Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಟೂತ್ ಬ್ರಷ್ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಬೇಡಿ!

ಪ್ರತಿಯೊಬ್ಬರ ಹಲ್ಲುಗಳ ಶುಚಿತ್ವದಲ್ಲಿ ಟೂತ್ ಬ್ರಷ್ ನಿರ್ಣಾಯಕ ಪಾತ್ರ ವಹಿಸುತ್ತದೆ. ಆದರೆ ಇದನ್ನು ಬಳಸಿದ ನಂತರ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ವಿಶೇಷವಾಗಿ ಟೂತ್ ಬ್ರಷ್ ಅನ್ನು ಸ್ನಾನಗೃಹದಲ್ಲಿ ಇಡುವುದರಿಂದ ಹಾನಿಕಾರಕ ಕೀಟಾಣುಗಳು ಅವುಗಳನ್ನು ತುಂಬಿಕೊಳ್ಳುತ್ತದೆ. ಹಾಗಾದರೆ ಟೂತ್ ಬ್ರಷ್ ಅನ್ನು ಸ್ವಚ್ಛವಾಗಿಡುವುದು ಹೇಗೆ? ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

Health Tips: ಟೂತ್ ಬ್ರಷ್ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಬೇಡಿ!
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 04, 2025 | 2:01 PM

ಪ್ರತಿನಿತ್ಯವೂ ಬ್ರಷ್ (Toothbrush) ಮಾಡುವ ಅಭ್ಯಾಸ ಎಲ್ಲರಿಗೂ ಇದ್ದೇ ಇರುತ್ತದೆ ಆದರೆ ಬ್ರಷ್ ಮಾಡಿದ ನಂತರ ಟೂತ್ ಬ್ರಷ್ ಅನ್ನು ಸ್ನಾನಗೃಹದಲ್ಲಿ ಇಡುವುದು ಕೆಲವರ ರೂಢಿಯಾಗಿರುತ್ತದೆ. ಆದರೆ ಅಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ, ಬ್ಯಾಕ್ಟೀರಿಯಾ (Bacteria), ಶಿಲೀಂಧ್ರಗಳು ಮತ್ತು ಇತರ ಸೂಕ್ಷ್ಮಜೀವಿಗಳು ಬೆಳೆಯುವ ಸಾಧ್ಯತೆ ಹೆಚ್ಚಾಗಿದ್ದು ಪ್ರತಿನಿತ್ಯವೂ ಇದನ್ನು ಬಳಸುವುದರಿಂದ ಬಾಯಿಯಲ್ಲಿ ಹಾನಿಕಾರಕ ಸೂಕ್ಷ್ಮಜೀವಿಗಳು ಉಂಟಾಗಬಹುದು ಮತ್ತು ಅನೇಕ ಸೋಂಕುಗಳಿಗೆ ಕಾರಣವಾಗಬಹುದು. ಅದಲ್ಲದೆ ದಂತವೈದ್ಯರ ಸಲಹೆಯ ಪ್ರಕಾರ, ಟೂತ್ ಬ್ರಷ್ ಅನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಬಾಯಿಯಲ್ಲಿ ಕೀಟಾಣುಗಳು ಬೆಳೆಯುವ ಸಾಧ್ಯತೆ ಹೆಚ್ಚು. ಹಾಗಾದರೆ ಟೂತ್ ಬ್ರಷ್ ಅನ್ನು ಸ್ವಚ್ಛವಾಗಿಡುವುದು ಹೇಗೆ? ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

ಒಂದೇ ಟೂತ್ ಬ್ರಷ್ ಅನ್ನು ಹೆಚ್ಚು ಸಮಯ ಬಳಸಬೇಡಿ;

