200 ಕೋಟಿ ರೂ. ಕಡಿಮೆಯಾದ್ರೇ ಏನೂ ಫರಕ್ ಆಗಲ್ಲ; ‘ಧುರಂಧರ್ 2’ ಕ್ಲ್ಯಾಶ್ ಬಗ್ಗೆ ಯಶ್ ಮಾತು

'ಟಾಕ್ಸಿಕ್' ಹಾಗೂ 'ಧುರಂಧರ್ 2' ಸಿನಿಮಾಗಳ ಬಾಕ್ಸ್ ಆಫೀಸ್ ಮುಖಾಮುಖಿ ಬಗ್ಗೆ ನಟ ಯಶ್ ಮಾತನಾಡಿದ್ದಾರೆ. ತಮಗೆ 200 ಕೋಟಿ ರೂಪಾಯಿ ಕಳೆದುಕೊಳ್ಳುವ ಭಯವಿಲ್ಲ ಎಂದು ಹೇಳಿದ್ದಾರೆ. ಇದು ಕೇವಲ ಹಣದ ವಿಚಾರವಲ್ಲ, ತಮ್ಮ ಆತ್ಮಗೌರವದ ಪ್ರಶ್ನೆ ಎಂದು 'ಆಪ್ ಕೀ ಅದಾಲತ್' ಶೋನಲ್ಲಿ ಯಶ್ ಸ್ಪಷ್ಟಪಡಿಸಿದ್ದಾರೆ.

200 ಕೋಟಿ ರೂ. ಕಡಿಮೆಯಾದ್ರೇ ಏನೂ ಫರಕ್ ಆಗಲ್ಲ; ‘ಧುರಂಧರ್ 2’ ಕ್ಲ್ಯಾಶ್ ಬಗ್ಗೆ ಯಶ್ ಮಾತು
ರಣವೀರ್-ಯಶ್

Updated on: Aug 17, 2026 | 9:20 AM

ಮುಖ್ಯಾಂಶಗಳು

  • 'ಟಾಕ್ಸಿಕ್' ಬಿಡುಗಡೆ ಮುಂದೂಡಿಕೆ ಬಗ್ಗೆ ಮೌನ ಮುರಿದ ಯಶ್
  • 200 ಕೋಟಿ ಕಳೆದುಕೊಳ್ಳುವ ಭಯ ನನಗಿಲ್ಲ ಎಂದ ರಾಕಿಂಗ್ ಸ್ಟಾರ್
  • ಕ್ಲ್ಯಾಶ್ ಮಾಡುವುದು ನನ್ನ ಉದ್ದೇಶವಲ್ಲ: 'ಆಪ್ ಕೀ ಅದಾಲತ್'ನಲ್ಲಿ ಯಶ್ ಮಾತು

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ವಿಚಾರವಾಗಿ ಚಿತ್ರರಂಗದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ‘ಧುರಂಧರ್ 2’ ಸಿನಿಮಾ ಜೊತೆಗಿನ ಬಾಕ್ಸ್ ಆಫೀಸ್ ಮುಖಾಮುಖಿ ತಪ್ಪಿಸಿದ ಬಗ್ಗೆ ಯಶ್ ಮಾತನಾಡಿದ್ದಾರೆ. ತಮಗೆ 200 ಕೋಟಿ ರೂಪಾಯಿ ಕಳೆದುಕೊಳ್ಳುವ ಭಯವಿಲ್ಲ ಎಂದು ಹೇಳಿದ್ದಾರೆ. ‘ಆಪ್ ಕಿ ಅದಾಲತ್’ ಶೋನಲ್ಲಿ ತಮ್ಮ ಆತ್ಮಗೌರವ ಹಾಗೂ ನಿರ್ಧಾರಗಳ ಬಗ್ಗೆ ಯಶ್ ಮನಬಿಚ್ಚಿ ಮಾತನಾಡಿದ್ದಾರೆ.

