Indigestion: ಬೆಂಬಿಡದಂತೆ ಕಾಡುತ್ತಿದೆಯೇ ಅಜೀರ್ಣ ಸಮಸ್ಯೆ , ಇಲ್ಲಿದೆ ಸರಳ ಮನೆಮದ್ದು
ಬಹುತೇಕರಲ್ಲಿ ಕಾಡುವ ಸಮಸ್ಯೆಗಳೆಂದರೆ ಅದುವೇ ಅಜೀರ್ಣ ಸಮಸ್ಯೆ. ಕರಿದ ಎಣ್ಣೆ ಪದಾರ್ಥಗಳು, ಫಾಸ್ಟ್ ಫುಡ್ ಸೇರಿದಂತೆ ಇನ್ನಿತ್ತರ ಆಹಾರವನ್ನು ಸೇವಿಸಿದಾಗ ಸಹಜವಾಗಿಯೇ ಅಜೀರ್ಣ ಸಮಸ್ಯೆಯೂ ಕಾಡುತ್ತವೆ. ಹೀಗಾಗಿ ನಮ್ಮ ಆಹಾರ ಕ್ರಮದಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಅಜೀರ್ಣದಂತಹಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಅದಲ್ಲದೇ ಅಜೀರ್ಣ ಸಮಸ್ಯೆಯೂ ಕಾಡಿದಾಗ ಕೆಲವು ಮನೆ ಮದ್ದುಗಳಿಂದ ಈ ಸಮಸ್ಯೆಯನ್ನು ದೂರವಾಗಿಸಬಹುದು.
ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡಿರುವ ಜನರಲ್ಲಿ ನಾನಾ ರೀತಿಯ ಆರೋಗ್ಯ ಸಮಸ್ಯೆಯು ಕಾಣಿಸಿಕೊಳ್ಳುತ್ತಿವೆ. ಅತೀ ಹೆಚ್ಚು ಜನರನ್ನು ಕಾಡುವ ಸಮಸ್ಯೆಯೆಂದರೆ ಅಜೀರ್ಣ. ಈ ಸಮಸ್ಯೆಯಿದ್ದಾಗ ಸೇವಿಸಿದ ಆಹಾರವು ಜೀರ್ಣವಾಗದೇ ವಾಕರಿಕೆ, ಎದೆಯುರಿ, ವಾಂತಿ ಸೇರಿದಂತೆ ಇನ್ನಿತ್ತರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಸಮಯದಲ್ಲಿ ಏನು ಬೇಡವೇ ಬೇಡ ಎಂದೆನಿಸುವುದು ಸಹಜ. ಹೀಗಾದಾಗ ಆಹಾರಕ್ರಮದಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆಗಳನ್ನು ಮಾಡಿಕೊಂಡರೆ ಉತ್ತಮ. ಮನೆಯಲ್ಲಿಯೇ ಸಿಗುವ ವಸ್ತುಗಳಿಂದ ಅಜೀರ್ಣ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.
ಅಜೀರ್ಣ ಸಮಸ್ಯೆಯ ನಿವಾರಣೆಗೆ ಮನೆ ಮದ್ದುಗಳು:
- ಪ್ರತಿದಿನ ಮಜ್ಜಿಗೆಗೆ ಉಪ್ಪು ಬೆರೆಸಿ ಕುಡಿಯುತ್ತಿದ್ದರೆ ಅಜೀರ್ಣ ಸಮಸ್ಯೆಯೂ ನಿವಾರಣೆಯಾಗುತ್ತದೆ.
- ಊಟದ ಬಳಿಕ ಶುಂಠಿ ಜಗಿದು ತಿನ್ನುವುದರಿಂದ ಅಜೀರ್ಣಯೂ ಗುಣಮುಖವಾಗುತ್ತದೆ.
- ಊಟದ ಬಳಿಕ ಬಾಳೆಹಣ್ಣನ್ನು ತಿನ್ನುವುದರಿಂದ ಅಜೀರ್ಣ ಸಮಸ್ಯೆಗೆ ಪರಿಣಾಮಕಾರಿಯಾಗಿದೆ.
