ಬಿಯರ್ ಕುಡಿಯುವುದರಿಂದ ಕಿಡ್ನಿ ಕಲ್ಲು ಸಮಸ್ಯೆಯಿಂದ ಮುಕ್ತಿ ಹೊಂದಬಹುದೇ? ತಜ್ಞರ ಅಭಿಪ್ರಾಯ ಇಲ್ಲಿದೆ
Kidney Stones and Drinking Beer; ಕಿಡ್ನಿಯಲ್ಲಿ ಕಲ್ಲು ಬರದಂತೆ ತಡೆಯಲು ಸಾಕಷ್ಟು ನೀರು ಕುಡಿಯುವುದೊಂದೇ ದಾರಿ ಎನ್ನುತ್ತಾರೆ ವೈದ್ಯರು. ಹೆಚ್ಚು ಉಪ್ಪು ಮತ್ತು ಟೊಮೆಟೊ ತಿನ್ನುವುದರಿಂದ ಮೂತ್ರಪಿಂಡದ ಕಲ್ಲುಗಳ ರಚನೆಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಲು ಆಲ್ಕೋಹಾಲ್ ಉಪಯುಕ್ತವಾಗಿದೆ ಎಂಬುದರಲ್ಲಿ ಯಾವುದೇ ಸತ್ಯವಿಲ್ಲ ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ.

ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಅನೇಕ ತಪ್ಪುಕಲ್ಪನೆಗಳು, ತಪ್ಪು ಸಂದೇಶಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಜನ ತಮಗೆ ಬೇಕಾದ ಸಲಹೆಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಈ ವಿಷಯಗಳು ನಿಜವೆಂದು ಅನೇಕ ಜನರು ನಂಬುತ್ತಾರೆ. ಇಂತಹ ನಂಬಿಕೆಗಳಲ್ಲಿ, ಬಿಯರ್ (Beer) ಕುಡಿದರೆ ಕಿಡ್ನಿ ಸ್ಟೋನ್ (Kidney Stones) ದೂರವಾಗುತ್ತದೆ ಎಂಬುದೂ ಸೇಡಿದೆ. ಬಿಯರ್ ಕುಡಿಯುವುದರಿಂದ ಮೂತ್ರಪಿಂಡದ ಕಲ್ಲುಗಳನ್ನು ನಿಜವಾಗಿಯೂ ತೆಗೆದುಹಾಕಬಹುದೇ? ಇದು ನಿಜವೇ? ತಜ್ಞರು ಹೇಳುವುದೇನು?
ಇತ್ತೀಚಿಗೆ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದ ಜನರಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ಹೆಚ್ಚುತ್ತಿದೆ. ಸಾಕಷ್ಟು ನೀರು ಕುಡಿಯದಿರುವುದು ಮತ್ತು ಕೆಲವು ಆಹಾರಗಳನ್ನು ತಿನ್ನುವುದು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು. ಆದಾಗ್ಯೂ, ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಲು ಅನೇಕ ವೈದ್ಯಕೀಯ ಪರಿಹಾರಗಳಿವೆ. ಆದರೆ ಬಿಯರ್ ಕುಡಿದರೆ ಕಿಡ್ನಿಯಲ್ಲಿ ಕಲ್ಲು ಹೋಗಬಹುದು ಎಂಬ ನಂಬಿಕೆ ಜನರಲ್ಲಿದೆ. ಮೂತ್ರಪಿಂಡಗಳಲ್ಲಿ ವಿವಿಧ ಪದಾರ್ಥಗಳ ಶೇಖರಣೆಯಿಂದಾಗಿ ಕಲ್ಲುಗಳು ರೂಪುಗೊಳ್ಳುತ್ತವೆ ಎಂಬುದು ನಿಜ. ಹೆಚ್ಚು ನೀರು ಕುಡಿಯದಿರುವುದರಿಂದ ಈ ಸಮಸ್ಯೆ ಉಂಟಾಗುತ್ತದೆ ಎನ್ನುತ್ತಾರೆ ತಜ್ಞರು.
