‘ವಿವರ್ಸ್ ಕಾನ್ ಫೆಸ್ಟಿವಲ್’ನಲ್ಲಿ ಭಾಗವಹಿಸುವ ಕಲಾವಿದರ ಲಿಸ್ಟ್ ರಿಲೀಸ್

ಭಾರತದಲ್ಲಿ ಇದೇ ಮೊದಲ ಬಾರಿಗೆ ಬೃಹತ್ ವಿವರ್ಸ್ ಕಾನ್ ಫೆಸ್ಟಿವಲ್ 2027ರ ಮಾರ್ಚ್‌ನಲ್ಲಿ ನವದೆಹಲಿಯಲ್ಲಿ ನಡೆಯಲಿದೆ. ಕೊರಿಯಾದ ಪ್ರಸಿದ್ಧ ಕೆ-ಪಾಪ್ ಬ್ಯಾಂಡ್‌ಗಳಾದ ಎನ್‌ಹೈಫನ್, ಟಿಎಕ್ಸ್‌ಟಿ ಮತ್ತು ಲೆ ಸೆರಾಫಿಮ್ ಸೇರಿದಂತೆ ಹಲವು ಅಂತರರಾಷ್ಟ್ರೀಯ ಹಾಗೂ ಭಾರತೀಯ ಕಲಾವಿದರು ಈ ಸಂಗೀತ ಉತ್ಸವದಲ್ಲಿ ಭಾಗವಹಿಸಿ ರಂಜಿಸಲಿದ್ದಾರೆ.

ವಿವರ್ಸ್ ಕಾನ್ ಫೆಸ್ಟಿವಲ್ನಲ್ಲಿ ಭಾಗವಹಿಸುವ ಕಲಾವಿದರ ಲಿಸ್ಟ್ ರಿಲೀಸ್
ವಿವರ್ಸ್ ಕಾನ್

Updated on: Oct 17, 2026 | 1:55 PM

ಮುಖ್ಯಾಂಶಗಳು

  • ಭಾರತಕ್ಕೆ ಬರಲಿದೆ ಜಾಗತಿಕ ಮಟ್ಟದ ಕೆ-ಪಾಪ್ ಸಂಗೀತ ಉತ್ಸವ ವಿವರ್ಸ್ ಕಾನ್
  • ನವದೆಹಲಿಯಲ್ಲಿ ಎನ್‌ಹೈಫನ್, ಟಿಎಕ್ಸ್‌ಟಿ ಹಾಗೂ ಲೆ ಸೆರಾಫಿಮ್ ಬ್ಯಾಂಡ್‌ಗಳ ಅದ್ಧೂರಿ ಶೋ
  • ಅಕ್ಟೋಬರ್ 27ರಿಂದ ಬುಕ್‌ಮೈಶೋನಲ್ಲಿ ಆರಂಭವಾಗಲಿದೆ ಬಹುನಿರೀಕ್ಷಿತ ಟಿಕೆಟ್ ಬುಕಿಂಗ್

ಭಾರತದ ಕೆ-ಪಾಪ್ ಅಭಿಮಾನಿಗಳಿಗೆ ಹೈಬ್ ಸಂಸ್ಥೆಯು ಅತ್ಯಂತ ಸಂತೋಷದ ಸುದ್ದಿಯೊಂದನ್ನು ನೀಡಿದೆ. ಪ್ರಸಿದ್ಧ ‘ವಿವರ್ಸ್ ಕಾನ್ ಫೆಸ್ಟಿವಲ್’ ಇದೇ ಮೊದಲ ಬಾರಿಗೆ ದಕ್ಷಿಣ ಕೊರಿಯಾದಿಂದ ಹೊರಗೆ ಅಂದರೆ ಭಾರತದಲ್ಲಿ ಆಯೋಜನೆಗೊಳ್ಳುತ್ತಿದೆ. 2027ರ ಮಾರ್ಚ್ 27 ಮತ್ತು 28ರಂದು ನವದೆಹಲಿಯಲ್ಲಿ ಈ ಬೃಹತ್ ಸಂಗೀತ ಉತ್ಸವ ನಡೆಯಲಿದೆ. ಜಾಗತಿಕ ಮಟ್ಟದ ಪ್ರಖ್ಯಾತ ಸಂಗೀತ ಕಲಾವಿದರು ಈ ವೇದಿಕೆಯಲ್ಲಿ ಒಂದಾಗಲಿದ್ದಾರೆ. ಅದರ ವಿವರ ಇಲ್ಲಿದೆ.

