AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏನಿದು ಮೀಲ್ ಪ್ರೆಪ್ ಟ್ರೆಂಡ್? ನಿಜವಾಗಿಯೂ ಇದು ಸಮಯ, ಹಣ ಉಳಿಸುವುದರ ಜೊತೆಗೆ ಆರೋಗ್ಯ ಕಾಪಾಡುತ್ತಾ?

ಇತ್ತೀಚಿನ ದಿನಗಳಲ್ಲಿ, ಮೀಲ್ ಪ್ರೆಪ್ (Meal Prep) ತುಂಬಾ ಫಾಸ್ಟ್ ಆಗಿ ಜನಪ್ರಿಯವಾಗುತ್ತಿದೆ, ಮತ್ತು ಅನೇಕರು ಇದನ್ನು ತಮ್ಮ ದಿನಚರಿಯ ಭಾಗವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಈ ವಿಧಾನವು ಏಕೆ ಇಷ್ಟೊಂದು ಜನಪ್ರಿಯವಾಗುತ್ತಿದೆ ಮತ್ತು ಕಾಲಾನಂತರದಲ್ಲಿ ಸಮಯ ಮತ್ತು ಹಣವನ್ನು ಉಳಿಸಲು ಇದು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು ಅದರ ಜೊತೆಗೆ ಮೀಲ್ ಪ್ರೆಪ್‌ಗೆ ಸೂಕ್ತ ಆಹಾರಗಳು ಯಾವವು, ತಯಾರಿಸಿಟ್ಟುಕೊಳ್ಳುವ ಮೊದಲು ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

ಏನಿದು ಮೀಲ್ ಪ್ರೆಪ್ ಟ್ರೆಂಡ್? ನಿಜವಾಗಿಯೂ ಇದು ಸಮಯ, ಹಣ ಉಳಿಸುವುದರ ಜೊತೆಗೆ ಆರೋಗ್ಯ ಕಾಪಾಡುತ್ತಾ?
Meal Prep GuideImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jun 27, 2026 | 7:22 PM

Share

ಮುಖ್ಯಾಂಶಗಳು

  • ಮೀಲ್ ಪ್ರೆಪ್ ಎಂದರೇನು? ಆರೋಗ್ಯಕರ ಜೀವನಕ್ಕೆ ಹೊಸ ಟ್ರೆಂಡ್
  • ಮೀಲ್ ಪ್ರೆಪ್: ಬ್ಯುಸಿ ಜೀವನಶೈಲಿಗೆ ಅತ್ಯುತ್ತಮ ಆಹಾರ ಯೋಜನೆ
  • ಮೀಲ್ ಪ್ರೆಪ್ ಮಾಡುವಾಗ ಪಾಲಿಸಬೇಕಾದ ಪ್ರಮುಖ ಸಲಹೆಗಳು

ಇಂದಿನ ಬ್ಯುಸಿ ಜೀವನಶೈಲಿಯಲ್ಲಿ ಮೀಲ್ ಪ್ರೆಪ್ (Meal Prep) ಜನಪ್ರಿಯವಾಗುತ್ತಿದೆ. ಅಂದರೆ, ಕೆಲವು ದಿನ ಅಥವಾ ವಾರಕ್ಕೆ ಬೇಕಾಗುವ ಆಹಾರವನ್ನು ಮುಂಚಿತವಾಗಿಯೇ ಯೋಜಿಸಿ ತಯಾರಿಸಿ ಇಟ್ಟುಕೊಳ್ಳುವುದು. ಇದರಿಂದ ಪ್ರತಿದಿನ ಅಡುಗೆ ಮಾಡುವ ತೊಂದರೆ ಕಡಿಮೆಯಾಗುವುದರ ಜೊತೆಗೆ ಆರೋಗ್ಯಕರ ಆಹಾರವನ್ನು ನಿಯಮಿತವಾಗಿ ಸೇವಿಸಲು ಸಹಾಯವಾಗುತ್ತದೆ. ಅಷ್ಟೇಅಲ್ಲ, ವಾರದ ಬಜೆಟ್ ಅನ್ನು ನಿಯಂತ್ರಿಸಲು ಕೂಡ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಆದರೆ ಮೀಲ್ ಪ್ರೆಪ್‌ಗೆ ಸೂಕ್ತ ಆಹಾರಗಳು ಯಾವವು, ತಯಾರಿಸಿಟ್ಟುಕೊಳ್ಳುವ ಮೊದಲು ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

