AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಪಿಎಫ್​ಒದಿಂದ ಸದ್ಯದಲ್ಲೇ 2 ಹೊಸ ಸೇವೆಗಳು; ವಾಟ್ಸಾಪ್ ಚಾಟ್​ಬೋಟ್ ಮತ್ತು ಯುಪಿಐ ವಿತ್​ಡ್ರಾವಲ್

EPFO to launch WhatsApp chatbot and UPI withdrawal services: ಇಪಿಎಫ್​ಒ ಸಂಸ್ಥೆ ಸದ್ಯದಲ್ಲೇ ಎರಡು ಹೊಸ ಫೀಚರ್​ಗಳು ಮತ್ತು ಸೇವೆಗಳನ್ನು ಪರಿಚಯಿಸಲಿದೆ. ವರದಿ ಪ್ರಕಾರ, ವಾಟ್ಸಾಪ್ ಚಾಟ್​ಬಾಟ್ ಅನ್ನು ಅನಾವರಣಗೊಳಿಸಲಾಗುತ್ತದೆ. ಇದರಲ್ಲಿ ಪಿಎಫ್​ನ ಕೆಲ ಬೇಸಿಕ್ ಸೇವೆಗಳನ್ನು ಪಡೆಯಬಹುದು. ಹಾಗೆಯೇ, ಬಹುನಿರೀಕ್ಷಿತವಾದ ಯುಪಿಐ ಫೀಚರ್ ಕೂಡ ಸದ್ಯದಲ್ಲೇ ಹೊರಬರಲಿದೆ. ಪಿಎಫ್ ಸದಸ್ಯರು ತಮ್ಮ ಪಿಎಫ್ ಹಣವನ್ನು ಯುಪಿಐ ಮೂಲಕ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಳ್ಳಬಹುದು.

ಇಪಿಎಫ್​ಒದಿಂದ ಸದ್ಯದಲ್ಲೇ 2 ಹೊಸ ಸೇವೆಗಳು; ವಾಟ್ಸಾಪ್ ಚಾಟ್​ಬೋಟ್ ಮತ್ತು ಯುಪಿಐ ವಿತ್​ಡ್ರಾವಲ್
ಇಪಿಎಫ್Image Credit source: Alamy
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 20, 2026 | 2:49 PM

Share

ನವದೆಹಲಿ, ಮೇ 20: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಾದ ಇಪಿಎಫ್​ಒ (EPFO) ಸದ್ಯದಲ್ಲೇ ಎರಡು ಹೊಸ ಸೇವೆಗಳನ್ನು ಹೊರತರಲಿದೆ. ಒಂದು, ವಾಟ್ಸಾಪ್ ಚಾಟ್​ಬೋಟ್ (WhatsApp Chatbot). ಮತ್ತೊಂದು ಯುಪಿಐ ಮೂಲಕ ಪಿಎಫ್ ಹಣ ವಿತ್​ಡ್ರಾ ಮಾಡುವ ಅವಕಾಶ. ಇದರಲ್ಲಿ ಯುಪಿಐ ಫೀಚರ್ (UPI withdrawal feature) ಕುರಿತ ಸುದ್ದಿ ಕಳೆದ ಎರಡು ವರ್ಷಗಳಿಂದಲೂ ನಿರೀಕ್ಷೆ ಹುಟ್ಟಿಸಿದೆ. ಪಿಎಫ್ ಬಳಕೆದಾರರ ಅಗತ್ಯಗಳಿಗೆ ಅನುಗುಣವಾಗಿ ಇಪಿಎಫ್​ಒ ತನ್ನ ನಿಯಮಗಳನ್ನು ಸರಳಗೊಳಿಸುತ್ತಾ ಬಂದಿದೆ. ಸುಧಾರಣೆಗಳನ್ನು ತರುತ್ತಿದೆ. ಈ ಕಾರ್ಯದ ಮುಂದುವರಿದ ಭಾಗವಾಗಿ ಇವೆರಡು ಹೊಸ ಸೇವೆಗಳು ಹೊರಬರುತ್ತಿವೆ.

ವಾಟ್ಸಾಪ್ ಚಾಟ್​ಬೋಟ್ ಹೇಗೆ ಕೆಲಸ ಮಾಡುತ್ತದೆ?

