದರೆ ಇದೊಂದು ಆಕ್ಷನ್, ಸೆಂಟಿಮೆಂಟ್, ರೊಮ್ಯಾನ್ಸ್, ಡ್ರಾಮಾ ಬೆರೆತ ಕತೆಯುಳ್ಳ ಸಿನಿಮಾ ಎಂಬುದು ಸ್ಪಷ್ಟವಾಗುತ್ತಿದೆ. ವಿನಯ್ ರಾಜ್​​ಕುಮಾರ್ ಅವರು ಹಳ್ಳಿ ಯುವಕನ ಪಾತ್ರದಲ್ಲಿ ಸಖತ್ ಮಾಸ್ ಆಗಿಯೂ, ರಾ ಮತ್ತು ರಸ್ಟಿಕ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಯೋಗಿಯ ಪಾತ್ರವೂ ಸಹ ತುಸು ಹಾಗೆಯೇ ಇದೆ. ಗೋಪಾಲಕೃಷ್ಣ ದೇಶಪಾಂಡೆ, ಅಚ್ಯುತ್ ಕುಮಾರ್ ಅವರುಗಳು ಚಾಣಾಕ್ಷ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಕೆಲ ಪ್ರಮುಖ ಪಾತ್ರಗಳು ಸಿನಿಮಾನಲ್ಲಿವೆ. ಟ್ರೈಲರ್​​ನಲ್ಲೂ ಕಾಣಿಸಿಕೊಂಡಿವೆ. ಟ್ರೈಲರ್​​ನಲ್ಲಿ ಅಪರ್ಣಾ ಅವರ ದೃಶ್ಯಗಳು ಸಹ ಇವೆ. ಅಪರ್ಣಾ ಅವರ ಕೊನೆಯ ಸಿನಿಮಾ ಆಗಿತ್ತು ‘ಗ್ರಾಮಾಯಣ’. ಟ್ರೈಲರ್​​ನಲ್ಲೇ ಅವರ ನಟನೆ ಗಮನ ಸೆಳೆಯುತ್ತಿದೆ. ಆದರೆ ಅವರ ಪಾತ್ರಕ್ಕೆ ಬೇರೆಯವರು ಧ್ವನಿ ನೀಡಿದಂತಿದ್ದಾರೆ.

ಇದನ್ನೂ ಓದಿ:ಹುಟ್ಟುಹಬ್ಬದಂದು ರಕ್ತಸಿಕ್ತ ಲುಕ್​​ನಲ್ಲಿ ಬಂದ ವಿನಯ್ ರಾಜ್​​ಕುಮಾರ್

‘ಗ್ರಾಮಾಯಣ’ ಸಿನಿಮಾವನ್ನು ದೇವನೂರು ಚಂದ್ರು ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಪೂರ್ಣಚಂದ್ರ ತೇಜಸ್ವಿ ಎಸ್​​ವಿ. ಕ್ಯಾಮೆರಾ ಕೆಲಸ ಸಂತೋಷ್ ರೈ ಪತಾಜೆ ಅವರದ್ದು. ಸಿನಿಮಾವನ್ನು ಲಹರಿ ಫಿಲಮ್ಸ್ ನಿರ್ಮಾಣ ಮಾಡಿದೆ. ಸಿನಿಮಾ ಜುಲೈ 3 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:31 pm, Sun, 28 June 26

Follow Us