AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Effective Ways To Keep The Mosquitoes Away: ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಹೆಚ್ಚು, ಅದಕ್ಕಾಗಿ ಇಲ್ಲಿದೆ ನೈಸರ್ಗಿಕ ಪರಿಹಾರ

ಮಳೆಗಾಲ ಆರಂಭವಾಗುತ್ತಿದ್ದಂತೆ, ಸೊಳ್ಳೆಗಳ ಕಾಟವು ಶುರುವಾಗುತ್ತದೆ. ಸೊಳ್ಳೆಗಳ ಕಡಿತವು ಹಲವು ರೋಗಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಸೊಳ್ಳೆಗಳನ್ನು ಮನೆಯೊಳಗೆ ಬಾರದಂತೆ ನೋಡಿಕೊಳ್ಳುವುದು ತುಂಬಾ ಮುಖ್ಯ. ರಾಸಾಯನಿಕ ಕೀಟನಾಶಕಗಳ ಬದಲು ನೈಸರ್ಗಿಕವಾಗಿ ಸಿಗುವ ಕೆಲವು ಉತ್ಪನ್ನಗಳನ್ನು ಬಳಸಿ ಈ ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಬಹುದು.

Effective Ways To Keep The Mosquitoes Away: ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಹೆಚ್ಚು, ಅದಕ್ಕಾಗಿ ಇಲ್ಲಿದೆ ನೈಸರ್ಗಿಕ ಪರಿಹಾರ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Jun 29, 2023 | 4:01 PM

Share

ಮಳೆಗಾಲ ಶುರುವಾಯಿತೆಂದರೆ, ಸೊಳ್ಳೆಗಳ ಕಾಟವು ಶುರುವಾಗಿದೆ ಎಂದರ್ಥ. ಏಕೆಂದರೆ ಈ ಮಳೆಗಾಲವು ಸೊಳ್ಳಗಳ ಸಂತಾನೋತ್ಪತ್ತಿಗೆ ಅನುಕೂಲಕರ ವಾತಾವರಣವನ್ನು ಒದಗಿಸುತ್ತದೆ. ಆದ್ದರಿಂದ ಈ ಸಮಯದಲ್ಲಿ ಸೊಳ್ಳೆಗಳು ಹೆಚ್ಚಿರುತ್ತವೆ. ಸಂಜೆಯಾಗುತ್ತಿದ್ದಂತೆ ಮನೆಗೆ ಮುತ್ತಿಗೆಯಿಡುತ್ತ, ತನ್ನದೇ ರಾಜ್ಯಬಾರ ಎಂಬಂತೆ ಮನುಷ್ಯರಿಗ ಕಡಿಯುತ್ತ, ರಕ್ತವನ್ನು ಹೀರುತ್ತ ಕಾಟ ಕೊಡುತ್ತಿರುತ್ತವೆ. ಸೊಳ್ಳೆ ಕಡಿತವು ಫೈಲೇರಿಯಾ, ಎನ್ಸೆಫಾಲಿಟಿಸ್, ಚಿಕನ್ ಗೂನ್ಯಾ, ಮಲೇರಿಯಾ ಮತ್ತು ಡೆಂಗ್ಯೂ ಮುಂತಾದ ಕಾಯಿಲೆಗಳ ಹರಡುವಿಕಗೆ ಕಾರಣವಾಗುತ್ತದೆ. ಕೆಲವು ವಿಧದ ಸೊಳ್ಳೆಗಳ ಕಡಿತವು ಗುಳ್ಳೆಗಳು ಮತ್ತು ತೀವ್ರವಾದ ಉರಿಯೂತವನ್ನು ಉಂಟುಮಾಡಬಹುದು. ಸೊಳ್ಳೆಗಳ ಕಾಟವನ್ನು ನಿವಾರಿಸಲು ಹಲವಾರು ಪರಿಣಾಮಕಾರಿ ರಾಸಾಯನಿಕಯುಕ್ತ ಕೀಟನಾಶಕಗಳಿದ್ದರೂ, ಅದು ನಮ್ಮ ಆರೋಗ್ಯಕ್ಕೆ ಹಾನಿಯುಂಟುಮಾಡಬಹುದು. ಹಾಗಾಗಿ ರಾಸಾಯನಿಕ ಉತ್ಪನ್ನಗಳನ್ನು ಬಳಸದೆ ಆರೋಗ್ಯಕರ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಸೊಳ್ಳೆಗಳು ಮನೆಯನ್ನು ಪ್ರವೇಶಿಸದಂತೆ ತಡೆಯಬಹುದು

