AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿನಿತ್ಯ ಬ್ರಷ್ ಮಾಡಿದ್ರೂ ಕ್ಯಾವಿಟಿ ಉಂಟಾಗುತ್ತಿದ್ದರೆ ಈ ಸಮಸ್ಯೆ ತಡೆಯಲು ಸಿಂಪಲ್ ಐಡಿಯಾ ಇಲ್ಲಿದೆ

ಪ್ರತಿದಿನ ಹಲ್ಲುಜ್ಜುತ್ತೀರಿ ಮತ್ತು ಹಲ್ಲಿನ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿದರೂ ಹಲ್ಲಿನಲ್ಲಿ ಕುಳಿಗಳು ಕಂಡುಬರುತ್ತವೆ. ತಜ್ಞರು ಹೇಳುವ ಪ್ರಕಾರ, ಪ್ರತಿದಿನ ಬ್ರಷ್ ಮಾಡುವುದು ಮಾತ್ರ ಸಾಕಾಗುವುದಿಲ್ಲ, ಅದನ್ನು ಸರಿಯಾದ ವಿಧಾನದಲ್ಲಿ ಮಾಡುವುದು ಕೂಡ ಅತ್ಯಗತ್ಯವಾಗುತ್ತದೆ. ಹಾಗಾದರೆ ಯಾವ ರೀತಿ ಹಲ್ಲುಜ್ಜಬೇಕು, ಕ್ಯಾವಿಟಿಯ ಆರಂಭಿಕ ಲಕ್ಷಣಗಳು ಹೇಗಿರುತ್ತವೆ, ಇದರಿಂದ ಮುಕ್ತಿ ಪಡೆಯಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಪ್ರತಿನಿತ್ಯ ಬ್ರಷ್ ಮಾಡಿದ್ರೂ ಕ್ಯಾವಿಟಿ ಉಂಟಾಗುತ್ತಿದ್ದರೆ ಈ ಸಮಸ್ಯೆ ತಡೆಯಲು ಸಿಂಪಲ್ ಐಡಿಯಾ ಇಲ್ಲಿದೆ
CavityImage Credit source: Getty images
ಪ್ರೀತಿ ಭಟ್​, ಗುಣವಂತೆ
|

Updated on: May 06, 2026 | 8:36 PM

Share

ಪ್ರತಿದಿನ ಹಲ್ಲುಗಳನ್ನು ಬ್ರಷ್ (Brushing) ಮಾಡುತ್ತಿದ್ದರೂ ಕ್ಯಾವಿಟಿ ಸಮಸ್ಯೆ (Cavity) ಕಾಣಿಸಿಕೊಳ್ಳುವುದು ಹಲವರಲ್ಲಿ ಸಾಮಾನ್ಯವಾಗಿದೆ. ದಂತ ಆರೋಗ್ಯದ ಬಗ್ಗೆ ಜಾಗೃತಿ ಇದ್ದರೂ ಈ ಸಮಸ್ಯೆ ಉಂಟಾಗುವುದಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ತಜ್ಞರು ಸ್ಪಷ್ಟನೆ ನೀಡಿದ್ದಾರೆ. ದಂತ ವೈದ್ಯರ ಪ್ರಕಾರ, ಕ್ಯಾವಿಟಿ ಎಂದರೆ ದಂತದ ಮೇಲ್ಭಾಗದಲ್ಲಿ ಹಾನಿ ಉಂಟಾಗುವುದು. ಇದು ಬ್ಯಾಕ್ಟೀರಿಯಾ ಬೆಳವಣಿಗೆಯಿಂದ ಉಂಟಾಗಿ, ನಿಧಾನವಾಗಿ ದಂತದಲ್ಲಿ ಕುಳಿ ಉಂಟುಮಾಡುತ್ತದೆ. ಪ್ರತಿದಿನ ಬ್ರಷ್ ಮಾಡುವುದು ಮಾತ್ರ ಸಾಕಾಗುವುದಿಲ್ಲ, ಅದನ್ನು ಸರಿಯಾದ ವಿಧಾನದಲ್ಲಿ ಮಾಡುವುದು ಕೂಡ ಅತ್ಯಗತ್ಯವಾಗುತ್ತದೆ. ಹಾಗಾದರೆ ಯಾವ ರೀತಿ ಹಲ್ಲುಜ್ಜಬೇಕು, ಕ್ಯಾವಿಟಿಯ ಆರಂಭಿಕ ಲಕ್ಷಣಗಳು ಹೇಗಿರುತ್ತವೆ, ಇದರಿಂದ ಮುಕ್ತಿ ಪಡೆಯಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಾಮಾನ್ಯವಾಗಿ ನಮ್ಮಲ್ಲಿ ಹಲವರು ಹಲ್ಲುಜ್ಜುವುದನ್ನು ಒಂದು ಕೆಲಸದ ರೀತಿ ಭಾವಿಸುತ್ತಾರೆ. ಹಾಗಾಗಿ ಆದಷ್ಟು ಬೇಗ ಅದನ್ನು ಮುಗಿಸಲು ಕಾಯುತ್ತಿರುತ್ತಾರೆ. ಆದರೆ ದಂತ ಅಥವಾ ಹಲ್ಲುಗಳ ಮೇಲೆ ಸರಿಯಾದ ಕೋನದಲ್ಲಿ ಬ್ರಷ್ ಮಾಡದೆ, ಬೇಗ ಬೇಗ ಮಾಡಿ ಮುಗಿಸುವುದರಿಂದ ದಂತಗಳ ನಡುವೆ ಇರುವ ಅಶುದ್ಧಿ ಸಂಪೂರ್ಣವಾಗಿ ಹೋಗುವುದಿಲ್ಲ. ತಜ್ಞರ ಪ್ರಕಾರ, ದಿನಕ್ಕೆ ಕನಿಷ್ಠ ಎರಡು ಬಾರಿ, ಎರಡು ನಿಮಿಷಗಳ ಕಾಲ ಸರಿಯಾದ ರೀತಿಯಲ್ಲಿ ಬ್ರಷ್ ಮಾಡಬೇಕು. ಅದರಲ್ಲಿಯೂ ಸಿಹಿ ಪದಾರ್ಥಗಳನ್ನು ಹೆಚ್ಚು ಸೇವಿಸುವುದು ಕ್ಯಾವಿಟಿಗೆ ಪ್ರಮುಖ ಕಾರಣವಾಗಿದೆ. ಸಿಹಿ ತಿಂದ ನಂತರ ಬಾಯಿ ತೊಳೆಯದೇ ಇದ್ದರೆ, ಆ ಆಹಾರದ ಕಣಗಳು ದಂತಗಳ ಮೇಲೆ ಉಳಿದು ಬ್ಯಾಕ್ಟೀರಿಯಾಗಳಿಗೆ ಆಹಾರವಾಗುತ್ತವೆ. ಇದರಿಂದ ಆಮ್ಲ ಉತ್ಪತ್ತಿಯಾಗಿ ದಂತ ಹಾನಿಯಾಗುತ್ತದೆ.

