AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಹಿರಂಗವಾಯ್ತು ಆಶ್ಚರ್ಯಕರ ಸಂಗತಿ; ಕೊರೊನಾ ಸೋಂಕು ಪತ್ತೆ ಹಚ್ಚಬಲ್ಲದು ನಾಯಿ

ಹೊಸ ಅಧ್ಯಯನದ ಪ್ರಕಾರ ಕೊರೊನಾ ಸೋಂಕು ತಗುಲಿದ್ದ ಮಾನವನನ್ನು ಪತ್ತೆ ಹಚ್ಚಲು ನಾಯಿ ಸಹಾಯ ಮಾಡುತ್ತದೆ ಎಂಬ ಕುತೂಹಲ ವಿಷಯವೊಂದು ಹೊರ ಬಿದ್ದಿದೆ.

ಬಹಿರಂಗವಾಯ್ತು ಆಶ್ಚರ್ಯಕರ ಸಂಗತಿ; ಕೊರೊನಾ ಸೋಂಕು ಪತ್ತೆ ಹಚ್ಚಬಲ್ಲದು ನಾಯಿ
shruti hegde
|

Updated on:May 21, 2021 | 11:17 AM

Share

ಕಳ್ಳರ ಸುಳಿವು ತಿಳಿಯಲು, ಅಡಗಿಸಿಟ್ಟ ಬಾಂಬ್​ ಪತ್ತೆಹಚ್ಚಲು ನಾಯಿಯನ್ನು ಬಳಸಿಕೊಳ್ಳುವುದು ಸಾಮಾನ್ಯ ಸಂಗತಿ. ಅದೆಷ್ಟೋ ರಹಸ್ಯ ಕಾರ್ಯಾಚರಣೆಯಲ್ಲಿ ನಾಯಿಯ ಸಹಾಯದಿಂದ ಕಳ್ಳರನ್ನು ಪತ್ತೆ ಹಚ್ಚಲಾಗಿರುವ ಸುದ್ದಿಯನ್ನು ಕೆಳಿಯೇ ಇರುತ್ತೀರಿ. ಆದರೀಗ ಹೊಸ ಅಧ್ಯಯನದ ಪ್ರಕಾರ ಕೊರೊನಾ ಸೋಂಕು ತಗುಲಿದ್ದ ಮಾನವನನ್ನು ಪತ್ತೆ ಹಚ್ಚಲು ನಾಯಿ ಸಹಾಯ ಮಾಡುತ್ತದೆ ಎಂಬ ಕುತೂಹಲ ವಿಷಯವೊಂದು ಹೊರ ಬಿದ್ದಿದೆ.

ಸಾಂಕ್ರಾಮಿಕ ರೋಗಿಗಳನ್ನು ಪತ್ತೆಹಚ್ಚುವ ಕಾರ್ಯದ ಪ್ರಯತ್ನದಲ್ಲಿ ಸ್ನಿಫಿಂಗ್​ ಕೋರೆಹಲ್ಲುಗಳನ್ನು ಹೊಂದಿರುವ ನಾಯಿಗಳು ಸಹಾಯ ಮಾಡುತ್ತವೆ ಎಂಬುದು ಹೊಸ ಅಧ್ಯಯನದಿಂದ ತಿಳಿದು ಬಂದಿದೆ. ಫ್ರೆಂಚ್ ನಡೆಸಿದ​ ಅಧ್ಯಯನವು, ಸಕಾರಾತ್ಮಕ ವರದಿಯನ್ನು ನಾಯಿಗಳು ಶೇ.97ರಷ್ಟು ಪತ್ತೆಹಚ್ಚುವ ಸಾಮರ್ಥ್ಯವನ್ನು ಹೊಂದಿವೆ ಎಂಬುದು ತಿಳಿಸಿದೆ. ಸೋಂಕು ತಗುಲಿರುವ ಮಾದರಿಗಿಂತ ನಕಾರಾತ್ಮಕ ಮಾದರಿಯನ್ನು ಬಹುಬೇಗ ಗುರುತಿಸಿದೆ.

