Cluster Beans Benefits: ಚವಳಿಕಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ತಿಳಿಯಿರಿ

ಚವಳಿಕಾಯಿ(Cluster Beans) ಯನ್ನು ಗೋರಿಕಾಯಿ ಎಂದು ಕೂಡ ಕರೆಯುತ್ತಾರೆ, ನೋಡಲು ಬೀನ್ಸ್​ನಂತೆ ಕಂಡರೂ ರುಚಿಯನ್ನು ಸ್ವಲ್ಪ ಕಹಿ ಇರುತ್ತದೆ.

Cluster Beans Benefits: ಚವಳಿಕಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ತಿಳಿಯಿರಿ
ಚವಳಿಕಾಯಿ
Follow us
| Updated By: ನಯನಾ ರಾಜೀವ್

Updated on:May 08, 2023 | 9:59 AM

ಚವಳಿಕಾಯಿ(Cluster Beans) ಯನ್ನು ಗೋರಿಕಾಯಿ ಎಂದು ಕೂಡ ಕರೆಯುತ್ತಾರೆ, ನೋಡಲು ಬೀನ್ಸ್​ನಂತೆ ಕಂಡರೂ ರುಚಿಯನ್ನು ಸ್ವಲ್ಪ ಕಹಿ ಇರುತ್ತದೆ. ಗೋರಿ ಕಾಯಿ ದೇಹ ತೂಕ ಇಳಿಸಿಕೊಳ್ಳಲು (Weight lose) ಸಹಾಯ ಮಾಡುತ್ತದೆ. ಹೆಚ್ಚು ಹೊತ್ತು ಕುಳಿತಲ್ಲೇ ಕೆಲಸ ಮಾಡುವುದು, ಕರಿದ ಆಹಾರವನ್ನು ತಿನ್ನುವುದು ದೇಹದ ಬೊಜ್ಜಿನ (fat) ಸಮಸ್ಯೆಗೆ ಕಾರಣವಾಗಬಹುದು. ಹೆಚ್ಚುತ್ತಿರುವ ತೂಕವನ್ನು ನಿಯಂತ್ರಣದಲ್ಲಿಡಲು ಗೋರಕಾಯಿ ನೆರವಾಗುತ್ತದೆ.

ಆರೋಗ್ಯ ತಜ್ಞರ ಪ್ರಕಾರ, ಇತರ ತರಕಾರಿಗಳಿಗಿಂತ ಗೋರಿ ಕಾಯಿಯ, ಅಧಿಕ ಪ್ರಮಾಣದ ಫೈಬರ್ ಅಂಶ ಇರುತ್ತದೆ. ಇದು ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಮಲಬದ್ಧತೆಯ (Constipation) ಸಮಸ್ಯೆಯಿಂದ ತೊಂದರೆಗೊಳಗಾಗಿದ್ದರೆ ಖಂಡಿತವಾಗಿಯೂ ಆಹಾರದಲ್ಲಿ ಗೋರಿ ಕಾಯಿಯನ್ನು ಸೇರಿಸಿ.

ಇದರಲ್ಲಿರುವ ಫೈಬರ್ ಮಲಬದ್ಧತೆಯಂತಹ ಸಮಸ್ಯೆಯನ್ನು ಬಹಳ ಮಟ್ಟಿಗೆ ಕಡಿಮೆ ಮಾಡುತ್ತದೆ. ನಿಯಮಿತವಾಗಿ ಇದನ್ನೂ ಸೇವಿಸುತ್ತಾ ಬಂದರೆ, ಜೀರ್ಣಕಾರಿ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಬಹುದು. ಇದು ಹೊಟ್ಟೆಯನ್ನು ಸ್ವಚ್ಛವಾಗಿಡಲು ಕೂಡಾ ನೆರವಾಗುತ್ತದೆ.

ಎಲುಬುಗಳನ್ನು ಗಟ್ಟಿಯಾಗಿರುವಂತೆ ಮಾಡುತ್ತದೆ ಗೋರಿಕಾಯಿ ಮತ್ತು ಅದರ ಬೀಜಗಳನ್ನು ಪೋಷಕಾಂಶಗಳ, ಕ್ಯಾಲ್ಸಿಯಂನ ಉಗ್ರಾಣ ಎಂದೇ ಕರೆಯಲಾಗುತ್ತದೆ. ಇದರಲ್ಲಿರುವ ಫಾಸ್ಪರಸ್ ಮತ್ತು ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸುವುದರ ಜೊತೆಗೆ ಅವುಗಳನ್ನು ಆರೋಗ್ಯವಾಗಿರಿಸುತ್ತದೆ. ಈ ಕಾರಣಕ್ಕಾಗಿ ಗೋರಿ ಕಾಯಿಯನ್ನು ಆಹಾರದಲ್ಲಿ ಸೇವಿಸಲೇಬೇಕು ಎಂದು ಹೇಳಲಾಗುತ್ತದೆ.

ಮಧುಮೇಹ ಇರುವವರಿಗೆ ಪ್ರಯೋಜನಕಾರಿ ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡಲು ಚವಳಿಕಾಯಿ ಸಹಾಯ ಮಾಡುತ್ತದೆ ಅದರಲ್ಲಿರುವ ಗ್ಲೈಸೋಮಿಕ್ ಇಂಡೆಕ್ಸ್​ ಕಡಿಮೆ ಇರುವ ಕಾರಣ ಏಕಾ ಏಕಿ ರಕ್ತದೊತ್ತಡದಲ್ಲಿ ಬದಲಾವಣೆಯಾಗದು.

ಮೂಳೆಗಳನ್ನು ಬಲಿಷ್ಠಗೊಳಿಸುತ್ತದೆ ಚವಳಿಕಾಯಿ ತಿನ್ನುವುದರಿಂದ ಕಾಲುಗಳಲ್ಲಿನ ಶಕ್ತಿ ಹೆಚ್ಚಳವಾಗಲಿದೆ, ಅದರಲ್ಲಿರುವ ಫಾಸ್ಪರಸ್ ಮೂಳೆಗಳನ್ನು ಬಲಿಷ್ಠಗೊಳಿಸುತ್ತದೆ.

ಹೃದಯಕ್ಕೂ ಪ್ರಯೋಜನಕಾರಿ ದೇಹದಲ್ಲಿ ಬೊಜ್ಜಿನ ಅಂಶವನ್ನು ಕಡಿಮೆ ಮಾಡಲು ಚವಳಿಕಾಯಿ ತುಂಬಾ ಸಹಕಾರಿ. ಫೈಬರ್, ಪೊಟ್ಯಾಷಿಯಂ, ಫೋಲೇಟ್ಇರುವ ಇದು ಅನೇಕ ರೀತಿಯ ಹೃದಯ ಸಂಬಂಧಿ ಕಾಯಿಲೆಗಳನ್ನು ದೂರ ಮಾಡುತ್ತದೆ.

ರಕ್ತದೊತ್ತಡ ನಿಯಂತ್ರಣ ಚವಳಿಕಾಯಿಯು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿ, ಅದರಲ್ಲಿ ಹೈಪೊಲಿಪೆಡೆಮಿಕ್ ಗುಣ ರಕ್ತದೊತ್ತಡ ಇರುವ ರೋಗಿಗಳಿಗೆ ನೆಮ್ಮದಿ ನೀಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:00 am, Mon, 8 May 23