ಸೆಲೆಬ್ರಿಟಿ ಬಾಡಿಗಾರ್ಡ್​ ಸಂಬಳ ಎಷ್ಟು? ಶಾರುಖ್​, ಸಲ್ಲು, ಕೊಯ್ಲಿ ಕೊಡ್ತಾರೆ ಕೋಟಿ ಕೋಟಿ ಮೊತ್ತ

ಸೆಲೆಬ್ರಿಟಿಗಳಿಗೆ ಅಂಗರಕ್ಷಕರಾಗಿ ಕೆಲಸ ಮಾಡುವವರು ಕೋಟಿ ಕೋಟಿ ರೂ. ಸಂಬಳ ಪಡೆಯುತ್ತಾರೆ. ಬಾಡಿಗಾರ್ಡ್​ಗಳ ಸಂಬಳಕ್ಕಾಗಿಯೇ ಸೆಲೆಬ್ರಿಟಿಗಳು ಕೋಟ್ಯಂತರ ರೂಪಾಯಿ ಮೀಸಲಿಡುತ್ತಾರೆ.

ಸೆಲೆಬ್ರಿಟಿ ಬಾಡಿಗಾರ್ಡ್​ ಸಂಬಳ ಎಷ್ಟು? ಶಾರುಖ್​, ಸಲ್ಲು, ಕೊಯ್ಲಿ ಕೊಡ್ತಾರೆ ಕೋಟಿ ಕೋಟಿ ಮೊತ್ತ
ಸೆಲೆಬ್ರಿಟಿ ಬಾಡಿಗಾರ್ಡ್​ ಸಂಬಳ ಎಷ್ಟು?
Follow us
TV9 Web
| Updated By: ಮದನ್​ ಕುಮಾರ್​

Updated on: Jul 15, 2021 | 5:17 PM

ಸೆಲೆಬ್ರಿಟಿಗಳ ಜೀವನ ತುಂಬ ಸಾರ್ವಜನಿಕವಾಗಿರುತ್ತದೆ. ಪ್ರತಿದಿನ ಅನೇಕ ಸ್ಥಳಗಳಿಗೆ ಅವರು ಭೇಟಿ ನೀಡುತ್ತ ಇರುತ್ತಾರೆ. ಆ ಸಂದರ್ಭಗಳಲ್ಲಿ ಅವರಿಗೆ ಬಾಡಿಗಾರ್ಡ್​ಗಳ ಅವಶ್ಯಕತೆ ಇದ್ದೇ ಇರುತ್ತದೆ. ಹಾಗಾಗಿ ನಂಬಿಕಸ್ಥ ಬಾಡಿಗಾರ್ಡ್​ಗಳಿಗೆ ಸಖತ್​ ಬೇಡಿಕೆ ಕೂಡ ಇದೆ. ಬಾಲಿವುಡ್​ನ ಎಲ್ಲ ಸ್ಟಾರ್​ ಕಲಾವಿದರು ತಮ್ಮ ಅಂಗರಕ್ಷಕರಿಗೆ ಕೋಟಿ ಕೋಟಿ ರೂ. ಸಂಭಾವನೆ ನೀಡುತ್ತಾರೆ. ಶಾರುಖ್​ ಖಾನ್​, ಸಲ್ಮಾನ್​ ಖಾನ್​, ವಿರಾಟ್​ ಕೊಯ್ಲಿ ಮುಂತಾದ ಸೆಲೆಬ್ರಿಟಿಗಳ ಜೊತೆ ಇರುವ ಬಾಡಿಗಾರ್ಡ್​ಗಳಿಗೆ ಸಿಗುವ ಸಂಬಳ ಎಷ್ಟು? ಇಲ್ಲಿದೆ ಮಾಹಿತಿ..

ಸಲ್ಮಾನ್ ಖಾನ್​ ಬಾಡಿಗಾರ್ಡ್​ ಶೇರಾ ಸಂಬಳ 2 ಕೋಟಿ ರೂ.!

ಬಾಲಿವುಡ್​ನ ಸ್ಟಾರ್​ ನಟ ಸಲ್ಮಾನ್​ ಖಾನ್​ ಅವರಿಗೆ ಶೇರಾ ಎಂಬುವವರು ಬಾಡಿಗಾರ್ಡ್​ ಆಗಿದ್ದಾರೆ. ಅವರು ತುಂಬ ಜನಪ್ರಿಯರಾಗಿದ್ದಾರೆ ಕೂಡ. ಮೂಲಗಳ ಪ್ರಕಾರ ಶೇರಾಗೆ ಸಿಗುತ್ತಿರುವ ವಾರ್ಷಿಕ ಸಂಬಳ ಬರೋಬ್ಬರಿ 2 ಕೋಟಿ ರೂ.! ಜಸ್ಟಿನ್​ ಬೀಬರ್​ ಸೇರಿದಂತೆ ಅನೇಕ ವಿದೇಶಿ ಸೆಲೆಬ್ರಿಟಿಗಳು ಮುಂಬೈಗೆ ಬಂದಾಗ ಅವರಿಗೂ ಬಾಡಿಗಾರ್ಡ್​ ಆಗಿ ಶೇರಾ ಕೆಲಸ ಮಾಡಿದ್ದರು.

ಶಾರುಖ್​ ಖಾನ್​ ಬಾಡಿಗಾರ್ಡ್​ ರವಿಗೆ 2.7 ಕೋಟಿ ರೂ.!

