ಕೆಲಸದ ಒತ್ತಡದಿಂದ ಫರ್ಟಿಲಿಟಿ ಕುಗ್ಗುತ್ತಿದೆಯೇ? ತಜ್ಞರು ಹೇಳಿರುವ ಮಹತ್ವದ ಮಾಹಿತಿ ಇಲ್ಲಿದೆ

ಇಂದಿನ ವೇಗದ ಜೀವನಶೈಲಿ ಮತ್ತು ಉದ್ಯೋಗದ ಒತ್ತಡ, ಬಿಡುವಿಲ್ಲದ ದಿನಚರಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಅದರಲ್ಲಿಯೂ ಹೆಚ್ಚು ಕೆಲಸ ಮಾಡುವ ವ್ಯಕ್ತಿಗಳು ಬಂಜೆತನಕ್ಕೆ ಬಲಿಯಾಗುತ್ತಿದ್ದಾರೆ ಎಂದು ನಿಮಗೆ ತಿಳಿದಿದೆಯೇ? ಹೌದು, ದೀರ್ಘಕಾಲದ ಮಾನಸಿಕ ಒತ್ತಡ ಗರ್ಭಧಾರಣೆಗೆ ತೊಂದರೆ ಉಂಟುಮಾಡಬಹುದು. ಹಾಗಾದರೆ ಕೆಲಸದ ಒತ್ತಡ ಫರ್ಟಿಲಿಟಿ ಮೇಲೆ ಪರಿಣಾಮ ಬೀರುತ್ತದೆಯೇ, ಸಂತಾನೋತ್ಪತ್ತಿ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕೆಲಸದ ಒತ್ತಡದಿಂದ ಫರ್ಟಿಲಿಟಿ ಕುಗ್ಗುತ್ತಿದೆಯೇ? ತಜ್ಞರು ಹೇಳಿರುವ ಮಹತ್ವದ ಮಾಹಿತಿ ಇಲ್ಲಿದೆ
Corporate Culture And Infertility
Image Credit source: Getty images

Updated on: Jun 30, 2026 | 9:38 PM

ಮುಖ್ಯಾಂಶಗಳು

  • ಕಾರ್ಪೊರೇಟ್ ಉದ್ಯೋಗದಿಂದ ಹೆಚ್ಚುತ್ತಿದೆಯೇ ಸಂತಾನೋತ್ಪತ್ತಿ ಸಮಸ್ಯೆ?
  • ಉದ್ಯೋಗದ ಒತ್ತಡದಿಂದ ಗರ್ಭಧಾರಣೆಗೆ ತೊಂದರೆಯಾಗುತ್ತಿದೆಯೇ?
  • ಸಂತಾನೋತ್ಪತ್ತಿ ಆರೋಗ್ಯ ಕಾಪಾಡಿಕೊಳ್ಳಲು ಸಿಂಪಲ್ ಸಲಹೆಗಳು

ಇಂದಿನ ವೇಗದ ಜೀವನಶೈಲಿ ಮತ್ತು ಉದ್ಯೋಗದ ಒತ್ತಡದಿಂದ ಕುಟುಂಬ ಯೋಜನೆಯನ್ನು ಮುಂದೂಡುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಮಹಿಳೆಯರು ಮತ್ತು ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ (Fertility) ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ. ದೀರ್ಘಕಾಲದ ಮಾನಸಿಕ ಒತ್ತಡ (Stress), ಅನಾರೋಗ್ಯಕರ ಜೀವನಶೈಲಿ ಮತ್ತು ತಡವಾಗಿ ಮಕ್ಕಳ ಯೋಜನೆ ಮಾಡುವುದರಿಂದ ಗರ್ಭಧಾರಣೆಯಲ್ಲಿ ತೊಂದರೆ ಉಂಟಾಗಬಹುದು. ಹಾಗಾದರೆ ಕೆಲಸದ ಒತ್ತಡ ಫರ್ಟಿಲಿಟಿ ಮೇಲೆ ಪರಿಣಾಮ ಬೀರುತ್ತದೆಯೇ, ಇನ್ನು ಯಾವ ಅಭ್ಯಾಸಗಳು ಅಪಾಯ ಹೆಚ್ಚಿಸುತ್ತವೆ ಮತ್ತು ಸಂತಾನೋತ್ಪತ್ತಿ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಉದ್ಯೋಗದ ಒತ್ತಡ ಹೇಗೆ ಪರಿಣಾಮ ಬೀರುತ್ತದೆ?

