
ನಟ ಪ್ರಭಾಸ್ ಅವರು ‘ಕಲ್ಕಿ 2898 ಎಡಿ’ ಚಿತ್ರದ ಮೂಲಕ ದೊಡ್ಡ ಯಶಸ್ಸು ಕಂಡಿದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆಗಿದೆ. ಕಳೆದ ವರ್ಷ ರಿಲೀಸ್ ಆದ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಅಭಿಮಾನಿಗಳು ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದರು. ಆ ನಿರೀಕ್ಷೆಯನ್ನು ಮೀರಿ ಸಿನಿಮಾ ಕಲೆಕ್ಷನ್ ಮಾಡಿದೆ. ಈ ಮಧ್ಯೆ ಪ್ರಭಾಸ್ ಅವರ ಬ್ಯಾಚುಲರ್ ಜೀವನದ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಪ್ರಭಾಸ್ ಅವರು ವಿವಾಹ ಆಗದೆ ಇರಲು ಕಾರಣ ಏನು ಎಂಬುದನ್ನು ಈ ಮೊದಲು ಅವರ ತಾಯಿ ಶಿವ ಕುಮಾರಿ ಅವರು ರಿವೀಲ್ ಮಾಡಿದ್ದರು.
ಪ್ರಭಾಸ್ ಅವರು ಟಾಲಿವುಡ್ನ ಶ್ರೀಮಂತ ನಟರಲ್ಲಿ ಒಬ್ಬರು. ಅನೇಕ ಹೀರೋಗಳು ಈಗಾಗಲೇ ಮದುವೆ ಆಗಿ ಸುಖವಾಗಿ ಜೀವನ ನಡೆಸುತ್ತಾ ಇದ್ದಾರೆ. ಆದರೆ, ಪ್ರಭಾಸ್ಗೆ ಸದ್ಯಕ್ಕಂತೂ ಮದುವೆ ಆಗುವ ಯಾವುದೇ ಆಲೋಚನೆ ಇದ್ದಂತೆ ಕಾಣುತ್ತಿಲ್ಲ. ಇದಕ್ಕೆ ಕಾರಣ ಆಗಿದ್ದು, ಅವರ ಗೆಳೆಯ ರವಿ ಅವರ ಬ್ರೇಕಪ್ ಎನ್ನಲಾಗಿದೆ. ಈ ಬಗ್ಗೆ ಅವರ ತಾಯಿ ಶಿವ ಕುಮಾರಿ ಮಾತನಾಡಿದ್ದರು.
ಪ್ರಭಾಸ್ಗೆ ರವಿ ಎಂಬ ಆಪ್ತ ಗೆಳೆಯ ಇದ್ದಾರೆ. ಅವರು ಒಮ್ಮೆ ಬ್ರೇಕಪ್ಗೆ ಒಳಗಾದರು. ಆ ಬಳಿಕ ಸಾಕಷ್ಟು ಕುಗ್ಗಿ ಹೋಗಿದ್ದರು. ಇವುಗಳನ್ನು ಪ್ರಭಾಸ್ ಹತ್ತಿರದಿಂದ ಕಂಡಿದ್ದರು ಎನ್ನಲಾಗಿದೆ. ಈ ಕಾರಣದಿಂದಲೇ ಪ್ರಭಾಸ್ ಅವರು ವಿವಾಹದ ಬಗ್ಗೆ ಹಾಗೂ ಹೊಸ ಸಂಬಂಧಗಳ ಬಗ್ಗೆ ಭಯ ಬಿದ್ದಿದ್ದರು ಎಂದು ಪ್ರಭಾಸ್ ತಾಯಿ ಶಿವ ಕುಮಾರಿ ಹೇಳಿದ್ದರ ಬಗ್ಗೆ ವರದಿ ಆಗಿತ್ತು.
ಹಾಗಾದರೆ ಪ್ರಭಾಸ್ ಮದುವೆ ಯಾವಾಗ? ಈ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರ ಸಿಗುವ ಯಾವುದೇ ಸೂಚನೆ ಇಲ್ಲ. ಪ್ರಭಾಸ್ ಅವರು ಸದ್ಯಕ್ಕಂತೂ ಮದುವೆ ಬಗ್ಗೆ ಯಾವುದೇ ಆಸಕ್ತಿ ತೋರಿಸುತ್ತಿಲ್ಲ. ಅವರು ಸದ್ಯ ಸಿನಿಮಾ ಕೆಲಸಗಳ ಮೇಲೆ ತಮ್ಮ ಗಮನ ಹರಿಸುತ್ತಾ ಇದ್ದಾರೆ.
ಇದನ್ನೂ ಓದಿ: ಪ್ರಭಾಸ್ ಜೊತೆ ನಟಿಸೋ ಆಸೆ ಇದೆಯಾ? ಇಲ್ಲಿದೆ ‘ಸ್ಪಿರಿಟ್’ ತಂಡದ ಅವಕಾಶ
ಈ ಮೊದಲು ಪ್ರಭಾಸ್ ಮದುವೆ ವಿಚಾರವಾಗಿ ಮಾತನಾಡಿದ್ದರು. ‘ನಾನು ಮದುವೆ ಆದರೆ ನನ್ನ ಮಹಿಳಾ ಅಭಿಮಾನಿಗಳು ಬೇಸರಗೊಳ್ಳುತ್ತಾರೆ’ ಎಂದು ಹೇಳಿಕೊಂಡಿದ್ದರು. ಈ ಮಧ್ಯೆ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಪ್ರೀತಿ-ಪ್ರೇಮ ವಿಚಾರವೂ ಚರ್ಚೆ ಆಗುತ್ತಲೇ ಇರುತ್ತದೆ. ಪ್ರಭಾಸ್ ಅವರ ನಟನೆಯ ‘ರಾಜಾ ಸಾಬ್’ ರಿಲೀಸ್ಗೆ ರೆಡಿ ಇದೆ. ಆ ಬಳಿಕ ‘ಸ್ಪಿರಿಟ್’ ಸಿನಿಮಾದಲ್ಲಿ ಅವರು ತೊಡಗಿಕೊಳ್ಳಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.