ಸಮಯ ಮತ್ತು ಹಣದ ಉಳಿತಾಯ

ಒಂದೇ ಬಾರಿ ಮುಂದಿನ ಕೆಲವು ದಿನಗಳ ವರೆಗೆ ಆಹಾರ ತಯಾರಿಸುವುದರಿಂದ ಪ್ರತಿದಿನ “ಏನು ಅಡುಗೆ ಮಾಡಬೇಕು?” ಎಂಬ ಚಿಂತೆ ಇರುವುದಿಲ್ಲ. ಅಗತ್ಯಕ್ಕೆ ತಕ್ಕಷ್ಟು ಸಾಮಗ್ರಿ ಖರೀದಿಸುವುದರಿಂದ ಅನಗತ್ಯ ಖರ್ಚು ಕಡಿಮೆಯಾಗುತ್ತದೆ. ಹೊರಗಿನ ಆಹಾರಕ್ಕೆ ಹಣ ವ್ಯಯಿಸುವುದು ಕೂಡ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಆರೋಗ್ಯ ಕಾಪಾಡಿಕೊಳ್ಳಲು ಮಳೆಗಾಲದಲ್ಲಿ ಇಂತಹ ಆಹಾರಗಳಿಂದ ದೂರವಿರಿ

ಮೀಲ್ ಪ್ರೆಪ್‌ಗೆ ಸೂಕ್ತ ಆಹಾರಗಳು

ಬೇಳೆ, ರಾಜ್ಮಾ, ಕಡಲೆ, ಬ್ರೌನ್ ರೈಸ್, ಓಟ್ಸ್, ಬೇಯಿಸಿದ ಮೊಟ್ಟೆ, ಗ್ರಿಲ್ ಮಾಡಿದ ಚಿಕನ್, ಪನೀರ್, ಟೋಫು, ಬೇಯಿಸಿದ ತರಕಾರಿಗಳು ಹಾಗೂ ಹಣ್ಣುಗಳನ್ನು ಮೀಲ್ ಪ್ರೆಪ್‌ಗೆ ಬಳಸಬಹುದು. ಇವುಗಳನ್ನು ಸ್ವಚ್ಛವಾದ, ಗಾಳಿಯಾಡದ ಡಬ್ಬಿಗಳಲ್ಲಿ ಸಂಗ್ರಹಿಸುವುದು ಉತ್ತಮ.

ಈ ಮುನ್ನೆಚ್ಚರಿಕೆಗಳನ್ನು ಪಾಲಿಸಿ

ಆಹಾರವನ್ನು ಸಂಪೂರ್ಣವಾಗಿ ಬೇಯಿಸಿ ತಣ್ಣಗಾದ ನಂತರವೇ ಡಬ್ಬಿಗಳಿಗೆ ಹಾಕಿ ಫ್ರಿಜ್‌ನಲ್ಲಿ ಇಡಿ. ಸಾಮಾನ್ಯವಾಗಿ ಬೇಯಿಸಿದ ಆಹಾರವನ್ನು 3–4 ದಿನಗಳವರೆಗೆ ಫ್ರಿಜ್‌ನಲ್ಲಿ ಸುರಕ್ಷಿತವಾಗಿ ಇಡಬಹುದು. ಹೆಚ್ಚು ದಿನ ಸಂಗ್ರಹಿಸಬೇಕಾದರೆ ಫ್ರೀಜರ್ ಬಳಸುವುದು ಉತ್ತಮ. ಮತ್ತೆ ಬಿಸಿ ಮಾಡುವಾಗ ಚೆನ್ನಾಗಿ ಬಿಸಿ ಮಾಡಿ, ಹಾಳಾದ ವಾಸನೆ ಅಥವಾ ಬಣ್ಣ ಬದಲಾದ ಆಹಾರವನ್ನು ಸೇವಿಸಬೇಡಿ.

