Zara Patel: ‘ಇದ್ರಲ್ಲಿ ನನ್ನ ಕೈವಾಡ ಇಲ್ಲ’: ರಶ್ಮಿಕಾ ಅವರ ನಕಲಿ ವಿಡಿಯೋದಲ್ಲಿ ಇರುವ ಅಸಲಿ ಹುಡುಗಿಯ ಪ್ರತಿಕ್ರಿಯೆ

Rashmika Mandanna: ಸೋಶಿಯಲ್​ ಮೀಡಿಯಾ ಬಳಕೆದಾರರಿಗೆ ಜರಾ ಪಟೇಲ್​ ಅವರು ಕಿವಿಮಾತು ಕೂಡ ಹೇಳಿದ್ದಾರೆ. ‘ಇಂಟರ್​ನೆಟ್​ನಲ್ಲಿ ನೀವು ಏನನ್ನಾದರೂ ನೋಡಿದಾಗ ಒಂದು ಕ್ಷಣ ನಿಂತು ಫ್ಯಾಕ್ಟ್​ ಚೆಕ್​ ಮಾಡಿ. ಅಲ್ಲಿ ಕಾಣಿಸುವ ಎಲ್ಲದೂ ನಿಜವಲ್ಲ’ ಎಂದು ಅವರು ಹೇಳಿದ್ದಾರೆ. ಅವರು ಅನೇಕ ಹಾಟ್​ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

Zara Patel: ‘ಇದ್ರಲ್ಲಿ ನನ್ನ ಕೈವಾಡ ಇಲ್ಲ’: ರಶ್ಮಿಕಾ ಅವರ ನಕಲಿ ವಿಡಿಯೋದಲ್ಲಿ ಇರುವ ಅಸಲಿ ಹುಡುಗಿಯ ಪ್ರತಿಕ್ರಿಯೆ
ಜರಾ ಪಟೇಲ್​, ರಶ್ಮಿಕಾರ ಎಡಿಟೆಡ್​ ಫೋಟೋ

Updated on: Nov 07, 2023 | 3:43 PM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಇತ್ತೀಚೆಗೆ ಒಂದು ವೈರಲ್​ ವಿಡಿಯೋದ ಕಾರಣದಿಂದ ಸಖತ್​ ಸುದ್ದಿ ಆಗಿದ್ದಾರೆ. ಬೇರೆ ಯಾವುದೋ ಹುಡುಗಿಯ ಹಾಟ್​ ಅವತಾರದ ವಿಡಿಯೋಗೆ ರಶ್ಮಿಕಾರ ಮುಖವನ್ನು ಎಡಿಟ್​ (Deepfake) ಮಾಡಿ ಹರಿಬಿಡಲಾಗಿತ್ತು. ಅದರಲ್ಲಿ ಇರುವುದು ನಿಜವಾಗಿಯೂ ರಶ್ಮಿಕಾ ಎಂದು ಕೆಲವರು ಭಾವಿಸಿದ್ದರು. ಆದರೆ ತಕ್ಷಣದಲ್ಲೇ ಸತ್ಯ ಏನೆಂಬುದು ಬಯಲಾಯಿತು. ಜರಾ ಪಟೇಲ್​ (Zara Patel) ಎಂಬ ಯುವತಿಯ ಒರಿಜಿನಲ್​ ವಿಡಿಯೋ ಅದಾಗಿತ್ತು. ಈ ರೀತಿ ಎಡಿಟ್​ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಮಿತಾಭ್​ ಬಚ್ಚನ್​ ಅವರು ಒತ್ತಾಯಿಸಿದರು. ಈ ಎಲ್ಲ ಘಟನೆಗಳ ಬಳಿಕ ಸ್ವತಃ ಜರಾ ಪಟೇಲ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿ ಆಗಿದ್ದರಲ್ಲಿ ತಮ್ಮ ಕೈವಾಡ ಇಲ್ಲ ಎಂದು ಅವರು ಹೇಳಿದ್ದಾರೆ.

‘ನನ್ನ ದೇಹ ಮತ್ತು ಫೇಮಸ್​ ಬಾಲಿವುಡ್​ ನಟಿಯ ಮುಖವನ್ನು ಜೋಡಿಸಿ ಡೀಪ್​ಫೇಕ್​ ವಿಡಿಯೋ ಮಾಡಿದ ಬಗ್ಗೆ ನನಗೆ ಈಗತಾನೆ ತಿಳಿಯಿತು. ಆ ಡೀಪ್​ಫೇಕ್​ ವಿಡಿಯೋದಲ್ಲಿ ನನ್ನ ಕೈವಾಡ ಇಲ್ಲ. ಆಗಿರುವ ಘಟನೆಯಿಂದ ನನಗೆ ಬೇಸರವಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಫೋಟೋ ಮತ್ತು ವಿಡಿಯೋ ಅಪ್​ಲೋಡ್​ ಮಾಡುವ ಮಹಿಳೆಯರು ಮತ್ತು ಹುಡುಗಿಯರ ಭವಿಷ್ಯದ ಬಗ್ಗೆ ನನಗೆ ಚಿಂತೆ ಆಗಿದೆ’ ಎಂದು ಜರಾ ಪಟೇಲ್​ ಅವರು ಹೇಳಿದ್ದಾರೆ. ಅವರ ಈ ಪ್ರತಿಕ್ರಿಯೆ ವೈರಲ್​ ಆಗಿದೆ.

