ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ಪೌಷ್ಟಿಕಾಂಶದ ಕೊರತೆಗಳೇನು? ಅದನ್ನು ತಡೆಯುವುದು ಹೇಗೆ?
5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಶೇ. 45ಕ್ಕಿಂತ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಸಾವನ್ನಪ್ಪುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಫ್ಯಾಕ್ಟ್‌ಶೀಟ್ ಹೇಳುತ್ತದೆ. ಹೀಗಾಗಿ, ಮಕ್ಕಳಲ್ಲಿ ಕಂಡುಬರುವ ಕೆಲವು ಸಾಮಾನ್ಯ ಪೌಷ್ಠಿಕಾಂಶದ ಕೊರತೆಗಳು ಮತ್ತು ಅವುಗಳನ್ನು ತಡೆಗಟ್ಟುವ ವಿಧಾನಗಳ ಬಗ್ಗೆ ಮಾಹಿತಿ ಇಲ್ಲಿದೆ.
ನಿಮ್ಮ ಮಗುವಿನ ಆರೋಗ್ಯ ಕಾಪಾಡಿಕೊಳ್ಳುವುದೆಂದರೆ ಯಾವುದೇ ರೀತಿಯ ಅನಾರೋಗ್ಯಕ್ಕೆ ಒಳಗಾಗದಿರುವಂತೆ ನೋಡಿಕೊಳ್ಳುವುದು ಮಾತ್ರವಲ್ಲ. ನಿಮ್ಮ ಮಗುವಿಗೆ ಸಮತೋಲಿತ ಆಹಾರ ಸಿಗುತ್ತಿದೆಯೇ? ಮಗುವಿನ ಬೆಳವಣಿಗೆಗೆ ಅಗತ್ಯವಾದ ಪೌಷ್ಟಿಕಾಂಶಗಳು ಸಿಗುತ್ತಿದೆಯೇ? ಎಂಬುದನ್ನು ಕೂಡ ಗಮನಿಸಬೇಕು. ಮಕ್ಕಳ ಬೆಳವಣಿಗೆ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಮಾನ್ಯ ಪೌಷ್ಟಿಕಾಂಶದ ಕೊರತೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಪರಿಹರಿಸುವುದು ಕೂಡ ಅಗತ್ಯ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಶೇ. 45ಕ್ಕಿಂತ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಸಾವನ್ನಪ್ಪುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಫ್ಯಾಕ್ಟ್‌ಶೀಟ್ ಹೇಳುತ್ತದೆ.
ಹೀಗಾಗಿ, ಮಕ್ಕಳಲ್ಲಿ ಕಂಡುಬರುವ ಕೆಲವು ಸಾಮಾನ್ಯ ಪೌಷ್ಠಿಕಾಂಶದ ಕೊರತೆಗಳು ಮತ್ತು ಅವುಗಳನ್ನು ತಡೆಗಟ್ಟುವ ವಿಧಾನಗಳ ಬಗ್ಗೆ ಮಾಹಿತಿ ಇಲ್ಲಿದೆ.
ಕಬ್ಬಿಣದ ಕೊರತೆ:
ಕಬ್ಬಿಣವು ಶ್ವಾಸಕೋಶದಿಂದ ದೇಹದ ಅಂಗಾಂಶಗಳಿಗೆ ಆಮ್ಲಜನಕವನ್ನು ಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಮಗು ಘನ ಆಹಾರ ಸೇವಿಸಲು ಆರಂಭಿಸಿದಾಗಿನಿಂದ ನಡೆಯಲು ಕಲಿಯುವವರೆಗೆ ಕಬ್ಬಿಣಭರಿತ ಘನ ಆಹಾರವನ್ನು ನೀಡುವುದು ಅತ್ಯಗತ್ಯ. ಬೀನ್ಸ್, ಕೆಂಪು ಮಾಂಸ, ಬೀಟ್ರೂಟ್ ಜ್ಯೂಸ್ ಮತ್ತು ಇತರ ಮೂಲಗಳಲ್ಲಿ ನಿಮ್ಮ ಮಗುವಿಗೆ ಬೇಕಾದ ಕಬ್ಬಿಣದಂಶವು ಸಾಕಷ್ಟು ಇರುತ್ತದೆ.
ಇದನ್ನೂ ಓದಿ: ನಿಮ್ಮ ಮಗುವಿನ ಹೊಟ್ಟೆ ತುಂಬಿದೆಯೇ ಎಂದು ತಿಳಿಯುವುದು ಹೇಗೆ?
