ಕರ್ನಾಟಕದಲ್ಲಿ ಭಾರೀ ಗಳಿಕೆ ಮಾಡಿದ ಹಾಲಿವುಡ್ ಚಿತ್ರ; ಕನ್ನಡ ಸಿನಿಮಾಗಳಿಗೇ ಇಲ್ಲ ಬೇಡಿಕೆ

ಈ ವರ್ಷ 100ಕ್ಕೂ ಹೆಚ್ಚು ಕನ್ನಡ ಸಿನಿಮಾಗಳು ಬಿಡುಗಡೆಯಾಗಿದ್ದರೂ, ಕೆಲವೇ ಚಿತ್ರಗಳು ಉತ್ತಮ ಗಳಿಕೆ ಕಂಡಿವೆ. ಇದಕ್ಕೆ ವ್ಯತಿರಿಕ್ತವಾಗಿ, ಹಾಲಿವುಡ್ ಚಿತ್ರಗಳು ಕರ್ನಾಟಕದಲ್ಲಿ ಭಾರಿ ಯಶಸ್ಸು ಗಳಿಸುತ್ತಿವೆ. 'ಒಬ್ಸೆಷನ್' ಚಿತ್ರ 10 ಕೋಟಿಗೂ ಹೆಚ್ಚು ಗಳಿಸಿದ್ದರೆ, ಅನೇಕ ಕನ್ನಡ ಸಿನಿಮಾಗಳು 10 ಕೋಟಿ ತಲುಪಲು ಹೆಣಗುತ್ತಿವೆ. ಇದು ಕನ್ನಡ ಚಿತ್ರರಂಗದ ಗಳಿಕೆ ಮತ್ತು ಪ್ರೇಕ್ಷಕರ ಬೇಡಿಕೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕರ್ನಾಟಕದಲ್ಲಿ ಭಾರೀ ಗಳಿಕೆ ಮಾಡಿದ ಹಾಲಿವುಡ್ ಚಿತ್ರ; ಕನ್ನಡ ಸಿನಿಮಾಗಳಿಗೇ ಇಲ್ಲ ಬೇಡಿಕೆ
ಒಬ್ಸೆಷನ್

Updated on: Jun 13, 2026 | 10:44 AM

ಈ ವರ್ಷದ ಮೊದಲಾರ್ಧ ಕಳೆಯಲು ಬಾಕಿ ಇರೋದು ಕೆಲವೇ ವಾರ ಮಾತ್ರ. ಈ ಅವಧಿಯಲ್ಲಿ ಸುಮಾರು 100ಕ್ಕೂ ಅಧಿಕ ಕನ್ನಡ ಸಿನಿಮಾಗಳು ರಿಲೀಸ್ ಆಗಿವೆ. ಆದರೆ, ಇದರಲ್ಲಿ ಉತ್ತಮ ಕಲೆಕ್ಷನ್ ಮಾಡಿದ್ದು ಕೆಲವೇ ಸಿನಿಮಾಗಳು ಮಾತ್ರ. ಉತ್ತಮ ಗಳಿಕೆ ಮಾಡಿದ ಹೊರತಾಗಿಯೂ ಗೆದ್ದ ಸಿನಿಮಾಗಳು ತುಂಬಾನೇ ಕಡಿಮೆ ಎಂದು ವರದಿ ಆಗಿದೆ. ವಿಚಿತ್ರ ಎಂದರೆ ಹಾಲಿವುಡ್ ಸಿನಿಮಾಗಳು ಕರ್ನಾಟಕದಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿವೆ. ಆದರೆ, ಕನ್ನಡದ ಸಿನಿಮಾಗಳೇ ಇಲ್ಲಿ ಮಂಕಾಗಿವೆ.

ಇತ್ತೀಚೆಗೆ ರಿಲೀಸ್ ಆದ ಹಾಲಿವುಡ್​ನ ‘ಒಬ್ಸೆಷನ್’ ಸಿನಿಮಾ ಮೆಚ್ಚುಗೆ ಪಡೆದಿದೆ. ಕೇವಲ 7 ಕೋಟಿ ರೂಪಾಯಿ ಬಜೆಟ್​​ನಲ್ಲಿ ಸಿದ್ಧವಾದ ಈ ಸಿನಿಮಾ ವರ್ಡ್​​ವೈಡ್ 2000 ಕೋಟಿ ರೂಪಾಯಿ ಅಷ್ಟು ಗಳಿಕೆ ಮಾಡಿದೆ ಎನ್ನಲಾಗಿದೆ. ಇನ್ನು, ಭಾರತದಲ್ಲಿ ಸಿನಿಮಾದ ಗಳಿಕೆ 50 ಕೋಟಿ ರೂಪಾಯಿ ದಾಟಿದೆ. ಇದು ಚಿತ್ರದ ಹೆಚ್ಚುಗಾರಿಕೆ. ಕರ್ನಾಟಕದಲ್ಲೇ ಈ ಸಿನಿಮಾ 10 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಾ ಇದೆ.

