ಮುಖ ನೋಡಿದ್ರೆ ಸಾಕು ನಿಮಗಿರುವ ರೋಗ ಹೇಳುತ್ತೆ ಈ ಯಂತ್ರ!

ಆರೋಗ್ಯವೇ ಭಾಗ್ಯ ಎಂಬ ಮಾತು ಅಕ್ಷರಶಃ ಸತ್ಯ. ವೈದ್ಯರ ಜೊತೆಗೆ ಕೃತಕ ಬುದ್ಧಿಮತ್ತೆ ಅಥವಾ ಎಐ ಕೂಡ ಆರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚಲು ಪ್ರಾರಂಭ ಮಾಡಿದೆ. ನವದೆಹಲಿಯಲ್ಲಿ ನಡೆದ ಎಐ ಶೃಂಗಸಭೆಯಲ್ಲಿ, ಕೇವಲ 30 ಸೆಕೆಂಡುಗಳಲ್ಲಿ ಮುಖವನ್ನು ಪರಿಶೀಲಿಸುವ ಮೂಲಕ ಸಂಭಾವ್ಯ ಆರೋಗ್ಯ ಸಮಸ್ಯೆಗಳನ್ನು ಸೂಚಿಸುವ ತಂತ್ರಜ್ಞಾನವನ್ನು ಪ್ರದರ್ಶಿಸಲಾಗಿದ್ದು, ಈ ವ್ಯವಸ್ಥೆಯು ಮುಖದ ಎಕ್ಸ್‌ಪ್ರೆಶನ್ ಅಂದರೆ ಭಾವನೆಗಳನ್ನು, ಚರ್ಮದ ಬಣ್ಣ ಮತ್ತು ಇತರ ಲಕ್ಷಣಗಳನ್ನು ಅಧ್ಯಯನ ಮಾಡಿ ನಿಮಗಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಸುತ್ತದೆ.

ಮುಖ ನೋಡಿದ್ರೆ ಸಾಕು ನಿಮಗಿರುವ ರೋಗ ಹೇಳುತ್ತೆ ಈ ಯಂತ್ರ!
Revolutionary AI Tools for Early Disease Diagnosis
Image Credit source: Getty Images

Updated on: Feb 20, 2026 | 5:50 PM

ಇಲ್ಲಿಯವರೆಗೆ, ವೈದ್ಯರು ನಿಮ್ಮ ನಾಡಿಮಿಡಿತವನ್ನು ಪರೀಕ್ಷಿಸುವ ಮೂಲಕ ಅಥವಾ ವಿವಿಧ ರೀತಿಯ ಪರೀಕ್ಷೆಗಳನ್ನು ಮಾಡುವ ಮೂಲಕ ರೋಗಗಳನ್ನು ಪತ್ತೆಹಚ್ಚುತ್ತಿದ್ದರು, ಆದರೆ ಈಗ ತಂತ್ರಜ್ಞಾನವು ವೈದ್ಯಕೀಯ ಜಗತ್ತನ್ನೇ ಬದಲಾಯಿಸಲು ಪ್ರಾರಂಭಿಸಿದೆ. ಕೃತಕ ಬುದ್ಧಿಮತ್ತೆ ಅಥವಾ ಎಐ (AI Technology), ಈಗ ಆರೋಗ್ಯ ತಪಾಸಣೆಗಳಲ್ಲಿಯೂ ಮಹತ್ವದ ಪಾತ್ರ ವಹಿಸುತ್ತಿದೆ. ನವದೆಹಲಿಯಲ್ಲಿ ನಡೆದ ಎಐ ಶೃಂಗಸಭೆಯಲ್ಲಿ, ಕೇವಲ 30 ಸೆಕೆಂಡುಗಳಲ್ಲಿ ಮುಖವನ್ನು ಪರಿಶೀಲಿಸುವ ಮೂಲಕ ಸಂಭಾವ್ಯ ಆರೋಗ್ಯ ಸಮಸ್ಯೆಗಳನ್ನು ಸೂಚಿಸುವ ತಂತ್ರಜ್ಞಾನವನ್ನು ಪ್ರದರ್ಶಿಸಲಾಗಿದೆ. ಈ ವ್ಯವಸ್ಥೆಯು ಮುಖದ ಎಕ್ಸ್‌ಪ್ರೆಶನ್ ಅಂದರೆ ಭಾವನೆಗಳನ್ನು, ಚರ್ಮದ ಬಣ್ಣ ಮತ್ತು ಇತರ ಲಕ್ಷಣಗಳನ್ನು ಅಧ್ಯಯನ ಮಾಡಿ ನಿಮಗಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಸುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ?

