ಹೀರೋಯಿನ್​ಗಳಿಗಿಂತ ಹೀರೋಗಳು ಹೆಚ್ಚು ವರ್ಷ ಚಿತ್ರರಂಗದಲ್ಲಿ ಮಿಂಚೋದೇಕೆ? ಇಲ್ಲಿದೆ ಕಾರಣ

ಭಾರತೀಯ ಸಿನಿಮಾ ರಂಗದಲ್ಲಿ ನಟಿಯರಿಂಗಲೂ ನಟರಿಗೆ ಆಯಸ್ಸು ಹೆಚ್ಚು. ಸ್ಟಾರ್ ನಟರು ಮುದುಕರಾದರೂ ತೆರೆಯ ಮೇಲೆ ನಾಯಕರಾಗಿ ಅಬ್ಬರಿಸುತ್ತಾರೆ ಆದರೆ ನಾಯಕಿಯರು 30-35 ದಾಟುತ್ತಿದ್ದಂತೆ ಅಕ್ಕ, ಅತ್ತಿಗೆ ಪಾತ್ರದತ್ತ ಹೊರಳುತ್ತಾರೆ ಕಾರಣವೇನು?

ಹೀರೋಯಿನ್​ಗಳಿಗಿಂತ ಹೀರೋಗಳು ಹೆಚ್ಚು ವರ್ಷ ಚಿತ್ರರಂಗದಲ್ಲಿ ಮಿಂಚೋದೇಕೆ? ಇಲ್ಲಿದೆ ಕಾರಣ
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on:Aug 08, 2024 | 6:21 PM

ನಟರಿಗೆ ಹೋಲಿಕೆ ಮಾಡಿದರೆ ನಟಿಯರು ಚಿತ್ರರಂಗದಲ್ಲಿ ಹೆಚ್ಚು ವರ್ಷ ಇರುವುದಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೂ ಅಲ್ಲೊಂದು, ಇಲ್ಲೊಂದು ಹೀರೋಯಿನ್​ಗಳು ಹೆಚ್ಚು ವರ್ಷ ಚಿತ್ರರಂಗದಲ್ಲಿ ಇರುತ್ತಾರೆ. ಆದರೆ, ಬಹುತೇಕರು ಮದುವೆ ಬಳಿಕ ವೈಯಕ್ತಿಕ ಜೀವನದ ಕಡೆಗೆ ಗಮನ ಹರಿಸುತ್ತಾರೆ. ಬಾಲಿವುಡ್​ನಲ್ಲಿ ಮಿಂಚಿ ಮರೆಯಾದ ನಟಿ ಮೀನಾಕ್ಷಿ ಶೇಷಾದ್ರಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಹೀರೋಗಳು ಹೆಚ್ಚು ವರ್ಷ ಸಿನಿಮಾ ರಂಗದಲ್ಲಿ ಇರಲು ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.

ಮೀನಾಕ್ಷಿ ಶೇಷಾದ್ರಿ ಅವರು 80ರ ದಶಕದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಅಮಿತಾಭ್ ಬಚ್ಚನ್, ರಾಜೇಶ್ ಖನ್ನಾ, ಜೀತೇಂದ್ರ, ಅನಿಲ್ ಕಪೂರ್, ಶತ್ರುಘ್ನ ಸಿನ್ಹಾ ಸೇರಿ ಅನೇಕ ಎ ಲಿಸ್ಟ್ ಹೀರೋಗಳ ಜೊತೆ ಅವರು ನಟಿಸಿದರು. 1996ರಲ್ಲಿ ಅವರು ಚಿತ್ರರಂಗ ತೊರೆದು ಅಮೆರಿಕದಲ್ಲಿ ಸೆಟಲ್ ಆದರು. ಈಗ ಅವರಿಗೆ 60 ವರ್ಷ. ಅವರು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದಾರೆ.

