- Kannada News Photo gallery Daali Dhananjaya marriage with Dhanyatha Haldi Ceremony photos Entertainment News in Kannada
ಡಾಲಿ ಧನಂಜಯ-ಧನ್ಯತಾ ಹಳದಿ ಶಾಸ್ತ್ರದ ಫೋಟೋ ಗ್ಯಾಲರಿ; ಇಲ್ಲಿವೆ ಸಂಭ್ರಮದ ಕ್ಷಣಗಳು
ಡಾಲಿ ಧನಂಜಯ ಹಾಗೂ ಧನ್ಯತಾ ಅವರ ವಿವಾಹಪೂರ್ವ ಶಾಸ್ತ್ರಗಳು ಸಡಗರದಿಂದ ನಡೆಯುತ್ತಿವೆ. ಹಳದಿ ಶಾಸ್ತ್ರದಲ್ಲಿ ಆಪ್ತರು ಭಾಗಿ ಆಗಿದ್ದಾರೆ. ಮೈಸೂರಿನಲ್ಲಿ ಫೆಬ್ರವರಿ 15 ಮತ್ತು 16ರಂದು ಡಾಲಿ ಮದುವೆ ನಡೆಯಲಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಈ ವಿವಾಹಕ್ಕೆ ಸಾಕ್ಷಿ ಆಗಲಿದ್ದಾರೆ.
Updated on: Feb 14, 2025 | 9:27 PM

ನಟ ಡಾಲಿ ಧನಂಜಯ ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ವೈವಾಹಿಕ ಜೀವನಕ್ಕೆ ಅವರು ಕಾಲಿಡುತ್ತಿದ್ದಾರೆ. ವಿವಾಹಪೂರ್ವ ಶಾಸ್ತ್ರಗಳು ಭಾರಿ ಸಂಭ್ರಮದಿಂದ ನಡೆಯುತ್ತಿವೆ.

ಡಾಕ್ಟರ್ ಧನ್ಯತಾ ಅವರ ಜೊತೆ ಡಾಲಿ ಧನಂಜಯ ಮದುವೆ ನಡೆಯುತ್ತಿದೆ. ಇಂದು (ಫೆಬ್ರವರಿ 14) ಹಳದಿ ಶಾಸ್ತ್ರ ಮಾಡಲಾಗಿದೆ. ಆಪ್ತರು ಮತ್ತು ಕುಟುಂಬದವರು ಈ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ.

ಸಂಭ್ರಮದಿಂದ ನಡೆದ ಹಳದಿ ಶಾಸ್ತ್ರದಲ್ಲಿ ಡಾಲಿ ಧನಂಜಯ ಮತ್ತು ಧನ್ಯತಾ ಅವರು ಖುಷಿಯಿಂದ ಭಾಗಿ ಆಗಿದ್ದಾರೆ. ಹೊಸ ಜೋಡಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಫೋಟೋಗಳು ವೈರಲ್ ಆಗುತ್ತಿವೆ.

ಚಿತ್ರರಂಗದ ಆಪ್ತರು ಧನಂಜಯ ಅವರ ಹಳದಿ ಶಾಸ್ತ್ರದಲ್ಲಿ ಭಾಗಿ ಆಗಿದ್ದಾರೆ. ಸಪ್ತಮಿ ಗೌಡ, ಕಾರ್ತಿಕ್ ಗೌಡ, ಬಿ.ಸಿ. ಪಾಟೀಲ್ ಮುಂತಾದವರು ಬಂದು ಡಾಲಿ ಧನಂಜಯ ಹಾಗೂ ಧನ್ಯತಾಗೆ ಶುಭ ಹಾರೈಸಿದ್ದಾರೆ.

ಕನ್ನಡ ಚಿತ್ರರಂಗ ಮಾತ್ರವಲ್ಲದೇ ಪರಭಾಷೆಯಲ್ಲಿ ಕೂಡ ಡಾಲಿ ಧನಂಜಯ ಅವರು ಫೇಮಸ್ ಆಗಿದ್ದಾರೆ. ಎಲ್ಲ ಕ್ಷೇತ್ರದಲ್ಲೂ ಅವರಿಗೆ ಸ್ನೇಹಿತರಿದ್ದಾರೆ. ಮದುವೆಗೆ ಅಪಾರ ಸಂಖ್ಯೆಯಲ್ಲಿ ಆಪ್ತರು ಆಗಮಿಸಲಿದ್ದಾರೆ.

ಸದ್ಯಕ್ಕೆ ಡಾಲಿ ಧನಂಜಯ ಅವರು ಸಿನಿಮಾ ಕೆಲಸಗಳಿಗೆ ಬಿಡುವು ನೀಡಿದ್ದಾರೆ. ಮದುವೆ ಸಲುವಾಗಿ ಅವರು ಬ್ರೇಕ್ ತೆಗೆದುಕೊಂಡಿದ್ದಾರೆ. ಫೆ.15 ಹಾಗೂ 16ರಂದು ಮೈಸೂರಿನಲ್ಲಿ ಅದ್ದೂರಿಯಾಗಿ ಮದುವೆ ನಡೆಯಲಿದೆ.



















