Back Pain: ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ನಿಮ್ಮ ಬೆನ್ನು ಮೂಳೆ ಸಮಸ್ಯೆಗೆ ಪರಿಹಾರ ನೀಡಿ

ಬೆನ್ನುಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಬೆನ್ನು ನೋವನ್ನು ತಡೆಯಲು ಸಹಾಯ ಮಾಡುವ  4  ಸಲಹೆಗಳು ಇಲ್ಲಿವೆ.

Back Pain: ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ನಿಮ್ಮ ಬೆನ್ನು ಮೂಳೆ ಸಮಸ್ಯೆಗೆ ಪರಿಹಾರ ನೀಡಿ
Back Bone PainImage Credit source: Cornerstone Physiotherapy
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on: Nov 03, 2022 | 5:13 PM

ಒತ್ತಡದ ಜೀವನ ಶೈಲಿ, ದೀರ್ಘಕಾಲದ ಕುಳಿತುಕೊಳ್ಳುವಿಕೆ, ವ್ಯಾಯಾಮದ ಕೊರತೆ, ಕಡಿಮೆ ತೂಕ, ಬದಲಾದ ಆಹಾರ ಪದ್ಧತಿಯು ನಿಮ್ಮ ಬೆನ್ನುಮೂಳೆಯ ನೋವಿನ ಸಮಸ್ಯೆಗೆ ಕಾರಣವಾಗಬಹುದು.

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಕೆಳ ಬೆನ್ನಿನ ನೋವು ಹೆಚ್ಚಾಗಿದ್ದು ಒಂದು ರೀತಿಯ ಕಾಯಿಲೆಯಾಗಿ ಬದಲಾಗಿದೆ. ಸಾಮಾನ್ಯವಾಗಿ ವಯೋಸಹಜವಾಗಿ ಕಂಡು ಬರುತ್ತಿದ್ದ ಈ ಕಾಯಿಲೆ ಇದೀಗಾ ಯುವಕರಲ್ಲೇ ಹೆಚ್ಚಾಗಿ ಕಂಡುಬರುತ್ತಿದೆ.

ಆದ್ದರಿಂದ ಬೆನ್ನುಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಬೆನ್ನು ನೋವನ್ನು ತಡೆಯಲು ಸಹಾಯ ಮಾಡುವ  4  ಸಲಹೆಗಳು ಇಲ್ಲಿವೆ.

1. ಉತ್ತಮ ಭಂಗಿಯನ್ನು ಕಾಪಾಡಿಕೊಳ್ಳಿ: ಲ್ಯಾಪ್‌ಟಾಪ್ ಗಳಲ್ಲಿ ಹೆಚ್ಚು ಸಮಯ ಕೆಲಸ ಮಾಡುವ ಜನರು ಸಾಮಾನ್ಯವಾಗಿ ಹೆಚ್ಚು ಹೊತ್ತು ಕುಳಿತು ಕೊಳ್ಳುತ್ತಾರೆ ಇದು ಅವರ ಬೆನ್ನಿನ ಸ್ನಾಯುಗಳು, ಬೆನ್ನುಮೂಳೆಯ ಮತ್ತು ಕುತ್ತಿಗೆಯ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ನೋವನ್ನು ಉಂಟುಮಾಡುತ್ತದೆ.

ರಾತ್ರಿ ಸಮಯದಲ್ಲಿ ಮೊಬೈಲ್ ಫೋನ್‌ಗಳಲ್ಲಿ ಕಾಲ ಕಳೆಯುವವರು, ತಮ್ಮ ಕುತ್ತಿಗೆಯನ್ನು ಮೇಲಕ್ಕೆ ಎತ್ತರದ ದಿಂಬು ಇಟ್ಟು ಹೊಟ್ಟೆಯ ಮೇಲೆ ಮಲಗುತ್ತಾರೆ, ಇದು ಬೆನ್ನುಮೂಳೆಯ ಹಾನಿಗೆ ಕಾರಣವಾಗಬಹುದು. ಆದ್ದರಿಂದ, ಕುಳಿತು ಕೊಳ್ಳುವಾಗ ಉತ್ತಮ ಭಂಗಿಯನ್ನು ಕಾಪಾಡಿಕೊಳ್ಳುವುದು ಉತ್ತಮವಾಗಿದೆ.

2. ಸಣ್ಣ ವಿರಾಮಗಳನ್ನು ತೆಗೆದುಕೊಳ್ಳುವುದು: ಕೆಲಸಕ್ಕೆ ಸಂಬಂಧಿಸಿದ ಮಾನಸಿಕ ಒತ್ತಡ ಮತ್ತು ನಮ್ಮ ಬೆನ್ನುಮೂಳೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಆಗಾಗ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ತುಂಬಾ ಗಂಟೆಗಳ ಕಾಲ ಒಂದೇ ಸ್ಥಾನದಲ್ಲಿ ಕುಳಿತುಕೊಳ್ಳುವುದು ನಿಮ್ಮ ಬೆನ್ನು ನೋವನ್ನು ಹೆಚ್ಚಾಗುವಂತೆ ಮಾಡುತ್ತದೆ.

3. ವ್ಯಾಯಾಮ: ತುಂಬಾ ಗಂಟೆಗಳ ಕಾಲ ಒಂದೇ ಸ್ಥಾನದಲ್ಲಿ ಕುಳಿತುಕೊಳ್ಳುವುದು ನಿಮ್ಮನ್ನು ಸಮಸ್ಯೆಗೆ ತಳ್ಳಬಹುದು. ಆದ್ದರಿಂದ ಆದಷ್ಟು ಬೆನ್ನಿನ ನೋವನ್ನು ಕಡಿಮೆ ಮಾಡಲು ಬಿಡುವಿನ ಸಮಯದಲ್ಲಿ ಕುತ್ತಿಗೆ, ಬೆನ್ನು, ಭುಜಗಳಿಗೆ ಸಂಬಂಧಿಸಿದ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ.

4.ಉತ್ತಮ ಆಹಾರ ಕ್ರಮ: ಅಧಿಕ ಕೊಬ್ಬಿನ ಆಹಾರವನ್ನು ತಪ್ಪಿಸಿ ಮತ್ತು ಸಾಕಷ್ಟು ನೀರು ಸೇವಿಸುವುದರಿಂದ ಬೆನ್ನು ಮತ್ತು ಬೆನ್ನುಮೂಳೆಯ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಅಗತ್ಯ ಖನಿಜಗಳಿಂದ ತುಂಬಿರುವ ಕಡಿಮೆ-ಕೊಬ್ಬು, ಕ್ಯಾಲ್ಸಿಯಂ ಮತ್ತು ಪ್ರೋಟೀನ್-ಭರಿತ ಆಹಾರವನ್ನು ಸೇವಿಸುವುದರಿಂದ ನಿಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಬೆನ್ನುಮೂಳೆಯ ಮೇಲಿನ ಒಟ್ಟಾರೆ ಒತ್ತಡವನ್ನು ಕಡಿಮೆ ಮಾಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ಧಿಗಾಗಿ ಇಲ್ಲಿ ಕ್ಲಿಕ್ ಮಾಡಿ: