AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒತ್ತಡದಿಂದ ಬಳಲುತ್ತಿದ್ದೀರಾ? ಈ ಸರಳ ಅಭ್ಯಾಸಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ

ಇತ್ತೀಚಿನ ದಿನಗಳಲ್ಲಿ ಅನೇಕರು ಒತ್ತಡದಿಂದ ಬಳಲುತ್ತಿದ್ದಾರೆ. ನಿರಂತರ ಒತ್ತಡವು ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದೀರ್ಘಕಾಲ ಒತ್ತಡ ಮುಂದುವರಿದರೆ ಅದು ಮಾನಸಿಕ ಆರೋಗ್ಯದ ಜೊತೆಗೆ ದೈಹಿಕ ಆರೋಗ್ಯಕ್ಕೂ ಹಾನಿ ಉಂಟುಮಾಡಬಹುದು. ಆದ್ದರಿಂದ ಒತ್ತಡವನ್ನು ಸಮಯಕ್ಕೆ ಗುರುತಿಸಿ ನಿಯಂತ್ರಿಸುವುದು ಅಗತ್ಯ. ಹಾಗಾದರೆ ಒತ್ತಡ ಕಡಿಮೆ ಮಾಡಲು ಯಾವ ರೀತಿಯ ಅಭ್ಯಾಸ ರೂಢಿಸಿಕೊಳ್ಳಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ

ಒತ್ತಡದಿಂದ ಬಳಲುತ್ತಿದ್ದೀರಾ? ಈ ಸರಳ ಅಭ್ಯಾಸಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ
How To Manage Stress NaturallyImage Credit source: Getty images
ಪ್ರೀತಿ ಭಟ್​, ಗುಣವಂತೆ
|

Updated on: Jun 28, 2026 | 7:40 PM

Share

ಮುಖ್ಯಾಂಶಗಳು

  • ಒತ್ತಡವನ್ನು ನಿಯಂತ್ರಿಸಲು ಸುಲಭ ಮತ್ತು ಪರಿಣಾಮಕಾರಿ ಸಲಹೆಗಳು
  • ಒತ್ತಡದಿಂದ ಮುಕ್ತಿ ಪಡೆಯಲು ಜೀವನಶೈಲಿಯಲ್ಲಿ ಮಾಡಬೇಕಾದ ಬದಲಾವಣೆಗಳು
  • ಮಾನಸಿಕ ನೆಮ್ಮದಿಗೆ ಈ ಉತ್ತಮ ಅಭ್ಯಾಸಗಳನ್ನು ಪಾಲಿಸಿ

ಇಂದಿನ ವೇಗದ ಜೀವನಶೈಲಿಯಲ್ಲಿ ಮಾನಸಿಕ ಒತ್ತಡ (Stressed) ಸಾಮಾನ್ಯ ಸಮಸ್ಯೆಯಾಗಿದೆ. ಕೆಲಸದ ಒತ್ತಡ, ಕುಟುಂಬದ ಜವಾಬ್ದಾರಿಗಳು, ಆರ್ಥಿಕ ಚಿಂತೆ ಹಾಗೂ ಬದಲಾಗುತ್ತಿರುವ ಜೀವನಶೈಲಿ ಒತ್ತಡವನ್ನು ಹೆಚ್ಚಿಸಬಹುದು. ದೀರ್ಘಕಾಲ ಒತ್ತಡ ಮುಂದುವರಿದರೆ ಅದು ಮಾನಸಿಕ ಆರೋಗ್ಯದ ಜೊತೆಗೆ ದೈಹಿಕ ಆರೋಗ್ಯಕ್ಕೂ ಹಾನಿ ಉಂಟುಮಾಡಬಹುದು. ಆದ್ದರಿಂದ ಒತ್ತಡವನ್ನು ಸಮಯಕ್ಕೆ ಗುರುತಿಸಿ ನಿಯಂತ್ರಿಸುವುದು ಅಗತ್ಯ. ಹಾಗಾದರೆ ಒತ್ತಡ ಕಡಿಮೆ ಮಾಡಲು ಯಾವ ರೀತಿಯ ಅಭ್ಯಾಸ ರೂಢಿಸಿಕೊಳ್ಳಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ

ಒತ್ತಡ ಕಡಿಮೆ ಮಾಡಲು ಉತ್ತಮ ಅಭ್ಯಾಸಗಳು

ಪ್ರತಿದಿನ ನಿಗದಿತ ಸಮಯಕ್ಕೆ ಮಲಗಿ, ಸರಿಯಾಗಿ ನಿದ್ರೆ ಮಾಡುವುದು ಮತ್ತು ದಿನಚರಿಯನ್ನು ಸಮತೋಲನದಿಂದ ನಿರ್ವಹಿಸುವುದು ಮನಸ್ಸಿಗೆ ಶಾಂತಿ ನೀಡುತ್ತದೆ. ಕುಟುಂಬದವರೊಂದಿಗೆ ಸಮಯ ಕಳೆಯುವುದು, ಇಷ್ಟದ ಹವ್ಯಾಸಗಳಲ್ಲಿ ತೊಡಗುವುದು, ಪುಸ್ತಕ ಓದುವುದು, ಸಂಗೀತ ಕೇಳುವುದು ಅಥವಾ ಸ್ವಲ್ಪ ಸಮಯ ನಿಮಗೆ ಖುಷಿ ನೀಡುವ ಕೆಲಸದಲ್ಲಿ ಸಮಯ ಕಳೆಯುವುದು ಒತ್ತಡವನ್ನು ಕಡಿಮೆ ಮಾಡಲು ಸಹಾಯಕ.

ಇದನ್ನೂ ಓದಿ: ಫುಡ್ ಪಾಯ್ಸನಿಂಗ್‌ ಆಗದಂತೆ ತಡೆಯಲು ಉಳಿದ ಆಹಾರವನ್ನು ಈ ರೀತಿ ಸಂಗ್ರಹಿಸಿಡಿ!

ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ನಿರಂತರ ದುಃಖ, ಕಿರಿಕಿರಿ, ಅತಿಯಾದ ಆತಂಕ, ನಿದ್ರಾಹೀನತೆ, ದಣಿವು, ಯಾವುದೇ ಕೆಲಸದಲ್ಲಿ ಆಸಕ್ತಿ ಇಲ್ಲದಿರುವುದು, ಹಸಿವಿನ ಬದಲಾವಣೆ, ಏಕಾಗ್ರತೆ ಕೊರತೆ ಅಥವಾ ಪದೇಪದೇ ತಲೆನೋವು ಕಂಡುಬಂದರೆ ಅದನ್ನು ನಿರ್ಲಕ್ಷಿಸಬೇಡಿ. ಈ ಲಕ್ಷಣಗಳು ದೀರ್ಘಕಾಲ ಮುಂದುವರಿದರೆ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸುವುದು ಉತ್ತಮ.

ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ಪ್ರತಿದಿನ ಸಮತೋಲಿತ ಆಹಾರ ಸೇವಿಸಿ, ನಿಯಮಿತವಾಗಿ ವ್ಯಾಯಾಮ ಮಾಡಿ. ಯೋಗ, ಧ್ಯಾನ ಹಾಗೂ ಆಳವಾದ ಉಸಿರಾಟದ ವ್ಯಾಯಾಮ ಮನಸ್ಸನ್ನು ಶಾಂತಗೊಳಿಸಲು ಸಹಕಾರಿ. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಮಿತಿಗೊಳಿಸಿ. ನಿಮ್ಮ ಭಾವನೆಗಳನ್ನು ನಂಬಿಕಸ್ತ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಿ. ಒತ್ತಡ ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತಿದ್ದರೆ ತಡಮಾಡದೆ ತಜ್ಞರ ಸಲಹೆ ಪಡೆಯಿರಿ. ಉತ್ತಮ ಜೀವನಶೈಲಿ ಮತ್ತು ಆರೋಗ್ಯಕರ ಅಭ್ಯಾಸಗಳು ಮಾನಸಿಕ ಆರೋಗ್ಯವನ್ನು ಕಾಪಾಡಲು ಪ್ರಮುಖ ಪಾತ್ರ ವಹಿಸುತ್ತವೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಕೆವಿಎನ್ ವಿರುದ್ಧ ‘ಬಲರಾಮನ ದಿನಗಳು’ ಸಿನಿಮಾ ನಿರ್ಮಾಪಕ ದೂರು: ವಿಡಿಯೋ
ಕೆವಿಎನ್ ವಿರುದ್ಧ ‘ಬಲರಾಮನ ದಿನಗಳು’ ಸಿನಿಮಾ ನಿರ್ಮಾಪಕ ದೂರು: ವಿಡಿಯೋ
ಬಿಜೆಪಿ ಉಸ್ತುವಾರಿಗಳ ಬದಲಾವಣೆ: ಹರೀಶ್ ದ್ವಿವೇದಿಗೆ ಕರ್ನಾಟಕ ಜವಾಬ್ದಾರಿ
ಬಿಜೆಪಿ ಉಸ್ತುವಾರಿಗಳ ಬದಲಾವಣೆ: ಹರೀಶ್ ದ್ವಿವೇದಿಗೆ ಕರ್ನಾಟಕ ಜವಾಬ್ದಾರಿ
ಬೀದರ್‌ನಲ್ಲಿ ವಿದ್ಯುತ್ ನೀಡಲು ಕಣ್ಣಾಮುಚ್ಚಾಲೆ
ಬೀದರ್‌ನಲ್ಲಿ ವಿದ್ಯುತ್ ನೀಡಲು ಕಣ್ಣಾಮುಚ್ಚಾಲೆ
ಕಾಂಗ್ರೆಸ್ ಶಾಸಕರ ನಡುವೆ ಗಲಾಟೆ: ಕಣ್ಣೀರಿಡುತ್ತಲೇ ಹೊರಹೋದ ಶಾಸಕಿ ರೂಪಕಲಾ!
ಕಾಂಗ್ರೆಸ್ ಶಾಸಕರ ನಡುವೆ ಗಲಾಟೆ: ಕಣ್ಣೀರಿಡುತ್ತಲೇ ಹೊರಹೋದ ಶಾಸಕಿ ರೂಪಕಲಾ!
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ಯಶವಂತರಾಯಗೌಡ ಖಡಕ್ ಮಾತು
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ಯಶವಂತರಾಯಗೌಡ ಖಡಕ್ ಮಾತು
‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ವಿರುದ್ಧ ದೂರು: ಅಸಲಿ ವಿಷಯ ಇಲ್ಲಿದೆ
‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ವಿರುದ್ಧ ದೂರು: ಅಸಲಿ ವಿಷಯ ಇಲ್ಲಿದೆ
ಯಶಸ್ ಕೈಯಿಂದ ಗುಲಾಬಿ ಪಡೆದ ಸೌಂದರ್ಯಾ: ವಿಡಿಯೋ ನೋಡಿ
ಯಶಸ್ ಕೈಯಿಂದ ಗುಲಾಬಿ ಪಡೆದ ಸೌಂದರ್ಯಾ: ವಿಡಿಯೋ ನೋಡಿ
ರಾಷ್ಟ್ರೀಯ ಹೆದ್ದಾರಿ ಒತ್ತುವರಿ ತೆರವು ಕಾರ್ಯಾಚರಣೆ
ರಾಷ್ಟ್ರೀಯ ಹೆದ್ದಾರಿ ಒತ್ತುವರಿ ತೆರವು ಕಾರ್ಯಾಚರಣೆ
ಗದಗ: ದಶಕಗಳು ಕಳೆದರೂ ರೈತರಿಗೆ ಸಿಗದ ಪರಿಹಾರ; ಡಿಸಿ, ಎಡಿಸಿ ಕಾರು ಜಪ್ತಿ
ಗದಗ: ದಶಕಗಳು ಕಳೆದರೂ ರೈತರಿಗೆ ಸಿಗದ ಪರಿಹಾರ; ಡಿಸಿ, ಎಡಿಸಿ ಕಾರು ಜಪ್ತಿ
ಗೌರವಯುತವಾಗಿ ನೋಡಿ ಅಂದಿದ್ದು, ದುಡ್ಡು ಕೊಡಿ ಎಂದಿಲ್ಲ: ಸಚಿವ ಶಿವಲಿಂಗೇಗೌಡ
ಗೌರವಯುತವಾಗಿ ನೋಡಿ ಅಂದಿದ್ದು, ದುಡ್ಡು ಕೊಡಿ ಎಂದಿಲ್ಲ: ಸಚಿವ ಶಿವಲಿಂಗೇಗೌಡ