Health Tips: ಕೊರೊನಾ ಸೋಂಕು​ ಕರುಳಿಗೆ ಪರಿಣಾಮ ಬೀರುತ್ತದೆಯೇ? ಹೀಗಿದೆ ತಜ್ಞರ ಸಲಹೆಗಳು

|

Updated on: May 30, 2021 | 1:13 PM

‘ಅನೇಕ ಜನರಲ್ಲಿ ಸೋಂಕಿಗೆ ಒಳಗಾದ ನಂತರ ಒಂದು ಸಾಮಾನ್ಯ ಲಕ್ಷಣವಿದೆ. ಅದೇನೆಂದರೆ ಕರುಳಿನ ಮತ್ತು ಹೊಟ್ಟೆಯ ಸೆಳೆತ’ ಎಂದು ಮಧುಮೇಹ ರೋಗ ತಜ್ಞೆ ರಾಶಿ ಚೌಧರಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.

Health Tips: ಕೊರೊನಾ ಸೋಂಕು​ ಕರುಳಿಗೆ ಪರಿಣಾಮ ಬೀರುತ್ತದೆಯೇ? ಹೀಗಿದೆ ತಜ್ಞರ ಸಲಹೆಗಳು
ಸಾಂದರ್ಭಿಕ ಚಿತ್ರ
Follow us on

ಶೀತ, ಜ್ವರ, ತಲೆನೋವು ಮತ್ತು ರುಚಿಯ ಅನುಭವ ಆಗದಿರುವುದು ಕೊರೊನಾ​ ಸೋಂಕಿನ ಸಾಮಾನ್ಯ ಲಕ್ಷಣಗಳಾಗಿವೆ. ಕೊರೊನಾ ಸೋಂಕಿನ ತೀವ್ರತೆ ಕರುಳು ಮತ್ತು ಹೊಟ್ಟೆಯ ಮೇಲೂ ಪರಿಣಾಮ ಬೀರುತ್ತದೆ. ‘ಅನೇಕ ಜನರಲ್ಲಿ ಸೋಂಕಿಗೆ ಒಳಗಾದ ನಂತರ ಒಂದು ಸಾಮಾನ್ಯ ಲಕ್ಷಣವಿದೆ. ಅದೇನೆಂದರೆ ಕರುಳಿನ ಮತ್ತು ಹೊಟ್ಟೆಯ ಸೆಳೆತ’ ಎಂದು ಮಧುಮೇಹ ರೋಗ ತಜ್ಞೆ ರಾಶಿ ಚೌಧರಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.

ಕೊರೊನಾ ಸೋಂಕು ಕರುಳು ಮತ್ತು ಹೊಟ್ಟೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಅವರು ವಿವರಿಸಿದ್ದಾರೆ. ‘ಕೊರೊನಾ ವೈರಸ್​ ಸಾಮಾನ್ಯವಾಗಿ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಯಾಗಿದ್ದರೂ, ಅದು ಕರುಳಿನ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಕರುಳಿನಲ್ಲಿ ಇಸಿಇ2(ಆಂಜಿಯೋಟೆನ್ಸಿನ್​ ಪರಿವರ್ತಿಸುವ ಕಿಣ್ವ2) ಗ್ರಾಹಕಗಳನ್ನು ಹೊಂದಿದ್ದೇವೆ. ನಮ್ಮ ದೇಹದಲ್ಲಿನ ಪ್ರೋಟೀನ್​ ಕೊರತೆಯಿಂದಾಗಿ ಸೋಂಕುಗಳು ಜೀವಕೋಶಗಳಿಗೆ ಪ್ರವೇಶಿಸುತ್ತದೆ ಎಂದು ಅವರು ಹೇಳಿದ್ದಾರೆ.

ಸೋಂಕುಗಳು ಕರುಳಿನಲ್ಲಿರುವ ಸೂಕ್ಷ್ಮ ಜೀವಿಗಳನ್ನು ನಾಶಪಡಿಸುತ್ತವೆ. ಇದು ಉರಿಯೂತ ಉಂಟಾಗಲು ಕಾರಣವಾಗುತ್ತದೆ. ನೀವು ತಿನ್ನುವ ಪ್ರತಿಯೊಂದು ಆಹಾರವೂ ಅಜೀರ್ಣತೆಗೆ ಕಾರಣವಾಗುತ್ತದೆ. ಉರಿಯೂತದಿಂದಾಗಿ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ.

ತಜ್ಞರ ಒಂದಿಷ್ಟು ಸಲಹೆಗಳು
ಊರಿಯೂತದಿಂದ ಹೊರಬರಲು ಸಾಕಷ್ಟು ತರಕಾರಿಗಳನ್ನು ಮತ್ತು ಹಣ್ಣುಗಳನ್ನು ಸೇವಿಸಿ. ಸೇಬು, ಟೊಮ್ಯಾಟೊ, ಈರುಳ್ಳಿ ಮುಂತಾದ ಆಹಾರ ಪದಾರ್ಥಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿರಲಿ. ಹೆಚ್ಚು ನೀರು ಕುಡಿಯಿರಿ. ನಿಮ್ಮ ದೇಹದಲ್ಲಿನ ವಿಷವನ್ನು ಹೊರಹಾಕಲು ನೀರು ಸಹಾಯ ಮಾಡುತ್ತದೆ. ಪ್ರೋಟೀನ್​ಯುಕ್ತ ಆಹಾರವನ್ನು ಹೆಚ್ಚು ಸೇವಿಸಿ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: 

Health Tips: ಕಲ್ಲು ಸಕ್ಕರೆಯಲ್ಲಿನ ಸಿಹಿಯಿಂದ ದೇಹಕ್ಕೆ ಪ್ರಯೋಜನವೇನು? ವೈದ್ಯರ ಸಲಹೆಗಳೇನು?

Health Tips: ಶೀತ, ಗಂಟಲು ಕಿರಿಕಿರಿ ಸಮಸ್ಯೆಯೇ? ಈ ಸರಳ ಮನೆಮದ್ದು ಮಾಡಿ ನೋಡಿ