ದಿನವಿಡೀ ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವುದರಿಂದ ದೇಹದ ಚಲನೆ ಕಡಿಮೆಯಾಗುತ್ತದೆ. ಇದರಿಂದ ಶ್ರೋಣಿ ಭಾಗದಲ್ಲಿ (Pelvic Area) ರಕ್ತಸಂಚಾರ ಕುಂಠಿತವಾಗಿ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಜೊತೆಗೆ, ರಾತ್ರಿ ತಡವರೆಗೂ ಮೊಬೈಲ್ ಅಥವಾ ಕಂಪ್ಯೂಟರ್ ಬಳಸುವುದರಿಂದ ನಿದ್ರೆ ಹಾಳಾಗಿ ಮೆಲಟೊನಿನ್ ಹಾರ್ಮೋನ್ ಉತ್ಪಾದನೆ ಕಡಿಮೆಯಾಗಬಹುದು.

ಇದನ್ನೂ ಓದಿ: ಒತ್ತಡದಿಂದ ಬಳಲುತ್ತಿದ್ದೀರಾ? ಈ ಸರಳ ಅಭ್ಯಾಸಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ

ಇನ್ನು ಯಾವ ಅಭ್ಯಾಸಗಳು ಅಪಾಯ ಹೆಚ್ಚಿಸುತ್ತವೆ?

ಅತಿಯಾಗಿ ಕಾಫಿ ಸೇವಿಸುವುದು, ನಿರಂತರ ಒತ್ತಡ, 30 ವರ್ಷಗಳ ನಂತರ ಗರ್ಭಧಾರಣೆಯ ಯೋಜನೆ ಮಾಡುವುದು ಮತ್ತು ಹಾನಿಕಾರಕ ರಾಸಾಯನಿಕಗಳ ಸಂಪರ್ಕವೂ ಫಲವತ್ತತೆಯ ಮೇಲೆ ಪರಿಣಾಮ ಬೀರುವ ಅಂಶಗಳಾಗಿವೆ. ದೀರ್ಘಕಾಲದ ಒತ್ತಡದಿಂದ ಕಾರ್ಟಿಸೋಲ್ ಹಾರ್ಮೋನ್ ಹೆಚ್ಚಾಗಿ ಮಹಿಳೆಯರಲ್ಲಿ ಅಂಡೋತ್ಸರ್ಗದ (Ovulation) ಪ್ರಕ್ರಿಯೆಗೆ ಅಡ್ಡಿಯಾಗಬಹುದು.

ಸಂತಾನೋತ್ಪತ್ತಿ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು?

ನಿಯಮಿತ ವ್ಯಾಯಾಮ, ಸಮತೋಲನ ಆಹಾರ, ಸಾಕಷ್ಟು ನಿದ್ರೆ ಮತ್ತು ಒತ್ತಡ ನಿಯಂತ್ರಣಕ್ಕೆ ಯೋಗ ಅಥವಾ ಧ್ಯಾನವನ್ನು ರೂಢಿಸಿಕೊಳ್ಳುವುದು ಉತ್ತಮ. ಕುಟುಂಬ ಯೋಜನೆ ಇದ್ದರೆ ತಡ ಮಾಡದೇ ವೈದ್ಯರ ಸಲಹೆ ಪಡೆಯುವುದು ಒಳಿತು. ಕೆಲಸದ ಸ್ಥಳದಲ್ಲಿ ರಾಸಾಯನಿಕಗಳ ಸಂಪರ್ಕವಿದ್ದರೆ ಸುರಕ್ಷತಾ ಸಾಧನಗಳನ್ನು ಬಳಸಬೇಕು. ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದರಿಂದ ಫಲವತ್ತತೆಯನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us