ಈಗ ಹೆಚ್ಚಿನ ಸರ್ವಿಸ್ ಸಂಸ್ಥೆಗಳು ವಾಟ್ಸಾಪ್ ಚಾಟ್​ಬೋಟ್ ಸೇವೆ ಒದಗಿಸುತ್ತವೆ. ಇಪಿಎಫ್​ಒ ಕೂಡ ಇದನ್ನು ಆರಂಭಿಸಿದೆ. ಪಿಎಫ್ ಅಕೌಂಟ್ ಹೊಂದಿರುವ ಸದಸ್ಯರು ವಾಟ್ಸಾಪ್ ಚಾಟ್​ಬೋಟ್ ಬಳಸಬಹುದು. ಈ ಚಾಟ್​ಬೋಟ್ ಅನ್ನು ಬಳಸುವ ಮೊದಲು ಅದು ಗ್ರೀನ್ ಟಿಕ್ ಹೊಂದಿದೆಯಾ ಎಂದು ಖಚಿತಪಡಿಸಿಕೊಳ್ಳುವುದು ಅಗತ್ಯ. ಈ ಚಾಟ್​ಬೋಟ್​ನಲ್ಲಿ ನೀವು ಪಿಎಫ್ ಬ್ಯಾಲನ್ಸ್, ಕ್ಲೇಮ್ ಸ್ಥಿತಿ ಇತ್ಯಾದಿಯನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು. ಈ ಚಾಟ್​ಬೋಟ್ ಸೇವೆ ಬಹಳ ಶೀಘ್ರದಲ್ಲಿ ಲೈವ್ ಆಗಬಹುದು.

ಇದನ್ನೂ ಓದಿ: ವಾಲಂಟರಿ ಪ್ರಾವಿಡೆಂಟ್ ಫಂಡ್; ನಿಮ್ಮ ಇಪಿಎಫ್ ಕಾರ್ಪಸ್ ಹೆಚ್ಚಿಸುವ ಒಂದು ಪ್ಲಾನ್

ಯುಪಿಐ ಮೂಲಕ ಹಣ ವಿತ್​ಡ್ರಾ ಮಾಡಲು ಅವಕಾಶ

ಇಪಿಎಫ್​ಒನ ಬಹುನಿರೀಕ್ಷಿತ ಪ್ರಾಜೆಕ್ಟ್​ಗಳಲ್ಲಿ ಯುಪಿಐ ಫೀಚರ್ ಒಂದೆನಿಸಿದೆ. ಸದ್ಯದಲ್ಲೇ ಇದೂ ಕೂಡ ಲೈವ್ ಆಗಲಿದೆ. ವರದಿ ಪ್ರಕಾರ ಇಪಿಎಫ್​ಒ ಸಂಸ್ಥೆ ಈ ಫೀಚರ್ ಅನ್ನು ಪರೀಕ್ಷಿಸಿದ್ದು, ಅದರ ಕಾರ್ಯನಿರ್ವಹಣೆ ಬಗ್ಗೆ ಸಮಾಧಾನ ಹೊಂದಿದೆ.

ಸದ್ಯಕ್ಕೆ ಬಂದಿರುವ ಮಾಹಿತಿ ಪ್ರಕಾರ, ಪಿಎಫ್ ಬಳಕೆದಾರರು ತಮ್ಮ ಪಿಎಫ್ ಅಕೌಂಟ್​ನಲ್ಲಿರುವ ಹಣವನ್ನು ಯುಪಿಐ ಮೂಲಕ ತಮ್ಮ ಬ್ಯಾಂಕ್ ಅಕೌಂಟ್​ಗೆ ಟ್ರಾನ್ಸ್​ಫರ್ ಮಾಡಬಹುದು. ಪಿಎಫ್ ಹಣಕ್ಕೆ ಕ್ಲೇಮ್ ಸಲ್ಲಿಸುವ ಅಗತ್ಯ ಇರುವುದಿಲ್ಲ. ಟ್ರಾನ್ಸ್​ಫರ್ ಮಾಡುವ ಮುನ್ನ ಯುಪಿಐನ ಪಿನ್ ಅನ್ನು ನಮೂದಿಸಬೇಕು.

ಇದನ್ನೂ ಓದಿ: ಪಿಪಿಎಫ್​ನಲ್ಲಿ ಒಂದು ಕೋಟಿ ರೂ ಹಣ ಪಡೆಯುವುದು ಹೇಗೆ? 61,000 ರೂ ಮಾಸಿಕ ಆದಾಯ ಪಡೆಯಲು ಹೀಗೆ ಮಾಡಿ

ಈಗಿರುವ ವ್ಯವಸ್ಥೆಯಲ್ಲಿ ಸದಸ್ಯರು ಪಿಎಫ್ ಹಣಕ್ಕೆ ಕ್ಲೇಮ್ ಸಲ್ಲಸಿ, ಅದು ಇತ್ಯರ್ಥವಾಗಿ ಆ ಬಳಿಕ ಹಣವು ಲಿಂಕ್ ಆದ ಬ್ಯಾಂಕ್ ಅಕೌಂಟ್​ಗೆ ಜಮೆ ಆಗುತ್ತಿತ್ತು. ಈಗ ಆಟೊಮ್ಯಾಟಿಕ್ ಸೆಟಲ್ಮೆಂಟ್ ಸೌಲಭ್ಯ ನೀಡಲಾಗಿದೆ. ಆಟೊ ಸೆಟಲ್ಮೆಂಟ್ ಮೊತ್ತವನ್ನು 1 ಲಕ್ಷ ರೂನಿಂದ 5 ಲಕ್ಷ ರೂಗೆ ಏರಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More