ಸಿಬಿಎಫ್ಸಿ ಮತ್ತು ‘ಜನ ನಾಯಗನ್’ ನಡುವೆ ನಿಜಕ್ಕೂ ನಡೆದಿದ್ದೇನು? ವಿವರಿಸಿದ ನಿರ್ದೇಶಕ ವಿನೋದ್
Jana Nayagan movie: ಸಿಬಿಎಫ್ಸಿಯಲ್ಲಿ ಸಮಸ್ಯೆಗೆ ಒಳಗಾಬಹುದಾದಂಥಹ ಕಂಟೆಂಟ್ ಉಳ್ಳ ಸಿನಿಮಾಗಳನ್ನು ವಿಜಯ್ ಒಪ್ಪಿಕೊಳ್ಳುವುದೇ ಇಲ್ಲ. ಕೌಟುಂಬಿಕ ಪ್ರೇಕ್ಷಕರು ಹೆಚ್ಚಿಗಿರುವ ವಿಜಯ್ ರಿಸ್ಕ್ಗಳನ್ನು ತೆಗೆದುಕೊಳ್ಳುವುದಿಲ್ಲ. ಆದರೂ ಸಹ ಅವರ ನಟನೆಯ ‘ಜನ ನಾಯಗನ್’ ಸಿನಿಮಾಕ್ಕೆ ಸಿಬಿಎಫ್ಸಿ ಪ್ರಮಾಣ ಪತ್ರ ನೀಡಲಿಲ್ಲ. ಸಿಬಿಎಫ್ಸಿಯಿಂದ ಸಿನಿಮಾಕ್ಕೆ ಸಾಕಷ್ಟು ಸಮಸ್ಯೆಗಳು ಎದುರಾಯ್ತು. ನ್ಯಾಯಾಲಯದಲ್ಲಿಯೂ ಶೀಘ್ರ ನ್ಯಾಯ ದೊರಕಲಿಲ್ಲ. ಆದರೆ ನಿಜಕ್ಕೂ ಸಿಬಿಎಫ್ಸಿ ಮತ್ತು ‘ಜನ ನಾಯಗನ್’ ಚಿತ್ರತಂಡದ ನಡುವೆ ಉಂಟಾದ ಸಮಸ್ಯೆ ಏನು ಎಂಬುದನ್ನು ಸಿನಿಮಾದ ನಿರ್ದೇಶಕ ವಿನೋದ್ ವಿವರಿಸಿದ್ದಾರೆ.

ಮುಖ್ಯಾಂಶಗಳು
- ವಿಜಯ್ ನಟನೆಯ ‘ಜನ ನಾಯಗನ್’ ಬಿಡುಡಗೆ ಆಗಿದೆ.
- ಸಿಬಿಎಫ್ಸಿ ಇಂದ ಸಮಸ್ಯೆ ಆದ ಕಾರಣ ಏಳು ತಿಂಗಳ ಬಳಿಕ ಈ ಸಿನಿಮಾ ರಿಲೀಸ್ ಆಗುತ್ತಿದೆ.
- ಅಸಲಿಗೆ ಸಿಬಿಎಫ್ಸಿ ಮತ್ತು ಜನ ನಾಯಗನ್ ತಂಡದ ನಡುವೆ ನಡೆದಿದ್ದೇನು?
ವಿಜಯ್ (Vijay) ನಟನೆಯ ‘ಜನ ನಾಯಗನ್’ ಇಂದು (ಜುಲೈ 23) ಬಿಡುಗಡೆ ಆಗಿದೆ. ಜನವರಿ ತಿಂಗಳಲ್ಲಿ ಬಿಡುಗಡೆ ಆಗಬೇಕಿದ್ದ ಸಿನಿಮಾ ಹಲವಾರು ಸಮಸ್ಯೆಗಳನ್ನು ಎದುರಿಸಿ ಕೊನೆಗೂ ಇಂದು ರಿಲೀಸ್ ಆಗಿದೆ. ವಿಜಯ್ ಅವರ ಯಾವೊಂದು ಸಿನಿಮಾ ಸಹ ಸಿಬಿಎಫ್ಸಿ ಇಂದ ಸಮಸ್ಯೆಗೆ ಒಳಗಾಗಿದ್ದಿಲ್ಲ. ಸಿಬಿಎಫ್ಸಿಯಲ್ಲಿ ಸಮಸ್ಯೆಗೆ ಒಳಗಾಬಹುದಾದಂಥಹ ಕಂಟೆಂಟ್ ಉಳ್ಳ ಸಿನಿಮಾಗಳನ್ನು ವಿಜಯ್ ಒಪ್ಪಿಕೊಳ್ಳುವುದೇ ಇಲ್ಲ. ಕೌಟುಂಬಿಕ ಪ್ರೇಕ್ಷಕರು ಹೆಚ್ಚಿಗಿರುವ ವಿಜಯ್ ರಿಸ್ಕ್ಗಳನ್ನು ತೆಗೆದುಕೊಳ್ಳುವುದಿಲ್ಲ. ಆದರೂ ಸಹ ಅವರ ನಟನೆಯ ‘ಜನ ನಾಯಗನ್’ ಸಿನಿಮಾಕ್ಕೆ ಸಿಬಿಎಫ್ಸಿ ಪ್ರಮಾಣ ಪತ್ರ ನೀಡಲಿಲ್ಲ. ಸಿಬಿಎಫ್ಸಿಯಿಂದ ಸಿನಿಮಾಕ್ಕೆ ಸಾಕಷ್ಟು ಸಮಸ್ಯೆಗಳು ಎದುರಾಯ್ತು. ನ್ಯಾಯಾಲಯದಲ್ಲಿಯೂ ಶೀಘ್ರ ನ್ಯಾಯ ದೊರಕಲಿಲ್ಲ. ಆದರೆ ನಿಜಕ್ಕೂ ಸಿಬಿಎಫ್ಸಿ ಮತ್ತು ‘ಜನ ನಾಯಗನ್’ ಚಿತ್ರತಂಡದ ನಡುವೆ ಉಂಟಾದ ಸಮಸ್ಯೆ ಏನು ಎಂಬುದನ್ನು ಸಿನಿಮಾದ ನಿರ್ದೇಶಕ ವಿನೋದ್ ವಿವರಿಸಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿರುವ ವಿನೋದ್, ಹೆಚ್ಚಿನ ಜನರು ಚಲನಚಿತ್ರ ಬಿಡುಗಡೆಗೆ ಸುಮಾರು 10 ದಿನಗಳ ಮೊದಲು ಪ್ರಮಾಣೀಕರಣ (ಸೆನ್ಸಾರ್) ಪ್ರಕ್ರಿಯೆಯನ್ನು ಪ್ರಾರಂಭಿಸಿದರೆ, ತಾವು ಸುಮಾರು 20 ದಿನಗಳ ಮುಂಚಿತವಾಗಿ ಅದನ್ನು ಮಾಡಿದ್ದೆವು ಎಂದು ಹೇಳಿದ್ದಾರೆ. ಸಿಬಿಎಫ್ಸಿ ಸಮಿತಿಯು ಚಲನಚಿತ್ರವನ್ನು ವೀಕ್ಷಿಸಿ, ಚಿತ್ರದಲ್ಲಿ ‘ಯಾವುದೇ ಸಮಸ್ಯೆಗಳಿಲ್ಲ’ ಎಂದು ಹೇಳಿತು ಮತ್ತು ಮೌಖಿಕವಾಗಿ U/A 16+ ಪ್ರಮಾಣಪತ್ರ ನೀಡುವುದಾಗಿ ಭರವಸೆ ನೀಡಿತು. ಕೆಲ ಹಿಂಸಾತ್ಮಕ ದೃಶ್ಯಗಳನ್ನು ತೆಗೆದುಹಾಕುವ ಷರತ್ತಿನೊಂದಿಗೆ ಇದು ಬಂದಿತು ಮತ್ತು ತಂಡವು ಅದಕ್ಕೆ ಒಪ್ಪಿಕೊಂಡಿತ್ತಂತೆ.
ಆ ಬಳಿಕ ಇನ್ನೂ ಕೆಲವು ಬದಲಾವಣೆಗಳನ್ನು ಮಾಡಲು ಕೇಳಲಾಯಿತು. ಮತ್ತೆ, ನಮ್ಮ ತಂಡ ಬದಲಾವಣೆ ಮಾಡಲು ಒಪ್ಪಿಕೊಂಡಿತು. ಆದರೆ ಪರಿಷ್ಕೃತ ಆವೃತ್ತಿಯನ್ನು ಆನ್‌ಲೈನ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ಪ್ರಯತ್ನಿಸಿದಾಗ, ಅದು ಸಾಧ್ಯವಾಗಲಿಲ್ಲ. ನಾವು ಫೋನ್ ಕರೆಗಳು, ಇಮೇಲ್ ಮತ್ತು ಮುಖ್ಯ ಕಚೇರಿಗೆ ಸಂದೇಶ ಕಳುಹಿಸುವ ಮೂಲಕ ಸಿಬಿಎಫ್ಸಿ ಗೆ ಈ ಬಗ್ಗೆ ಮಾಹಿತಿ ನೀಡಿದೆವು. ಆಗಲೇ ನಮಗೆ ತಿಳಿದಿದ್ದು ಚಿತ್ರವನ್ನು ಪರಿಷ್ಕರಣಾ ಸಮಿತಿಗೆ ಕಳುಹಿಸಲಾಗಿದೆ ಎಂದು. ಚಿತ್ರದ ತಂಡವು ನ್ಯಾಯಾಲಯಕ್ಕೂ ಈ ಘಟನೆಗಳನ್ನು ತಿಳಿಸಿತ್ತು, ಆದರೆ ಅಲ್ಲಿಯೂ ಅವರಿಗೆ ಯಾವುದೇ ಪರಿಹಾರ ದೊರೆಯಲಿಲ್ಲ’ ಎಂದಿದ್ದಾರೆ ವಿನೋದ್.
