ಫುಡ್ ಪಾಯ್ಸನಿಂಗ್ ಆಗದಂತೆ ತಡೆಯಲು ಉಳಿದ ಆಹಾರವನ್ನು ಈ ರೀತಿ ಸಂಗ್ರಹಿಸಿಡಿ!
ಉಳಿದ ಆಹಾರವನ್ನು ಸರಿಯಾದ ಸಮಯದಲ್ಲಿ, ಸರಿಯಾದ ವಿಧಾನದಲ್ಲಿ ಸಂಗ್ರಹಿಸಿದರೆ ಆಹಾರ ವ್ಯರ್ಥವಾಗುವುದನ್ನು ತಡೆಯಬಹುದು ಮತ್ತು ಆರೋಗ್ಯವನ್ನೂ ಕಾಪಾಡಬಹುದು. ಆಹಾರದ ಸುರಕ್ಷತೆಗೆ ಸ್ವಚ್ಛತೆ, ಸರಿಯಾದ ತಾಪಮಾನ ಮತ್ತು ಮಿತ ಅವಧಿಯ ಸಂಗ್ರಹಣೆ ಅತ್ಯಗತ್ಯ. ಜೊತೆಗೆ ಫುಡ್ ಪಾಯ್ಸನಿಂಗ್‌ನಿಂದ ಮುಕ್ತಿ ಪಡೆಯಬಹುದು. ಹಾಗಾದರೆ ಉಳಿದ ಆಹಾರವನ್ನು ಯಾವ ರೀತಿ ಇಡಬೇಕು, ಯಾವಾಗ ಉಳಿದ ಆಹಾರ ತಿನ್ನಬಾರದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮುಖ್ಯಾಂಶಗಳು
- ಉಳಿದ ಆಹಾರ ಹಾಳಾಗದಂತೆ ಇಡುವ ಸರಿಯಾದ ವಿಧಾನಗಳು
- ಫ್ರಿಜ್‌ನಲ್ಲಿ ಬೇಯಿಸಿದ ಆಹಾರವನ್ನು ಎಷ್ಟು ದಿನ ಇಡಬಹುದು?
- ಫ್ರಿಜ್‌ನಲ್ಲಿ ಆಹಾರ ಸಂಗ್ರಹಿಸುವಾಗ ಗಮನಿಸಬೇಕಾದ ವಿಷಯಗಳು
ಮನೆಯಲ್ಲಿ ಆಹಾರ (Food) ಉಳಿಯುವುದು ಸಾಮಾನ್ಯ. ಪ್ರತಿದಿನ ಮಾಡಿ ಮಾಡಿ ಬಿಸಾಡುವುದಕ್ಕಿಂತ ಅದನ್ನು ಸರಿಯಾಗಿ ಸಂಗ್ರಹಿಸಿ ಸೇವನೆ ಮಾಡುವುದು ಬಹಳ ಉತ್ತಮ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸದಿದ್ದರೆ ಬೇಗ ಹಾಳಾಗುವ ಸಾಧ್ಯತೆ ಇರುತ್ತದೆ. ಇದರಿಂದ ಬ್ಯಾಕ್ಟೀರಿಯಾ ಬೆಳೆಯುವ ಅಪಾಯ ಹೆಚ್ಚಾಗಿ, ಆಹಾರದ ಗುಣಮಟ್ಟ ಮತ್ತು ರುಚಿಯೂ ಹಾಳಾಗಬಹುದು. ಆದ್ದರಿಂದ ಉಳಿದ ಆಹಾರವನ್ನು ಸುರಕ್ಷಿತವಾಗಿ ಸಂಗ್ರಹಿಸುವುದು ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ. ಜೊತೆಗೆ ಫುಡ್ ಪಾಯ್ಸನಿಂಗ್‌ನಿಂದ ಮುಕ್ತಿ ಪಡೆಯಬಹುದು. ಹಾಗಾದರೆ ಉಳಿದ ಆಹಾರವನ್ನು (Leftover Food) ಯಾವ ರೀತಿ ಇಡಬೇಕು, ಯಾವಾಗ ಉಳಿದ ಆಹಾರ ತಿನ್ನಬಾರದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಉಳಿದ ಆಹಾರವನ್ನು ಹೇಗೆ ಸಂಗ್ರಹಿಸಿಡಬೇಕು?