- ಕರಿಮೆಣಸು, ಬೆಳ್ಳುಳ್ಳಿಯನ್ನು ಕಡಿಮೆ ಪ್ರಮಾಣದಲ್ಲಿ ಬೆರೆಸಿ, ಚಟ್ಟಿ ಮಾಡಿ ಊಟದಲ್ಲಿ ಸೇವಿಸುತ್ತಿದ್ದರೆ, ಜೀರ್ಣ ಶಕ್ತಿಯೂ ಸುಧಾರಿಸಿ ಅಜೀರ್ಣ ಸಮಸ್ಯೆ ಕಾಡುವುದಿಲ್ಲ.
- ಊಟ ಮಾಡುವ ಮೊದಲು ಒಂದಿಷ್ಟು ಜೀರಿಗೆ ಕಾಳನ್ನು ಬಾಯಲ್ಲಿ ಹಾಕಿಕೊಂಡು ಜಗಿಯುತ್ತಿದ್ದರೆ ಜೀರ್ಣಶಕ್ತಿ ಸುಧಾರಿಸುತ್ತದೆ.
- ಸ್ವಲ್ಪ ಉಪ್ಪು ಬೆರೆಸಿದ ನೀರಿಗೆ ನಿಂಬೆಹಣ್ಣಿನ ರಸ ಮಿಶ್ರ ಮಾಡಿ, ದಿನವೂ ಮೂರು ಬಾರಿ ಸೇವಿಸುತ್ತಿದ್ದರೆ ಅಜೀರ್ಣವು ಕಡಿಮೆಯಾಗುತ್ತದೆ.
- ನಿಂಬೆ ಹಣ್ಣಿನ ರಸವನ್ನು ಕುಡಿಯುವುದರಿಂದ ಅಜೀರ್ಣದಿಂದ ಬರುವ ಹುಳಿತೇಗು ನಿವಾರಣೆಯಾಗುತ್ತದೆ.
- ಸೇಬನ್ನು ದಿನವೂ ಸೇವಿಸುವುದರಿಂದ ಜೀರ್ಣಶಕ್ತಿಯೂ ಸುಧಾರಿಸುತ್ತದೆ.
- ಅಡುಗೆಯಲ್ಲಿ ಅರಿಶಿನ ಪುಡಿಯನ್ನು ಬೆರೆಸಿ ಸೇವಿಸುವುದರಿಂದ ಅಜೀರ್ಣ ಸಮಸ್ಯೆಯೂ ಕಾಡುವುದಿಲ್ಲ.
- ಊಟದ ಬಳಿಕ ಏಲಕ್ಕಿಯನ್ನು ಚೆನ್ನಾಗಿ ಜಗಿದು ತಿಂದರೆ ಅಜೀರ್ಣ ಸಮಸ್ಯೆಯು ದೂರವಾಗುತ್ತದೆ.
- ದಿನಾಲೂ ಪುದಿನಾ ಎಲೆಗಳನ್ನು ಜಗಿದು ತಿನ್ನುವುದರಿಂದ ಆಹಾರವು ಜೀರ್ಣವಾಗುತ್ತದೆ, ಅರ್ಜಿರ್ಣ ಸಮಸ್ಯೆಯು ಬರುವುದಿಲ್ಲ.
- ದಿನನಿತ್ಯ ತುಳಸಿ ರಸವನ್ನು ಸೇವಿಸುತ್ತಿದ್ದರೆ ಜೀರ್ಣ ಕ್ರಿಯೆಯು ಸರಿಯಾಗಿ ಆಗುತ್ತದೆ.
- ಅಜೀರ್ಣ ಸಮಸ್ಯೆಯು ಕಾಡಿದಾಗ ಲವಂಗದ ಕಷಾಯವನ್ನು ಮಾಡಿ ಕುಡಿಯುವುದು ಉತ್ತಮ.
- ಊಟದ ಬಳಿಕ ಸಿಪ್ಪೆ ತೆಗೆದ ಖರ್ಜೂರವನ್ನು ತಿಂದರೆ ಜೀರ್ಣ ಶಕ್ತಿಯು ಸುಧಾರಿಸುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