ತಂಪು ಪಾನೀಯಗಳಲ್ಲಿ ಬಳಸಲಾಗುವ ‘ಆಸ್ಪರ್ಟೇಮ್’ ಕ್ಯಾನ್ಸರ್​​ಕಾರಕ ಎಂದು ಘೋಷಿಸಲು ನಿರ್ಧಾರ

ಅನೇಕ ತಂಪು ಪಾನೀಯಗಳಲ್ಲಿ ಕಂಡುಬರುವ ಆಸ್ಪರ್ಟೇಮ್ ಎಂಬ ಕೃತಕ ಸಿಹಿಕಾರಕವನ್ನು ವಿಶ್ವ ಆರೋಗ್ಯ ಸಂಸ್ಥೆಯ ಸಂಶೋಧನಾ ಘಟಕವು ಕ್ಯಾನ್ಸರ್ ಕಾರಕ ಎಂದು ಘೋಷಿಸಲು ನಿರ್ಧರಿಸಿದೆ.

ತಂಪು ಪಾನೀಯಗಳಲ್ಲಿ ಬಳಸಲಾಗುವ 'ಆಸ್ಪರ್ಟೇಮ್' ಕ್ಯಾನ್ಸರ್​​ಕಾರಕ ಎಂದು ಘೋಷಿಸಲು ನಿರ್ಧಾರ
ಆಸ್ಪರ್ಟೇಮ್ ಕೃತಕ ಸಿಹಿಕಾರಕ Image Credit source: Getty Images
Follow us
ಅಕ್ಷತಾ ವರ್ಕಾಡಿ
|

Updated on:Jun 30, 2023 | 12:54 PM

ಅನೇಕ ತಂಪು ಪಾನೀಯಗಳಲ್ಲಿ ಕಂಡುಬರುವ ಆಸ್ಪರ್ಟೇಮ್ ಎಂಬ ಕೃತಕ ಸಿಹಿಕಾರಕವನ್ನು ವಿಶ್ವ ಆರೋಗ್ಯ ಸಂಸ್ಥೆಯ ಸಂಶೋಧನಾ ಘಟಕವು ಕ್ಯಾನ್ಸರ್ ಕಾರಕ ಎಂದು ಘೋಷಿಸಲು ನಿರ್ಧರಿಸಿದೆ. ಆಸ್ಪರ್ಟೇಮ್ ವಿಶ್ವದಾದ್ಯಂತ  ಸಾಮಾನ್ಯವಾಗಿ ಬಳಸುವ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಕೃತಕ ಸಿಹಿಕಾರಕವಾಗಿದೆ. ಇದು ಸಾಮಾನ್ಯ ಸಕ್ಕರೆಗಿಂತ ಸರಿಸುಮಾರು 200 ಪಟ್ಟು ಸಿಹಿಯಾಗಿರುತ್ತದೆ. ಇದನ್ನು ಜುಲೈನಲ್ಲಿ ಕ್ಯಾನ್ಸರ್​​​ಕಾರಕ ಎಂದು ಮೊದಲ ಬಾರಿಗೆ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (IARC) ಪಟ್ಟಿ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಕೋಕಾ-ಕೋಲಾ ಡಯಟ್ ಸೋಡಾಗಳು, ಮಾರ್ಸ್ ಎಕ್ಸ್‌ಟ್ರಾ ಚೂಯಿಂಗ್ ಗಮ್, ಕೆಲವು ಪಾನೀಯಗಳಲ್ಲಿ ಇದನ್ನು ಬಳಸಲಾಗುತ್ತದೆ. ಈ ಸಿಹಿಕಾರಕವು ಎರಡು ಆಸ್ಪರ್ಟಿಕ್ ಆಮ್ಲ ಮತ್ತು ಫೆನೈಲಾಲನೈನ್ ಎಂಬ ಅಮೈನೋ ಆಮ್ಲಗಳಿಂದ ಮಾಡಲ್ಪಟ್ಟಿದೆ.

ಸಾಮಾನ್ಯವಾಗಿ ಬಳಸಲಾಗುವ ಸಕ್ಕರೆಯಲ್ಲಿ ಸಾಕಷ್ಟು ಕ್ಯಾಲೋರಿಗಳು ಇರುವುದರಿಂದ ಇದಕ್ಕೆ ಪರ್ಯಾಯವಾಗಿ 1965ರಲ್ಲಿ ರಸಾಯನಶಾಸ್ತ್ರಜ್ಞರಾದ ಜೇಮ್ಸ್ ಎಮ್​​ ಸ್ಕ್ಲಾಟರ್ ಈ ಕೃತಕ ಸಿಹಿಕಾರಕವನ್ನು ಕಂಡುಹಿಡಿದರು. ಇದರ ಪರಿಣಾಮ ಅಂದಿನಿಂದ ಇಂದಿನ ವರೆಗೆ ಸಿರಿಧಾನ್ಯಗಳು, ಸಕ್ಕರೆ ಮುಕ್ತ ಚೂಯಿಂಗ್ ಗಮ್, ಕಡಿಮೆ ಕ್ಯಾಲೋರಿ ಹಣ್ಣಿನ ರಸಗಳು ಮತ್ತು ಸೋಡಾಗಳು ಸೇರಿದಂತೆ ಸಾವಿರಾರು ಆಹಾರಗಳು ಮತ್ತು ಪಾನೀಯಗಳಲ್ಲಿ ಆಸ್ಪರ್ಟೇಮ್ ಅನ್ನು ವಿಶ್ವಾದ್ಯಂತ ಸಕ್ಕರೆ ಬದಲಿಯಾಗಿ ಬಳಸಲಾಗುತ್ತಿದೆ.

ಇದನ್ನೂ ಓದಿ: Erectile Dysfunction : ಪುರುಷರಲ್ಲಿ ಕಂಡುಬರುವ ಈ ಲೈಂಗಿಕ ಅಸಮರ್ಥತೆ ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಹುದು

ಮೇ ತಿಂಗಳಲ್ಲಿ, ವಿಶ್ವ ಆರೋಗ್ಯ ಸಂಸ್ಥೆ ಕೃತಕ ಸಿಹಿಕಾರಕಗಳ ಬಗ್ಗೆ ಆರೋಗ್ಯ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿತ್ತು. ಇದೀಗಾ ಆಸ್ಪರ್ಟೇಮ್ ಎಂಬ ಕೃತಕ ಸಿಹಿಕಾರಕವನ್ನು ವಿಶ್ವ ಆರೋಗ್ಯ ಸಂಸ್ಥೆಯ ಸಂಶೋಧನಾ ಘಟಕವು ಕ್ಯಾನ್ಸರ್ ಕಾರಕ ಎಂದು ಘೋಷಿಸಲು ನಿರ್ಧರಿಸಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 12:51 pm, Fri, 30 June 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