ರಿಯಾಲಿಟಿ ಶೋನಲ್ಲೇ ನಟಿಗೆ ಪ್ರಪೋಸ್​ ಮಾಡಿದ್ದ ಕಿರುತೆರೆ ನಟ; ಲಾಕ್​ಡೌನ್​ನಿಂದ ಮುರಿದು ಬಿತ್ತು ಸಂಬಂಧ

ರಿಯಾಲಿಟಿ ಶೋನಲ್ಲೇ ನಟಿಗೆ ಪ್ರಪೋಸ್​ ಮಾಡಿದ್ದ ಕಿರುತೆರೆ ನಟ; ಲಾಕ್​ಡೌನ್​ನಿಂದ ಮುರಿದು ಬಿತ್ತು ಸಂಬಂಧ
ರಿಯಾಲಿಟಿ ಶೋನಲ್ಲೇ ನಟಿಗೆ ಪ್ರಪೋಸ್​ ಮಾಡಿದ್ದ ಕಿರುತೆರೆ ನಟ; ಲಾಕ್​ಡೌನ್​ನಿಂದ ಮುರಿದು ಬಿತ್ತು ಸಂಬಂಧ

ಹಿಂದಿ ಕಿರುತೆರೆ ನಟ ಅವಿನಾಶ್​ ಸಚ್​ದೇವ್​ ಅವರು ನಟಿ ಪಲಕಾ​ ಪುರ್​ಸ್ವಾಮಿ ಜತೆ ಪ್ರೀತಿಯಲ್ಲಿದ್ದರು. 2018ರಲ್ಲಿ ಕಾರ್ಯಕ್ರಮವೊಂದರಲ್ಲಿ ಮೊದಲ ಬಾರಿಗೆ ಭೇಟಿ ಆಗಿದ್ದ ಇಬ್ಬರೂ ನಂತರ ಗೆಳೆಯರಾಗಿದ್ದರು.

TV9kannada Web Team

| Edited By: Rajesh Duggumane

Jul 15, 2021 | 7:02 PM

ಲಾಕ್​ಡೌನ್​ನಿಂದ ಸಾಕಷ್ಟು ಸಂಬಂಧಗಳು ಮುರಿದು ಬಿದ್ದಿವೆ. ಒಬ್ಬರನ್ನೊಬ್ಬರು ಭೇಟಿ ಮಾಡಲು ಸಾಧ್ಯವಾಗದೆ ರಿಲೇಶನ್​ಶಿಪ್​ ಕೊನೆಗೊಂಡ ಉದಾಹರಣೆ ಸಾಕಷ್ಟಿದೆ. ಈಗ ಸೆಲೆಬ್ರಿಟಿ ಜೋಡಿಯೊಂದು ಲಾಕ್​ಡೌನ್​ ಕಾರಣ ನೀಡಿ ದೂರವಾಗುತ್ತಿದೆ. ಈ ವಿಚಾರವನ್ನು ಕಿರುತೆರೆ ನಟ ಖಚಿತಪಡಿಸಿದ್ದಾರೆ.

ಹಿಂದಿ ಕಿರುತೆರೆ ನಟ ಅವಿನಾಶ್​ ಸಚ್​ದೇವ್​ ಅವರು ನಟಿ ಪಲಕಾ​ ಪುರ್​ಸ್ವಾಮಿ ಜತೆ ಪ್ರೀತಿಯಲ್ಲಿದ್ದರು. 2018ರಲ್ಲಿ ಕಾರ್ಯಕ್ರಮವೊಂದರಲ್ಲಿ ಮೊದಲ ಬಾರಿಗೆ ಭೇಟಿ ಆಗಿದ್ದ ಇಬ್ಬರೂ ನಂತರ ಗೆಳೆಯರಾಗಿದ್ದರು. ಇವರ ಗೆಳೆತನ ಪ್ರೀತಿಗೆ ತಿರುಗಿತ್ತು.  ‘ನಚ್​ ಬಲಿಯೇ ಸೀಸನ್​ 9’ರಲ್ಲಿ ರಿಯಾಲಿಟಿಶೋನಲ್ಲಿ ಅವಿನಾಶ್ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದರು​ . ಆ ಬಳಿಕ ಇಬ್ಬರೂ ರೋಕಾ ಕಾರ್ಯಕ್ರಮವನ್ನೂ ಮಾಡಿಕೊಂಡಿದ್ದರು. ಈಗ ಇವರ ಸಂಬಂಧ ಮುರಿದು ಬಿದ್ದಿದೆ ಎನ್ನುವ ಮಾತು ಕೇಳಿ ಬಂದಿತ್ತು. ಇದು ನಿಜ ಎಂದು ವಿಶಾಲ್​ ಒಪ್ಪಿಕೊಂಡಿದ್ದಾರೆ.

