ದೀಪಾವಳಿ ಹಬ್ಬದ ಸಿಹಿ ತಿನಿಸುಗಳ ಜತೆ ಇರಲಿ ಆರೋಗ್ಯದ ಕಾಳಜಿ

ಹೆಚ್ಚಿನ ಪ್ರೊಟೀನ್ ಮತ್ತು ಹೆಚ್ಚಿನ ಫೈಬರ್ ಇರುವ ಸಿಹಿತಿಂಡಿಗಳನ್ನು ಸೇವಿಸಿ. ಯಾವುದೂ ಅತಿಯಾಗಿರಬಾರದು. ಎಲ್ಲವನ್ನೂ ಮಿತವಾಗಿ ಸೇವಿಸುವುದು ಮುಖ್ಯ.

ದೀಪಾವಳಿ ಹಬ್ಬದ ಸಿಹಿ ತಿನಿಸುಗಳ ಜತೆ ಇರಲಿ ಆರೋಗ್ಯದ ಕಾಳಜಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Oct 18, 2022 | 9:17 PM

ದೀಪಾವಳಿ (Diwali 2022) ಹಬ್ಬದಾಚರಣೆಗೆ ಎಲ್ಲೆಡೆ ಸಿದ್ಧತೆ ಆರಂಭವಾಗಿದೆ. ಬೆಳಕಿನ ಹಬ್ಬವಾದ ದೀಪಾವಳಿಗೆ ದೀಪಾಲಂಕಾರ, ಪಟಾಕಿಯ ಸದ್ದು, ಹೊಸ ಉಡುಗೆ ಇವೆಲ್ಲದರ ಜತೆ ಸಿಹಿತಿಂಡಿಗೂ (Sweets) ಹೆಚ್ಚಿನ ಪ್ರಾಧಾನ್ಯತೆ ಇದೆ. ತಮ್ಮ ಆಪ್ತರೊಂದಿಗೆ ಬೆರೆತು ಹರುಷದಿಂದ ತಿನ್ನುವ ಸಿಹಿತಿಂಡಿಯ ಗಮ್ಮತ್ತೇ ಬೇರೆ. ಹಬ್ಬದ ದಿನಗಳಲ್ಲಿ ನಾವೆಷ್ಟೇ ನಿಯಂತ್ರಿಸಿಕೊಂಡರೂ ಸಿಹಿತಿನಿಸುಗಳು ತುಸು ಹೆಚ್ಚೇ ನಮ್ಮ ಹೊಟ್ಟೆ ಸೇರುತ್ತವೆ. ಡಯಟ್ ಪಾಲಿಸುತ್ತಿದ್ದರೂ ಹಬ್ಬದ ದಿನದಂದು ಅದಕ್ಕೂ ರಜಾ ಕೊಡುವವರು ಬಹುತೇಕ ಮಂದಿ ನಮ್ಮ ನಿಮ್ಮ ಜತೆಗಿರುತ್ತಾರೆ. ಖುಷಿ ಹಂಚಲು, ಖುಷಿ ಪಡಲು ಸಿಹಿತಿನಿಸೇ ಬೇಕಲ್ಲವೇ? ಇಂತಿರುವಾಗ ಆರೋಗ್ಯದ ಬಗ್ಗೆ ಕಾಳಜಿಯೂ ಮುಖ್ಯ ಅಂತಾರೆ ಆರೋಗ್ಯ ತಜ್ಞರು. ಹಬ್ಬದ ಸಮಯದಲ್ಲಿ ಸಿಕ್ಕಿದ್ದೆಲ್ಲವನ್ನು ತಿನ್ನುವುದು ದೇಹದ ತೂಕ ಹೆಚ್ಚಿಸುವುದಲ್ಲದೆ ಇತರ ಆರೋಗ್ಯ ಸಮಸ್ಯೆಗಳನ್ನೂ ಉಂಟು ಮಾಡುತ್ತದೆ.

