
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ವಿಜಯ್ (Thalapathy Vijay) ತಮಿಳುನಾಡಿನ ಸಿಎಂ ಆಗಿದ್ದಾರೆ. ಸಿಎಂ ಆಗುವ ಮುಂಚೆಯೇ ಅವರು ಚಿತ್ರರಂಗದಿಂದ ನಿವೃತ್ತಿ ಘೋಷಿಸಿ ಆಗಿತ್ತು. ‘ಜನ ನಾಯಗನ್’ ನನ್ನ ಕೊನೆಯ ಸಿನಿಮಾ ಎಂದು ವಿಜಯ್ ಹೇಳಿ ಬಿಟ್ಟಿದ್ದರು. ವಿಜಯ್ ಅವರು ಸಿಎಂ ಆಗಿ ಬ್ಯುಸಿ ಆಗಿದ್ದಾರೆ. ಆದರೆ ವಿಜಯ್ ಸಿನಿಮಾ ರಂಗದಿಂದ ನಿವೃತ್ತಿ ಘೋಷಿಸಿರುವುದು ತಮಿಳು ಚಿತ್ರರಂಗಕ್ಕೆ ಭಾರಿ ದೊಡ್ಡ ನಷ್ಟವಾಗಿದೆ. ವಿಜಯ್, ಸಿನಿಮಾಗಳು ಕೋಟ್ಯಂತರ ರೂಪಾಯಿ ಬ್ಯುಸಿನೆಸ್ ಮಾಡುವ ಜೊತೆಗೆ ಸಾವಿರಾರು ಕುಟುಂಬಗಳಿಗೆ ಉದ್ಯೋಗ, ಆದಾಯಕ್ಕೆ ದಾರಿ ಆಗಿದ್ದವು. ವಿಜಯ್ ನಿವೃತ್ತಿಯಿಂದ ಖಾಲಿ ಆಗಿರುವ ಅವರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.
ವಿಜಯ್ ನಿರ್ಗಮನದ ಬಳಿಕ ತಮಿಳು ಚಿತ್ರರಂಗದಲ್ಲಿ ಅವರ ಸ್ಥಾನ ತುಂಬುವ ನಟ ಯಾರು ಎಂಬ ಪ್ರಶ್ನೆಗೆ ಮೂವರು ನಾಯಕರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ. ಅದರಲ್ಲಿ ಪ್ರಮುಖವಾದ ಹೆಸರು ಶಿವಕಾರ್ತಿಕೇಯನ್ ಅವರದ್ದು. ಶಿವಕಾರ್ತಿಕೇಯನ್ ಒಳ್ಳೆಯ ನಟರಾಗಿದ್ದು, ಮಾಸ್ ಸಿನಿಮಾಗಳಲ್ಲಿ ಅವರಿಗಿನ್ನೂ ದೊಡ್ಡ ಯಶಸ್ಸು ಸಿಕ್ಕಿಲ್ಲ. ಆದರೆ ಮಾಸ್ ಸಿನಿಮಾಗಳಲ್ಲಿಯೂ ನಟಿಸಬಲ್ಲ ನಟ. ವಿಜಯ್ ಅವರ ‘ಗೋಟ್’ ಸಿನಿಮಾನಲ್ಲಿ, ಶಿವಕಾರ್ತಿಕೇಯನ್ ಅವರನ್ನು ವಿಜಯ್ರ ಉತ್ತರಾಧಿಕಾರಿ ಎಂಬಂತೆ ತೋರಿಸಲಾಗಿದೆ. ವಿಜಯ್ ಅವರಂತೆಯೇ ಮಾಸ್, ಕಾಮಿಡಿ, ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾಗಳನ್ನು ಮಾಡಬಲ್ಲ ಮುಖಲಕ್ಷಣ, ನಟನಾ ಪ್ರತಿಭೆ ಶಿವಕಾರ್ತಿಕೇಯನ್ ಅವರಿಗೆ ಇದೆ. ಆದರೆ ವಿಜಯ್ ರೀತಿ ಒಳ್ಳೆಯ ಡ್ಯಾನ್ಸರ್ ಅಲ್ಲ ಶಿವಕಾರ್ತಿಕೇಯನ್.
ಇದನ್ನೂ ಓದಿ:ಯಾವುದೇ ಕ್ಷಣದಲ್ಲಿ ವಿಜಯ್ ಸರ್ಕಾರ ಪತನವಾಗಬಹುದು ಎಂದ ಸ್ಟಾಲಿನ್!
ಇದೇ ರೀತಿ ನಟ ಸೂರ್ಯ ಹೆಸರು ಸಹ ಗಟ್ಟಿಯಾಗಿಯೇ ಕೇಳಿ ಬರುತ್ತಿದೆ. ವಿಜಯ್ ಹಾಗೂ ಸೂರ್ಯ ಬಹುತೇಕ ಒಂದೇ ಸಮಯದಲ್ಲಿ ಚಿತ್ರರಂಗಕ್ಕೆ ಬಂದವರು. ಸೂರ್ಯ ಈಗಾಗಲೇ ಸ್ಟಾರ್ ನಟ. ಆದರೂ ವಿಜಯ್ ಅವರಿಗೆ ಇರುವಷ್ಟು ಮಾಸ್ ಅಭಿಮಾನಿಗಳು ಸೂರ್ಯಾಗಿಲ್ಲ. ಆದರೆ ಸೂರ್ಯ, ವಿಜಯ್ ರೀತಿ ಮಾಸ್ ಆಗಿ ಕಾಣಿಸಿಕೊಳ್ಳಬಲ್ಲ ಛಾತಿ ಉಳ್ಳ ನಟರೇ ಆಗಿದ್ದಾರೆ. ಈಗ ವಿಜಯ್ ನಿರ್ಗಮನದಿಂದ ಉಂಟಾಗಿರುವ ನಿರ್ವಾತವನ್ನು ಸರಿಯಾಗಿ ತುಂಬಬಲ್ಲ ನಟ ಎಂದರೆ ಅದು ಸೂರ್ಯ ಎನ್ನಲಾಗುತ್ತಿದೆ.
ಇನ್ನು ಕೆಲವರು ಸೂರ್ಯ ಸಹೋದರ ಕಾರ್ತಿ, ವಿಜಯ್ ಅವರ ಸ್ಥಾನ ತುಂಬಬಲ್ಲ ನಟ ಎನ್ನುತ್ತಿದ್ದಾರೆ. ಅಣ್ಣನಂತೆ ಕಾರ್ತಿ ಸಹ ನಟನಾ ಪ್ರತಿಭೆಯುಳ್ಳ. ಯಾವುದೇ ರೀತಿಯ ಪಾತ್ರಕ್ಕೂ ಜೀವ ತುಂಬಬಲ್ಲರು. ವಿಜಯ್ ಸ್ಥಾನವನ್ನು ತುಂಬಬಲ್ಲ ನಟ ಕಾರ್ತಿ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ ಕಾರ್ತಿಗಿಂತಲೂ, ಹೆಚ್ಚು ಸೂಟೆಬಲ್ ವ್ಯಕ್ತಿ ಎಂದರೆ ಅದು ಅವರ ಅಣ್ಣ ಸೂರ್ಯ ಎಂದೇ ಹೇಳಬೇಕು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