ಸೊಳ್ಳೆಗಳ ಕಾಟದಿಂದ ಮುಕ್ತ ಪಡೆಯಲು ಪರಿಣಾಮಕಾರಿ ನೈಸರ್ಗಿಕ ಮಾರ್ಗಗಳು:

ಕರ್ಪೂರ:

ಸೊಳ್ಳೆಗಳು ಬಾರದಂತೆ ಮಾಡಲು ಕರ್ಪೂರ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಿ ಕರ್ಪೂರ ಹಾಗೂ ಬೇವಿನ ಸೊಪ್ಪಿನ ಹೊಗೆ ಹಾಕಿದರೆ ಸೊಳ್ಳೆಗಳು ಮನೆಯೊಳಗೆ ಬರುವುದಿಲ್ಲ. ಬೇವಿನ ಸೊಪ್ಪಿಲ್ಲದಿದ್ದರೆ ಬರೀ ಕರ್ಪೂದ ಹೊಗೆಯಾಡಿಸಬಹುದು.

ಬೆಳ್ಳುಳ್ಳಿ:

ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಬೆಳ್ಳುಳ್ಳಿ ಸೊಳ್ಳೆಗಳನ್ನು ಕೊಲ್ಲಲು ಪರಿಣಾಮಕಾರಿ ನೈಸರ್ಗಿಕ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ. ಬೆಳ್ಳುಳ್ಳಿಯ ಕಟುವಾದ ವಾಸನೆ ಸೊಳ್ಳೆಗಳು ಮನೆಯೊಳಗೆ ಪ್ರವೇಶಿಸದಂತೆ ತಡೆಯುತ್ತದೆ. ಆದ್ದರಿಂದ ಈ ಪರಿಹಾರವನ್ನು ಬಳಸಲು ನೀವು ಕೆಲವು ಬೆಳ್ಳುಳ್ಳಿ ಎಸಳುಗಳನ್ನು ಜಜ್ಜಿ, ಅದನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ. ಮತ್ತು ಆ ನೀರನ್ನು ಮನೆಯ ಕೋಣೆಗಳ ಸುತ್ತಲೂ ಸಿಂಪಡಿಸಿ. ಅಲ್ಲದೆ ಬೆಳ್ಳುಳ್ಳಿಯ ನಾಲ್ಕು ಎಸಳುಗಳನ್ನು ಜಜ್ಜಿ ಅದನ್ನು ಸ್ವಲ್ಪ ಎಣ್ಣೆ ಮತ್ತು ಕರ್ಪೂರವನ್ನು ಸೇರಿಸಿ ಮನೆಯಲ್ಲಿ ಹೊಗೆಯಾಡಿಸಿ, ಇದರಿಂದ ಸೊಳ್ಳೆಗಳು ಮನೆಯೊಳಗೆ ಪ್ರವೆಶಿಸುವುದಿಲ್ಲ.

ನಿಂಬೆ ಮತ್ತು ಲವಂಗ:

ನಿಂಬೆ ಹಣ್ಣನ್ನು ಅರ್ಧದಷ್ಟು ಕತ್ತರಿಸಿ ಅದರಲ್ಲಿ ಕೆಲವು ಕೆಲವು ಲವಂಗದ ತುಂಡುಗಳನ್ನು ಇರಿಸಿ. ಇವುಗಳನ್ನು ಪ್ರತಿ ಕೋಣೆಯಲ್ಲಿ ಇರಿಸಿ. ಇದು ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಅತ್ಯಂತ ಪರಿಣಾಮಕಾರಿ ಮನೆಮದ್ದುಗಳಲ್ಲಿ ಒಂದಾಗಿದೆ.

