War 2: ‘ವಾರ್​ 2’ ಸಿನಿಮಾ ಸೆಟ್​​ನಿಂದ ಹೃತಿಕ್ ರೋಷನ್, ಜೂನಿಯರ್ ಎನ್​ಟಿಆರ್​​ ಫೋಟೋಸ್ ವೈರಲ್

|

Updated on: Apr 17, 2024 | 8:14 PM

ಯಶ್ ರಾಜ್ ಫಿಲ್ಮ್ಸ್​​​ ಸ್ಪೈ ಯೂನಿವರ್ಸ್‌ನ ಮುಂದಿನ ಚಿತ್ರ ‘ವಾರ್ 2‘ ಶೂಟಿಂಗ್ ಭರದಿಂದ ಸಾಗಿದೆ. ಈ ಚಿತ್ರದಲ್ಲಿ ಇಬ್ಬರು ಸ್ಟಾರ್​ ನಟರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟರಾದ ಜೂನಿಯರ್​ ಎನ್​ಟಿಆರ್​ ಹಾಗೂ ಹೃತಿಕ್​ ರೋಷನ್ ‘ವಾರ್ 2‘ ಚಿತ್ರದಲ್ಲಿ ನಟಿಸುತ್ತಿರುವುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಸದ್ಯ ಚಿತ್ರೀಕರಣದ ಸೆಟ್‌ನಿಂದ ಇಬ್ಬರು ನಟರ ಫೋಟೋಗಳು ಸೋರಿಕೆಯಾಗಿವೆ.

War 2: ‘ವಾರ್​ 2’ ಸಿನಿಮಾ ಸೆಟ್​​ನಿಂದ ಹೃತಿಕ್ ರೋಷನ್, ಜೂನಿಯರ್ ಎನ್​ಟಿಆರ್​​ ಫೋಟೋಸ್ ವೈರಲ್
ವೈರಲ್​ ಆದ ಫೋಟೋಗಳು
Image Credit source: zoom
Follow us on

ಯಶ್ ರಾಜ್ ಫಿಲ್ಮ್ಸ್​​​ ಸ್ಪೈ ಯೂನಿವರ್ಸ್‌ನ ಮುಂದಿನ ಚಿತ್ರ ‘ವಾರ್ 2′ (War 2) ಶೂಟಿಂಗ್ ಭರದಿಂದ ಸಾಗಿದೆ. ವಾಸ್ತವವಾಗಿ ಕಳೆದ ವರ್ಷವೇ ಚಿತ್ರದ ಶೂಟಿಂಗ್​ ಪ್ರಾರಂಭವಾಗಿದೆ. ಈಗಾಗಲೇ ಕೆಲವು ಸಾಹಸ ದೃಶ್ಯಗಳನ್ನು ಸ್ಪೇನ್ ಮತ್ತು ಅಬುಧಾಬಿಯಲ್ಲಿ ಚಿತ್ರೀಕರಿಸಲಾಗಿದೆ. ಈ ಸಾಹಸ ದೃಶ್ಯಗಳಲ್ಲಿ ನಟರಾದ ಜೂನಿಯರ್​ ಎನ್​ಟಿಆರ್ (Jr. NTR)​ ಹಾಗೂ ಹೃತಿಕ್​ ರೋಷನ್ (Hrithik Roshan)​ ಭಾಗವಹಿಸಿರಲಿಲ್ಲ. ಆದರೆ ಇದೀಗ ಇಬ್ಬರು ಸ್ಟಾರ್​ ನಟರು ‘ವಾರ್ 2‘ ಚಿತ್ರದ ಶೂಟಿಂಗ್​ನಲ್ಲಿ ಭಾಗವಹಿಸಿದ್ದಾರೆ ಎನ್ನಲಾಗುತ್ತಿದ್ದು, ಇದಕ್ಕೆ ಪೂರಕವೆಂಬಂತೆ ಚಿತ್ರೀಕರಣದ ಸೆಟ್‌ನಿಂದ ಹೃತಿಕ್​ ರೋಷನ್​ ಮತ್ತು ಜೂನಿಯರ್​ ಎನ್​ಟಿಆರ್ ಇಬ್ಬರ ಫೋಟೋಗಳು ಸೋರಿಕೆಯಾಗಿವೆ.