ತಜ್ಞರು ನೀಡಿದ ಮಾಹಿತಿಯ ಪ್ರಕಾರ, ದೀರ್ಘಕಾಲದ ವರೆಗೆ ಟೂತ್ ಬ್ರಷ್ ಬಳಸುವುದರಿಂದ ಹಲ್ಲುಗಳ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ನೀವು ಬಳಸುವ ಟೂತ್ ಬ್ರಷ್ ಅನ್ನು 3- 4 ತಿಂಗಳಿಗಿಂತ ಹೆಚ್ಚು ಕಾಲ ಬಳಸಬಾರದು. ಅಲ್ಲದೆ, ಇದನ್ನು ಗಾಳಿಯ ಚಲನೆ ಇರುವ ತೇವಾಂಶದ ಸ್ಥಳದಲ್ಲಿ ಇಡಬೇಕು. ಒಂದೇ ಟೂತ್ ಬ್ರಷ್ ಅನ್ನು ದೀರ್ಘಕಾಲದ ವರೆಗೆ ಬಳಸುವುದರಿಂದ ಬಾಯಿಯಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಕಾರಣವಾಗಬಹುದು. ಇದು ಒಸಡು ಸೋಂಕು, ದಂತಕ್ಷಯ ಮತ್ತು ದುರ್ವಾಸನೆಯಂತಹ ಸಮಸ್ಯೆಗಳಿಗೆ ಕಾರಣವಾಗುವುದರ ಜೊತೆಗೆ ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಟೂತ್ ಬ್ರಷ್ ಸ್ವಚ್ಛವಾಗಿಡುವುದು ಹೇಗೆ?

-ಸಾಮಾನ್ಯವಾಗಿ ನಾವು ನಿತ್ಯ ಬಳಕೆ ಮಾಡುವ ಟೂತ್ ಬ್ರಷ್ ಅನ್ನು ಸ್ವಚ್ಛವಾಗಿಡಲು ಕೆಲವು ಪ್ರಮುಖ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಅವುಗಳನ್ನು ಪ್ರತಿದಿನ ನೀರಿನಿಂದ ಚೆನ್ನಾಗಿ ಸ್ವಚ್ಛಗೊಳಿಸಿ ಗಾಳಿಗೆ ಒಣಗಲು ಬಿಡುವುದು ಒಳ್ಳೆಯದು.

ಇದನ್ನೂ ಓದಿ
Image
ಪ್ರೋಟೀನ್ ಹೆಚ್ಚಾದರೆ ಮೂತ್ರಪಿಂಡಕ್ಕೆ ಹಾನಿ
Image
ಕಣ್ಣಿಗೆ ಧೂಳು, ಕಸ ಬಿದ್ದರೆ ಹೀಗೆ ಮಾಡಿ
Image
ಬೇಸಿಗೆಯಲ್ಲಿ ಸ್ನಾನಕ್ಕೆ ಬಿಸಿ ನೀರನ್ನೇ ಆಯ್ಕೆ ಮಾಡಿಕೊಳ್ತೀರಾ?
Image
ನೀವು ಆರೋಗ್ಯವಾಗಿದ್ದೀರಿ ಎಂದು ಬೆಳಗಿನಜಾವದ ಈ ಸೂಚನೆಗಳಿಂದ ತಿಳಿಯಬಹುದು

-ನಿಮ್ಮ ಬ್ರಷ್ ಅನ್ನು ಕುಟುಂಬದ ಇತರ ಸದಸ್ಯರ ಟೂತ್ ಬ್ರಷ್ ಗಳ ಹತ್ತಿರ ಇಡಬಾರದು.

-ವಾರಕ್ಕೆ ಒಮ್ಮೆಯಾದರೂ ಟೂತ್ ಬ್ರಷ್ ಅನ್ನು ಮೌತ್ ವಾಶ್ ನಲ್ಲಿ ಕೆಲವು ನಿಮಿಷಗಳ ಕಾಲ ನೆನೆಸಿ ಸ್ವಚ್ಛಗೊಳಿಸುವುದು ಸೂಕ್ತ.