ಈ ಸಂಗೀತ ಕಾರ್ಯಕ್ರಮದಲ್ಲಿ ಹತ್ತು ಅಂತರರಾಷ್ಟ್ರೀಯ ಕಲಾವಿದರು ಭಾಗವಹಿಸಲಿದ್ದಾರೆ. ಪ್ರಮುಖ ಕೆ-ಪಾಪ್ ತಂಡಗಳಾದ ಎನ್‌ಹೈಫನ್, ಟುಮಾರೋ ಬೈ ಟುಗೆದರ್ (ಟಿಎಕ್ಸ್‌ಟಿ) ಮತ್ತು ಲೆ ಸೆರಾಫಿಮ್ ತಮ್ಮ ಪ್ರದರ್ಶನ ನೀಡಲಿವೆ. ಜನಪ್ರಿಯ ಗಾಯಕಿ ಹ್ವಾಸಾ ತಮ್ಮ ಸೋಲೋ ಪ್ರದರ್ಶನದ ಮೂಲಕ ಮನರಂಜಿಸಲಿದ್ದಾರೆ. ಪ್ರಸಿದ್ಧ ಸಿಂಗರ್ ಎರಿಕ್ ನಾಮ್ ಹಾಗೂ ಕ್ಯಾಟ್‌ಸೈ ಗ್ರೂಪ್‌ನ ಲಾರಾ ರಾಜ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

ಅಂತರರಾಷ್ಟ್ರೀಯ ಕಲಾವಿದರ ಜೊತೆಗೆ ಭಾರತೀಯ ಸಂಗೀತಗಾರರು ಕೂಡ ಈ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ. ಭಾರತದ ಪ್ರಸಿದ್ಧ ರಾಪರ್ ಕಿಂಗ್, ಗಿನಿ, ರೇಬೆಲ್ ಹಾಗೂ ಡಿಜೆ ಝೆಲೋ ಈ ಉತ್ಸವದಲ್ಲಿ ಗಾನಬಜಾನ ನಡೆಸಲಿದ್ದಾರೆ. ಭಾರತೀಯ ಹಿಪ್-ಹಾಪ್ ಹಾಗೂ ಇಂಡಿ ಸಂಗೀತ ಶೈಲಿಗಳು ಕೊರಿಯನ್ ಸಂಗೀತದ ಜೊತೆಗೆ ಸಂಗಮವಾಗಲಿವೆ. ಇದು ಭಾರತೀಯ ಹಾಗೂ ವಿದೇಶಿ ಸಂಗೀತ ಪ್ರಿಯರಿಗೆ ವಿಶಿಷ್ಟ ಅನುಭವ ನೀಡಲಿದೆ.

ವಿವರ್ಸ್ ಕಾನ್ ಫೆಸ್ಟಿವಲ್ ಇಂಡಿಯಾವನ್ನು ಹೈಬ್ ಇಂಡಿಯಾ ಹಾಗೂ ಬುಕ್‌ಮೈಶೋ ಲೈವ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿವೆ. ಟಿಕೆಟ್‌ಗಳ ಮುಂಗಡ ಕಾಯ್ದಿರಿಸುವಿಕೆ 2026ರ ಅಕ್ಟೋಬರ್ 27ರಿಂದ ಆರಂಭವಾಗಲಿದೆ. ಸಾಮಾನ್ಯ ಟಿಕೆಟ್‌ಗಳ ಮಾರಾಟವು ಅಕ್ಟೋಬರ್ 30ರಿಂದ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಪ್ರಮುಖ ಕೆ-ಪಾಪ್ ಬ್ಯಾಂಡ್‌ಗಳನ್ನು ಒಂದೇ ವೇದಿಕೆಯಲ್ಲಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ:ಕೆ-ಪಾಪ್ ಕ್ರೇಜ್‌ನಿಂದ ಬಿಲಿಯನ್ ಡಾಲರ್ ಹೂಡಿಕೆ: ಕನ್ನಡಿಗರಿಗೆ ಕಾಯುತ್ತಿದೆ ಉದ್ಯೋಗಾವಕಾಶಗಳ ಸುರಿಮಳೆ

ದೆಹಲಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ಭಾರತದಲ್ಲಿ ಕೆ-ಪಾಪ್ ಸಂಸ್ಕೃತಿ ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ. ವಿಭಿನ್ನ ಶೈಲಿಯ ಪ್ರದರ್ಶನಗಳು ಹಾಗೂ ಅದ್ಭುತ ನೃತ್ಯದ ಮೂಲಕ ಕೊರಿಯನ್ ಬ್ಯಾಂಡ್‌ಗಳು ಪ್ರೇಕ್ಷಕರನ್ನು ರಂಜಿಸಲಿವೆ. ಭಾರತೀಯ ಪ್ರೇಕ್ಷಕರಿಗೆ ಈ ಹಬ್ಬವು ಒಂದು ಸ್ಮರಣೀಯ ಅನುಭವ ನೀಡಲಿದೆ. ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us