AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ ಊಟ ಬಿಟ್ಟು ಮಲಗುವ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ಈ ಆರೋಗ್ಯ ಸಮಸ್ಯೆಗಳು ಬರುತ್ತೆ ಹುಷಾರ್!

ತೂಕ ಇಳಿಸಿಕೊಳ್ಳಲು ಕೆಲವರು ರಾತ್ರಿ ಊಟ ಮಾಡದೆಯೇ ಮಲಗುತ್ತಾರೆ. ಈ ಅಭ್ಯಾಸ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ. ಹೌದು, ಇದು ನಿಮ್ಮ ಚಯಾಪಚಯ ಕ್ರಿಯೆಯನ್ನು ಹಾಳು ಮಾಡುವುದರಿಂದ ಹಿಡಿದು ನಿದ್ರೆಯನ್ನು ಹಾಳು ಮಾಡುವ ವರೆಗೆ ಹಲವಾರು ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು, ಯಾವ ಅಭ್ಯಾಸ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು.

ರಾತ್ರಿ ಊಟ ಬಿಟ್ಟು ಮಲಗುವ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ಈ ಆರೋಗ್ಯ ಸಮಸ್ಯೆಗಳು ಬರುತ್ತೆ ಹುಷಾರ್!
Skipping DinnerImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jun 15, 2026 | 8:16 PM

Share

ಇತ್ತೀಚಿನ ದಿನಗಳಲ್ಲಿ ಹಲವರು ತೂಕ ಇಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಅಥವಾ ಕೆಲಸದ ಒತ್ತಡ, ದಣಿವಿನ ಕಾರಣದಿಂದ ರಾತ್ರಿ ಊಟ (Dinner) ಮಾಡದೇ ಮಲಗುತ್ತಾರೆ. ಕೆಲವರಿಗೆ ಇದು ಆರೋಗ್ಯಕರ ಕ್ರಮವೆಂದು ಅನಿಸಿದರೂ, ಆರೋಗ್ಯ ತಜ್ಞರ ಅಭಿಪ್ರಾಯ ವಿಭಿನ್ನವಾಗಿದೆ. ಹೌದು ರಾತ್ರಿ ಹೊತ್ತು ಖಾಲಿ ಹೊಟ್ಟೆಯಲ್ಲಿ ಮಲಗುವುದರಿಂದ ದೇಹದ ಮೇಲೆ ಕೆಟ್ಟ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ವೈದ್ಯರು ಎಚ್ಚರಿಸುತ್ತಾರೆ. ಹಾಗಾದರೆ ನಮಗೆ ಒಳ್ಳೆಯದು ಎಂದು ಅನಿಸುವ ಈ ಅಭ್ಯಾಸದಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು, ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಲು ಯಾವ ರೀತಿಯ ಆಹಾರ ಸೇವನೆ ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಎಸಿಡಿಟಿ ಮತ್ತು ಹೊಟ್ಟೆ ಉರಿ ಸಮಸ್ಯೆ

ಹೆಚ್ಚು ಸಮಯ ಹೊಟ್ಟೆ ಖಾಲಿಯಾಗಿ ಉಳಿದರೆ ಗ್ಯಾಸ್ಟ್ರಿಕ್ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ. ವಿಶೇಷವಾಗಿ ಎಸಿಡಿಟಿ, ಎದೆ ಉರಿ, ಹೊಟ್ಟೆ ಉರಿ ಹಾಗೂ ಗ್ಯಾಸ್ಟ್ರೈಟಿಸ್ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೆಲವರಿಗೆ ಬೆಳಿಗ್ಗೆ ಎದ್ದ ಕೂಡಲೇ ತಲೆನೋವು, ವಾಕರಿಕೆ, ಬಲಹೀನತೆ ಅನುಭವವಾಗಬಹುದು.

ನಿದ್ರೆಯ ಸರಿಯಾಗಿ ಬರದಿರಬಹುದು

ಹೊಟ್ಟೆ ಹಸಿದಿರುವಾಗ ಹೋಗಿ ಮಲಗುವುದರಿಂದ ಗಾಢ ನಿದ್ರೆ ಬರದೇ ಇರಬಹುದು. ಮಧ್ಯರಾತ್ರಿ ಪದೇಪದೇ ಎಚ್ಚರವಾಗುವುದು, ಹಸಿವಾಗಬಹುದು ಮತ್ತು ಬೆಳಿಗ್ಗೆ ಎದ್ದೇಳುವಾಗ ಸಾಮಾನ್ಯವಾಗಿ ದೇಹ ದಣಿದಿರಬಹುದು. ಹಾಗಾಗಿ ಚೆನ್ನಾಗಿ ನಿದ್ರೆ ಬರಲು ರಾತ್ರಿ ಸ್ವಲ್ಪ ಮಟ್ಟಿಗಾದರೂ ಆಹಾರ ಸೇವನೆ ಮಾಡುವುದು ಅಗತ್ಯವೆಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ಆರೋಗ್ಯ ಚೆನ್ನಾಗಿರಬೇಕಂದ್ರೆ, ರಾತ್ರಿ ಈ ನಿಗದಿತ ಸಮಯದೊಳಗೆ ಊಟ ಮಾಡುವುದು ಸೂಕ್ತವಂತೆ

