AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಬೈನಲ್ಲಿ ಭಾರತೀಯ ಸ್ಟೈಲ್​​ನಲ್ಲಿ ಐಷಾರಾಮಿ ವಿಲ್ಲಾ ನಿರ್ಮಿಸಿದ ವಿವೆಕ್ ಒಬೆರಾಯ್

ಬಾಲಿವುಡ್ ನಟ ವಿವೇಕ್ ಒಬೆರಾಯ್ ದುಬೈನಲ್ಲಿ ಹೊಂದಿರುವ ಐಷಾರಾಮಿ ವಿಲ್ಲಾ ಭಾರತೀಯ ಸಂಪ್ರದಾಯ ಹಾಗೂ ಆಧುನಿಕ ಶೈಲಿಯ ಅದ್ಭುತ ಸಂಗಮವಾಗಿದೆ. ಸುಂದರವಾದ ಸಾವಯವ ಉದ್ಯಾನವನ, ಈಜುಕೊಳ ಮತ್ತು ಪ್ರಕೃತಿಯ ಮಡಿಲಲ್ಲಿರುವ ಈ ಸುಂದರ ಮನೆಯ ವಿಶೇಷತೆಗಳು ಪ್ರಸ್ತುತ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ.

 ಶ್ರೀಲಕ್ಷ್ಮೀ ಎಚ್
| Edited By: |

Updated on:Oct 17, 2026 | 10:52 AM

Share
ಬಾಲಿವುಡ್‌ನ ಖ್ಯಾತ ನಟ ಹಾಗೂ ಉದ್ಯಮಿ ವಿವೇಕ್ ಒಬೆರಾಯ್ ದುಬೈನಲ್ಲಿ ಹೊಂದಿರುವ ಅತಿ ಸುಂದರವಾದ ಐಷಾರಾಮಿ ವಿಲ್ಲಾ ಎಲ್ಲರ ಗಮನ ಸೆಳೆದಿದೆ. ನೈಸರ್ಗಿಕ ಸೌಂದರ್ಯ ಹಾಗೂ ಭಾರತೀಯ ಸಂಪ್ರದಾಯದ ಸ್ಪರ್ಶವನ್ನು ಹೊಂದಿರುವ ಈ ಸುಂದರ ಮನೆಯ ಒಳಾಂಗಣ ವಿನ್ಯಾಸವು ಅತ್ಯಂತ ಆಕರ್ಷಕವಾಗಿದೆ. ಆಧುನಿಕ ಸೌಲಭ್ಯಗಳ ಜೊತೆಗೆ ಸಾಂಪ್ರದಾಯಿಕ ಕಲೆಗಳ ಸಂಗಮವಾಗಿ ಈ ಮನೆ ರೂಪುಗೊಂಡಿದೆ.

1 / 7
ಈ ಐಷಾರಾಮಿ ವಿಲ್ಲಾದ ಒಳಾಂಗಣವು ಭಾರತೀಯ ಹಾಗೂ ಯುರೋಪಿಯನ್ ಶೈಲಿಯ ಅದ್ಭುತ ಮಿಶ್ರಣವಾಗಿದೆ. ಮನೆಯ ಪ್ರವೇಶದ್ವಾರದಲ್ಲಿ ಹಸಿರಿನಿಂದ ಕೂಡಿದ ಸುಂದರವಾದ ಉದ್ಯಾನವನವಿದೆ.

2 / 7
ನಟ ವಿವೇಕ ಪತ್ನಿ ಪ್ರಿಯಾಂಕಾ ಅವರ ಇಷ್ಟದಂತೆ ಮನೆಯ ಒಳಭಾಗವನ್ನು ಹಳೆಯ ವಿಂಟೇಜ್ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಭಾರತೀಯ ಕಲಾಕೃತಿಗಳು ಮತ್ತು ವರ್ಣಚಿತ್ರಗಳು ಮನೆಯ ಅಂದವನ್ನು ಇನ್ನಷ್ಟು ಹೆಚ್ಚಿಸಿವೆ.

3 / 7
ವಿವೇಕ್ ಒಬೆರಾಯ್ ಅವರಿಗೆ ಗಿಡಗಳನ್ನು ಬೆಳೆಸುವ ಹವ್ಯಾಸ ಬಹಳಷ್ಟಿದೆ. ಇವರು ತಮ್ಮ ಮನೆಯ ಹಿತ್ತಲಿನಲ್ಲಿ ಸ್ವತಃ ತರಕಾರಿಗಳು ಮತ್ತು ಸೊಪ್ಪುಗಳನ್ನು ಬೆಳೆಯುವ ಸುಂದರವಾದ ಸಾವಯವ ಉದ್ಯಾನವನ್ನು ನಿರ್ವಹಿಸುತ್ತಿದ್ದಾರೆ.

4 / 7
ಮರುಭೂಮಿಯ ನಡುವೆಯೂ ಭಾರತದ ಅನುಭವ ನೀಡುವ ರೀತಿಯಲ್ಲಿ ಈ ಗ್ರೀನ್ ಗಾರ್ಡನ್ ಅನ್ನು ಜೋಡಿಸಲಾಗಿದೆ. ಮನೆಯ ಹಿಂಭಾಗದಲ್ಲಿ ವಿಶಾಲವಾದ ಈಜುಕೊಳ ಹಾಗೂ ವಿಶ್ರಾಂತಿ ಗೃಹವಿದೆ.

5 / 7
 ಕೆಲಸದ ಬಿಡುವಿನ ವೇಳೆಯಲ್ಲಿ ಕುಟುಂಬದೊಂದಿಗೆ ನೆಮ್ಮದಿಯ ಕ್ಷಣಗಳನ್ನು ಕಳೆಯಲು ಇದು ಅತ್ಯುತ್ತಮವಾದ ಸ್ಥಳವಾಗಿದೆ. ಸಂಜೆ ಆರು ಗಂಟೆಯೊಳಗೆ ಮನೆಗೆ ಬಂದು ಮಕ್ಕಳೊಂದಿಗೆ ಫುಟ್‌ಬಾಲ್ ಆಡುವುದು ಮತ್ತು ಒಡನಾಡುವುದನ್ನು ವಿವೇಕ್ ಬಹಳ ಇಷ್ಟಪಡುತ್ತಾರೆ.

6 / 7
ಬ್ಯುಸಿನೆಸ್ ಜಗತ್ತಿನಲ್ಲಿ ಬ್ಯುಸಿಯಾಗಿದ್ದರೂ ಸರಳ ಜೀವನಶೈಲಿಯನ್ನು ನಟ ಪ್ರೀತಿಸುತ್ತಾರೆ. ದುಬೈನ ಗದ್ದಲದ ಬದುಕಿನಿಂದ ದೂರವಿರುವ ಈ ವಿಲ್ಲಾವು ಅವರಿಗೆ ಅತಿ ನೆಮ್ಮದಿಯ ತಾಣವಾಗಿದೆ. ಕುಟುಂಬದೊಂದಿಗೆ ಕಳೆಯುವ ಪ್ರತಿ ಕ್ಷಣವೂ ಅವರಿಗೆ ಅತ್ಯಂತ ಮೌಲ್ಯಯುತವಾಗಿದೆ.

7 / 7

Published On - 10:51 am, Sat, 17 October 26

 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us