ಕಳೆದ 10 ವರ್ಷಗಳಿಂದಲೂ ಶಾರುಖ್​ ಖಾನ್​ಗೆ ಬಾಡಿಗಾರ್ಡ್​ ಆಗಿ ರವಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಶಾರುಖ್​ ಖಾನ್​ ವರ್ಷಕ್ಕೆ 2.7 ಕೋಟಿ ರೂ. ಸಂಬಳ ನೀಡುತ್ತಾರೆ. ಆ ಮೂಲಕ ಅತಿ ಹೆಚ್ಚು ಸಂಬಳ ಪಡೆಯುವ ಬಾಡಿಗಾರ್ಡ್​ ಎಂಬ ಖ್ಯಾತಿ ರವಿ ಅವರದ್ದು.

ಅನುಷ್ಕಾ-ವಿರಾಟ್ ಬಾಡಿಗಾರ್ಡ್​ಗೆ 1.2 ಕೋಟಿ ರೂ. ಸಂಬಳ

ಬಹಳ ವರ್ಷಗಳಿಂದಲೂ ಅನುಷ್ಕಾ ಶರ್ಮಾಗೆ ಬಾಡಿಗಾರ್ಡ್​ ಆಗಿ ಪ್ರಕಾಶ್​ ಸಿಂಗ್​ ಕೆಲಸ ಮಾಡುತ್ತಿದ್ದಾರೆ. ಅವರನ್ನು ಸೋನು ಎಂದು ಕೂಡ ಕರೆಯುತ್ತಾರೆ. ವಿರಾಟ್​ ಕೊಯ್ಲಿ ಮತ್ತು ಪುತ್ರಿ ವಮಿಕಾಗೂ ಸೋನು ಅವರೇ ಬಾಡಿಗಾರ್ಡ್​. ಅವರಿಗೆ ವಾರ್ಷಿಕ 1.2 ಕೋಟಿ ರೂ. ಸಂಬಳ ಸಿಗುತ್ತಿದೆ ಎಂಬುದು ಮೂಲಗಳ ಮಾಹಿತಿ.

ದೀಪಿಕಾ ಬಾಡಿಗಾರ್ಡ್​ ಜಲಾಲ್​ಗೆ 1.2 ಕೋಟಿ ರೂ.

ದೀಪಿಕಾ ಪಡುಕೋಣೆ ಎಲ್ಲೇ ಹೋದರೂ ಅಲ್ಲಿ ಅವರ ಬಾಡಿಗಾರ್ಡ್​ ಜಲಾಲ್​ ಇದ್ದೇ ಇರುತ್ತಾರೆ. ಅವರನ್ನು ಹಿರಿಯಣ್ಣನ ರೀತಿ ದೀಪಿಕಾ ಪರಿಗಣಿಸಿದ್ದಾರೆ. ಪ್ರತಿವರ್ಷ ಅವರಿಗೆ ರಾಖಿ ಕೂಡ ಕಟ್ಟುತ್ತಾರೆ. 2019ರಲ್ಲಿ ಜಲಾಲ್ ವಾರ್ಷಿಕ ಸಂಬಳ 80 ಲಕ್ಷ ರೂ. ಇತ್ತು. ಈಗ 1.2 ಕೋಟಿ ರೂ.ಗೆ ಏರಿಕೆ ಆಗಿದೆ ಎನ್ನಲಾಗಿದೆ.

ಅಮಿತಾಭ್​ ಅಂಗರಕ್ಷಕ ಜೀತೇಂದ್ರ ಸಂಬಳ 1.5 ಕೋಟಿ ರೂ.

ಬಾಲಿವುಡ್​ನ ಬಿಗ್​ ಬಿ ಅಮಿತಾಭ್​ ಬಚ್ಚನ್​ ಅವರಿಗೆ ಅಂಗರಕ್ಷಕನಾಗಿ ಕೆಲಸ ಮಾಡುತ್ತಿರುವ ಜೀತೇಂದ್ರ ಅವರು ತಮ್ಮದೇ ಸೆಕ್ಯೂರಿಟಿ ಏಜೆನ್ಸಿ ಹೊಂದಿದ್ದಾರೆ. ಆದರೂ ಅವರು ಅಮಿತಾಭ್​ಗೆ ಪರ್ಸನಲ್​ ಬಾಡಿಗಾರ್ಡ್​ ಆಗಿ ಕೆಲಸ ಮಾಡುತ್ತಾರೆ. ಮೂಲಗಳ ಪ್ರಕಾರ, ಅವರಿಗೆ ಅಮಿತಾಭ್​ ವಾರ್ಷಿಕ 1.5 ಕೋಟಿ ರೂ. ಸಂಬಳ ನೀಡುತ್ತಾರೆ.

ಇದನ್ನೂ ಓದಿ:

ಸಲ್ಮಾನ್​ ಖಾನ್​ ಕೆರಿಯರ್​ ನಾಶ ಮಾಡಿ ಬೀದಿಗೆ ತರುತ್ತೇನೆ; ಪ್ರತಿಜ್ಞೆ ಮಾಡಿದ ಕಮಾಲ್ ಖಾನ್​

100 ಕೋಟಿ ಪಡೆಯುವ ಶಾರುಖ್​ ಖಾನ್​ರನ್ನೂ ಮೀರಿಸಿದ ಅಜಯ್​ ದೇವಗನ್​; ಹಾಗಾದ್ರೆ ಅವರ ಸಂಭಾವನೆ ಎಷ್ಟು?