ಹಾಗೆ ನೋಡಿದರೆ ಈ ವರ್ಷ ಕನ್ನಡದ ಸಿನಿಮಾಗಳು 10 ಕೋಟಿ ರೂಪಾಯಿ ಗಳಿಕೆ ಮಾಡಲು ಒದ್ದಾಡಿವೆ. ವಿಕಿಪೀಡಿಯಾ 2026ರನೇ ಸಾಲಿನ ಸಿನಿಮಾಗಳ ಪಟ್ಟಿ ನೀಡಿದೆ. ಇದರಲ್ಲಿ ಈ ವರ್ಷದ ಟಾಪ್ 10 ಸಿನಿಮಾಗಳ ಹೆಸರನ್ನು ಉಲ್ಲೇಖಿಸಿದೆ. ಇದರಲ್ಲಿ ಮೊದಲ ಸ್ಥಾನದಲ್ಲಿ ಕೆಡಿ ಚಿತ್ರ ಇದ್ದು 20 ಕೋಟಿ ರೂಪಾಯಿ ಅಷ್ಟು (ವರ್ಡ್​ ವೈಡ್ ಗ್ರಾಸ್) ಗಳಿಸಿದೆ ಎಂದು ಹೇಳಲಾಗಿದೆ. ಚಿತ್ರದ ಬಜೆಟ್​​ಗೆ ಹೋಲಿಕೆ ಮಾಡಿದರೆ ಸಿನಿಮಾಗೆ ನಷ್ಟ ಆಗಿರುವ ಸಾಧ್ಯತೆ ಹೆಚ್ಚಿದೆ.

ಎರಡನೇ ಸ್ಥಾನದಲ್ಲಿ ‘ಲವ್ ಮಾಕ್ಟೇಲ್ 3’ ಸಿನಿಮಾ ಇದೆ. ಈ ಚಿತ್ರ 14 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗಿದೆ. ಮೂರನೇ ಸ್ಥಾನದಲ್ಲಿ ವಿಜಯ್ ಅವರ ‘ಲ್ಯಾಂಡ್​ ಲಾರ್ಡ್’ ಸಿನಿಮಾ ಇದ್ದು, 13 ಕೋಟಿ ರೂಪಾಯಿ ಗಳಿಸಿದೆ. ಇಷ್ಟು ಸಿನಿಮಾಗಳು ಉತ್ತಮ ಕಲೆಕ್ಷನ್ ಮಾಡಿರುವ ಚಿತ್ರಗಳು.

ಇದನ್ನೂ ಓದಿ: 7 ಕೋಟಿ ರೂ. ಸಿನಿಮಾ, ಗಳಿಸಿದ್ದು 1,700 ಕೋಟಿ; ಅಬ್ಬಬ್ಬಾ ಹೊಸ ದಾಖಲೆ

ಮುಂದಿನ ದಿನಗಳಲ್ಲಿ ‘ಒಬ್ಸೆಷನ್’ ಸಿನಿಮಾದ ಕರ್ನಾಟಕದ ಗಳಿಕೆ ಮತ್ತಷ್ಟು ಹೆಚ್ಚಬಹುದು. ಈ ವರ್ಷ ಕನ್ನಡ ಸಿನಿಮಾ ಮಾಡಿದ ಅತಿ ಹೆಚ್ಚು ಗ್ರಾಸ್ ಅನ್ನು ಕೂಡ ಇದು ಹಿಂದಿಕ್ಕಬಹುದು. ಈ ಎಲ್ಲಾ ಬೆಳವಣಿಗೆ ಮಧ್ಯೆ ಕನ್ನಡ ಸಿನಿಮಾಗಳು ಏಕೆ ಹೆಚ್ಚು ಉತ್ತಮ ಕಲೆಕ್ಷನ್ ಮಾಡುತ್ತಿಲ್ಲ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us