ಇದನ್ನೂ ಓದಿ:ಯಾರಿಗೂ ಹೇಳದೆ ಚಿತ್ರರಂಗವನ್ನೇ ತೊರೆದು ಬಿಟ್ಟಿದ್ದರು ಆಮಿರ್ ಖಾನ್

27 ವರ್ಷಗಳ ಬಳಿಕ ಬಂದ ಅವರು ಕೆಲವು ಮಾತುಗಳನ್ನು ಆಡಿದ್ದಾರೆ. ‘ನಟರಿಗೆ ಚಿತ್ರರಂಗದಲ್ಲಿ ಹೆಚ್ಚು ವರ್ಷ ಇರಲು ಹೇಗೆ ಸಾಧ್ಯ ಎಂಬುದಕ್ಕೆ ಕೆಲವು ಕಾರಣಗಳು ಇವೆ. ಧರ್ಮೇಂದ್ರ, ಜೀತೇಂದ್ರ, ಅಮಿತಾಭ್ ಬಚ್ಚನ್ ಜನರೇಷನ್​ನ ಕಲಾವಿದರೂ ಈಗಲೂ ಚಿತ್ರರಂಗದಲ್ಲಿ ಇದ್ದಾರೆ. ನಟರು ಮನೆಗೆಲಸ ಮಾಡುವುದಿಲ್ಲ. ಹಾಗಾದಗ ತಮ್ಮ ವೃತ್ತಿ ಜೀವನದ ಮೇಲೆ ಸಂಪೂರ್ಣ ಗಮನ ಹರಿಸಬಹುದು. ಪ್ರೆಗ್ನೆನ್ಸಿ, ಮಕ್ಕಳ ಜನನದ ಬಗ್ಗೆ ಅವರು ಚಿಂತಿಸೋ ಅಗತ್ಯ ಇಲ್ಲ. ಮಕ್ಕಳನ್ನು ಬೆಳೆಸಬೇಕು ಎಂಬುದು ಕೂಡ ಅವರಿಗೆ ಚಿಂತೆ ಅಲ್ಲ. ಇದೆಲ್ಲ ಮಹಿಳೆಯ ಜವಾಬ್ದಾರಿ. ಹೀಗಾಗಿ, ಹೀರೋಗಳು ಇನ್ನೂ ಇದ್ದಾರೆ.

‘ಜನರೂ ಈಗಲೂ ನನ್ನ ಇಷ್ಟಪಡುತ್ತಾರೆ. ಅದು ಮುಖ್ಯ’ ಎಂದು ಅವರು ಹೇಳಿಕೊಂಡಿದ್ದಾರೆ. ಮೀನಾಕ್ಷಿ ಅವರು 70 ಸಿನಿಮಾಗಳನ್ನು ಮಾಡಿದ್ದಾರೆ. ಈ ಮಧ್ಯೆ ಅವರು ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಮೀನಾಕ್ಷಿ ಅವರು 27 ವರ್ಷಗಳ  ಬಳಿಕ ಕಂಬ್ಯಾಕ್ ಮಾಡುತ್ತಿದ್ದಾರೆ. ‘ಪೇಂಟರ್ ಬಾಬು’ ಅವರ ನಟನೆಯ ಮೊದಲ ಸಿನಿಮಾ. ಅನೇಕ ಹೀರೋಯಿನ್​ಗಳು ಮಕ್ಕಳ ಆರೈಕೆಯಲ್ಲಿ ಬ್ಯುಸಿ ಆಗಿ ಚಿತ್ರರಂಗ ತೊರೆದಿದ್ದಾರೆ. ಈಗಾಗಲೇ ಅನುಷ್ಕಾ ಶರ್ಮಾ ಅವರು ನಟನೆ ತೊರೆಯೋ ಸೂಚನೆ ಕೊಟ್ಟಿದ್ದಾರೆ. ಅವರಿಗೆ ಇಬ್ಬರು ಮಕ್ಕಳಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:20 pm, Thu, 8 August 24

ಕೊಪ್ಪಳ ಗವಿಸಿದ್ದೇಶ್ವರನ ರಥ ಎಳೆದು ಪುನೀತರಾದ ಭಕ್ತ ಸಾಗರ: ವಿಡಿಯೋ ನೋಡಿ
ಕೊಪ್ಪಳ ಗವಿಸಿದ್ದೇಶ್ವರನ ರಥ ಎಳೆದು ಪುನೀತರಾದ ಭಕ್ತ ಸಾಗರ: ವಿಡಿಯೋ ನೋಡಿ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಗೆ ಹರಿದು ಬಂದ ಜನ ಸಾಗರದ ವಿಡಿಯೋ ನೋಡಿ
ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಗೆ ಹರಿದು ಬಂದ ಜನ ಸಾಗರದ ವಿಡಿಯೋ ನೋಡಿ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ನಾಳೆಯಲ್ಲ, ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ: ಸಿದ್ದರಾಮಯ್ಯ
ನಾಳೆಯಲ್ಲ, ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ: ಸಿದ್ದರಾಮಯ್ಯ