ಇದನ್ನೂ ಓದಿ:Soap Attracts Mosquitoes: ನೀವು ಮೈಗೆ ಹಚ್ಚಿರುವ ಸೋಪು ಸೊಳ್ಳೆಗಳನ್ನು ಆಕರ್ಷಿಸುತ್ತೆ ಗೊತ್ತೇ?

ತುಳಸಿ:

ಸೊಳ್ಳಗಳ ಕಾಟವನ್ನು ತಡೆಗಟ್ಟುವಲ್ಲಿ ತುಳಸಿಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ ತುಳಸಿ ಎಳೆಗಳು ಸೊಳ್ಳೆಗಳನ್ನು ಪರಿಣಾಮಕಾರಿಯಾಗಿ ಕೊಲ್ಲುತ್ತವೆ, ಇದರಿಂದಾಗಿ ಸೊಳ್ಳಗಳ ಸಂತಾನ್ಪತ್ತಿಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ನಿಮ್ಮ ಬಾಲ್ಕನಿಯಲ್ಲಿ, ಕಿಟಕಿ ಪಕ್ಕದಲ್ಲಿ ಅಥವಾ ಮನೆಸುತ್ತಲಿನಲ್ಲಿ ತುಳಸಿ ಸಸ್ಯವನ್ನು ನೆಡುವ ಮೂಲಕ ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಬಹುದು. ಇದಲ್ಲದೆ ನೀವು ನೇರವಾಗಿ ತುಳಸಿ ಎಣ್ಣೆಯನ್ನು ನಿಮ್ಮ ದೇಹಕ್ಕೆ ಅನ್ವಯಿಸಬಹುದು.

ಆಯುರ್ವೇದಿಕಾ ಗಿಡಗಳನ್ನು ಮನೆಸುತ್ತ ಬೆಳೆಸಿ:

ಮನೆಯ ಸುತ್ತ ತುಳಸಿ, ನೀಲಗಿರಿ, ಲೆಮನ್ ಗ್ರಾಸ್, ಬೇವು, ಪುದೀನಾ, ಲ್ಯಾವೆಂಡರ್ ಮುಂತಾದ ಗಿಡಗಳಿದ್ದರೆ ಸೊಳ್ಳೆಗಳು ಬರುವುದಿಲ್ಲ. ಅಲ್ಲದೆ ಚೆಂಡು ಹೂವಿನ ವಾಸನೆಯಿಂದಲೂ ಸೊಳ್ಳೆಗಳು ದೂರವಿರುತ್ತವೆ. ಈ ಗಿಡಗಳನ್ನು ಬಾಲ್ಕನಿಯಲ್ಲಿ ಚಿಕ್ಕ ಕುಂಡಗಳಲ್ಲಿ ಅಥವಾ ಮನೆಯ ಸುತ್ತಲೂ ನೆಡಬಹುದು.

ಇಷ್ಟು ಮಾತ್ರವಲ್ಲದೆ ನೀವು ಸೊಳ್ಳೆಗಳ ಕಡಿತಕ್ಕೆ ಒಳಗಾಗುವುದನ್ನು ತಪ್ಪಿಸಲು ನಿಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಆದಷ್ಟು ಸ್ವಚ್ಛವಾಗಿಡಬೇಕು. ಏಕೆಂದರೆ ಸೊಳ್ಳೆಗಳು ಕೊಳಕು ನೀರಿನಲ್ಲಿ ಮೊಟ್ಟೆಗಳನ್ನು ಇಡಲು ಬಯಸುತ್ತವೆ. ಆದ್ದರಿಂದ ಮನೆಯ ಸುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಿ, ಹಳೆಯ ಟೈರ್​​​ಗಳಿದ್ದರೆ ಅವುಗಳನ್ನು ತೆರವುಗೊಳಿಸಿ. ಆದಷ್ಟು ಸ್ವಚ್ಛ ವಾತಾವರಣವನ್ನು ಕಾಪಾಡಿಕೊಳ್ಳಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