ಸಕ್ಕರೆ ಮತ್ತು ಮೈದಾ ದೇಹದಲ್ಲಿ ಸೋಂಕು ಉಂಟುಮಾಡುವ ಎರಡು ಪದಾರ್ಥಗಳಾಗಿವೆ, ಇದು ನಿಮ್ಮ ದೀರ್ಘಕಾಲದ ಕಾಯಿಲೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಹೆಚ್ಚಿನ ಪ್ರೊಟೀನ್ ಮತ್ತು ಹೆಚ್ಚಿನ ಫೈಬರ್ ಇರುವ ಸಿಹಿತಿಂಡಿಗಳನ್ನು ಸೇವಿಸಿ. ಯಾವುದೂ ಅತಿಯಾಗಿರಬಾರದು. ಎಲ್ಲವನ್ನೂ ಮಿತವಾಗಿ ಸೇವಿಸುವುದು ಮುಖ್ಯ. ಪೌಷ್ಟಿಕತಜ್ಞ ಭುವನ್ ರಸ್ತೋಗಿ ಅವರು ಈ ದೀಪಾವಳಿಯಲ್ಲಿ ತಿನ್ನಬಹುದಾದ ಆರೋಗ್ಯಕರ ಸಿಹಿತಿಂಡಿಗಳ ಬಗ್ಗೆ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಕೆಲವು ಸಲಹೆ ನೀಡಿದ್ದಾರೆ.

“ಹಬ್ಬದ ಸಮಯ ಬಂದಾಗ ಸಿಹಿತಿಂಡಿಗಳು ಬೇಡ ಅನ್ನುವುದುಂಟೇ? ಆದರೆ ನಿಮ್ಮ ಫಿಟ್‌ನೆಸ್ ಬಗ್ಗೆ ಅತೀವ ಕಾಳಜಿ ಮತ್ತು ಸ್ವಲ್ಪ ಮೋಜು ಮಾಡುವ ನಡುವಿನ ಸಂಘರ್ಷವು ನಿಮ್ಮ ಉತ್ಸಾಹವನ್ನು ಕುಗ್ಗಿಸುತ್ತದೆ. ಸಿಹಿತಿಂಡಿ ಇಷ್ಟವಿಲ್ಲದೇ ಇದ್ದರೆ ಮಿತವಾದ ಭೋಜನ ಸೇವಿಸಿ ಅಂತಾರೆ ರಸ್ತೋಗಿ.

ಹೆಚ್ಚಿನ ಸಿಹಿತಿಂಡಿಗಳು ಅತಿಯಾದ ಸಕ್ಕರೆ ಮತ್ತು ಮೈದಾವನ್ನು ಹೊಂದಿರುತ್ತವೆ. ಅವುಗಳು ಸಾಮಾನ್ಯವಾಗಿ ಸರಳವಾದ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತವೆ. ಇವು ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುತ್ತವೆ ಎಂದು ರಸ್ತೋಗಿ ಹೇಳುತ್ತಾರೆ. ಸರಳವಾದ ಕಾರ್ಬೋಹೈಡ್ರೇಟ್‌ಗಳ ಪರಿಣಾಮವನ್ನು ಕಡಿಮೆ ಮಾಡಲು ನಾವು ಪ್ರಯತ್ನಿಸಬೇಕಾಗಿದೆ.

ಹಾಲಿನ ಸಿಹಿತಿಂಡಿಗಳನ್ನು ಆರಿಸಿ

ಹಾಲು ಪ್ರೋಟೀನ್ ಮತ್ತು ಕೊಬ್ಬನ್ನು ಹೊಂದಿರುತ್ತದೆ. ಸಿಹಿತಿಂಡಿಗಳು ಕೆನೆ ಆಧಾರಿತವಾಗಿದ್ದರೂ ಸಹ, ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುತ್ತದೆ. ಆದ್ದರಿಂದ, ರಸ್ ಮಲಾಯಿ ಮತ್ತು ಸಕ್ಕರೆ, ಮೈದಾ ಎರಡನ್ನೂ ಹೊಂದಿರುವ ಬಿಸ್ಕತ್ತುಗಳು ಅಥವಾ ಕೇಕ್ ಗಳಿಂತ ಚೆನಾ (ಹಾಲಿನ ಪ್ರೋಟೀನ್) ಅನ್ನು ಆರಿಸಿ. ಚೆನಾದಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇದೆ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ..