ಪೌಷ್ಟಿಕಾಂಶ ಕೊರತೆ ಅಪಾಯ

ರಾತ್ರಿ ಊಟವನ್ನು ನಿರಂತರವಾಗಿ ಬಿಡುವುದರಿಂದ ದೇಹಕ್ಕೆ ಅಗತ್ಯವಾದ ಪ್ರೋಟೀನ್, ವಿಟಮಿನ್ ಹಾಗೂ ಖನಿಜಾಂಶಗಳು ಸರಿಯಾದ ಪ್ರಮಾಣದಲ್ಲಿ ದೊರೆಯದೇ ಹೋಗಬಹುದು. ಇದರ ಪರಿಣಾಮವಾಗಿ ಸ್ನಾಯು ಬಲಹೀನತೆ, ರೋಗನಿರೋಧಕ ಶಕ್ತಿ ಕುಸಿತ ಮತ್ತು ಸದಾ ದಣಿವು ಕಾಣಿಸಿಕೊಳ್ಳಬಹುದು.

ಮೆಟಾಬಾಲಿಸಂ ಮೇಲೆ ಪರಿಣಾಮ ಬೀರಬಹುದು

ನಿರಂತರವಾಗಿ ಊಟ ಬಿಟ್ಟರೆ ದೇಹದ ಮೆಟಾಬಾಲಿಸಂ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇನ್ಸುಲಿನ್ ಮಟ್ಟದಲ್ಲಿ ಅಸಮತೋಲನ ಉಂಟಾಗಿ ಹಾರ್ಮೋನ್ ಕಾರ್ಯವೈಖರಿಗೂ ತೊಂದರೆ ಉಂಟಾಗಬಹುದು. ದೀರ್ಘಕಾಲದಲ್ಲಿ ಇದು ಮಧುಮೇಹ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ.

ರಾತ್ರಿ ಏನು ತಿನ್ನಬಹುದು?

ಖಾಲಿ ಹೊಟ್ಟೆಯಲ್ಲಿ ಮಲಗುವ ಬದಲು ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸುವುದು ಉತ್ತಮ. ತರಕಾರಿ ಸೂಪ್, ಓಟ್ಸ್, ಹಣ್ಣುಗಳು, ಮೊಸರು, ಚಪಾತಿ ಅಥವಾ ಗಂಜಿ ಸೇವಿಸಿದರೆ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ದೊರೆಯುತ್ತದೆ. ತೂಕ ಇಳಿಸಿಕೊಳ್ಳಲು ಊಟವನ್ನು ಸಂಪೂರ್ಣ ಬಿಡುವುದು ಸರಿಯಾದ ಮಾರ್ಗವಲ್ಲ. ಮಲಗುವ ಮೊದಲು ಎರಡು ಅಥವಾ ಮೂರು ಗಂಟೆಗಳ ಹಿಂದೆಯೇ ಹಗುರ ಹಾಗೂ ಸಮತೋಲನ ಆಹಾರ ಸೇವಿಸಬೇಕು. ಜೊತೆಗೆ ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಜೀವನಶೈಲಿ ಅನುಸರಿಸುವುದು ದೀರ್ಘಕಾಲದ ಆರೋಗ್ಯಕ್ಕೆ ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ
ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್
ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು!
ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು!
ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ
ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್
"ಕಳೆದ 2 ವರ್ಷಗಳಲ್ಲಿ 3000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ"
ಕಾವೇರಿ ಸಂಧಾನ ಸೂತ್ರಕ್ಕೆ‌ ದಿನಾಂಕ ಫಿಕ್ಸ್, ಆ.3ರಂದು ಸಿಎಂಗಳ ಸಭೆ ನಿಗದಿ
ಕಾವೇರಿ ಸಂಧಾನ ಸೂತ್ರಕ್ಕೆ‌ ದಿನಾಂಕ ಫಿಕ್ಸ್, ಆ.3ರಂದು ಸಿಎಂಗಳ ಸಭೆ ನಿಗದಿ
ಕೆ.ಆರ್.ಪೇಟೆ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಹೈಡ್ರಾಮಾ!
ಕೆ.ಆರ್.ಪೇಟೆ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಹೈಡ್ರಾಮಾ!
ಪಶುವೈದ್ಯರ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: CID ತನಿಖೆಗೆ ಆದೇಶ
ಪಶುವೈದ್ಯರ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: CID ತನಿಖೆಗೆ ಆದೇಶ