‘ಟಾಕ್ಸಿಕ್’ ಸಿನಿಮಾ ಮೊದಲು ಮಾರ್ಚ್ 19 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಅದೇ ದಿನ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಬಿಡುಗಡೆಯಾಗುವ ಸನ್ನಿವೇಶವಿತ್ತು. ನಂತರ ಟಾಕ್ಸಿಕ್ ಸಿನಿಮಾವನ್ನು ಜೂನ್ 4 ಕ್ಕೆ ಮುಂದೂಡಲಾಯಿತು. ಮಧ್ಯಪ್ರಾಚ್ಯದಲ್ಲಿ ಉಂಟಾಗಿದ್ದ ಅನಿಶ್ಚಿತತೆಯೇ ಇದಕ್ಕೆ ಕಾರಣ ಎಂದು ನಿರ್ಮಾಪಕರು ತಿಳಿಸಿದ್ದರು.

ಯಶ್ ಅವರು ಬಾಕ್ಸ್ ಆಫೀಸ್ ಮುಖಾಮುಖಿ ಬಗ್ಗೆ ಮಾತನಾಡಿದ್ದಾರೆ. ತಾವು ಎಂದಿಗೂ ಬೇಕೆಂದೇ ಬೇರೆ ಸಿನಿಮಾಗಳ ಜೊತೆ ಸ್ಪರ್ಧೆಗೆ ಇಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ಸಿನಿಮಾ ಬಿಡುಗಡೆ ದಿನಾಂಕ ಮೊದಲು ಘೋಷಣೆಯಾಗಿರುತ್ತದೆ. ಆ ನಂತರ ಬೇರೆಯವರು ಅದೇ ದಿನಾಂಕಕ್ಕೆ ಬಂದರೆ ಅದು ಕ್ಲ್ಯಾಶ್ ಆಗುತ್ತದೆ ಎಂದು ಹೇಳಿದ್ದಾರೆ.

ಮಾರ್ಚ್ 19ರ ಬಿಡುಗಡೆ ದಿನಾಂಕದ ಬಗ್ಗೆ ತಮಗೆ ಗೊಂದಲವಿತ್ತು ಎಂದು ಯಶ್ ಒಪ್ಪಿಕೊಂಡಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಹಣ ಕಳೆದುಕೊಳ್ಳುವ ಭಯ ತಮಗೆ ಖಂಡಿತ ಇಲ್ಲ ಎಂದು ಹೇಳಿದ್ದಾರೆ. ಜೀವನದಲ್ಲಿ ಕಳೆದುಕೊಳ್ಳಲು ತಮ್ಮ ಬಳಿ ಏನೂ ಇಲ್ಲ. ಹಾಗಾಗಿ ತಮಗೆ ಯಾವುದೇ ರೀತಿಯ ಭಯವಿಲ್ಲ ಎಂದು ಖಡಕ್ಕಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಕನ್ನಡ್ ಅಲ್ಲ ಕನ್ನಡ ರಜತ್ ಶರ್ಮಾಗೆ ವೇದಿಕೆಯಲ್ಲೇ ಪ್ರೀತಿಯಿಂದ ತಿದ್ದಿ ಹೇಳಿದ ನಟ ಯಶ್

100 ಕೋಟಿ ಅಥವಾ 200 ಕೋಟಿ ರೂಪಾಯಿ ಕಡಿಮೆಯಾದರೆ ತಮಗೆ ತೊಂದರೆಯಾಗುತ್ತದೆ ಎಂದು ಜನರು ಭಾವಿಸುತ್ತಾರೆ. ಆದರೆ ತಾವು ಆರಂಭದಲ್ಲಿ ಏನನ್ನೂ ಹೊಂದಿರಲಿಲ್ಲ. ಈಗ ಸಿಕ್ಕಿರುವುದೆಲ್ಲವೂ ತಮಗೆ ಪ್ಲಸ್ ಎಂದು ಯಶ್ ಹೇಳಿದ್ದಾರೆ. ಇದು ಕೇವಲ ಹಣದ ವಿಚಾರವಲ್ಲ. ಇದು ತಮ್ಮ ಆತ್ಮಗೌರವದ ವಿಚಾರ ಎಂದು ರಾಕಿಂಗ್ ಸ್ಟಾರ್ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us