Dill Leaves Benefits: ಬಾಣಂತಿಯರಿಗೆ ಸಬ್ಬಸಿಗೆ ಸೊಪ್ಪು ದೇವರು ಕೊಟ್ಟ ವರದಾನ!

ಹೆರಿಗೆಯ ನಂತರದ ಆಹಾರ ಸೇವನೆಯಲ್ಲಿ ಕೆಲವು ಪಥ್ಯಗಳನ್ನು ಮಾಡಬೇಕಾಗಿರುತ್ತದೆ. ಹಾಗಾಗಿ ಯಾವುದು ತಿನ್ನಬೇಕು ಮತ್ತು ತಿನ್ನಬಾರದು ಎಂಬುದರ ಕಡೆಗೆ ಗಮನ ನೀಡುವುದರ ಜೊತೆಗೆ ಯಾವ ಆಹಾರ ಸೇವನೆ ಮಾಡುವುದರಿಂದ ಅತ್ಯಧಿಕ ಲಾಭಗಳಿವೆ ಎಂಬುದನ್ನು ತಿಳಿದುಕೊಂಡಿರಬೇಕಾಗುತ್ತದೆ. ಅಂತಹ ಅತ್ಯಧಿಕ ಪೋಷಕಾಂಶಗಳನ್ನು ಒಳಗೊಂಡಿರುವುದರಲ್ಲಿ ಸಬ್ಬಸಿಗೆ ಸೊಪ್ಪು ಅಗ್ರ ಸ್ಥಾನದಲ್ಲಿರುತ್ತದೆ. ಇದು ಬಾಣಂತಿಯರಿಗೆ ದೇವರು ಕೊಟ್ಟ ವರದಾನ ಎಂದರೆ ತಪ್ಪಾಗಲಾರದು. ಹಾಗಾದರೆ ಇದರ ಸೇವನೆಯನ್ನು ಯಾವ ರೀತಿಯಲ್ಲಿ ಮಾಡಬಹುದು? ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

Dill Leaves Benefits: ಬಾಣಂತಿಯರಿಗೆ ಸಬ್ಬಸಿಗೆ ಸೊಪ್ಪು ದೇವರು ಕೊಟ್ಟ ವರದಾನ!
ಸಬ್ಬಸಿಗೆ ಸೊಪ್ಪು
Edited By:

