AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಕಿ ಭಾಯ್ ಸಾವಿಗೂ ‘ಸಲಾರ್​’ ಚಿತ್ರಕ್ಕೂ ಇಲ್ಲ ಕನೆಕ್ಷನ್; ಸ್ಪಷ್ಟಪಡಿಸಿದ ಪ್ರಶಾಂತ್ ನೀಲ್

‘ಸಲಾರ್’ ಟೀಸರ್ ಬಿಡುಗಡೆ ಸಮಯಕ್ಕೂ, ‘ಕೆಜಿಎಫ್ 2’ ಚಿತ್ರದಲ್ಲಿ ರಾಕಿ ಭಾಯ್ ಸಾಯುವ ಸಮಯಕ್ಕೂ ಒಂದು ಸಂಬಂಧ ಇತ್ತು. ಇದು ಕಾಕತಾಳಿಯವೋ ಅಥವಾ ನಿಜವಾಗಲೂ ಲಿಂಕ್ ಇದೆಯೋ ಎನ್ನುವ ಅನುಮಾನ ಮೂಡಿತ್ತು. ಆದರೆ, ಈಗ ರಿಲೀಸ್ ಆಗಿರೋ ಎರಡೂ ಟ್ರೇಲರ್​ನಲ್ಲಿ ಯಾವುದೇ ಲಿಂಕ್ ಕಂಡು ಬಂದಿಲ್ಲ.

ರಾಕಿ ಭಾಯ್ ಸಾವಿಗೂ ‘ಸಲಾರ್​’ ಚಿತ್ರಕ್ಕೂ ಇಲ್ಲ ಕನೆಕ್ಷನ್; ಸ್ಪಷ್ಟಪಡಿಸಿದ ಪ್ರಶಾಂತ್ ನೀಲ್
ಪ್ರಶಾಂತ್ ನೀಲ್
ರಾಜೇಶ್ ದುಗ್ಗುಮನೆ
|

Updated on:Dec 19, 2023 | 8:27 AM

Share

ಪ್ರಶಾಂತ್ ನೀಲ್ (Prashanth Neel) ಅವರ ನಿರ್ದೇಶನದ ‘ಸಲಾರ್’ ಸಿನಿಮಾ ರಿಲೀಸ್​​ಗೆ ರೆಡಿ ಇದೆ. ಡಿಸೆಂಬರ್ 22ರಂದು ಈ ಚಿತ್ರ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಕೆಜಿಎಫ್’ (KGF) ಸರಣಿಯ ಯಶಸ್ಸಿನ ಬಳಿಕ ಪ್ರಶಾಂತ್ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದು ಎನ್ನುವ ಕಾರಣಕ್ಕೂ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ‘ಸಲಾರ್’ ಚಿತ್ರಕ್ಕೂ ‘ಕೆಜಿಎಫ್ 2’ಗೂ ಅನೇಕರು ಕನೆಕ್ಷನ್ ಹುಡುಕಿದ್ದರು. ಆದರೆ, ಆ ರೀತಿಯ ಕನೆಕ್ಷನ್ ಇಲ್ಲ ಎಂದು ಪ್ರಶಾಂತ್ ನೀಲ್ ಅವರು ಸ್ಪಷ್ಟಪಡಿಸಿದ್ದಾರೆ.

