AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Child Health: ಚಳಿಗಾಲದಲ್ಲಿ ಮಕ್ಕಳಿಗೆ ಜ್ವರ ಬಾರದಂತೆ ಎಚ್ಚರ ವಹಿಸುವುದು ಹೇಗೆ?

Winter Health Care: ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರಿಗೆ ಬೇಗ ಸೋಂಕುಗಳು ತಗುಲುತ್ತವೆ. ಅದರಲ್ಲೂ ಚಳಿಗಾಲದಲ್ಲಿ ಸೋಂಕುಗಳು ಒಬ್ಬರಿಂದ ಒಬ್ಬರಿಗೆ ಬೇಗನೆ ಹರಡುತ್ತವೆ. ಹೀಗಾಗಿ, ಚಳಿಗಾಲದಲ್ಲಿ ಈ ಸೋಂಕುಗಳಿಂದ ನಿಮ್ಮ ಮಕ್ಕಳನ್ನು ರಕ್ಷಿಸಲು ತೆಗೆದುಕೊಳ್ಳಬೇಕಾದ ಕೆಲವು ಅಗತ್ಯ ಸಲಹೆಗಳು ಇಲ್ಲಿವೆ.

Child Health: ಚಳಿಗಾಲದಲ್ಲಿ ಮಕ್ಕಳಿಗೆ ಜ್ವರ ಬಾರದಂತೆ ಎಚ್ಚರ ವಹಿಸುವುದು ಹೇಗೆ?
ಸಾಂದರ್ಭಿಕ ಚಿತ್ರ
ಸುಷ್ಮಾ ಚಕ್ರೆ
|

Updated on:Jan 31, 2024 | 12:56 PM

Share

ಚಳಿಗಾಲವು ಪ್ರಾರಂಭವಾದಂತೆ ಉಸಿರಾಟದ ಸೋಂಕುಗಳ ಹೆಚ್ಚಳವಾಗುತ್ತದೆ. ಚಳಿಗಾಲದಲ್ಲಿ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ. ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರಿಗೆ ಬೇಗ ಸೋಂಕುಗಳು ತಗುಲುತ್ತವೆ. ಈ ಸಮಯದಲ್ಲಿ ಶೀತ, ಕೆಮ್ಮು, ಜ್ವರ ಮುಂತಾದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಚಳಿಗಾಲದ ಋತುವಿನಲ್ಲಿ ನಿಮ್ಮ ಮಕ್ಕಳನ್ನು ರಕ್ಷಿಸಲು ಫ್ಲೂ, ರೈನೋವೈರಸ್, ಸ್ಟ್ರೆಪ್ ಥ್ರೋಟ್ ಮತ್ತು COVID-19ನಂತಹ ವೈರಸ್‌ಗಳು ಅಂಟುವುದನ್ನು ಕಡಿಮೆ ಮಾಡಲು ಮುನ್ನೆಚ್ಚರಿಕಾ ಕ್ರಮದ ಅಗತ್ಯವಿದೆ. ಚಳಿಗಾಲದಲ್ಲಿ ಈ ಸೋಂಕುಗಳಿಂದ ನಿಮ್ಮ ಮಕ್ಕಳನ್ನು ರಕ್ಷಿಸಲು ತೆಗೆದುಕೊಳ್ಳಬೇಕಾದ ಕೆಲವು ಅಗತ್ಯ ಸಲಹೆಗಳು ಇಲ್ಲಿವೆ.

ಮಕ್ಕಳಿಗೆ ಜ್ವರ ಬಾರದಂತೆ ತಡೆಯುವುದು ಹೇಗೆ?:

ಅನಾರೋಗ್ಯದ ವ್ಯಕ್ತಿಗಳ ಜೊತೆ ಎಚ್ಚರದಿಂದಿರಿ:

ಉಸಿರಾಟದ ಸೋಂಕಿನ ಲಕ್ಷಣಗಳನ್ನು ಹೊಂದಿರುವ ರೋಗಿಗಳೊಂದಿಗೆ ಮಕ್ಕಳು ಹೆಚ್ಚು ಬೆರೆಯದಂತೆ ಜಾಗರೂಕರಾಗಿರಿ. ಸಾಂಕ್ರಾಮಿಕ ಕಾಯಿಲೆಗಳಿಗೆ ಒಡ್ಡಿಕೊಳ್ಳುವ ಅಪಾಯವನ್ನು ಕಡಿಮೆ ಮಾಡಲು ದಿನನಿತ್ಯದ ತಪಾಸಣೆಗಾಗಿ ಆಸ್ಪತ್ರೆಗಳಿಗೆ ಭೇಟಿ ನೀಡುವುದನ್ನು ಕಡಿಮೆ ಮಾಡಬೇಕು.

ಇದನ್ನೂ ಓದಿ: ನಿಮ್ಮ ಮಗು ಸರಿಯಾಗಿ ನಿದ್ರೆ ಮಾಡುತ್ತಿಲ್ಲವೇ?; ನಿರ್ಲಕ್ಷ್ಯ ಮಾಡಬೇಡಿ

ಸಮಯೋಚಿತ ಫ್ಲೂ ವ್ಯಾಕ್ಸಿನೇಷನ್:

ಚಳಿಗಾಲದ ಅವಧಿಗೆ ಮುಂಚಿತವಾಗಿ ನಿಮ್ಮ ಮಗುವಿಗೆ ಫ್ಲೂ ಲಸಿಕೆಯ ಕೊಡಿಸಿ. ಜ್ವರ ಚಳಿಗಾಲದ ಋತುವಿನ ಆರಂಭದ ಮೊದಲು ಪ್ರತಿರಕ್ಷೆಯನ್ನು ನಿರ್ಮಿಸಲು ಜೂನ್ ಅಥವಾ ಜುಲೈ ಅತ್ಯುತ್ತಮ ತಿಂಗಳುಗಳಾಗಿವೆ.

ಧೂಮಪಾನದ ಹೊಗೆ ಇರುವ ಕಡೆ ಎಚ್ಚರ:

ಮಕ್ಕಳು ಧೂಮಪಾನ ಮತ್ತು ನಿಷ್ಕ್ರಿಯ ಹೊಗೆಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ. ಏಕೆಂದರೆ ಇದು ನಿಮ್ಮ ಮಗುವಿನ ಉಸಿರಾಟದ ಆರೋಗ್ಯಕ್ಕೆ ತೊಂದರೆ ಉಂಟುಮಾಡಬಹುದು. ಬೇರೆಯವರು ಸಿಗರೇಟ್ ಸೇದಿದರೂ ಅದರ ಹೊಗೆಯು ಮಕ್ಕಳಿಗೆ ಕೆಮ್ಮು ಉಂಟುಮಾಡಬಹುದು, ಉಸಿರಾಟದ ತೊಂದರೆಯನ್ನೂ ಹೆಚ್ಚಿಸಬಹುದು. ಚಳಿಗಾಲದಲ್ಲಿ ಮಕ್ಕಳು ಉಸಿರಾಟದ ಸೋಂಕುಗಳಿಗೆ ಹೆಚ್ಚು ಒಳಗಾಗುತ್ತಾರೆ.

ಶೀತದ ಲಕ್ಷಣಗಳನ್ನು ನಿರ್ವಹಿಸಿ:

ನಿಮ್ಮ ಮಗುವಿಗೆ ಶೀತವಾಗಿದ್ದರೆ ಮೂಗಿನ ಅಡಚಣೆಯನ್ನು ನಿವಾರಿಸಲು ಲವಣಯುಕ್ತ ಮೂಗಿನ ಹನಿಗಳನ್ನು ಮತ್ತು ಮೂಗನ್ನು ತೆರವುಗೊಳಿಸಲು ಮೂಗಿನ ಆಸ್ಪಿರೇಟರ್ ಅನ್ನು ಬಳಸಿ. ಶುಷ್ಕ ಚಳಿಗಾಲದ ಗಾಳಿಯನ್ನು ಎದುರಿಸಲು ಕೋಣೆಯಲ್ಲಿ ಹ್ಯೂಮಿಡಿಫೈಯರ್ ಇರಿಸಿ. ಇದು ಒಣ ಕೆಮ್ಮನ್ನು ತಡೆಯುತ್ತದೆ. ಆದರೆ, ಅತಿಯಾದ ತೇವಾಂಶವು ಮಕ್ಕಳಲ್ಲಿ ಆಸ್ತಮಾವನ್ನು ಪ್ರಚೋದಿಸುವ ಕಾರಣದಿಂದ ಹೆಚ್ಚು ರೂಂನಲ್ಲಿ ತೀರಾ ಹೆಚ್ಚಿನ ಹ್ಯೂಮಿಡಿಟಿ ಇರದಂತೆ ನೋಡಿಕೊಳ್ಳುವುದು ಉತ್ತಮ.

ಕೈ ನೈರ್ಮಲ್ಯಕ್ಕೆ ಆದ್ಯತೆ ನೀಡಿ:

ಮಕ್ಕಳು ಕೊಳಕಾದ ವಸ್ತುಗಳನ್ನು, ಜಾಗಗಳನ್ನು ಮುಟ್ಟುತ್ತಿರುವುದರಿಂದ ಆಗಾಗ ಕೈ ತೊಳೆಯುವ ಅಭ್ಯಾಸಗಳನ್ನು ರೂಢಿಸಿ. ಸ್ವಚ್ಛವಾಗಿರುವುದರ ಮಹತ್ವವನ್ನು ನಿಮ್ಮ ಮಗುವಿಗೆ ಕಲಿಸಿ. ನಿಯಮಿತವಾದ ಕೈ ನೈರ್ಮಲ್ಯವು ಸೋಂಕುಗಳ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ.

ಇದನ್ನೂ ಓದಿ: Mumps Virus: ಮಂಗನಬಾವು ಎಂದರೇನು?; ಈ ರೋಗ ಮಕ್ಕಳಿಗೆ ಅಪಾಯಕಾರಿಯೇ?

ಉಸಿರಾಟದ ಸಮಸ್ಯೆಗಳಿಗೆ ಸಿದ್ಧರಾಗಿ:

ನಿಮ್ಮ ಮಗುವಿಗೆ ಉಬ್ಬಸ ಅಥವಾ ಆಸ್ತಮಾದಂತಹ ಉಸಿರಾಟದ ಸಮಸ್ಯೆಗಳು ಆಗಾಗ ಉಂಟಾಗುತ್ತಿದ್ದರೆ ಮುಂಚಿತವಾಗಿ ನಿಮ್ಮ ಶಿಶುವೈದ್ಯರನ್ನು ಸಂಪರ್ಕಿಸಿ. ಚಳಿಗಾಲಕ್ಕೂ ಮೊದಲೇ ಅದಕ್ಕೆ ಬೇಕಾದ ಔಷಧಿಗಳನ್ನು ತಂದಿಟ್ಟುಕೊಳ್ಳಿ.

ಚಳಿಗಾಲದಲ್ಲಿ ಮಕ್ಕಳನ್ನು ಹೊಸ ಜಾಗಕ್ಕೆ ಹೆಚ್ಚು ಕರೆದುಕೊಂಡು ಹೋಗಬೇಡಿ. ಇದರಿಂದ ವಾತಾವರಣ ಬದಲಾಗಿ ಮಕ್ಕಳಿಗೆ ಬೇಗ ಅನಾರೋಗ್ಯ ಉಂಟಾಗಬಹುದು. ಕಿಕ್ಕಿರಿದ ಸ್ಥಳಗಳು ಸೋಂಕುಗಳಿಗೆ ಒಡ್ಡಿಕೊಳ್ಳುವ ಅಪಾಯವನ್ನು ಹೆಚ್ಚಿಸುತ್ತವೆ. ಮುಚ್ಚಿದ ಪರಿಸರದಲ್ಲಿ ಸೋಂಕು ಹರಡುವುದು ಬೇಗ. ಅನಗತ್ಯ ಪ್ರಯಾಣವನ್ನು ತಪ್ಪಿಸಿ. ಚಳಿಗಾಲದಲ್ಲಿ ವಿಮಾನದಲ್ಲಿ ಹಾಗೂ ಎಸಿ ಬಸ್​ಗಳಲ್ಲಿ ಹೆಚ್ಚು ಸಂಚರಿಸಬೇಡಿ. ಇಲ್ಲಿ ಸೋಂಕುಗಳು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:03 am, Wed, 31 January 24

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!