-ಟೂತ್ ಬ್ರಷ್ ಅನ್ನು ಹೆಚ್ಚಿನ ಆರ್ದ್ರತೆಯ ಪ್ರದೇಶಗಳಲ್ಲಿ ಇರಿಸಿದರೆ, ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆ ಹೆಚ್ಚು.

-ಇನ್ನು ಟೂತ್ ಬ್ರಷ್ ಅನ್ನು ಸ್ವಚ್ಛಗೊಳಿಸಲು ಕೆಲವು ವೈಜ್ಞಾನಿಕ ವಿಧಾನಗಳಿವೆ. ಯುವಿ ಲೈಟ್ ಸ್ಯಾನಿಟೈಸರ್ ಬಳಸುವುದರಿಂದ ಟೂತ್ ಬ್ರಷ್ ನಿಂದ ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ವೈರಸ್ ಗಳನ್ನು ಸಂಪೂರ್ಣವಾಗಿ ತೆಗೆದುಹಾಕಬಹುದು. ಇದು ವೈಜ್ಞಾನಿಕವಾಗಿ ಸಾಬೀತಾಗಿರುವ ಅತ್ಯುತ್ತಮ ಶುಚಿಗೊಳಿಸುವ ವಿಧಾನವಾಗಿದೆ.

-ಟೂತ್ ಬ್ರಷ್ ಅನ್ನು ಕುದಿಸಿದ ನೀರಿನಲ್ಲಿ ಕೆಲವು ನಿಮಿಷಗಳ ಕಾಲ ಇಡುವುದರಿಂದಲೂ ಬ್ಯಾಕ್ಟೀರಿಯಾವನ್ನು ನಾಶಪಡಿಸಲು ಸಹಾಯ ಮಾಡುತ್ತದೆ. ಆದರೆ ಈ ವಿಧಾನವನ್ನು, ಪದೇ ಪದೇ ಮಾಡಬಾರದು.

-ಬೇಕಿಂಗ್ ಸೋಡಾ ಅಥವಾ ಹೈಡ್ರೋಜನ್ ಪೆರಾಕ್ಸೈಡ್ ಬಳಸಿ ಟೂತ್ ಬ್ರಷ್ ಅನ್ನು ಸ್ವಚ್ಛಗೊಳಿಸುವುದು ಕೂಡ ಪರಿಣಾಮಕಾರಿ ಪರಿಹಾರವಾಗಿದೆ.

ಇದನ್ನೂ ಓದಿ: ಸತ್ಯ-ಮಿಥ್ಯ; ಕ್ಯಾರೆಟ್‌ ತಿಂದ್ರೆ ನಿಜಕ್ಕೂ ದೃಷ್ಟಿ ಸುಧಾರಿಸುತ್ತದೆಯೇ?

ಟೂತ್ ಬ್ರಷ್ ಅನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ. ಇದನ್ನು ಸ್ನಾನಗೃಹದಲ್ಲಿ ಇಡುವುದು ಮತ್ತು ಆಗಾಗ ಸ್ವಚ್ಛಗೊಳಿಸದಿರುವುದು ಕೂಡ ಟೂತ್ ಬ್ರಷ್ ನಲ್ಲಿ ಹಾನಿಕಾರಕ ಸೂಕ್ಷ್ಮಜೀವಿಗಳು ಬೆಳೆಯಲು ಕಾರಣವಾಗಬಹುದು. ಆದ್ದರಿಂದ, ಟೂತ್ ಬ್ರಷ್ ಅನ್ನು ಶುಷ್ಕವಾಗಿ ಮತ್ತು ಸ್ವಚ್ಛವಾಗಿಡುವುದು ಮುಂತಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ಬಾಯಿ ಮತ್ತು ಹಲ್ಲುಗಳನ್ನು ಆರೋಗ್ಯಕರವಾಗಿಡಬಹುದು.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