
ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 15 ದಿನಗಳು ಪೂರೈಸಿದೆ. ಆರಂಭದ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ್ದ ಈ ಚಿತ್ರ, ಇದೀಗ ಎರಡನೇ ವಾರದ ವೇಳೆಗೆ ತನ್ನ ಗಳಿಕೆಯಲ್ಲಿ ಗಣನೀಯ ಕುಸಿತ ಕಂಡಿದೆ. ಪ್ರಸ್ತುತ ಬಾಕ್ಸ್ ಆಫೀಸ್ ಅಂಕಿಅಂಶಗಳನ್ನು ಗಮನಿಸಿದರೆ, ಈ ಸಿನಿಮಾ 1,000 ಕೋಟಿ ಕ್ಲಬ್ ಸೇರುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ.
‘ಜೈಲರ್ 2’ ಸಿನಿಮಾ ಬಿಡುಗಡೆಯಾದ ಹದಿನೈದನೇ ದಿನದಂದು ಭಾರತದಲ್ಲಿ ಒಟ್ಟು 5.90 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸಿನಿಮಾದ ಭಾರತದ ಗ್ರಾಸ್ ಕಲೆಕ್ಷನ್ 500 ಕೋಟಿ ರೂಪಾಯಿ ಆಗಿದೆ. ವಿದೇಶದ ಕಲೆಕ್ಷನ್ ಸೇರಿದರೆ 766 ಕೋಟಿ ರೂಪಾಯಿ ಆಗಿದೆ.
ತಮಿಳು ಚಿತ್ರರಂಗದಲ್ಲಿ ಈವರೆಗೆ ಯಾವುದೇ ಸಿನಿಮಾ 1,000 ಕೋಟಿ ರೂಪಾಯಿ ಗಳಿಕೆಯನ್ನು ದಾಟಿಲ್ಲ. ‘ಜೈಲರ್ 2’ ಸಿನಿಮಾ ಮೊದಲ ದಿನಗಳಲ್ಲಿ ತೋರಿಸಿದ ವೇಗವನ್ನು ನೋಡಿ, ಇದು ಪ್ರಥಮ ಬಾರಿಗೆ ಆ ಮೈಲಿಗಲ್ಲನ್ನು ಸಾಧಿಸಬಹುದು ಎಂದು ವಿಶ್ಲೇಷಕರು ನಿರೀಕ್ಷಿಸಿದ್ದರು. ಆದರೆ 15ನೇ ದಿನಕ್ಕೆ ತಲುಪುವಷ್ಟರಲ್ಲಿ ಗಳಿಕೆಯ ವೇಗ ಗಣನೀಯವಾಗಿ ಡಲ್ ಆಗಿದೆ. ಮೊದಲ ವಾರದಲ್ಲೇ 334.35 ಕೋಟಿ ನೆಟ್ ಕಲೆಕ್ಷನ್ ಮಾಡಿದ್ದ ಈ ಚಿತ್ರ, ಎರಡನೇ ವಾರದ ವಾರದ ದಿನಗಳಲ್ಲಿ ಮಂದಗತಿ ಪಡೆದುಕೊಂಡಿದೆ. 15ನೇ ದಿನದ ಥಿಯೇಟರ್ ಆಕ್ಯುಪೆನ್ಸಿ ಶೇ. 14.8 ಕ್ಕೆ ಇಳಿದಿದ್ದು, ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.
ಇದನ್ನೂ ಓದಿ: ‘ಧರ್ಮನ್’ ಚಿತ್ರಕ್ಕೆ ರಜನಿಕಾಂತ್ – ನಯನತಾರಾ ಹಿಟ್ ಕಾಂಬೊ ಮತ್ತೆ ಒಂದು?
ಬರುವ ನವೆಂಬರ್ 5ಕ್ಕೆ ಬಹುಕೋಟಿ ವೆಚ್ಚದ ಬೃಹತ್ ಚಿತ್ರ ‘ರಾಮಾಯಣ’ ಬಿಡುಗಡೆಯಾಗಲಿದೆ. ‘ರಾಮಾಯಣ’ ಚಿತ್ರದ ಆಗಮನದಿಂದಾಗಿ ‘ಜೈಲರ್ 2’ ಪ್ರದರ್ಶನ ಕಾಣುತ್ತಿರುವ ಚಿತ್ರಮಂದಿರಗಳು ಮತ್ತು ಸ್ಕ್ರೀನ್‌ಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕಡಿತಗೊಳ್ಳಲಿದೆ. ಚಿತ್ರ ಬಿಡುಗಡೆಯಾಗಿ ಒಂದೇ ತಿಂಗಳಿಗೆ ಅಂದರೆ ನವೆಂಬರ್ ಮಧ್ಯಭಾಗದಲ್ಲಿ ಒಟಿಟಿ ಬರುವ ಸಾಧ್ಯತೆಗಳಿರುವುದರಿಂದ, ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವ ಪ್ರಮಾಣ ಮತ್ತಷ್ಟು ಕಡಿಮೆಯಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.