ನಿಮ್ಮ ಸಿನಿಮಾಗಳಲ್ಲಿ ಕಪ್ಪು ಬಣ್ಣವೇ ಪ್ರಧಾನ ಏಕೆ? ಕಾರಣ ನೀಡಿದ ಪ್ರಶಾಂತ್ ನೀಲ್

| Updated By: ಮಂಜುನಾಥ ಸಿ.

Updated on: Dec 19, 2023 | 8:43 PM

Salaar Movie: ಪ್ರಶಾಂತ್ ನೀಲ್ ನಿರ್ದೇಶಿಸುವ ಸಿನಿಮಾಗಳಲ್ಲಿ ಕಪ್ಪು ಬಣ್ಣವೇ ಪ್ರಧಾನ, ಅವರ ಸಿನಿಮಾದ ದೃಶ್ಯಗಳು ಡಾರ್ಕ್ ಶೇಡ್ ಒಳಗೊಂಡಿರುತ್ತವೆ. ಇದಕ್ಕೆ ಕಾರಣ ಏನೆಂದು ಪ್ರಶಾಂತ್ ನೀಲ್ ತಿಳಸಿದ್ದಾರೆ.

ನಿಮ್ಮ ಸಿನಿಮಾಗಳಲ್ಲಿ ಕಪ್ಪು ಬಣ್ಣವೇ ಪ್ರಧಾನ ಏಕೆ? ಕಾರಣ ನೀಡಿದ ಪ್ರಶಾಂತ್ ನೀಲ್
ಸಲಾರ್
Follow us on

ಪ್ರಶಾಂತ್ ನೀಲ್ (Prashant Neel) ನಿರ್ದೇಶನದ ‘ಕೆಜಿಎಫ್’, ‘ಕೆಜಿಎಫ್ 2’ ಹಾಗೂ ‘ಸಲಾರ್’ ಮಧ್ಯೆ ಒಂದು ಸಾಮ್ಯತೆ ಇದೆ. ಅದೇನೆಂದರೆ ಡಾರ್ಕ್​ಶೇಡ್​. ಈ ಕಾರಣದಿಂದಲೇ ‘ಕೆಜಿಎಫ್ 2’ ಹಾಗೂ ‘ಸಲಾರ್’ ಚಿತ್ರಕ್ಕೆ ಲಿಂಕ್ ಇದೆ ಎಂಬ ಅನುಮಾನ ಪ್ರೇಕ್ಷಕರಿಗೆ ಮೂಡಿದೆ. ಪ್ರಶಾಂತ್ ನೀಲ್ ಅವರು ಪ್ರತಿ ಬಾರಿ ಇದೇ ರೀತಿಯ ಶೇಡ್​ನ ಆಯ್ಕೆ ಮಾಡಿಕೊಳ್ಳಲು ಒಂದು ಕಾರಣ ಇದೆ. ಸಂದರ್ಶನವೊಂದರಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್​ಗೆ ಅಚ್ಚರಿ ಆಗಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾಗಳ ಕಲರಿಂಗ್ ಟೋನ್ ಬಗ್ಗೆ ಪ್ರೇಕ್ಷಕರಿಗೆ ಒಂದು ಐಡಿಯಾ ಬಂದಿದೆ. ಅವರ ಸಿನಿಮಾಗಳು ಡಾರ್ಕ್​ ಶೇಡ್​ನಲ್ಲಿ ಮೂಡಿ ಬರುತ್ತವೆ. ‘ಕೆಜಿಎಫ್ 2’ ಸಿನಿಮಾ ಸಂಪೂರ್ಣವಾಗಿ ಡಾರ್ಕ್​ ಶೇಡ್​ನಲ್ಲಿತ್ತು. ಈ ಚಿತ್ರದ ಸೆಟ್​ನ ಮಾದರಿ ಹಾಗೂ ಕಲರಿಂಗ್​ ಟೋನ್ ‘ಸಲಾರ್’ನಲ್ಲೂ ಬಳಕೆ ಆಗಿದೆ. ಒಂದೇ ರೀತಿಯ ಕಲರಿಂಗ್ ಟೋನ್ ಇರುವುದರಿಂದಲೇ ‘ಕೆಜಿಎಫ್ 2’ ಹಾಗೂ ‘ಸಲಾರ್’ ಮಧ್ಯೆ ಲಿಂಕ್​ ಇದೆ ಎನ್ನುವ ಅನುಮಾನ ಹುಟ್ಟಿತ್ತು.