‘ನಮ್ಮಿಬ್ಬರ ನಡುವೆ ನಂಬಿಕೆ ವಿಚಾರದಲ್ಲಿ ಸಮಸ್ಯೆ ಆಗಿದೆ. ಹೀಗಾಗಿ ತಾತ್ಕಾಲಿಕವಾಗಿ ನಮ್ಮ ಸಂಬಂಧಕ್ಕೆ ವಿರಾಮ ಹಾಕುತ್ತಿದ್ದೇವೆ. ಹಾಗಂತ ಇದು ಪೂರ್ಣ ವಿರಾಮ ಅಲ್ಲ. ನಮ್ಮಿಬ್ಬರ ನಡುವೆ ವೈಮನಸ್ಸು ಬೆಳೆಯೋಕೆ ಕಾರಣ ಲಾಕ್​ಡೌನ್​. ಇಬ್ಬರೂ ಒಟ್ಟಾಗಿ ಸಮಯ ಕಳೆಯೋಕೆ ಆಗುತ್ತಿಲ್ಲ. ಹೀಗಾಗಿ, ನಮ್ಮ ಸಂಬಂಧದಲ್ಲಿ ಸಮಸ್ಯೆ ಉಂಟಾಗಿದೆ. ಆದರೆ, ನಮ್ಮ ಸಂಬಂಧ ಕೊನೆಯಾಗಿಲ್ಲ’ ಎಂದಿದ್ದಾರೆ ಅವಿನಾಶ್​. ಇನ್ನು, ಕಮ್ಯುನಿಕೇಷನ್​ ಗ್ಯಾಪ್​ನಿಂದ ಇಬ್ಬರ ನಡುವೆ ಅಂತರ ಬೆಳೆದಿದೆ ಎಂದು ಪಲಕಾ​ ಹೇಳಿದ್ದಾರೆ.

ಅವಿನಾಶ್​ ಹಾಗೂ ಪಲಕಾ​ ಇಬ್ಬರೂ ಹೋಟೆಲ್​ ನಡೆಸುತ್ತಿದ್ದಾರೆ. ಒಂದೊಮ್ಮೆ ಇಬ್ಬರೂ ಬೇರೆ ಆದರೆ, ಅವರ ಈ​ ಉದ್ಯಮದ ಮೇಲೆ ತೊಂದರೆ ಉಂಟಾಗಲಿದೆ. ಈ ಕಾರಣಕ್ಕೂ ಇಬ್ಬರೂ ಬೇರೆ ಆಗುತ್ತಿಲ್ಲ ಎನ್ನುವ ಮಾತು ಕೇಳಿ ಬಂದಿದೆ.

ಇನ್​ಸ್ಟಾಗ್ರಾಮ್​ನಲ್ಲಿ ಅವಿನಾಶ್​ ಪಲಕಾ​ ಅವರು ಪರಸ್ಪರ ಅನ್​ ಫಾಲೋ ಮಾಡಿಕೊಂಡಿದ್ದಾರೆ. ಇದಾದ ಬೆನ್ನಲ್ಲೇ ಇಬ್ಬರ ನಡುವೆ ಬ್ರೇಕಪ್​ ಆಗಿದೆ ಎನ್ನುವ ಮಾತು ಕೇಳಿ ಬಂದಿತ್ತು. ಈಗ ಇವರಿಂದಲೇ ಸ್ಪಷ್ಟನೆ ಸಿಕ್ಕಂತಾಗಿದೆ.

ರುಬಿನಾ ದಿಲೈಕ್​-ಅವಿನಾಶ್​ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಬ್ರೇಕಪ್​ ಆಗಿತ್ತು. ಶಾಲ್ಮಲೀ ದೇಸಾಯಿ ಅವರನ್ನು ಅವಿನಾಶ್​ ಮದುವೆ ಆಗಿದ್ದರು. ಇಬ್ಬರೂ 2017ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು.

ಇದನ್ನೂ ಓದಿ: ಕಾಟನ್​ಪೇಟೆಯಲ್ಲಿ ಸನ್ನಿ ಲಿಯೋನ್ ಡಾನ್ಸ್​; ಮತ್ತೆ ಕರ್ನಾಟಕಕ್ಕೆ ಬಂದ ಬಾಲಿವುಡ್​ ನಟಿ  

ಖ್ಯಾತ ಧಾರಾವಾಹಿ ನಟಿ ಬಗ್ಗೆ ಮಂಜು ಪಾವಗಡ ಹೇಳಿದ ಒಗಟನ್ನು ನಿಮ್ಮಿಂದ ಬಿಡಿಸೋಕೆ ಸಾಧ್ಯವಾ?

Follow us on

Related Stories

Most Read Stories

Click on your DTH Provider to Add TV9 Kannada