ಇದನ್ನೂ ಓದಿ:‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ
ನಂತರ ವಿನೋದ್ ಅವರು ‘ಜನ ನಾಯಕನ್’ ವಿರುದ್ಧ ಸಿಬಿಎಫ್ಸಿಗೆ ಬಂದ ದೂರಿನ ಬಗ್ಗೆ ಮಾತನಾಡಿದರು. “ಚಿತ್ರದ ವಿರುದ್ಧ ಬಂದ ದೂರಿನಿಂದಾಗಿ ಪೋರ್ಟಲ್ ಅನ್ನು ಬ್ಲಾಕ್ ಮಾಡಲಾಗಿದೆ ಎಂದು ನಮಗೆ ತಿಳಿಸಲಾಯಿತು. ಅಷ್ಟರೊಳಗೆ ಚಿತ್ರಮಂದಿರಗಳು, ವಿತರಕರು ಮತ್ತು ಅಭಿಮಾನಿಗಳು ಬಿಡುಗಡೆಗಾಗಿ ದೊಡ್ಡ ಮೊತ್ತವನ್ನು ಖರ್ಚು ಮಾಡಿದ್ದರು. ನಾವು ಎಲ್ಲರಿಗೂ ಉತ್ತರಿಸಬೇಕಿತ್ತು, ಆದರೆ ಚಿತ್ರಕ್ಕೆ ಪ್ರಮಾಣಪತ್ರ ಸಿಗುತ್ತದೋ ಇಲ್ಲವೋ ಎಂಬುದು ನಮಗೂ ತಿಳಿದಿರಲಿಲ್ಲ” ಎಂದು ಅವರು ಹೇಳಿದರು.
ಸ್ಪಷ್ಟತೆ ಪಡೆಯಲು ತಾವು ಮಾಡಿದ ಪ್ರಯತ್ನಗಳು ವಿಫಲವಾದವು, ‘ನಮಗೆ ಅನುಮೋದನೆಯೂ ಸಿಗಲಿಲ್ಲ ಅಥವಾ ತಿರಸ್ಕಾರವೂ ಸಿಗಲಿಲ್ಲ. ಮೊಕದ್ದಮೆ ಹೂಡಿದ ನಂತರವೇ ಚಿತ್ರ ಮರುಪರಿಶೀಲನೆಗೆ ಒಳಪಡಲಿದೆ ಎಂಬ ಪ್ರತಿಕ್ರಿಯೆ ಸಿಕ್ಕಿತು. ಸೆನ್ಸಾರ್ ಬೋರ್ಡ್‌ನಲ್ಲಿ ಎಂದಿಗೂ ಸಮಸ್ಯೆಯಿರಲಿಲ್ಲ ಎಂದು ನಾನು ನಂಬುತ್ತೇನೆ. ವಿಳಂಬದ ಹಿಂದೆ ಇತರ ಕಾರಣಗಳು ಇರಬಹುದು, ಆದರೆ ಸಾಕ್ಷ್ಯವಿಲ್ಲದೆ ನಾನು ಯಾರ ಹೆಸರನ್ನೂ ಹೇಳಲಾರೆ. ಕಾನೂನು ತನ್ನದೇ ಆದ ಅಧಿಕಾರವನ್ನು ಹೊಂದಿದೆ, ಮತ್ತು ಪುರಾವೆಗಳಿಲ್ಲದೆ ಆರೋಪ ಮಾಡಲು ನಾನು ಬಯಸುವುದಿಲ್ಲ” ಎಂದು ವಿನೋದ್ ಹೇಳಿದ್ದಾರೆ.
ಇದೇ ಮೇ ತಿಂಗಳಲ್ಲಿ ‘ಪರಿಮಳ ಆಂಡ್ ಕೋ’ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಅವರನ್ನು ಚಿತ್ರದ ಬಿಡುಗಡೆಯ ಬಗ್ಗೆ ಕೇಳಲಾಗಿತ್ತು. “ಅದು ನನ್ನ ಕೈಯಲ್ಲಿಲ್ಲ. ಸತ್ಯವನ್ನು ಹೇಳುವ ಧೈರ್ಯವೂ ನನಗೆ ಇಲ್ಲ. ಒಂದು ವೇಳೆ ನನಗೆ ಧೈರ್ಯವಿದ್ದರೂ, ಅದನ್ನು ಹಂಚಿಕೊಳ್ಳುವ ಧೈರ್ಯ ನಿಮಗಿರುವುದಿಲ್ಲ” ಎಂದು ಅವರು ಹೇಳಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:13 am, Thu, 23 July 26




