
ದೆಹಲಿ, ಜೂನ್ 16: ಮಳೆಗಾಲ ಆರಂಭವಾಗುತ್ತಿದ್ದಂತೆ ಡೆಂಗ್ಯೂ (Dengue) ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಹೌದು, ಭಾರತದಲ್ಲಿ ಪ್ರತಿ ವರ್ಷ ಎರಡು ಲಕ್ಷಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ದಾಖಲಾಗುತ್ತಿದೆ. ಇದೀಗ ಟಿವಿ9 ನೆಟ್ವರ್ಕ್ ಡೆಂಗ್ಯೂ ವಿರುದ್ಧ ಹೋರಾಡಲು ಹೆಜ್ಜೆ ಇಟ್ಟಿದೆ. ಹೌದು, ವಿಶ್ವ ಡೆಂಗ್ಯೂ ದಿನ 2025 ( World Dengue Day 2025) ರ ಸಂದರ್ಭದಲ್ಲಿ, ಟಿವಿ9ನೆಟ್ ವರ್ಕ್, ಆಲ್ ಔಟ್ ಮತ್ತು ಭಾರತೀಯ ವೈದ್ಯಕೀಯ ಸಂಘ (TV9 Network, All Out, Indian Medical Association) ದ ಸಹಯೋಗದೊಂದಿಗೆ ‘ ಎಲ್ಲರೂ ಒಟ್ಟಾಗಿ ಸೇರಿ ಡೆಂಗ್ಯೂ ವಿರುದ್ಧ ಹೋರಾಡೋಣ (Saath Ladenge Dengue Se) ಅಭಿಯಾನವನ್ನು ಪ್ರಾರಂಭಿಸಿದೆ. ಇದರಲ್ಲಿ ಆರು ಪ್ರಾದೇಶಿಕ ಚಾನೆಲ್‌ಗಳು ಒಳಗೊಂಡಂತೆ , ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ತಜ್ಞರಿಂದ ಸಲಹೆ ಹಾಗೂ ರಾಷ್ಟ್ರೀಯ ಪ್ಯಾನಲ್ ಚರ್ಚೆಗಳ ಮೂಲಕ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸುವ ಪ್ರಮುಖ ಗುರಿಯನ್ನು ಹೊಂದಿದೆ, ಹಾಗಾದ್ರೆ ಈ ಅಭಿಯಾನದ ವಿಶೇಷತೆಗಳೇನು? ಏನೆಲ್ಲಾ ಗುರಿಯನ್ನು ಹೊಂದಿದೆ ಎನ್ನುವ ಮಾಹಿತಿಯನ್ನು ನೀವಿಲ್ಲಿ ತಿಳಿದುಕೊಳ್ಳಿ.
ಟಿವಿ9 ನೆಟ್‌ವರ್ಕ್‌ನ ಚೀಫ್ ರೆವೆನ್ಯೂ ಆಫೀಸರ್ ಅಮಿತ್ ತ್ರಿಪಾಠಿ ಮಾತನಾಡಿ, ಅರ್ಥಪೂರ್ಣ ಬದಲಾವಣೆಯನ್ನು ತರಲು ಮಾಧ್ಯಮದ ಶಕ್ತಿಯನ್ನು ಬಳಸುವುದರಲ್ಲಿ ನಾವು ನಂಬಿಕೆ ಇಡುತ್ತೇವೆ. ಆಲ್ ಔಟ್ ಜೊತೆಗಿನ ನಮ್ಮ ಪಾಲುದಾರಿಕೆಯಲ್ಲಿ , ನಾವು ಕೇವಲ ಅಭಿಯಾನವನ್ನು ಪ್ರಸಾರ ಮಾಡುತ್ತಿಲ್ಲ, ಮಾಹಿತಿ ನೀಡುವುದರೊಂದಿಗೆ ಡೆಂಗ್ಯೂ ವಿರುದ್ಧ ಹೋರಾಡಲು ರಾಷ್ಟ್ರವ್ಯಾಪಿ ಆಂದೋಲನವನ್ನು ಸಕ್ರಿಯಗೊಳಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಟಿವಿ9 ನೆಟ್‌ವರ್ಕ್‌ನ ಚೀಫ್ ಗ್ರೋಥ್ ಆಫೀಸರ್ ಶಕ್ತಿಮ್ ದಾಸ್ ಜಾಗೃತಿಯು ತಡೆಗಟ್ಟುವಿಕೆಯ ಮೊದಲ ಹೆಜ್ಜೆಯಾಗಿದೆ. ಡೆಂಗ್ಯೂ ವಿರುದ್ಧ ಒಟ್ಟಾಗಿ ಹೊರಡೋಣ ಹಾಗೂ ಆಲ್ ಔಟ್’ ಉಪಕ್ರಮದೊಂದಿಗೆ ನಾವು ಭಾರತದಾದ್ಯಂತ ಕುಟುಂಬಗಳನ್ನು ಸಬಲೀಕರಣಗೊಳಿಸಲು ಹಾಗೂ ವೈದ್ಯಕೀಯ ಒಳನೋಟವನ್ನು ಹೆಚ್ಚಿನ ಪ್ರಭಾವ ಬೀರುವ ಸಲುವಾಗಿ ಈ ಅಭಿಯಾನದೊಂದಿಗೆ ಸಜ್ಜಾಗಿದ್ದೇವೆ. ಇದು ಸಾರ್ವಜನಿಕರ ಆರೋಗ್ಯ ಪರಿವರ್ತನೆಗೆ ಹೇಗೆ ಉತ್ತೇಜನ ನೀಡುತ್ತದೆ ಎಂಬುದಕ್ಕೆ ಈ ಅಭಿಯಾನವು ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.