ಇತ್ತೀಚೆಗೆ ವಿದೇಶದಲ್ಲಿ ಶೂಟಿಂಗ್ ಮುಗಿಸಿದ ‘ವಾರ 2’ ಚಿತ್ರತಂಡ ಇದೀಗ ಮುಂಬೈಗೆ ತಲುಪಿದೆ. ಜೂಮ್ ವರದಿ ಪ್ರಕಾರ, ವಿಲೆ ಪಾರ್ಲೆಯ ಸ್ಟುಡಿಯೊದಲ್ಲಿ ಚಿತ್ರಕ್ಕಾಗಿ ಬೃಹತ್ ಸೆಟ್ ನಿರ್ಮಿಸಲಾಗಿದೆ. ಇದು ವಿಮಾನದ ಒಳಗೆ ಮತ್ತು ಹೊರಗೆ ಹೋಲುವ ಸೆಟ್ ಆಗಿದ್ದು, ಹೃತಿಕ್ ಮತ್ತು ಎನ್‌ಟಿಆರ್ ನಡುವಿನ ಫೈಟ್ ಸೀಕ್ವೆನ್ಸ್ ಅನ್ನು ಚಿತ್ರೀಕರಿಸಲಾಗುತ್ತಿದೆ. ಸದ್ಯ ಇದೇ ಸೆಟ್​ನ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ.

‘ವಾರ್ 2‘ ಚಿತ್ರದಲ್ಲಿ ಹೃತಿಕ್ ಮತ್ತು ಎನ್‌ಟಿಆರ್ ನಡುವೆ ಹೆಚ್ಚಿನ ಆಕ್ಷನ್ ಸೀಕ್ವೆನ್ಸ್‌ಗಳು ಇರಲಿವೆ. ಹೀಗಾಗಿ ಈ ದೃಶ್ಯಗಳ ಸಂಯೋಜನೆಗಾಗಿ ವಿಶ್ವದಾದ್ಯಂತ 11 ಸ್ಟಂಟ್ ಕೋ-ಆರ್ಡಿನೇಟರ್‌ಗಳನ್ನು ಕರೆಸಲಾಗಿದೆ. ಆ ಮೂಲಕ ಕಾರ್ ಚೇಸ್, ರೈಲು ರೇಸ್ ಮತ್ತು ಹೈ ಸ್ಪೀಡ್ ಬೋಟ್ ರೇಸ್ ಸೀಕ್ವೆನ್ಸ್ ಅನ್ನು ಇವರುಗಳು ಸಂಯೋಜನೆ ಮಾಡಲಿದ್ದಾರೆ.

ಇದನ್ನೂ ಓದಿ: ‘ವಾರ್​ 2’ ಚಿತ್ರದಲ್ಲೂ ನಾಟು ನಾಟು ರೀತಿ ಡ್ಯಾನ್ಸ್​; ಸಜ್ಜಾದ ಜೂ. ಎನ್​ಟಿಆರ್​, ಹೃತಿಕ್​

ಈ ಹಿಂದಿನ ‘ವಾರ್’ ಚಿತ್ರದಲ್ಲಿ ಹೃತಿಕ್ ರೋಷನ್​​ ನೆಗೆಟಿವ್ ರೋಲ್ ಮಾಡಬಹುದೆಂದು ಕೆಲವರ ಊಹೆ ಆಗಿತ್ತು. ಈಗ ಅದೇ ರೀತಿಯಾಗಿ ‘ವಾರ್ 2‘ ಚಿತ್ರದಲ್ಲಿ ಎನ್​ಟಿಆರ್ ವಿಲನ್ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ.

ಇದನ್ನೂ ಓದಿ: ‘ವಾರ್​ 2’ ಸಿನಿಮಾಗಾಗಿ ಮುಂಬೈಗೆ ತೆರಳಿದ ಜೂನಿಯರ್​ ಎನ್​ಟಿಆರ್​; 10 ದಿನ ಶೂಟಿಂಗ್​

‘ವಾರ್ 2‘ ಚಿತ್ರವನ್ನು ಅಯಾನ್​ ಮುಖರ್ಜಿ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಹೃತಿಕ್ ಮತ್ತು ಎನ್‌ಟಿಆರ್ ಜೊತೆ ನಟಿ ಕಿಯಾರಾ ಅಡ್ವಾಣಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಚಿತ್ರದಲ್ಲಿ ಶಾರುಖ್ ಖಾನ್ ‘ಪಠಾಣ್’ ಪಾತ್ರದಲ್ಲಿ ನಟಿಸುವ ಸಾಧ್ಯತೆಗಳು ಇದೆ ಎನ್ನಲಾಗುತ್ತಿದೆ. ಆದರೆ ಚಿತ್ರತಂಡದಿಂದ ಯಾವುದೇ  ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:11 pm, Wed, 17 April 24