ವಿಟಮಿನ್ ಡಿ ಕೊರತೆ:
ಮೂಳೆಗಳ ಬೆಳವಣಿಗೆ, ರೋಗನಿರೋಧಕ ಶಕ್ತಿ ಮತ್ತು ಹೃದಯದ ಆರೋಗ್ಯಕ್ಕೆ ಅಗತ್ಯವಾದ ವಿಟಮಿನ್ ಡಿ ಮಗುವಿಗೆ ಯಥೇಚ್ಛವಾಗಿ ಸಿಗುವಂತೆ ನೋಡಿಕೊಳ್ಳಿ. ಸೂರ್ಯನ ಬೆಳಕಿನಲ್ಲಿ ಈ ವಿಟಮಿನ್ ಡಿ ಹೆಚ್ಚಾಗಿರುತ್ತದೆ. ಮಗುವಿಗೆ ವಿಟಮಿನ್ ಡಿ ಸಿರಪ್ ಕೂಡ ನೀಡಲಾಗುತ್ತದೆ. ಶಿಶುಗಳಿಗೆ 1 ದಿನಕ್ಕೆ 400 IU ವಿಟಮಿನ್ ಡಿ ಸಿಗಬೇಕು. 1 ವರ್ಷ ಮೇಲ್ಪಟ್ಟ ಮಕ್ಕಳಿಗೆ 600 IU ಅಥವಾ ಹೆಚ್ಚು ವಿಟಮಿನ್ ಡಿ ಅಗತ್ಯವಿದೆ. ಹಾಲು, ಮೊಸರು ಮತ್ತು ಧಾನ್ಯಗಳಂತಹ ಬಲವರ್ಧಿತ ಆಹಾರಗಳನ್ನು ಮಕ್ಕಳಿಗೆ ಹೆಚ್ಚು ನೀಡಿ.
ಸತು (ಝಿಂಕ್) ಕೊರತೆ:
ಝಿಂಕ್ ಮಗುವಿನ ಬೆಳವಣಿಗೆ, ರೋಗನಿರೋಧಕ ಶಕ್ತಿ ಮತ್ತು ಅರಿವಿನ ಕಾರ್ಯಕ್ಕೆ ನಿರ್ಣಾಯಕವಾಗಿದೆ. ಹುಟ್ಟಿನಿಂದ ಹದಿಹರೆಯದವರೆಗೆ ಸತುವಿನ ಅಗತ್ಯತೆಗಳು ಏರಿಳಿತಗೊಳ್ಳುತ್ತವೆ. ಇದು ಮಕ್ಕಳ ಆಹಾರವನ್ನು ವೈವಿಧ್ಯಗೊಳಿಸಲು ಅವಶ್ಯಕವಾಗಿದೆ. ಮಾಂಸ, ಡೈರಿ, ನಟ್ಸ್, ಸೀಡ್ಸ್ ಮತ್ತು ಧಾನ್ಯಗಳು ನಿಮ್ಮ ಮಗುವಿನ ಬೆಳವಣಿಗೆಗೆ ಅಗತ್ಯವಾದ ಪೌಷ್ಟಿಕಾಂಶವನ್ನು ಒದಗಿಸುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಮಗುವಿನ ಕೋಮಲ ತ್ವಚೆಯ ಕಾಳಜಿ ಮಾಡುವುದು ಹೇಗೆ?
ಕ್ಯಾಲ್ಸಿಯಂ ಕೊರತೆ:
ಬಾಲ್ಯದಲ್ಲಿ ಮಕ್ಕಳಲ್ಲಿ ಬಲವಾದ ಮೂಳೆಗಳನ್ನು ನಿರ್ಮಿಸುವುದು ಮುಖ್ಯವಾಗಿದೆ. ಸೊಪ್ಪು, ಮೀನು ಮತ್ತು ಬಲವರ್ಧಿತ ಧಾನ್ಯಗಳಲ್ಲಿ ಕ್ಯಾಲ್ಸಿಯಂ ಹೆಚ್ಚಾಗಿರುತ್ತದೆ. ನಿಮ್ಮ ಮಗುವಿನ ವಯಸ್ಸಿಗೆ ತಕ್ಕಂತೆ ಕ್ಯಾಲ್ಸಿಯಂ ನೀಡಿ.
ಪೊಟ್ಯಾಸಿಯಮ್ ಕೊರತೆ:
ಸ್ನಾಯುವಿನ ಬೆಳವಣಿಗೆ, ನರಗಳ ಕಾರ್ಯ ಮತ್ತು ಒಟ್ಟಾರೆ ಬೆಳವಣಿಗೆಯನ್ನು ಬೆಂಬಲಿಸುವ ಪೊಟ್ಯಾಸಿಯಮ್ ಪೌಷ್ಟಿಕಾಂಶದ ಮೂಲಾಧಾರವಾಗಿದೆ. ಎದೆ ಹಾಲು ಶಿಶುಗಳಿಗೆ ಪೊಟ್ಯಾಸಿಯಂ ಅನ್ನು ಪೂರೈಸುತ್ತದೆ. ಮಕ್ಕಳು ದೊಡ್ಡವರಾದಂತೆ ಅವರ ದೇಹದಲ್ಲಿ ಪೊಟ್ಯಾಸಿಯಂ ಅಂಶ ಕಡಿಮೆಯಾಗುತ್ತದೆ. ಹಣ್ಣುಗಳು, ತರಕಾರಿಗಳು ಮತ್ತು ಬೀನ್ಸ್ ಪೊಟ್ಯಾಸಿಯಮ್ ಸಮೃದ್ಧವಾದ ಆಹಾರಗಳಾಗಿವೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