ಜೊಮ್ಯಾಟೋ ಜಾಹೀರಾತಿನಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ವ್ಯಂಗ್ಯವಾಡಿದ ಅಲ್ಲು ಅರ್ಜುನ್​; ಹಿಗ್ಗಾಮುಗ್ಗಾ​ ತರಾಟೆ

| Updated By: ರಾಜೇಶ್ ದುಗ್ಗುಮನೆ

Updated on: Feb 04, 2022 | 7:38 PM

ಸಿನಿಮಾ ಹಿಟ್​ ಆದ ನಂತರದಲ್ಲಿ ಅದೇ ಥೀಮ್​ಅನ್ನು ಜಾಹೀರಾತಿನವರೂ ಬಳಕೆ ಮಾಡಿಕೊಳ್ಳುತ್ತಾರೆ. ‘ಪುಷ್ಪ’ ಸಿನಿಮಾ ಹಿಟ್​ ಆಗಿದೆ. ಈಗ ಅನೇಕ ಬ್ರ್ಯಾಂಡ್​ಗಳು ಅಲ್ಲು ಅರ್ಜುನ್​ ಹಿಂದೆ ಬಿದ್ದಿವೆ.

ಜೊಮ್ಯಾಟೋ ಜಾಹೀರಾತಿನಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ವ್ಯಂಗ್ಯವಾಡಿದ ಅಲ್ಲು ಅರ್ಜುನ್​; ಹಿಗ್ಗಾಮುಗ್ಗಾ​ ತರಾಟೆ
ಅಲ್ಲು ಅರ್ಜುನ್
Follow us on

ದಕ್ಷಿಣ ಭಾರತದ ಚಿತ್ರರಂಗಕ್ಕೂ (South India Film Industry) ಹಾಗೂ ಬಾಲಿವುಡ್​ಗೂ (Bollywood) ಸಾಕಷ್ಟು ವ್ಯತ್ಯಾಸವಿದೆ. ಎರಡೂ ಚಿತ್ರರಂಗದವರು ಒಂದಕ್ಕಿಂತ ಒಂದು ಅದ್ಭುತ ಸಿನಿಮಾಗಳನ್ನು ನೀಡುವುದರಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ. ಇಬ್ಬರಲ್ಲಿ ಯಾರು ಗ್ರೇಟ್​ ಎನ್ನುವ ವಿಚಾರದ ಬಗ್ಗೆಯೂ ಚರ್ಚೆಗಳು ನಿರಂತರವಾಗಿ ನಡೆಯುತ್ತಲೇ ಇದೆ. ಬಾಲಿವುಡ್​ಅನ್ನು ದಕ್ಷಿಣ ಭಾರತದ ಫ್ಯಾನ್ಸ್​ ಟ್ರೋಲ್​ ಮಾಡಿದರೆ, ಸೌತ್​ ಇಂಡಿಯಾ ಇಂಡಸ್ಟ್ರಿಯನ್ನು ಬಾಲಿವುಡ್​ ಅಭಿಮಾನಿಗಳು ಟೀಕೆ ಮಾಡುತ್ತಾರೆ. ಈಗ ಟಾಲಿವುಡ್​ನ ಖ್ಯಾತ ನಟ ಅಲ್ಲು ಅರ್ಜುನ್ (Allu Arjun)​ ಟೀಕೆಗೆ ಗುರಿಯಾಗಿದ್ದಾರೆ. ಇಲ್ಲಿಯೇ ಇದ್ದುಕೊಂಡು, ಇಲ್ಲಿನ ಚಿತ್ರರಂಗದ ಬಗ್ಗೆ ಅವರು ವ್ಯಂಗ್ಯವಾಡಿದ್ದಾರೆ.

ಸಿನಿಮಾ ಹಿಟ್​ ಆದ ನಂತರದಲ್ಲಿ ಅದೇ ಥೀಮ್​ಅನ್ನು ಜಾಹೀರಾತಿನವರೂ ಬಳಕೆ ಮಾಡಿಕೊಳ್ಳುತ್ತಾರೆ. ‘ಪುಷ್ಪ’ ಸಿನಿಮಾ ಹಿಟ್​ ಆಗಿದೆ. ಈಗ ಅನೇಕ ಬ್ರ್ಯಾಂಡ್​ಗಳು ಅಲ್ಲು ಅರ್ಜುನ್​ ಹಿಂದೆ ಬಿದ್ದಿವೆ. ‘ಪುಷ್ಪ’ ಸಿನಿಮಾದ ಥೀಮ್​ ಇಟ್ಟುಕೊಂಡು ಜಾಹೀರಾತುಗಳನ್ನು ಮಾಡಲಾಗುತ್ತಿದೆ. ಸೂಪರ್ ಹಿಟ್​ ‘ಪುಷ್ಪ’ ಸಿನಿಮಾದಲ್ಲಿ ಫೈಟಿಂಗ್​ ವೇಳೆ ಕೆಲ ಸ್ಲೋ ಮೋಷನ್​ ದೃಶ್ಯಗಳು ಬಂದಿದ್ದವು. ಇದು ಕೇವಲ ‘ಪುಷ್ಪ’ ಸಿನಿಮಾಗೆ ಮಾತ್ರ ಸೀಮಿತವಾಗಿಲ್ಲ. ದಕ್ಷಿಣ ಭಾರತ ಹಾಗೂ ಬಾಲಿವುಡ್​ನ ಸಾಕಷ್ಟು ಸಿನಿಮಾಗಳಲ್ಲಿ ಫೈಟಿಂಗ್​ ವೇಳೆ ಇದೇ ಮಾದರಿಯ ತಂತ್ರ ಬಳಕೆ ಮಾಡಿಕೊಳ್ಳಾಗಿದೆ. ಈಗ ಬಂದಿರುವ ಜೊಮ್ಯಾಟೋ ಜಾಹೀರಾತಿನಲ್ಲಿ ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ವ್ಯಂಗ್ಯವಾಡಲಾಗಿದೆ.

