‘ಫೈಟರ್’ ಸಿನಿಮಾ ಗಳಿಕೆ ಕಡಿಮೆ ಆಗಲು ಕಾರಣ ಏನು? ವಿವರಿಸಿದ ನಿರ್ದೇಶಕ ಸಿದ್ದಾರ್ಥ್

|

Updated on: Feb 02, 2024 | 8:46 AM

ಹೃತಿಕ್ ರೋಷನ್ ನಟನೆಯ ‘ಫೈಟರ್’ ಸಿನಿಮಾ ಈವರೆಗೆ ಗಳಿಕೆ ಮಾಡಿದ್ದು 246 ಕೋಟಿ ರೂ.. ಇದು ದೊಡ್ಡ ಮಟ್ಟದ ಗಳಿಕೆಯೇ. ಆದರೆ, ಸಿನಿಮಾದ ಬಜೆಟ್, ಪಾತ್ರವರ್ಗಕ್ಕೆ ಹೋಲಿಕೆ ಮಾಡಿದರೆ ಇದು ಸಣ್ಣ ಗಳಿಕೆ. ಸಿನಿಮಾದಿಂದ ನಿರ್ಮಾಪಕರಿಗೆ ಆದ ಲಾಭ ಆಗಿದ್ದು ಕಡಿಮೆ.

‘ಫೈಟರ್’ ಸಿನಿಮಾ ಗಳಿಕೆ ಕಡಿಮೆ ಆಗಲು ಕಾರಣ ಏನು? ವಿವರಿಸಿದ ನಿರ್ದೇಶಕ ಸಿದ್ದಾರ್ಥ್
ಹೃತಿಕ್​ ರೋಷನ್​
Follow us on

ಸಿದ್ದಾರ್ಥ್ ಆನಂದ್ (Siddharth Anand) ಅವರು ಆ್ಯಕ್ಷನ್ ಸಿನಿಮಾಗಳ ಮೂಲಕ ಗಮನ ಸೆಳೆದವರು. ಕಳೆದ ವರ್ಷ ರಿಲೀಸ್ ಆದ ಅವರ ನಿರ್ದೇಶನದ ‘ಪಠಾಣ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ 1,000 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಆದರೆ, ಅವರ ನಿರ್ದೇಶನದ ‘ಫೈಟರ್’ ಸಿನಿಮಾ ಸಾಧಾರಣ ಗಳಿಕೆ ಮಾಡುತ್ತಿದೆ. ಈ ಬಗ್ಗೆ ನಿರ್ದೇಶಕ ಸಿದ್ದಾರ್ಥ್ ಮಾತನಾಡಿದ್ದಾರೆ. ಸಿನಿಮಾ ಗಳಿಕೆ ಕಡಿಮೆ ಆಗಲು ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ.

‘ಫೈಟರ್’ ಸಿನಿಮಾ ಈವರೆಗೆ ಗಳಿಕೆ ಮಾಡಿದ್ದು 246 ಕೋಟಿ ರೂಪಾಯಿ. ಇದು ದೊಡ್ಡ ಗಳಿಕೆಯೇ. ಆದರೆ, ಸಿನಿಮಾದ ಬಜೆಟ್, ಪಾತ್ರವರ್ಗಕ್ಕೆ ಹೋಲಿಕೆ ಮಾಡಿದರೆ ಇದು ಸಣ್ಣ ಗಳಿಕೆ. ಸಿನಿಮಾದಿಂದ ನಿರ್ಮಾಪಕರಿಗೆ ಆದ ಲಾಭ ಕಡಿಮೆ. ಹೀಗಾಗಿ, ಇಂಥ ಸಿನಿಮಾಗಳು ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಬೇಕು ಎಂದು ಎಲ್ಲರೂ ಬಯಸುತ್ತಾರೆ. ಈ ಬಗ್ಗೆ ಸಿದ್ದಾರ್ಥ್ ಮಾತನಾಡಿದ್ದಾರೆ.