ಫೈಬರ್ ಭರಿತ ಸಿಹಿತಿಂಡಿಗಳನ್ನು ಆರಿಸಿ

ಕಡಲೆಹಿಟ್ಟಿನಲ್ಲಿ ನಾರಿನಂಶ ಅಧಿಕವಾಗಿದೆ, ರಾಗಿ ಎರಡನೇ ಸ್ಥಾನದಲ್ಲಿವೆ. ರಾಗಿ ಸಿಹಿತಿಂಡಿಗಳು ಮತ್ತು ಅಟ್ಟಾ (ಗೋಧಿ) ಲಾಡೂ ಮೇಲೆ ಬೇಸನ್ ಲಾಡೂ ಅನ್ನು ಸೇವಿಸಿ. ರಾಗಿ ಮತ್ತು ಅಟ್ಟಾ ನಂತರದ ಅತಿ ಹೆಚ್ಚು ನಾರಿನಂಶವನ್ನು ಕಡಲೆಹಿಟ್ಟು ಹೊಂದಿದೆ.

ನೈಸರ್ಗಿಕ ಸಕ್ಕರೆ ಸಿಹಿಯಾಗಿಸಲಿ

ಕೃತಕ ಸಿಹಿಕಾರಕಗಳಿಗಿಂತ ಹೆಚ್ಚು ಆರೋಗ್ಯಕರವಾದ ಫ್ರಕ್ಟೋಸ್ ಮತ್ತು ಫೈಬರ್ ಹೊಂದಿರುವ ತಾಜಾ ಖರ್ಜೂರಗಳು ಮಿತವಾಗಿ ಸೇವಿಸಲು ಸುರಕ್ಷಿತ

ಹಿತ ಮಿತವಾಗಿರಲಿ

ಸ್ವಲ್ಪವೇ ಸ್ವಲ್ಪ ತಿನ್ನಿ, ಯಾವುದಕ್ಕೂ ಮಿತಿ ಇರಲಿ

ನಿಮಗೆ ಹೆಚ್ಚಿನ ಸಿಂಪಲ್ ಕಾರ್ಬ್ ಇಷ್ಟ, ಈಗೇನು ಮಾಡುವುದು?

ನಿಮಗೆ ಸಿಂಪಲ್ ಕಾರ್ಬೋಹೈಡ್ರೇಟ್ ಸಿಹಿತಿಂಡಿಗಳು ಇಷ್ಟವಾಗಿದ್ದರೆ ತಿನ್ನಿ, ಆದರೆ ಆಹಾರ ಪದ್ಧತಿಯಲ್ಲಿ ಕೆಲವು ಕಡ್ಡಾಯ ಬದಲಾವಣೆಗಳನ್ನು ಮಾಡಬಹುದು ಎಂದು ಪೌಷ್ಟಿಕತಜ್ಞರು ಹೇಳಿದ್ದಾರೆ. ಆಹಾರ ಕ್ರಮ ನಿಯಂತ್ರಿಸಿ. ಸಿಹಿತಿಂಡಿಗಳು ಹೆಚ್ಚಾಗಿ ಹೆಚ್ಚಿನ ಕಾರ್ಬೋಹೈಡ್ರೇಟ್‌ಗಳು ಮತ್ತು ಕೆಲವೊಮ್ಮೆ ಹೆಚ್ಚಿನ ಕೊಬ್ಬು ಹೊಂದಿರುತ್ತವೆ . ಆದ್ದರಿಂದ, ಊಟದಲ್ಲಿ ಸ್ವಲ್ಪ ಹೆಚ್ಚು ಪ್ರೋಟೀನ್ ಮತ್ತು ಫೈಬರ್ ಅನ್ನು ಸರಿದೂಗಿಸಿಕೊಳ್ಳಿ. ಸಾಮಾನ್ಯಕ್ಕಿಂತ ಹೆಚ್ಚು ಸ್ಪೂನ್‌ಗಳು ಪನೀರ್ ಮತ್ತು ದಾಲ್ ಅನ್ನು ಸೇವಿಸಿದ್ದರೆ ರೋಟಿ,ಅನ್ನ ಕಡಿಮೆ ಮಾಡಿ

