AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತಮ ಆರೋಗ್ಯಕ್ಕೆ ನೆಲ್ಲಿಕಾಯಿ- ಅಲೋವೆರಾ ಜ್ಯೂಸ್​ ಕುಡಿದು ನೋಡಿ

ನೆಲ್ಲಿಕಾಯಿ -ಅಲೋವೆರಾ ಜ್ಯೂಸ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಹೃದಯ, ಮೆದುಳಿನಂತಹ ಪ್ರಮುಖ ಅಂಗಗಳ ಕಾರ್ಯಗಳನ್ನು ವರ್ಧಿಸಲು ಸಹಾಯ ಮಾಡುತ್ತದೆ. ಆಮ್ಲಾ-ಅಲೋವೆರಾ ಜ್ಯೂಸ್ ಕಣ್ಣಿನ ಒತ್ತಡವನ್ನು ಕಡಿಮೆ ಮಾಡುತ್ತದೆ.

ಉತ್ತಮ ಆರೋಗ್ಯಕ್ಕೆ ನೆಲ್ಲಿಕಾಯಿ- ಅಲೋವೆರಾ ಜ್ಯೂಸ್​ ಕುಡಿದು ನೋಡಿ
ನೆಲ್ಲಿಕಾಯಿ- ಅಲೋವೆರಾImage Credit source: farmeasy
ಸುಷ್ಮಾ ಚಕ್ರೆ
|

Updated on: Sep 09, 2023 | 7:15 PM

Share

ಬಹುತೇಕ ಎಲ್ಲರಿಗೂ ಕೋಲ್ಡ್​ ಡ್ರಿಂಕ್ಸ್​, ಸಾಫ್ಟ್​ ಡ್ರಿಂಕ್ಸ್​ಗಳೆಂದರೆ ಇಷ್ಟ. ಆದರೆ, ಅವುಗಳನ್ನು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ನಮಗೂ ತಿಳಿದಿರುತ್ತದೆ. ನಮ್ಮ ಸುತ್ತಲೂ ಅನೇಕ ಆರೋಗ್ಯಯುತ ಪಾನೀಯಗಳಿವೆ. ಅದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯೂ ಆಗುವುದಿಲ್ಲ. ಬದಲಾಗಿ ನಮ್ಮ ದೇಹ ಇನ್ನಷ್ಟು ಸದೃಢವಾಗುತ್ತದೆ. ಅಂತಹ ಪಾನೀಯಗಳ ಕಡೆಗೆ ನಾವು ಹೆಚ್ಚಿನ ಆದ್ಯತೆ ನೀಡಬೇಕು. ಅಂಥವುಗಳಲ್ಲಿ ನೆಲ್ಲಿಕಾಯಿ– ಅಲೋವೆರಾ ಜ್ಯೂಸ್ ಕೂಡ ಒಂದು.

ಆಮ್ಲಾ ಮತ್ತು ಅಲೋವೆರಾದ ಜ್ಯೂಸ್ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಉತ್ತಮ ಮಾರ್ಗವಾಗಿದೆ. ಆಮ್ಲಾ ಅಲೋವೆರಾ ಜ್ಯೂಸ್ ಪೌಷ್ಟಿಕಾಂಶದ ಪಾನೀಯವಾಗಿದ್ದು, ನೀವೂ ಒಮ್ಮೆ ಟ್ರೈ ಮಾಡಿ ನೋಡಿ.

ಇದನ್ನೂ ಓದಿ: ಕೂದಲು, ಚರ್ಮ, ಉಗುರಿನ ಆರೋಗ್ಯಕ್ಕೆ ಈ 7 ಆಹಾರ ಸೇವಿಸಿ

ಆಮ್ಲಾ- ಅಲೋವೆರಾ ಜ್ಯೂಸ್​ನ ಉಪಯೋಗಗಳು:

– ಇದು ಮೂತ್ರದ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

– ಇದು ಜೀರ್ಣಕಾರಿ ಗುಣಗಳನ್ನು ಹೊಂದಿರುತ್ತದೆ.

– ಇದು ಜೀರ್ಣಕ್ರಿಯೆ ಸರಾಗಗೊಳಿಸಿ, ಹಸಿವನ್ನು ಪ್ರಚೋದಿಸುತ್ತದೆ.

– ಇದು ಉರಿಯೂತದ ಗುಣಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

– ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

– ಇದು ಕೊಲೆಸ್ಟ್ರಾಲ್ ಕಡಿಮೆಗೊಳಿಸುವ ಪರಿಣಾಮವನ್ನು ಹೊಂದಿರುತ್ತದೆ.

– ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ.

– ಇದು ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ.

– ಅತಿಸಾರ ವಿರೋಧಿ ಚಟುವಟಿಕೆಯನ್ನು ಹೊಂದಿದೆ.

– ಕ್ಯಾನ್ಸರ್ ವಿರೋಧಿ ಚಟುವಟಿಕೆಯನ್ನು ಹೊಂದಿದೆ.

– ಇಮ್ಯುನಿಟಿ ಬೂಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ.

– ಆಮ್ಲಾ -ಅಲೋವೆರಾ ಜ್ಯೂಸ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಹೃದಯ, ಮೆದುಳಿನಂತಹ ಪ್ರಮುಖ ಅಂಗಗಳ ಕಾರ್ಯಗಳನ್ನು ವರ್ಧಿಸಲು ಸಹಾಯ ಮಾಡುತ್ತದೆ.

– ಆಮ್ಲಾ ಅಲೋವೆರಾ ಜ್ಯೂಸ್ ಕಣ್ಣಿನ ಒತ್ತಡವನ್ನು ಕಡಿಮೆ ಮಾಡುತ್ತದೆ.

– ಅಲೋವೆರಾ ಮತ್ತು ಆಮ್ಲಾ ಜ್ಯೂಸ್ ಅನ್ನು ನಿಂಬೆ ರಸ ಮತ್ತು ಮಿಸ್ರಿ ಜೊತೆಗೆ ಸೇವಿಸುವುದರಿಂದ ಭೇದಿಯನ್ನು ನಿಯಂತ್ರಿಸಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!