ಜೊಮ್ಯಾಟೋ ಜಾಹೀರಾತಿನಲ್ಲಿ ಅಲ್ಲು ಅರ್ಜುನ್​ ಹಾಗೂ ತೆಲುಗು ನಟ ಸುಬ್ಬರಾಜು ನಡುವೆ ಫೈಟ್​ ನಡೆಯುತ್ತಿರುತ್ತದೆ. ಈ ಫೈಟ್​ನಲ್ಲಿ ಸುಬ್ಬರಾಜುಗೆ ಅಲ್ಲು ಅರ್ಜುನ್​ ಹೊಡೆಯುತ್ತಾರೆ. ಆಗ ಸುಬ್ಬರಾಜು ಅವರು ಸ್ಲೋಮೋಷನ್​ನಲ್ಲಿ ಕೆಳಗೆ ಬಿದ್ದಂತೆ ತೋರಿಸಲಾಗಿದೆ. ‘ಬನ್ನಿ ನನ್ನನ್ನು ಬೇಗ ಬೀಳಿಸು. ನನಗೆ ಮಟನ್​ ಕರ್ರಿ ತಿನ್ನಬೇಕು. ನಾನು ಬೀಳುವ ವೇಳೆಗೆ ರೆಸ್ಟೋರೆಂಟ್​ ಕ್ಲೋಸ್​ ಮಾಡುತ್ತಾರೆ’ ಎಂದಿದ್ದಾರೆ ಸುಬ್ಬರಾಜು. ಇದಕ್ಕೆ ಉತ್ತರಿಸಿರುವ ಅಲ್ಲು ಅರ್ಜುನ್​, ‘ಇದು ದಕ್ಷಿಣ ಭಾರತ ಸಿನಿಮಾ. ನಾವು ಮಾಡೋದೆ ಹೀಗೆ’ ಎಂದಿದ್ದಾರೆ.

ಇದು ಅನೇಕರ ಕೋಪಕ್ಕೆ ಕಾರಣವಾಗಿದೆ. ಬಾಲಿವುಡ್​ನ ಹಲವು ಸಿನಿಮಾಗಳಲ್ಲಿ ಫೈಟಿಂಗ್​ ವೇಳೆ ಇದೇ ರೀತಿಯ ಸ್ಲೋ ಮೋಷನ್​ ಬಳಕೆ ಮಾಡಿಕೊಳ್ಳಲಾಗುತ್ತದೆ. ಅದನ್ನು ಇಲ್ಲೇಕೆ ಉಲ್ಲೇಖ ಮಾಡಿಲ್ಲ ಎನ್ನುವ ಪ್ರಶ್ನೆ ಎದುರಾಗಿದೆ. ಸದ್ಯ, ಈ ಜಾಹೀರಾತಿನಿಂದ ಜೊಮ್ಯಾಟೋ ಸಂಸ್ಥೆ ಸಂಕಷ್ಟಕ್ಕೆ ಸಿಲುಕುವ ಎಲ್ಲಾ ಸಾಧ್ಯತೆ ಗೋಚರವಾಗಿದೆ.

ಇದನ್ನೂ ಓದಿ: Pushpa: ಕಾರಿನಲ್ಲಿ ನಡೆವ ರಶ್ಮಿಕಾ-ಅಲ್ಲು ಅರ್ಜುನ್ ಇಂಟಿಮೇಟ್ ದೃಶ್ಯಕ್ಕೆ ಕತ್ತರಿ 

ಪುನೀತ್​ ಮನೆಗೆ ಭೇಟಿ, ಸಮಾಧಿಗೆ ನಮನ; ಇಲ್ಲಿವೆ ಅಲ್ಲು ಅರ್ಜುನ್ ಭೇಟಿಯ ಫೋಟೋ ಚಿತ್ರಣ

Published On - 5:50 pm, Fri, 4 February 22