ಆಹಾರ ಸಂಪೂರ್ಣ ತಣ್ಣಗಾದ ಬಳಿಕ ಸ್ವಚ್ಛವಾದ, ಗಾಳಿಯಾಡದ (ಏರ್‌ಟೈಟ್) ಡಬ್ಬಿಯಲ್ಲಿ ಹಾಕಿ ಫ್ರಿಜ್‌ನಲ್ಲಿ ಇಡಿ. ಅಡುಗೆ ಮಾಡಿದ 2 ಗಂಟೆಗಳೊಳಗೆ ಫ್ರಿಜ್ ನಲ್ಲಿ ಇಡುವುದು ಉತ್ತಮ. ವಿವಿಧ ಆಹಾರಗಳನ್ನು ಪ್ರತ್ಯೇಕ ಡಬ್ಬಿಗಳಲ್ಲಿ ಇಟ್ಟು, ಅವುಗಳನ್ನು ಸಂಗ್ರಹಿಸಿದ ದಿನಾಂಕವನ್ನು ಬರೆಯಿರಿ. ಸಾಮಾನ್ಯವಾಗಿ ಬೇಯಿಸಿದ ಆಹಾರವನ್ನು 2– 3 ದಿನಗಳವರೆಗೆ ಸುರಕ್ಷಿತವಾಗಿ ಬಳಸಬಹುದು.
ಇದನ್ನೂ ಓದಿ: ಏನಿದು ಮೀಲ್ ಪ್ರೆಪ್ ಟ್ರೆಂಡ್? ನಿಜವಾಗಿಯೂ ಇದು ಸಮಯ, ಹಣ ಉಳಿಸುವುದರ ಜೊತೆಗೆ ಆರೋಗ್ಯ ಕಾಪಾಡುತ್ತಾ?
ಈ ತಪ್ಪುಗಳನ್ನು ಮಾಡಬೇಡಿ
ಬಿಸಿ ಆಹಾರವನ್ನು ನೇರವಾಗಿ ಫ್ರಿಜ್ ನಲ್ಲಿ ಇಡಬೇಡಿ. ಮುಚ್ಚಳವಿಲ್ಲದೆ ಆಹಾರವನ್ನು ಬಿಡುವುದು, ಕೊಳಕು ಡಬ್ಬಿಗಳಲ್ಲಿ ಸಂಗ್ರಹಿಸುವುದು ಅಥವಾ ಒಂದೇ ಆಹಾರವನ್ನು ಪದೇಪದೇ ಬಿಸಿ ಮಾಡಿ ತಿನ್ನುವುದು ಆರೋಗ್ಯಕ್ಕೆ ಹಾನಿಕರ. ಫ್ರಿಜ್ ಅನ್ನು ಅತಿಯಾಗಿ ತುಂಬಿದರೆ ತಂಪಾದ ಗಾಳಿಯ ಹರಿವು ಕಡಿಮೆಯಾಗಿ ಆಹಾರ ಬೇಗ ಹಾಳಾಗಬಹುದು.
ಯಾವಾಗ ಉಳಿದ ಆಹಾರ ತಿನ್ನಬಾರದು?
ಆಹಾರದಿಂದ ಹುಳಿ ಅಥವಾ ಬೇರೆ ವಾಸನೆ ಬಂದರೆ, ಬಣ್ಣ ಬದಲಾಗಿದ್ದರೆ, ಶಿಲೀಂಧ್ರ (ಫಂಗಸ್) ಕಾಣಿಸಿಕೊಂಡರೆ ಅಥವಾ ರುಚಿ ಮತ್ತು ವಿನ್ಯಾಸ ಬದಲಾಗಿದ್ದರೆ ಅದನ್ನು ಸೇವಿಸಬೇಡಿ. ಫ್ರಿಜ್‌ನಲ್ಲಿ ಹೆಚ್ಚು ದಿನ ಇಟ್ಟ ಆಹಾರ ಹೊರಗೆ ಚೆನ್ನಾಗಿ ಕಂಡರೂ ಸುರಕ್ಷಿತವಾಗಿರದೇ ಇರಬಹುದು. ಇಂತಹ ಆಹಾರ ಸೇವನೆಯಿಂದ ಫುಡ್ ಪಾಯ್ಸನಿಂಗ್ ಅಪಾಯ ಹೆಚ್ಚಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