ಮೀಲ್ ಪ್ರೆಪ್ ಕೇವಲ ಸಮಯ ಮತ್ತು ಹಣ ಉಳಿಸುವ ವಿಧಾನವಲ್ಲ, ಆರೋಗ್ಯಕರ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಲು ಸಹ ಸಹಕಾರಿ. ಆದರೆ ಆಹಾರದ ಗುಣಮಟ್ಟ, ಸ್ವಚ್ಛತೆ ಮತ್ತು ಸರಿಯಾದ ಸಂಗ್ರಹಣೆಗೆ ಆದ್ಯತೆ ನೀಡುವುದು ಅತ್ಯಗತ್ಯ. ಸರಿಯಾದ ಯೋಜನೆಯೊಂದಿಗೆ ಮೀಲ್ ಪ್ರೆಪ್ ಅನುಸರಿಸಿದರೆ ಆರೋಗ್ಯಕರ ಜೀವನಶೈಲಿಯನ್ನು ಸುಲಭವಾಗಿ ಕಾಪಾಡಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭಾಮಾ ಹರೀಶ್ ಪುತ್ರ ನಿಧನ: ನಡೆದಿದ್ದೇನೆಂದು ವಿವರಿಸಿದ ಚಿಕ್ಕಪ್ಪ
ಭಾಮಾ ಹರೀಶ್ ಪುತ್ರ ನಿಧನ: ನಡೆದಿದ್ದೇನೆಂದು ವಿವರಿಸಿದ ಚಿಕ್ಕಪ್ಪ
ಇತಿಹಾಸ ಸೃಷ್ಟಿಸೋ ಕೆಲಸ ಮಾಡ್ತೀವಿ ಎಂದ ಸಿಎಂ ಡಿಕೆ ಶಿವಕುಮಾರ್
ಇತಿಹಾಸ ಸೃಷ್ಟಿಸೋ ಕೆಲಸ ಮಾಡ್ತೀವಿ ಎಂದ ಸಿಎಂ ಡಿಕೆ ಶಿವಕುಮಾರ್
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ!
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ!
ಬೆಳಗಾವಿ ಮೂಲದ ಶಾಸಕನಿಂದ ಅಡ್ಡಮತದಾನ ಶಂಕೆ, ಬಿಜೆಪಿಯಲ್ಲಿ ಸಂಚಲನ
ಬೆಳಗಾವಿ ಮೂಲದ ಶಾಸಕನಿಂದ ಅಡ್ಡಮತದಾನ ಶಂಕೆ, ಬಿಜೆಪಿಯಲ್ಲಿ ಸಂಚಲನ
ಬಿಜೆಪಿ ನಾಯಕರ ಮಧ್ಯೆಯೇ ಜೋರಾದ ವಾಗ್ಯುದ್ಧ!
ಬಿಜೆಪಿ ನಾಯಕರ ಮಧ್ಯೆಯೇ ಜೋರಾದ ವಾಗ್ಯುದ್ಧ!
ಕೆಂಪೇಗೌಡ ಜಯಂತಿ ನಡೆಯಲು ಬಿಡದೇ ಪ್ರದೀಪ್ ಈಶ್ವರ್ ವಿರುದ್ಧ ಆಕ್ರೋಶ
ಕೆಂಪೇಗೌಡ ಜಯಂತಿ ನಡೆಯಲು ಬಿಡದೇ ಪ್ರದೀಪ್ ಈಶ್ವರ್ ವಿರುದ್ಧ ಆಕ್ರೋಶ
ಲಿಂಗನಮಕ್ಕಿ ಡ್ಯಾಂನಲ್ಲಿ ತೀವ್ರ ನೀರಿನ ಕೊರತೆ: ವಿದ್ಯುತ್ ಉತ್ಪಾದನೆ ಸ್ಥಗಿತ
ಲಿಂಗನಮಕ್ಕಿ ಡ್ಯಾಂನಲ್ಲಿ ತೀವ್ರ ನೀರಿನ ಕೊರತೆ: ವಿದ್ಯುತ್ ಉತ್ಪಾದನೆ ಸ್ಥಗಿತ
ಪ್ರತಿ ವರ್ಷ ಒಂದೊಂದು ಕ್ಷೇತ್ರದಲ್ಲಿ ಕೆಂಪೇಗೌಡ ಜಯಂತಿ ಆಚರಣೆ: ಸಿಎಂ
ಪ್ರತಿ ವರ್ಷ ಒಂದೊಂದು ಕ್ಷೇತ್ರದಲ್ಲಿ ಕೆಂಪೇಗೌಡ ಜಯಂತಿ ಆಚರಣೆ: ಸಿಎಂ
ಅಡ್ಡ ಮತದಾನ ಬಗ್ಗೆ ವಿಜಯೇಂದ್ರಗೆ ವವರದಿ ಸಲ್ಲಿಸಿ ಸಿ.ಟಿ ರವಿ ಹೇಳಿದ್ದೇನು?
ಅಡ್ಡ ಮತದಾನ ಬಗ್ಗೆ ವಿಜಯೇಂದ್ರಗೆ ವವರದಿ ಸಲ್ಲಿಸಿ ಸಿ.ಟಿ ರವಿ ಹೇಳಿದ್ದೇನು?
ಮಡಿಕೇರಿ: ಎಂಟು ತಿಂಗಳ ಮಗುವಿನ ಗಂಟಲಲ್ಲಿತ್ತು ಎಲ್​ಇಡಿ ಬಲ್ಬ್!
ಮಡಿಕೇರಿ: ಎಂಟು ತಿಂಗಳ ಮಗುವಿನ ಗಂಟಲಲ್ಲಿತ್ತು ಎಲ್​ಇಡಿ ಬಲ್ಬ್!