‘ಸಿನಿಮಾ ನಿರ್ದೇಶಕರಾಗಿ ನಮ್ಮ ನಿರೀಕ್ಷೆಗಳು ವಾಸ್ತವಕ್ಕೆ ಸ್ವಲ್ಪ ದೂರವಾಗಿದೆ. ಇದರಲ್ಲಿ ನಾನೂ ಸೇರಿದ್ದೇನೆ. ನಾವು ನಮ್ಮ ನಿರೀಕ್ಷೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ನಮ್ಮ ಸಿನಿಮಾ ರಿಲೀಸ್ ಆಗಿದ್ದು ಜನವರಿ 25ರಂದು. ಅದು ಗುರುವಾರ. ಇದನ್ನು ವಾರದ ಮಧ್ಯಭಾಗವೆಂದು ಪರಿಗಣಿಸಲಾಗುತ್ತದೆ. ಗುರುವಾರ ಹಲವು ಶೋಗಳನ್ನು ಆಯೋಜನೆ ಮಾಡಲಾಗಿತ್ತು. ನಾವು ಸಿನಿಮಾಗೆ ಆಗಮಿಸುವಂತೆ ನಮ್ಮ ಆಪ್ತರನ್ನು ಕೇಳಿದೆವು. ಸಂಜೆ ಮೇಲೆ ಶೋ ಇದ್ದರೆ ಮಾತ್ರ ಬರುತ್ತೇವೆ ಎನ್ನುವ ಉತ್ತರ ಬಂದಿತ್ತು’ ಎಂದಿದ್ದಾರೆ ಸಿದ್ದಾರ್ಥ್.

ಇದನ್ನೂ ಓದಿ: ಪಾರ್ಟ್ನರ್​ ಎಂದು ಒಪ್ಪಿಕೊಂಡ ಸಿದ್ದಾರ್ಥ್​; ಅದಿತಿ ರಾವ್​ ಹೈದರಿ ಜೊತೆಗಿನ ಲವ್​ ಅಧಿಕೃತ

‘ಸಿನಿಮಾದ ಪ್ರಕಾರ ಕೂಡ ಮುಖ್ಯವಾಗುತ್ತದೆ. ಫೈಟರ್​ನಲ್ಲಿ ಹೇಳಿದ್ದು ಭಾರತದ ಪ್ರೇಕ್ಷಕರಿಗೆ ಸಂಪೂರ್ಣವಾಗಿ ಹೊಸ ವಿಷಯ. ಈ ವಿಮಾನಗಳು ಏನು ಮಾಡುತ್ತಿವೆ ಎನ್ನುವ ಪ್ರಶ್ನೆ ಪ್ರೇಕ್ಷಕರಲ್ಲಿ ಮೂಡಬಹುದು. ನಮ್ಮ ದೇಶದಲ್ಲಿ ಶೇ. 90 ಜನರು ವಿಮಾನಗಳಲ್ಲಿ ಹಾರಾಟ ನಡೆಸಿಲ್ಲ. ವಿಮಾನ ನಿಲ್ದಾಣವನ್ನೇ ನೋಡಿರುವುದಿಲ್ಲ. ಅವರಿಗೆ ಸಿನಿಮಾ ಹೇಗೆ ಕನೆಕ್ಟ್ ಆಗಲು ಸಾಧ್ಯ? ಇದು ಸ್ವಲ್ಪ ಪರಕೀಯ ಎಂದು ಅವರಿಗೆ ಅನಿಸಿರಬಹುದು. ಆದರೆ, ಇದರಲ್ಲಿ ನಾವು ಹೇಳಿದ್ದು ಬೇಸಿಕ್ ವಿಚಾರ’ ಎಂದಿದ್ದಾರೆ ಸಿದ್ದಾರ್ಥ್​.

‘ಫೈಟರ್’ ಸಿನಿಮಾದಲ್ಲಿ ಹೃತಿಕ್ ರೋಷನ್, ಅನಿಲ್ ಕಪೂರ್, ದೀಪಿಕಾ ಪಡುಕೋಣೆ ಮೊದಲಾದವರು ನಟಿಸಿದ್ದಾರೆ. ಈ ಚಿತ್ರ ಬಹುತೇಕ ದೃಶ್ಯ ಫೈಟರ್​ ಜೆಟ್​ಗಳ ಮೇಲೆ ಕೇಂದ್ರೀಕೃತವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