ಡಾ. ಜನ್ ಆರೋಗ್ಯ ಕೇಂದ್ರದ ಯೋಜನಾ ವ್ಯವಸ್ಥಾಪಕ ದಿವ್ಯಾಂಶು ಅವರು ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದು, ವಿಶೇಷ ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಈ ತಂತ್ರಜ್ಞಾನವು ರೋಗಿಗಳಿಗೆ ತಕ್ಷಣದ ಆರಂಭಿಕ ಆರೋಗ್ಯ ಸೂಚಕಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಜೊತೆಗೆ ಸಕಾಲಿಕ ಪರೀಕ್ಷೆ ಮತ್ತು ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡುತ್ತದೆ. ನೀವು ಈ ಪರದೆಯ ಮುಂದೆ ನಿಂತರೆ ಸಾಕು ಅದು ನಿಮ್ಮ ಮುಖವನ್ನು ನೋಡಿ ಸುಮಾರು 30 ಸೆಕೆಂಡುಗಳ ಬಳಿಕ ನಿಮ್ಮ ದೇಹದಲ್ಲಿರುವ ಆರೋಗ್ಯ ಸಮಸ್ಯೆಗಳನ್ನು ಮುಂದಿರುವ ಪರದೆಯ ಮೇಲೆ ಪ್ರದರ್ಶಿಸುತ್ತದೆ. ರಕ್ತದೊತ್ತಡ, ನಾಡಿ ಮಿಡಿತ, ನಾಳೀಯ ಬಿಗಿತ, ಹೃದಯ ಬಡಿತ, ಹಿಮೋಗ್ಲೋಬಿನ್, ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್‌ಗಳು, ಎಚ್ ಡಿ ಎಲ್ (HDL) ಕೊಲೆಸ್ಟ್ರಾಲ್, ಎಲ್ ಡಿ ಎಲ್ (LDL) ಕೊಲೆಸ್ಟ್ರಾಲ್, ಲಿಪೊಪ್ರೋಟೀನ್, ಒತ್ತಡದ ಮಟ್ಟ, ಮಧುಮೇಹ ಅಪಾಯ ಮತ್ತು ಕೊಬ್ಬಿನ ಮಟ್ಟಗಳ ಬಗ್ಗೆ ಮಾಹಿತಿ ನೀಡುತ್ತದೆ. ಇದರೊಂದಿಗೆ, ವಿವಿಧ ಕಾಯಿಲೆಗಳು ಯಾವ ಮಟ್ಟದಲ್ಲಿದೆ ಎಂಬುದರ ಬಗ್ಗೆಯೂ ಮಾಹಿತಿ ನೀಡುತ್ತದೆ.

ಇದನ್ನೂ ಓದಿ: ಹೊಟ್ಟೆ ಮತ್ತು ಕರುಳನ್ನು ಪರೀಕ್ಷಿಸಲು ಮಾತ್ರೆಯಂತಹ ವಿಭಿನ್ನ ಸಾಧನವನ್ನು ಕಂಡುಹಿಡಿದ ವಿಜ್ಞಾನಿಗಳು

ವರದಿಯ ನಂತರ ವೈದ್ಯರ ಸಲಹೆ:

ಸಾಮಾನ್ಯವಾಗಿ ವರದಿ ಬಂದ ತಕ್ಷಣ, ವೈದ್ಯರು ತಕ್ಷಣವೇ ನಿಮಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. ಈ ಪ್ರಶ್ನೆಗಳು ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿರುತ್ತವೆ. ಅದರ ನಂತರ, ಅಗತ್ಯವಿದ್ದರೆ, ವೈದ್ಯರು ಕೆಲವು ಇತರ ಪರೀಕ್ಷೆಗಳನ್ನು ಮಾಡಲು ಸೂಚಿಸುತ್ತಾರೆ. ಮತ್ತೆ ಅಗತ್ಯವಿದ್ದರೆ, ಹೆಚ್ಚುವರಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಪರೀಕ್ಷಾ ವರದಿಯ ನಂತರ, ವೈದ್ಯರು ಪ್ರಿಸ್ಕ್ರಿಪ್ಷನ್ ಅನ್ನು ನೀಡುತ್ತಾರೆ, ಅದರ ಆಧಾರದ ಮೇಲೆ ನೀವು ಔಷಧಿಗಳನ್ನು ಖರೀದಿಸಬಹುದಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