ಜರಾ ಪಟೇಲ್​ ಒರಿಜಿನಲ್​ ವಿಡಿಯೋ:

ಸೋಶಿಯಲ್​ ಮೀಡಿಯಾ ಬಳಕೆದಾರರಿಗೆ ಜರಾ ಪಟೇಲ್​ ಅವರು ಕಿವಿಮಾತು ಕೂಡ ಹೇಳಿದ್ದಾರೆ. ‘ಇಂಟರ್​ನೆಟ್​ನಲ್ಲಿ ನೀವು ಏನನ್ನಾದರೂ ನೋಡಿದಾಗ ಒಂದು ಕ್ಷಣ ನಿಂತು ಫ್ಯಾಕ್ಟ್​ ಚೆಕ್​ ಮಾಡಿ. ಇಂಟರ್​ನೆಟ್​ನಲ್ಲಿ ಕಾಣಿಸುವ ಎಲ್ಲದೂ ನಿಜವಲ್ಲ’ ಎಂದು ಅವರು ಹೇಳಿದ್ದಾರೆ.

ವೈರಲ್​ ಆಗಿರುವ ಡೀಪ್​ಫೇಕ್​ ವಿಡಿಯೋ:

ಇನ್​ಸ್ಟಾಗ್ರಾಮ್​ ಜರಾ ಪಟೇಲ್​ ಅವರನ್ನು 4.5 ಲಕ್ಷ ಜನರು ಫಾಲೋ ಮಾಡುತ್ತಿದ್ದಾರೆ. ತಮ್ಮನ್ನು ತಾವು ಮೆಂಟಲ್​ ಹೆಲ್ತ್​ ಅಡ್ವಕೇಟ್​ ಮತ್ತು ಫುಲ್​ ಟೈಮ್​ ಇಂಜಿನಿಯರ್​ ಎಂದು ಅವರು ಪರಿಚಯಿಸಿಕೊಂಡಿದ್ದಾರೆ. ಅನೇಕ ಹಾಟ್​ ವಿಡಿಯೋಗಳನ್ನು ಅವರು ಹಂಚಿಕೊಂಡಿದ್ದಾರೆ.

ಇವರು ನಿಜಕ್ಕೂ ರಶ್ಮಿಕಾ ಮಂದಣ್ಣನಾ? ವೈರಲ್ ವಿಡಿಯೋ ಬಗ್ಗೆ ಇಲ್ಲಿದೆ ಮಾಹಿತಿ  

ರಶ್ಮಿಕಾ ಮಂದಣ್ಣ ಹೇಳಿದ್ದೇನು?

ತಮ್ಮ ಡೀಪ್​ಫೇಕ್​ ವಿಡಿಯೋ ವೈರಲ್​ ಆದ ಬಳಿಕ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ ನೀಡಿದರು. ‘ನನ್ನ ಡೀಪ್​ಫೇಕ್​ ವಿಡಿಯೋ ಆನ್​ಲೈನ್​ನಲ್ಲಿ ವೈರಲ್​ ಆದ ಬಗ್ಗೆ ಮಾತಾಡಲು ನಿಜಕ್ಕೂ ನೋವು ಆಗುತ್ತಿದೆ. ತಂತ್ರಜ್ಞಾನದ ದುರ್ಬಳಕೆಯಿಂದಾಗಿ ನನಗೆ ಮಾತ್ರವಲ್ಲದೇ ಎಲ್ಲರಿಗೂ ಭಯ ಆಗುತ್ತಿದೆ. ಈಗ ನನಗೆ ಬೆಂಬಲ ಹಾಗೂ ರಕ್ಷಣೆ ನೀಡಿರುವ ನನ್ನ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಓರ್ವ ಮಹಿಳೆಯಾಗಿ, ಸಿನಿಮಾ ನಟಿಯಾಗಿ ನಾನು ಋಣಿ. ಆದರೆ ಶಾಲೆ ಅಥವಾ ಕಾಲೇಜಿನಲ್ಲಿ ಓದುತ್ತಿದ್ದಾಗ ಹೀಗೆಲ್ಲ ಆಗಿದ್ದರೆ ಇದನ್ನು ನಾನು ಹೇಗೆ ಎದುರಿಸುತ್ತಿದ್ದೆನೋ ಗೊತ್ತಿಲ್ಲ. ಇಂಥ ಘಟನೆಗಳಿಂದ ನಮ್ಮಂತಹ ಇನ್ನೂ ಹೆಚ್ಚಿನ ಜನರು ತೊಂದರೆ ಅನುಭವಿಸುವುದಕ್ಕೂ ಮುನ್ನ ಈ ಸಮಸ್ಯೆಯ ಬಗ್ಗೆ ನಾವು ಗಮನ ನೀಡಬೇಕಿದೆ’ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.