Coronavirus Fact Check: ಹಸಿ ಈರುಳ್ಳಿಗೆ ಉಪ್ಪು ಸೇರಿಸಿ ತಿಂದರೆ ಕೊರೊನಾ ವೈರಾಣು ಹೊಡೆದೋಡಿಸಬಹುದೇ? ಇಲ್ಲಿದೆ ಸತ್ಯಾಂಶ

ಕೊರೊನಾ ವೈರಸ್​ ಮಾರಣಾಂತಿಕ ರೋಗವನ್ನು ಗುಣಪಡಿಸುವುದರ ಕುರಿತಾಗಿ ಉಚಿತ ಸಲಹೆಗಳನ್ನು ನೀಡುವುದರಲ್ಲಿ ಸಾಮಾಜಿಕ ಜಾಲತಾಣವು ಹೆಚ್ಚಿನ ಸವಾರಿ ಮಾಡುತ್ತಿದ್ದಂತೆ ಅನಿಸುತ್ತಿದೆ.

Coronavirus Fact Check: ಹಸಿ ಈರುಳ್ಳಿಗೆ ಉಪ್ಪು ಸೇರಿಸಿ ತಿಂದರೆ ಕೊರೊನಾ ವೈರಾಣು ಹೊಡೆದೋಡಿಸಬಹುದೇ? ಇಲ್ಲಿದೆ ಸತ್ಯಾಂಶ
ಈರುಳ್ಳಿ
Follow us
shruti hegde
| Updated By: Skanda

Updated on:Apr 23, 2021 | 7:35 AM

ಕೊರೊನಾ ಎರಡನೇ ಅಲೆಯು ತನ್ನ ಆರ್ಭಟವನ್ನು ಮೆರೆಯುತ್ತಿದೆ. ಹೀಗಿರುವಾಗ ವೈರಸ್​ನ ಹರಡುವಿಕೆಯನ್ನು ತಡೆಯುವ ಬಗ್ಗೆ ಕೆಲ ಜನರು ಖಚಿತವಲ್ಲದ ಮಾಹಿತಿಗಳನ್ನು ಹಂಚುತ್ತಿದ್ದಾರೆ. ಕೊರೊನಾ ವೈರಸ್​ನ್ನು ಗುಣಪಡಿಸುವುದರ ಕುರಿತಾಗಿ ಉಚಿತ ಸಲಹೆಗಳನ್ನು ನೀಡುತ್ತಿದ್ದಾರೆ. ಅವುಗಳಲ್ಲಿ ಹೆಚ್ಚು ವೈರಲ್​ ಅದಂತಹ ಒಂದು ಸಲಹೆಯೆಂದರೆ, ಹಸಿ ಈರುಳ್ಳಿಯ ಜೊತೆ ಕಲ್ಲು ಉಪ್ಪನ್ನು ಬೆರೆಸಿ ಸೇವಿಸಿದರೆ ಕೊರೊನಾ ವೈರಸ್ಅನ್ನು 15ನೇ ನಿಮಿಷಗಳಲ್ಲಿ ಗುಣಪಡಿಸಬಹುದು ಎಂಬುದು. ಇದು ನಿಜವೇ? ಇಲ್ಲಿದೆ ಮಾಹಿತಿ.

ಈ ಉಚಿತ ಸಲಹೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜನರು ಕೂಡಾ ಈ ಬಗ್ಗೆ ಹೆಚ್ಚು ಒಲವು ತೋರಿಸಿದಂತೆ ಅನಿಸುತ್ತಿದೆ. ಈ ಕುರಿತಂತೆ ವಿಶ್ವಾಸ್​ ನ್ಯೂಸ್​ ಸುದ್ದಿ ಸಂಸ್ಥೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕೃತ ವೆಬ್​ಸೈಟ್​ ವಿವರವಾದ ಸಂಶೋಧನೆಯನ್ನು ನಡೆಸಿದ್ದಾರೆ. ಆದರೆ ಈ ವಾಟ್ಸಾಪ್​ನಲ್ಲಿ ಹರಿದಾಡುತ್ತಿರುವ ಸಂದೇಶಕ್ಕೆ ಸಂಬಂಧಿಸಿದಂತೆ ವೈರಲ್​ ಸುದ್ದಿ ನಿಜ ಎಂಬ ಮಾಹಿತಿ ಸಿಗಲಿಲ್ಲ. ನಂತರ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯ ಶ್ವಾಸಕೋಶ ತಜ್ಞರಾದ ಡಾ.ನಿಖಿಲ್ ಮೋದಿಯವರನ್ನು ಸಂಪರ್ಕಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೈರಲ್​ ಸುದ್ದಿ ನಕಲಿ ಎಂದು ಹೇಳಿದ ಅವರು, ಹಸಿ ಈರುಳ್ಳಿಯನ್ನು ಕಲ್ಲು ಉಪ್ಪಿನೊಂದಿಗೆ ಸೇವಿಸಿದರೆ ಕೊರೊನಾ ವೈರಸ್​ನಿಂದ 15 ನಿಮಿಷಗಳಲ್ಲಿ ಮುಕ್ತರಾಗಬಹುದು ಎಂಬುದನ್ನು ನಿರಾಕರಿಸಿದ್ದಾರೆ.

ಇದಲ್ಲದೇ ಅಮೆರಿಕದ ಒಂದು ಸಂಸ್ಥೆಯ ಪ್ರಕಾರ, ಈರುಳ್ಳಿ ವಿಷಕಾರಿ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ ಎಂದು ಹೇಳುವ ಯಾವುದೇ ಪುರಾವೆಗಳು ಅಥವಾ ಅಧ್ಯಯನಗಳು ಇಲ್ಲ ಎಂಬ ಮಾಹಿತಿ ಇದೆ. ಕೊರೊನಾ ವೈರಸ್​ನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಏಕೈಕ ಪರಿಣಾಮಕಾರಿ ಮಾರ್ಗವೆಂದರೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮುಖಗವಸು ಧರಿಸುವುದು ಜೊತೆಗೆ ಒಳ ಬರುತ್ತಿದ್ದಂತೆ ಕೈಗಳನ್ನು ಸ್ಯಾನಿಟೈಸ್​ ಮಾಡಿಕೊಳ್ಳುವುದಾಗಿದೆ.

ಇದನ್ನೂ ಓದಿ: ರೂಪಾಂತರಿ ಕೊರೊನಾ ವೈರಸ್​ ವಿರುದ್ಧವೂ ಕೊವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿ: ಐಸಿಎಂಆರ್

(Covid Prevention Fact Check Can onion with salt help cure Coronavirus Disease here is the truth)

Published On - 6:50 am, Fri, 23 April 21