ಮೇಕಿಂಗ್​ ನೋಡಿದ ಅನೇಕರು ‘ಸಲಾರ್’ ಹಾಗೂ ‘ಕೆಜಿಎಫ್ 2’ ಚಿತ್ರಕ್ಕೆ ಸಂಬಂಧ ಕಲ್ಪಿಸಿದ್ದರು. ‘ಸಲಾರ್’ ಟೀಸರ್ ಬಿಡುಗಡೆ ಸಮಯಕ್ಕೂ, ‘ಕೆಜಿಎಫ್ 2’ ಚಿತ್ರದಲ್ಲಿ ರಾಕಿ ಭಾಯ್ ಸಾಯುವ ಸಮಯಕ್ಕೂ ಒಂದು ಸಂಬಂಧ ಇತ್ತು. ಇದು ಕಾಕತಾಳಿಯವೋ ಅಥವಾ ನಿಜವಾಗಲೂ ಲಿಂಕ್ ಇದೆಯೋ ಎನ್ನುವ ಅನುಮಾನ ಮೂಡಿತ್ತು. ಆದರೆ, ಈಗ ರಿಲೀಸ್ ಆಗಿರೋ ಎರಡೂ ಟ್ರೇಲರ್​ನಲ್ಲಿ ಯಾವುದೇ ಲಿಂಕ್ ಕಂಡು ಬಂದಿಲ್ಲ. ಇದು ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ಈಗ ಪ್ರಶಾಂತ್ ನೀಲ್ ಕಡೆಯಿಂದಲೇ ಇದಕ್ಕೆ ಸ್ಪಷ್ಟನೆ ಸಿಕ್ಕಿದೆ.

‘ಅಭಿಮಾನಿಗಳು ಹೇಳಿದ ಎಲ್ಲಾ ಸಿದ್ಧಾಂತಗಳನ್ನು ನೋಡಿದ ಬಳಿಕ ಕೆಜಿಎಫ್ ಸಿನಿಮಾ ಎಷ್ಟು ದೊಡ್ಡದು ಎಂಬುದನ್ನು ನಾನು ಅರಿತುಕೊಂಡೆ. ಜನರು ಸಲಾರ್‌ನ ಟೋನ್‌ನ ಕೆಜಿಎಫ್‌ಗೆ ಹೋಲಿಸಲು ಪ್ರಾರಂಭಿಸಿದರು. ನಾನು ಈ ರೀತಿಯ ವಿಚಾರಗಳನ್ನು ಮೊದಲೇ ಗುರುತಿಸಬೇಕಾಗಿತ್ತು. ಕೆಜಿಎಫ್ ಯೂನಿವರ್ಸ್​ಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ನಾನು ಮೊದಲೇ ಸ್ಪಷ್ಟಪಡಿಸಬೇಕಿತ್ತು’ ಎಂದಿದ್ದಾರೆ ಪ್ರಶಾಂತ್ ನೀಲ್.

‘ಕೆಜಿಎಫ್ ಎರಡನೇ ಪಾರ್ಟ್​​ ರಿಲೀಸ್​ಗೆ ಒಂದು ವರ್ಷ ಇರುವಾಗಲೇ ಸಲಾರ್ ಚಿತ್ರದ ಸ್ಕ್ರಿಪ್ಟ್​ಗಳು ರೆಡಿ ಆಗಿದ್ದವು. ಕೆಜಿಎಫ್ ಯಶಸ್ಸು ತುಂಬಾನೇ ದೊಡ್ಡದು. ಆದರೆ, ಅದು ಸಲಾರ್ ಚಿತ್ರದ ಸ್ಕ್ರಿಪ್ಟ್ ಮೇಲೆ ಯಾವುದೇ ಪ್ರಭಾವ ಬೀರಿಲ್ಲ’ ಎಂದಿದ್ದಾರೆ ಪ್ರಶಾಂತ್ ನೀಲ್.

ಇದನ್ನೂ ಓದಿ: ‘ಸಲಾರ್’ ಚಿತ್ರದಲ್ಲಿ ಅಷ್ಟೊಂದು ವೈಲೆನ್ಸ್ ಏಕೆ? ಉತ್ತರಿಸಿದ ಪ್ರಶಾಂತ್ ನೀಲ್

‘ಉಗ್ರಂ’ ಸಿನಿಮಾದಲ್ಲಿ ಫ್ರೆಂಡ್​ಶಿಪ್ ಕಥೆ ಇತ್ತು. ಇದೇ ಎಳೆಯನ್ನು ‘ಸಲಾರ್’ ಚಿತ್ರಕ್ಕೂ ಬಳಸಿದಂತಿದೆ. ಪೂರ್ತಿ ಸಿನಿಮಾ ನೋಡಿದ ಬಳಿಕವೇ ಈ ಬಗ್ಗೆ ತಿಳಿಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:07 am, Tue, 19 December 23

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್