ಬಿಯರ್ ಕುಡಿಯುವುದರಿಂದ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗುತ್ತದೆ ಅಥವಾ ಬಿಯರ್ ಕುಡಿಯುವುದರಿಂದ ಕಿಡ್ನಿ ಕಲ್ಲು ದೂರವಾಗುತ್ತದೆ ಎಂಬ ಎರಡೂ ವಾದಗಳಿಗೆ ಯಾವುದೇ ವೂಜ್ಞಾನಿಕ ಪುರಾವೆಗಳಿಲ್ಲ ಎಂದು ವೈದ್ಯರು ಹೇಳುತ್ತಾರೆ. ಈ ವಿಚಾರವಾಗಿ ದೆಹಲಿಯ ಹಿರಿಯ ವೈದ್ಯ ಡಾ ಕಮಲಜಿತ್ ಸಿಂಗ್ ಕೌಂತ್ ಮಾಹಿತಿ ನೀಡಿದ್ದು, ಕಿಡ್ನಿ ಸ್ಟೋನ್ ಗಾತ್ರ 6 ಮಿಮೀಗಿಂತ ಕಡಿಮೆಯಿದ್ದರೆ ಚೆನ್ನಾಗಿ ನೀರು ಕುಡಿದರೆ ನಿವಾರಣೆಯಾಗುತ್ತದೆ. ಗಾತ್ರವು ಅದಕ್ಕಿಂತ ಹೆಚ್ಚಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಲು ಸೂಚಿಸಲಾಗುತ್ತದೆ. ಆದಾಗ್ಯೂ, ಬಿಯರ್ ಕುಡಿಯುವುದರಿಂದ ದೇಹಕ್ಕೆ ಹೆಚ್ಚು ದ್ರವಾಂಶ ದೊರೆಯುತ್ತದೆ. ಆದರೆ, ಬಿಯರ್ ಕುಡಿಯುವುದರಿಂದ ಮೂತ್ರದಿಂದ ಕಲ್ಲುಗಳು ಹೊರಬರುತ್ತವೆ ಎಂಬುದು ತಪ್ಪುಕಲ್ಪನೆಯಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಕಿಡ್ನಿ ಸ್ಟೋನ್ ಅಥವಾ ಮೂತ್ರಪಿಂಡದ ಕಲ್ಲುಗಳು: ಕಾರಣ ಮತ್ತು ಪರಿಹಾರಗಳು ಇಲ್ಲಿವೆ
ಬಿಯರ್ ಕುಡಿದರೆ ಕಿಡ್ನಿ ಸ್ಟೋನ್ ಹೋಗಲಾಡಿಸಬಹುದು ಎಂಬುದು ದೊಡ್ಡ ತಪ್ಪು ತಿಳುವಳಿಕೆ ಎನ್ನುತ್ತಾರೆ ವೈದ್ಯರು. ಬಿಯರ್ ಅಥವಾ ಕ್ಷಾರವು ಮೂತ್ರದ ಉತ್ಪಾದನೆಯನ್ನು ಹೆಚ್ಚಿಸಬಹುದಷ್ಟೆ. ಆದರೆ ಕಲ್ಲುಗಳನ್ನು ಹೊರಹಾಕುತ್ತವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆಲ್ಕೋಹಾಲ್ ಕಿಡ್ನಿ ಹಾಗೂ ಯಕೃತ್ನ ಆರೋಗ್ಯವನ್ನು ಹಾಳು ಮಾಡುತ್ತದೆ ಎನ್ನುತ್ತಾರೆ ತಜ್ಞರು.
ಕಿಡ್ನಿಯಲ್ಲಿ ಕಲ್ಲು ಬರದಂತೆ ತಡೆಯಲು ಸಾಕಷ್ಟು ನೀರು ಕುಡಿಯುವುದೊಂದೇ ದಾರಿ ಎನ್ನುತ್ತಾರೆ ವೈದ್ಯರು. ಹೆಚ್ಚು ಉಪ್ಪು ಮತ್ತು ಟೊಮೆಟೊ ತಿನ್ನುವುದರಿಂದ ಮೂತ್ರಪಿಂಡದ ಕಲ್ಲುಗಳ ರಚನೆಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಲು ಆಲ್ಕೋಹಾಲ್ ಉಪಯುಕ್ತವಾಗಿದೆ ಎಂಬುದರಲ್ಲಿ ಯಾವುದೇ ಸತ್ಯವಿಲ್ಲ ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ.