AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯರಿಗೆ ಹೆಮ್ಮೆಯ ಸಂಗತಿ; ವಾಟ್ಸಾಪ್ ಜಾಗತಿಕ ಮುಖ್ಯಸ್ಥರಾಗಿ ಕ್ರೆಡ್ ಸಂಸ್ಥಾಪಕ ಕುನಾಲ್ ಶಾ ನೇಮಕ

ಭಾರತೀಯ ಸ್ಟಾರ್ಟ್‌ಅಪ್ ಮತ್ತು ತಂತ್ರಜ್ಞಾನ ವಲಯದಲ್ಲಿ ಅತ್ಯಂತ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪ್ರಸಿದ್ಧ ಫಿಂಟೆಕ್ ಸಂಸ್ಥೆಯಾದ 'ಕ್ರೆಡ್' (CRED)ನ ಸಂಸ್ಥಾಪಕ ಕುನಾಲ್ ಶಾ (Kunal Shah) ಅವರು ತಮ್ಮ ಕಂಪನಿಯ ದೈನಂದಿನ ಕಾರ್ಯಾಚರಣೆಯ ಜವಾಬ್ದಾರಿಯಿಂದ ಹೊರಬಂದಿದ್ದು, ಜಾಗತಿಕ ತಂತ್ರಜ್ಞಾನ ದೈತ್ಯ ಮೆಟಾ ಒಡೆತನದ 'ವಾಟ್ಸಾಪ್' (WhatsApp) ನ ಜಾಗತಿಕ ಮುಖ್ಯಸ್ಥರಾಗಿ ಅಧಿಕೃತವಾಗಿ ನೇಮಕಗೊಂಡಿದ್ದಾರೆ. ಇದರ ಬೆನ್ನಲ್ಲೇ, ಮೆಟಾ ಸಂಸ್ಥೆಯ ನೇತೃತ್ವದಲ್ಲಿ 'ಕ್ರೆಡ್' ಕಂಪನಿಯು ಬರೋಬ್ಬರಿ 8,550 ಕೋಟಿ ರೂ. (ಸುಮಾರು 900 ಮಿಲಿಯನ್ ಯುಎಸ್ ಡಾಲರ್) ಮೊತ್ತದ ಧನಸಹಾಯವನ್ನು ಪಡೆದುಕೊಂಡಿದೆ.

ಭಾರತೀಯರಿಗೆ ಹೆಮ್ಮೆಯ ಸಂಗತಿ; ವಾಟ್ಸಾಪ್ ಜಾಗತಿಕ ಮುಖ್ಯಸ್ಥರಾಗಿ ಕ್ರೆಡ್ ಸಂಸ್ಥಾಪಕ ಕುನಾಲ್ ಶಾ ನೇಮಕ
Kunal ShahImage Credit source: Kunal Shah X Page
ಸುಷ್ಮಾ ಚಕ್ರೆ
|

Updated on: Jun 22, 2026 | 10:50 PM

Share

ನವದೆಹಲಿ, ಜೂನ್ 22: ಭಾರತದ ಪ್ರಮುಖ ಫಿಂಟೆಕ್ ಸಂಸ್ಥೆಯಾದ ‘ಕ್ರೆಡ್’ (CRED)ನ ಸಂಸ್ಥಾಪಕರಾದ ಕುನಾಲ್ ಶಾ (Kunal Shah) ಅವರನ್ನು ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ (WhatsApp)ನ ಜಾಗತಿಕ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ. ತಂತ್ರಜ್ಞಾನ ವಲಯದಲ್ಲಿ ಇದೊಂದು ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ. ಕುನಾಲ್ ಶಾ ಭಾರತೀಯರಾಗಿರುವುದರಿಂದ ಭಾರತದ ಪಾಲಿಗೂ ಇದು ಹೆಮ್ಮೆಯ ಸಂಗತಿಯಾಗಿದೆ. ಕುನಾಲ್ ಶಾ ಅವರ ನಾಯಕತ್ವದಲ್ಲಿ ವಾಟ್ಸಾಪ್ ಜಾಗತಿಕ ಮಟ್ಟದಲ್ಲಿ ಹಲವು ಹೊಸ ಮೈಲಿಗಲ್ಲುಗಳನ್ನು ತಲುಪುವ ನಿರೀಕ್ಷೆಯಿದೆ.

ಈ ಮೂಲಕ ಗೂಗಲ್‌ನ ಸುಂದರ್ ಪಿಚೈ ಮತ್ತು ಮೈಕ್ರೋಸಾಫ್ಟ್‌ನ ಸತ್ಯ ನಡೆಲ್ಲಾ ಅವರ ಸಾಲಿಗೆ ಈಗ ಕುನಾಲ್ ಶಾ ಕೂಡ ಸೇರ್ಪಡೆಯಾಗಿದ್ದಾರೆ. ವಿಶ್ವದಾದ್ಯಂತ ಬಿಲಿಯನ್‌ಗಟ್ಟಲೆ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್‌ನ ಅತ್ಯುನ್ನತ ಜಾಗತಿಕ ಹುದ್ದೆಗೆ ಭಾರತೀಯ ಉದ್ಯಮಿಯೊಬ್ಬರನ್ನು ಆಯ್ಕೆ ಮಾಡಿರುವುದು ಭಾರತೀಯ ಸ್ಟಾರ್ಟ್‌ಅಪ್ ಮತ್ತು ತಂತ್ರಜ್ಞಾನ ರಂಗಕ್ಕೆ ಸಂದ ಗೌರವವಾಗಿದೆ.

ವಾಟ್ಸಾಪ್‌ಗೆ ಜಗತ್ತಿನಲ್ಲೇ ಅತಿ ದೊಡ್ಡ ಮಾರುಕಟ್ಟೆ ಭಾರತವಾಗಿದೆ. ಭಾರತೀಯ ಗ್ರಾಹಕರ ಮನಸ್ಥಿತಿ ಮತ್ತು ಡಿಜಿಟಲ್ ಪೇಮೆಂಟ್ಸ್ ಮಾರುಕಟ್ಟೆಯನ್ನು ಕುನಾಲ್ ಶಾ ಅತ್ಯಂತ ಹತ್ತಿರದಿಂದ ಬಲ್ಲವರಾಗಿದ್ದಾರೆ. ಮೊದಲು ‘ಫ್ರೀಚಾರ್ಜ್’ ಮತ್ತು ನಂತರ ‘ಕ್ರೆಡ್’ (CRED) ಆ್ಯಪ್‌ಗಳ ಮೂಲಕ ಭಾರತದಲ್ಲಿ ಡಿಜಿಟಲ್ ಕ್ರಾಂತಿ ಮಾಡಿದ ಕೀರ್ತಿ ಕುನಾಲ್ ಶಾ ಅವರಿಗೆ ಸಲ್ಲುತ್ತದೆ. ವಾಟ್ಸಾಪ್ ಇತ್ತೀಚಿನ ದಿನಗಳಲ್ಲಿ ಕೇವಲ ಚಾಟಿಂಗ್ ಆ್ಯಪ್ ಆಗಿ ಉಳಿಯದೆ ಬಿಸಿನೆಸ್ ಮತ್ತು ಪೇಮೆಂಟ್ಸ್ ಕಡೆಗೂ ಹೆಚ್ಚಿನ ಗಮನ ಹರಿಸುತ್ತಿರುವುದರಿಂದ ಕುನಾಲ್ ಶಾ ಅವರ ಅನುಭವ ಮೆಟಾ ಸಂಸ್ಥೆಗೆ ದಿಕ್ಸೂಚಿಯಾಗಲಿದೆ.

ಇದನ್ನೂ ಓದಿ: ಇಪಿಎಫ್​ಒದಿಂದ ಸದ್ಯದಲ್ಲೇ 2 ಹೊಸ ಸೇವೆಗಳು; ವಾಟ್ಸಾಪ್ ಚಾಟ್​ಬೋಟ್ ಮತ್ತು ಯುಪಿಐ ವಿತ್​ಡ್ರಾವಲ್

ಕುನಾಲ್ ಶಾ ಅವರು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಈ ಮಹತ್ವದ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸಿಸಿದ್ದಾರೆ. “ನಾನು ವಾಟ್ಸಾಪ್ ಅನ್ನು ಜಾಗತಿಕವಾಗಿ ಮುನ್ನಡೆಸಲು ಮೆಟಾ ಸಂಸ್ಥೆಯನ್ನು ಸೇರುತ್ತಿದ್ದೇನೆ. ಮೆಟಾ ಕಂಪನಿಯು ‘ಕ್ರೆಡ್’ನಲ್ಲಿ ಹೂಡಿಕೆದಾರರಾಗಿ ಪ್ರವೇಶಿಸಿದೆ. ಈ ಹೂಡಿಕೆಯಿಂದಾಗಿ ಮೆಟಾ ಸಂಸ್ಥೆಗೆ ಕ್ರೆಡ್ ಬಳಕೆದಾರರ ಯಾವುದೇ ವೈಯಕ್ತಿಕ ಡೇಟಾ ಅಥವಾ ಮಾಹಿತಿ ಸಿಗುವುದಿಲ್ಲ” ಎಂದು ಬಳಕೆದಾರರ ಗೌಪ್ಯತೆಯ ಕುರಿತು ಸ್ಪಷ್ಟಪಡಿಸಿದ್ದಾರೆ.

ಕುನಾಲ್ ಶಾ ಅವರ ಈ ಜಾಗತಿಕ ಸಾಧನೆಗೆ ಭಾರತದ ವಿವಿಧ ಸ್ಟಾರ್ಟ್‌ಅಪ್ ಸಂಸ್ಥಾಪಕರು ಮತ್ತು ತಂತ್ರಜ್ಞಾನ ತಜ್ಞರು ಸಾಮಾಜಿಕ ಜಾಲತಾಣಗಳ ಮೂಲಕ ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಇದನ್ನೂ ಓದಿ: ಇನ್​ಸ್ಟಾ, ಫೇಸ್​ಬುಕ್, ವಾಟ್ಸಾಪ್​ಗೆ ಪೇಡ್ ಸಬ್​ಸ್ಕ್ರಿಶನ್ಸ್ ಆರಂಭಿಸಲು ಮೆಟಾ ನಿರ್ಧಾರ; ತಿಂಗಳಿಗೆ ಎಷ್ಟಿರುತ್ತೆ ಚಂದಾದಾರಿಕೆ?

ಕುನಾಲ್ ಶಾ ಅವರು ವಾಟ್ಸಾಪ್ ಜಾಗತಿಕ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿರುವುದರಿಂದ, ಕ್ರೆಡ್ ಕಂಪನಿಯ ಮಧ್ಯಂತರ ಸಿಇಒ ಆಗಿ ಮಿಟೆನ್ ಸಂಪತ್ ಅವರನ್ನು ನೇಮಕ ಮಾಡಲಾಗಿದೆ. ಸದ್ಯ ಭಾರತದಲ್ಲಿ 1.7 ಕೋಟಿಗೂ ಹೆಚ್ಚು ವಿಶ್ವಾಸಾರ್ಹ ಗ್ರಾಹಕರು ತಮ್ಮ ಹಣಕಾಸು ನಿರ್ವಹಣೆಗೆ ಕ್ರೆಡ್ ಆ್ಯಪ್ ಬಳಸುತ್ತಿದ್ದಾರೆ. ಮೆಟಾ ನೇತೃತ್ವದ 8,550 ಕೋಟಿ ರೂಪಾಯಿ ಹೂಡಿಕೆಯ ಬಳಿಕ ‘ಕ್ರೆಡ್’ ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯವು ಬರೋಬ್ಬರಿ 43,239 ಕೋಟಿ ರೂ.ಗಳಿಗೆ (4.5 ಬಿಲಿಯನ್ ಯುಎಸ್ ಡಾಲರ್) ತಲುಪಿದೆ.

2018ರಲ್ಲಿ ಕುನಾಲ್ ಶಾ ಅವರು ಕ್ರೆಡ್ ಆ್ಯಪ್ ಅನ್ನು ಕೇವಲ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸುವ ಮತ್ತು ಅದಕ್ಕೆ ರಿವಾರ್ಡ್ಸ್ ನೀಡುವ ವೇದಿಕೆಯಾಗಿ ಆರಂಭಿಸಿದ್ದರು. ಆದರೆ, ಇಂದು ಅದು ದೈತ್ಯ ಫಿಂಟೆಕ್ ಸೂಪರ್ ಆ್ಯಪ್ ಆಗಿ ಬೆಳೆದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!