ಬ್ರಿಲಿಯನ್ ಕನ್ಸ್ಯೂಮರ್ ಪ್ರಾಡಕ್ಟ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಓ , ರತನ್‌ಜಿತ್ ದಾಸ್ ಮಾತನಾಡಿ, “ಆಲ್ ಔಟ್ ಯಾವಾಗಲೂ ಸೊಳ್ಳೆಗಳು ಮತ್ತು ಅವುಗಳಿಂದ ಹರಡುವ ರೋಗಗಳಿಂದ ಕುಟುಂಬಗಳನ್ನು ರಕ್ಷಿಸಲು ನಿಂತಿದೆ. ಭಾರತದಲ್ಲಿ ಇಂದಿಗೂ ರೋಗಕಾರಕಗಳಿಂದ ಹರಡುವ ರೋಗಗಳ ಬಗ್ಗೆ ಜಾಗೃತಿಯ ಕೊರತೆಯಿದೆ. ಡೆಂಗ್ಯೂ ಹೆಚ್ಚುತ್ತಿರುವಂತೆ, ಜನರಿಗೆ ಮಾಹಿತಿ ನೀಡುವ ಹಾಗೂ ಸಾಮೂಹಿಕ ಜಾಗೃತಿ ಮೂಡಿಸಲು ವಿಶ್ವಾಸಾರ್ಹ ಪಾಲುದಾರರೊಂದಿಗೆ ಕೆಲಸ ಮಾಡುವ ಅಗತ್ಯವಿದೆ. ಈ ಆಲ್ ಔಟ್‌ನ ಎಲ್ಲರೂ ಒಟ್ಟಾಗಿ ಸೇರಿ ಡೆಂಗ್ಯೂ ವಿರುದ್ಧ ಹೋರಾಡೋಣ ಈ ಅಭಿಯಾನವು ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.
ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ನ್ಯಾಷನಲ್ ಪ್ರೆಸಿಡೆಂಟ್ ಡಾ. ದಿಲೀಪ್ ಭಾನುಶಾಲಿ, “ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವುದು ಸಾರ್ವಜನಿಕ ಆರೋಗ್ಯದ ಮೊದಲ ಆದ್ಯತೆಯಾಗಿದೆ. ಡೆಂಗ್ಯೂನಂತಹ ರೋಗಗಳನ್ನು ವ್ಯಕ್ತಿಯಿಂದ ಪ್ರತ್ಯೇಕವಾಗಿ ನಿಭಾಯಿಸಲು ಸಾಧ್ಯವಿಲ್ಲ. ಇದಕ್ಕೆ ಸಾಮೂಹಿಕವಾಗಿ ಹೋರಾಡುವ ಹಾಗೂ ಪರಿಹಾರಗಳನ್ನು ಕಂಡುಕೊಳ್ಳುವ ಅಗತ್ಯವಿದೆ. ಈ ರೋಗದ ಬಗ್ಗೆ ಜಾಗೃತಿ ಮೂಡಿಸಲು ಮಾಹಿತಿಯನ್ನು ಮನೆಗಳಿಗೆ ತಲುಪಲು ಈ ಉಪಕ್ರಮದಲ್ಲಿ ಭಾರತೀಯ ವೈದ್ಯಕೀಯ ಸಂಘವು ಭಾಗಿಯಾಗಿರುವುದಕ್ಕೆ ಹೆಮ್ಮೆಪಡುತ್ತದೆ ಎಂದು ಹೇಳಿದ್ದಾರೆ.
ಅಭಿಯಾನದ ಮೂಲ ಉದ್ದೇಶವೇನು?
ಭಾರತದಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಭೀತಿಯ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅದನ್ನು ಎದುರಿಸಲು ನಾಗರಿಕರನ್ನು ಸಜ್ಜುಗೊಳಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಭಾರತದಾದ್ಯಂತ ಡೆಂಗ್ಯೂ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚುತ್ತಿರುವುದರಿಂದ, ಜನರಲ್ಲಿ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ. ರಾತ್ರಿಯಲ್ಲಿ ಸೊಳ್ಳೆಗಳು ಕಿರಿಕಿರಿ ಉಂಟುಮಾಡುವುದಲ್ಲದೆ, ಡೆಂಗ್ಯೂ, ಮಲೇರಿಯಾ, ಚಿಕೂನ್‌ಗುನ್ಯಾ ಮತ್ತು ಫೈಲೇರಿಯಾಸಿಸ್‌ನಂತಹ ಮಾರಕ ರೋಗಗಳ ವಾಹಕಗಳಾಗಿರುವುದರಿಂದ ಸೊಳ್ಳೆಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಅಭಿಯಾನದ ಪಾತ್ರ ಬಹುದೊಡ್ಡದು.
ಈ ಅಭಿಯಾನದಲ್ಲಿ ಏನೆಲ್ಲಾ ವಿಶೇಷತೆಗಳಿರಲಿದೆ?
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:37 pm, Mon, 16 June 25