Published On - 9:02 pm, Tue, 18 October 22

ವಾಜಪೇಯಿ ಜನ್ಮದಿನ, ವಿಡಿಯೋ ಮೂಲಕ ಅಟಲ್ ಕಾರ್ಯ ಹೊಗಳಿದ ಪ್ರಧಾನಿ ಮೋದಿ
ವಾಜಪೇಯಿ ಜನ್ಮದಿನ, ವಿಡಿಯೋ ಮೂಲಕ ಅಟಲ್ ಕಾರ್ಯ ಹೊಗಳಿದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಕ್ರಿಸ್ಮಸ್​ ಸಡಗರ​, ಲೈಟಿಂಗ್ಸ್​ನಲ್ಲಿ ಚರ್ಚ್​ಗಳು ಝಗಮಗ
ಬೆಂಗಳೂರಿನಲ್ಲಿ ಕ್ರಿಸ್ಮಸ್​ ಸಡಗರ​, ಲೈಟಿಂಗ್ಸ್​ನಲ್ಲಿ ಚರ್ಚ್​ಗಳು ಝಗಮಗ
ಆಪರೇಷನ್ ಬಳಿಕ ಶಿವರಾಜ್​ಕುಮಾರ್ ಹೆಲ್ತ್​ಅಪ್​ಡೇಟ್ ನೀಡಿದ ವೈದ್ಯರು
ಆಪರೇಷನ್ ಬಳಿಕ ಶಿವರಾಜ್​ಕುಮಾರ್ ಹೆಲ್ತ್​ಅಪ್​ಡೇಟ್ ನೀಡಿದ ವೈದ್ಯರು
ಎದುರಾಳಿಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡುವ ಶಪಥ ಮಾಡಿದ ರಜತ್
ಎದುರಾಳಿಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡುವ ಶಪಥ ಮಾಡಿದ ರಜತ್
ಮನೆಯಲ್ಲಿನ ಶಿವಲಿಂಗ ಎಷ್ಟು ಎತ್ತರ ಇರಬೇಕು, ಪೂಜಾ ವಿಧಾನ ತಿಳಿಯಿರಿ
ಮನೆಯಲ್ಲಿನ ಶಿವಲಿಂಗ ಎಷ್ಟು ಎತ್ತರ ಇರಬೇಕು, ಪೂಜಾ ವಿಧಾನ ತಿಳಿಯಿರಿ
Daily horoscope: ಈ ರಾಶಿಯವರ ಗೃಹ ನಿರ್ಮಾಣದ ಕನಸು ಇಂದು ಇಡೇರುತ್ತದೆ
Daily horoscope: ಈ ರಾಶಿಯವರ ಗೃಹ ನಿರ್ಮಾಣದ ಕನಸು ಇಂದು ಇಡೇರುತ್ತದೆ
ಆತುರದಲ್ಲಿ ಚಿಕನ್ ತಿಂದ ಧನರಾಜ್ ಆಚಾರ್; ಹೇಗಿದೆ ನೋಡಿ ಒದ್ದಾಟ
ಆತುರದಲ್ಲಿ ಚಿಕನ್ ತಿಂದ ಧನರಾಜ್ ಆಚಾರ್; ಹೇಗಿದೆ ನೋಡಿ ಒದ್ದಾಟ
ವೃದ್ಧೆಯನ್ನು ದರದರನೆ ಎಳೆದುಕೊಂಡು ಹೋಗಿ ಕಚ್ಚಿ ಕೊಂದ 7 ಬೀದಿ ನಾಯಿಗಳು
ವೃದ್ಧೆಯನ್ನು ದರದರನೆ ಎಳೆದುಕೊಂಡು ಹೋಗಿ ಕಚ್ಚಿ ಕೊಂದ 7 ಬೀದಿ ನಾಯಿಗಳು
ಚೊಚ್ಚಲ ಏಕದಿನ ಶತಕ ಸಿಡಿಸಿದ ಹರ್ಲೀನ್ ಡಿಯೋಲ್
ಚೊಚ್ಚಲ ಏಕದಿನ ಶತಕ ಸಿಡಿಸಿದ ಹರ್ಲೀನ್ ಡಿಯೋಲ್
ಉಗ್ರಾವತಾರ ತೋರಿಸಿ ಬಿಗ್ ಬಾಸ್ ಮನೆಯ ಗ್ಲಾಸ್ ಒಡೆದು ಹಾಕಿದ ಮಂಜು
ಉಗ್ರಾವತಾರ ತೋರಿಸಿ ಬಿಗ್ ಬಾಸ್ ಮನೆಯ ಗ್ಲಾಸ್ ಒಡೆದು ಹಾಕಿದ ಮಂಜು