ಪ್ರಶಾಂತ್​ ನೀಲ್​ಗೆ ಕಲರ್​ ಒಸಿಡಿ ಇದೆಯಂತೆ! ಅದಕ್ಕೆ ಅವರು ಒಂದೇ ರೀತಿಯ ಸಿನಿಮಾ ಮಾಡುತ್ತಾರೆ. ‘ಕೆಜಿಎಫ್ ಹಾಗೂ ಸಲಾರ್ ಒಂದೇ ರೀತಿಯಲ್ಲಿ ಕಾಣುತ್ತದೆ. ಇದಕ್ಕೆ ಕಾರಣ ನನಗೆ ಇರೋ ಒಸಿಡಿ. ಅತಿಯಾಗಿ ಬಣ್ಣ ಇರೋ ಶರ್ಟ್​ ಧರಿಸೋದು ನನಗೆ ಇಷ್ಟ ಆಗುವುದಿಲ್ಲ. ತೆರೆಮೇಲೂ ನನ್ನ ಮನಸ್ಸಿನಲ್ಲಿರುವುದೇ ರಿಫ್ಲೆಕ್ಟ್ ಆಗುತ್ತದೆ. ಇದು ಒಳ್ಳೆಯದೂ ಇರಬಹುದು, ಕೆಟ್ಟದ್ದೂ ಇರಬಹುದು’ ಎಂದಿದ್ದಾರೆ ಪ್ರಶಾಂತ್ ನೀಲ್. ಒಸಿಡಿ ಎಂದರೆ ಒಬೆಸಿವ್ ಕಂಪಲ್ಸಿವ್ ಡಿಸಾರ್ಡರ್ ಎಂದರ್ಥ. ಈ ಸಮಸ್ಯೆಯಿಂದ ಬಳಲುತ್ತಿರುವವರು ಕೆಲವು ಗೀಳುಗಳು ಹೊಂದಿರುತ್ತಾರೆ. ಅದರಿಂದ ಅವರು ಮಾಡುವ ಕೆಲಸದಲ್ಲಿ ರಿಪಿಟೇಷನ್ ಇರುತ್ತದೆ.

ಇದನ್ನೂ ಓದಿ‘ಸಲಾರ್’ ಚಿತ್ರದಲ್ಲಿ ಅಷ್ಟೊಂದು ವೈಲೆನ್ಸ್ ಏಕೆ? ಉತ್ತರಿಸಿದ ಪ್ರಶಾಂತ್ ನೀಲ್

‘ಕೆಜಿಎಫ್ 2’ ಚಿತ್ರಕ್ಕಿಂತ ಮೊದಲೇ ‘ಸಲಾರ್’ ಸಿನಿಮಾ ಕೆಲಸಗಳು ಆರಂಭ ಆಗಿದ್ದವಂತೆ. ‘ಕೆಜಿಎಫ್ 2’ ಚಿತ್ರದ ಪ್ರಭಾವ ‘ಸಲಾರ್’ ಸಿನಿಮಾ ಮೇಲೆ ಆಗಿಲ್ಲ ಎಂದು ಪ್ರಶಾಂತ್ ನೀಲ್ ಅವರು ಈ ಮೊದಲು ಸ್ಪಷ್ಟಪಡಿಸಿದ್ದರು. ‘ಸಲಾರ್’ ಪ್ರಶಾಂತ್ ನೀಲ್ ಯೂನಿವರ್ಸ್​​ನ ಸಿನಿಮಾ ಎಂಬುದು ಅನೇಕರ ಊಹೆ ಆಗಿತ್ತು.

‘ಸಲಾರ್’ ಸಿನಿಮಾ ಡಿಸೆಂಬರ್ 22ರಂದು ರಿಲೀಸ್ ಆಗುತ್ತಿದೆ. ಪ್ರಭಾಸ್, ಪೃಥ್ವಿರಾಜ್​ ಸುಕುಮಾರನ್, ಜಗಪತಿ ಬಾಬು, ಶ್ರುತಿ ಹಾಸನ್​ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಕನ್ನಡದ ಹೊಂಬಾಳೆ ಫಿಲ್ಮ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ರವಿ ಬಸ್ರೂರು ಸೇರಿ ಕನ್ನಡದ ಅನೇಕ ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಬಾಲಿವುಡ್​ನಲ್ಲಿ ಶಾರುಖ್ ಖಾನ್ ನಟನೆಯ ‘ಡಂಕಿ’ ಡಿಸೆಂಬರ್ 21ರಂದು ರಿಲೀಸ್ ಆಗಲಿದ್ದು, ಅದರ ಜೊತೆ ಈ ಸಿನಿಮಾ ಸ್ಪರ್ಧಿಸುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