Updated on: Jul 17, 2024 | 3:33 PM

ಭಾರತೀಯ ಆಹಾರ ಪದ್ದತಿಯಲ್ಲಿ ಹೆರಿಗೆಯ ನಂತರದ ಆಹಾರ ಸೇವನೆಯಲ್ಲಿ ಕೆಲವು ಪಥ್ಯಗಳನ್ನು ಮಾಡಬೇಕಾಗಿರುತ್ತದೆ. ಹಾಗಾಗಿ ಯಾವುದು ತಿನ್ನಬೇಕು ಮತ್ತು ತಿನ್ನಬಾರದು ಎಂಬುದರ ಕಡೆಗೆ ಗಮನ ನೀಡುವುದರ ಜೊತೆಗೆ ಯಾವ ಆಹಾರ ಸೇವನೆ ಮಾಡುವುದರಿಂದ ಅತ್ಯಧಿಕ ಲಾಭಗಳಿವೆ ಎಂಬುದನ್ನು ತಿಳಿದುಕೊಂಡಿರಬೇಕಾಗುತ್ತದೆ. ಅಂತಹ ಅತ್ಯಧಿಕ ಪೋಷಕಾಂಶಗಳನ್ನು ಒಳಗೊಂಡಿರುವುದರಲ್ಲಿ ಸಬ್ಬಸಿಗೆ ಸೊಪ್ಪು ಅಗ್ರ ಸ್ಥಾನದಲ್ಲಿರುತ್ತದೆ. ಇದು ಬಾಣಂತಿಯರಿಗೆ ದೇವರು ಕೊಟ್ಟ ವರದಾನ ಎಂದರೆ ತಪ್ಪಾಗಲಾರದು. ಹಾಗಾದರೆ ಇದರ ಸೇವನೆಯನ್ನು ಯಾವ ರೀತಿಯಲ್ಲಿ ಮಾಡಬಹುದು? ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಬಾಣಂತಿಯರಿಗೆ ಸಾಮಾನ್ಯವಾಗಿ ನಿಶಕ್ತಿ, ಆಯಾಸ ಇದ್ದೇ ಇರುತ್ತದೆ. ಆ ಸಮಯದಲ್ಲಿ ನೀಡುವ ಆಹಾರ ತಾಯಂದಿರಿಗೆ ಮತ್ತು ಮಗುವಿನ ದೇಹಕ್ಕೆ ತುಂಬಾ ಉಪಯೋಗಕಾರಿಯಾಗಿರಬೇಕು. ಏಕೆಂದರೆ ಈ ಸಮಯದಲ್ಲಿ ತೆಗೆದುಕೊಳ್ಳುವ ಆಹಾರ ಮಕ್ಕಳ ಆರೋಗ್ಯಕರ ಬೆಳವಣಿಗೆಗೂ ಕೂಡ ತುಂಬಾ ಮುಖ್ಯವಾಗಿರುತ್ತದೆ. ಹಾಗಾಗಿ ಸಬ್ಬಸಿಗೆ ಸೊಪ್ಪನ್ನು ಹೇರಳವಾಗಿ ನೀಡುವುದು ತುಂಬಾ ಒಳ್ಳೆಯದು. ಇದರಿಂದ ಅನೇಕ ರೀತಿಯ ಪದಾರ್ಥಗಳನ್ನು ಕೂಡ ತಯಾರಿಸಬಹುದಾಗಿದ್ದು ಬಗೆ ಬಗೆಯ ಖಾದ್ಯಗಳನ್ನು ಮಾಡಿ ಸವಿಯಬಹುದಾಗಿದೆ. ಅಂದರೆ ಸಾರು, ಪಲ್ಯ, ಇಡ್ಲಿ, ಚಹಾಕ್ಕೆ ಕೂಡ ಸಬ್ಬಸಿಗೆ ಎಲೆಗಳನ್ನು ನಿಯಮಿತವಾಗಿ ಸೇವನೆ ಮಾಡುವುದು ಉತ್ತಮ.

ಈ ಬಗ್ಗೆ ಕೆಲವು ಆರೋಗ್ಯಕರ ಮಾಹಿತಿಗಳನ್ನು arogyabhagya_kannada ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದು ಸಬ್ಬಸಿಗೆ ಸೊಪ್ಪು ಬಾಣಂತಿಯರಿಗೆ ಎಷ್ಟು ಒಳ್ಳೆಯದು ಎಂಬುದರ ಕುರಿತು ಹಲವಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಹೇಳಿರುವ ಪ್ರಕಾರ ಕೇವಲ ಸಬ್ಬಸಿಗೆ ಸೊಪ್ಪು ಮಾತ್ರವಲ್ಲ ಅದರ ಬೀಜಗಳು ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.

ಇದನ್ನೂ ಓದಿ: ಒಳ ಉಡುಪಿನ ಆಯ್ಕೆ ಹೇಗಿರಬೇಕು? ಯಾವುದು ಉತ್ತಮ

ಬಾಣಂತಿಯರ ಸಮಸ್ಯೆಗೆ ರಾಮಬಾಣ

ಸಬ್ಬಸಿಗೆ ಬೀಜವನ್ನು ಎರಡು ಚಮಚದಷ್ಟು ತೆಗೆದುಕೊಂಡು ಅದನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ನೀರಿನಲ್ಲಿ ಚೆನ್ನಾಗಿ ಕುದಿಸಿ ಅಂದರೆ ಅರ್ಧ ಪಾತ್ರೆ ನೀರು ಕಾಲು ಪಾತ್ರೆಗೆ ಬರುವ ತನಕ ಸರಿಯಾಗಿ ಕುದಿಸಿ ಕುಡಿಯುವುದರಿಂದ ಬಾಣಂತಿಯರಲ್ಲಿ ಕಂಡು ಬರುವ ಅನೇಕ ಸಮಸ್ಯೆಗಳು, ಉದಾಹರಣೆಗೆ ಎದೆ ಹಾಲು ಕಡಿಮೆಯಾಗುವುದು, ಸುಸ್ತು, ಸೊಂಟ ನೋವನ್ನು ನಿವಾರಣೆ ಮಾಡುವಂತಹ ಶಕ್ತಿಯನ್ನು ಹೊಂದಿದೆ. ಅಲ್ಲದೆ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚುವರಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us