ಇದನ್ನೂ ಓದಿ: ಹಲ್ಲುಜ್ಜಿದ ತಕ್ಷಣ ಯಾಕೆ ನೀರು ಕುಡಿಯಬಾರದು? ಈ ಗಂಭೀರ ಕಾರಣ ತಿಳಿದ್ರೆ ನೀವೆಂದು ಈ ತಪ್ಪು ಮಾಡಲ್ಲ

ಕ್ಯಾವಿಟಿಯ ಆರಂಭಿಕ ಲಕ್ಷಣಗಳು:

ಕ್ಯಾವಿಟಿ ಆರಂಭದಲ್ಲಿ ಸಣ್ಣ ಲಕ್ಷಣಗಳಿಂದಲೇ ಕಾಣಿಸಿಕೊಳ್ಳುತ್ತದೆ. ದಂತದಲ್ಲಿ ತಂಪು ಅಥವಾ ಬಿಸಿ ತಟ್ಟುವುದು, ಸಣ್ಣ ನೋವು, ಕಪ್ಪು ಕಲೆಗಳು ಕಾಣಿಸಿಕೊಳ್ಳುವುದು, ನೀರು ಕುಡಿಯುವಾಗ ಅಥವಾ ಆಹಾರ ತಿನ್ನುವಾಗ ನೋವು ಉಂಟಾಗುವುದು ಪ್ರಮುಖ ಲಕ್ಷಣಗಳಾಗಿವೆ. ಈ ಲಕ್ಷಣಗಳನ್ನು ನಿರ್ಲಕ್ಷಿಸಿದರೆ ಸಮಸ್ಯೆ ಗಂಭೀರವಾಗಬಹುದು.

ಕ್ಯಾವಿಟಿ ತಡೆಯಲು ಸಲಹೆಗಳು:

ಸಾಮಾನ್ಯವಾಗಿ ಕ್ಯಾವಿಟಿ ತಡೆಗಟ್ಟಲು ದಿನಕ್ಕೆ ಎರಡು ಬಾರಿ ಸರಿಯಾಗಿ ಬ್ರಷ್ ಮಾಡುವುದು, ಫ್ಲಾಸ್ ಬಳಕೆ, ಸಿಹಿ ಹಾಗೂ ಜಂಕ್ ಫುಡ್ ಕಡಿಮೆ ಮಾಡುವುದು ಮುಖ್ಯ. ಯಾವುದೇ ತೊಂದರೆ ಕಂಡುಬಂದರೆ ತಕ್ಷಣ ದಂತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಒಟ್ಟಾರೆ, ದಂತ ಆರೈಕೆಯಲ್ಲಿ ಸರಿಯಾದ ಪದ್ಧತಿ ಮತ್ತು ಆಹಾರ ಕ್ರಮ ಪಾಲಿಸಿದರೆ ಕ್ಯಾವಿಟಿ ಸಮಸ್ಯೆಯನ್ನು ಸುಲಭವಾಗಿ ತಪ್ಪಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us