ಮಾನವರಲ್ಲಿ ಕೊರೊನಾ ವೈರಸ್​ಅನ್ನು ಗುರುತಿಸಲು ನಾಯಿಗಳು ಸಮರ್ಥವಾಗಿವೆ. ನಾಯಿಯಲ್ಲಿರುವ ಸ್ನಿಫಿಂಗ್​ ಕೋರೆಹಲ್ಲುಗಳು ಕೊರೊನಾ ವೈರಸ್​ ಸಕಾರಾತ್ಮಕ ಮಾದರಿಯನ್ನು ಗುರುತಿಸಿದೆ.

ಕೊರೊನಾ ವೈರಸ್​ ಸಾಂಕ್ರಾಮಿಕ ರೋಗವಾದ್ದರಿಂದ ತಕ್ಷಣವೇ ವರದಿಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆರ್​ಟಿ-ಪಿಸಿಆರ್​ ಪರೀಕ್ಷೆಗೆ ಒಳಗಾಗಿ ಪ್ರಯೋಗಾಲಯಕ್ಕೆ​ ಸ್ಯಾಂಪಲ್​ ಟೆಸ್ಟ್​ ಕಳುಹಿಸಿದ ಬಳಿಗೆ ಪರೀಕ್ಷೆಯಾದ ನಂತರದಲ್ಲಿ ವರದಿ ದಾಖಲಾಗುತ್ತದೆ. ಇದಕ್ಕೆ ಖರ್ಚು ಕೂಡಾ ಇದೆ. ಹೀಗಾಗಿ ನಾಯಿಗಳ ಮೂಲಕ ಕೊರೊನಾ ವೈರಸ್​ ಪತ್ತೆ ಹಚ್ಚಲು ತಜ್ಞರು ಮುಂದಾಗಿದ್ದಾರೆ.

ಪ್ಯಾರಿಸ್​ ಬಳಿಯ ಮೈಸನ್ಸ್​ ಆಲ್ಪೋರ್ಟ್​ನಲ್ಲಿರುವ ಫ್ರಾನ್ಸ್​ನ ರಾಷ್ಟ್ರೀಯ ಪಶುವೈದ್ಯಕೀಯ ಶಾಲೆಯ ಪ್ರಯೋಗಾಲಯದಲ್ಲಿ ಈ ಕುರಿತಂತೆ ಅಧ್ಯಯನ ನಡೆಸಲಾಯಿತು. ಸಂಶೋಧನೆಯ ಕಾರ್ಯಾಚರಣೆಯಲ್ಲಿ ಒಟ್ಟು 9 ನಾಯಿಗಳು ಭಾಗವಹಿಸಿದ್ದು, ಮಾನವರ ತೋಳುಗಳಲ್ಲಿನ ಬೆವರನ್ನು ಹತ್ತಿಯಲ್ಲಿ ಹಿಡಿದು, ನಾಯಿಗಳ ಸ್ನಿಫಿಂಗ್​ ಕೋರೆಹಲ್ಲುಗಳಿಗೆ ಪರೀಕ್ಷೆಗೆಂದು ನೀಡಲಾಯಿತು. ಆ ನಾಯಿಗಳು ಮೊದಲಿನಂತೆಯೇ ಅವರೊಂದಿಗೆ ಸಂಪರ್ಕ ಹೊಂದಲಿಲ್ಲ. ಅಲ್ಲಿರುವ 350 ಜನರನ್ನು ಪರೀಕ್ಷೆ ಮಾಡಲಾಯಿತು. ಅದರಲ್ಲಿ 109 ಜನರು ಸಕಾರಾತ್ಮ ಪರೀಕ್ಷೆಗೆ ಒಳಗಾಗಿದ್ದವರಾಗಿದ್ದರು.

ಇತ್ತೀಚಿನ ಅಧ್ಯಯನವನ್ನು ಮಾರ್ಚ್​ 16ರಿಂದ ಮತ್ತು ಏಪ್ರಿಲ್​ 9ರ ನಡುವೆ ನಡೆಸಲಾಗಿದೆ. ಈ ಹಿಂದೆ ಜುಲೈನಲ್ಲಿ ಜರ್ಮನ್​ ಸಂಶೋಧಕರು ತರಬೇತಿ ಪಡೆದ ನಾಯಿಗಳು, ಸೋಂಕಿತರ ಲಾಲಾರಸ ಮಾದರಿಯ ಮೂಲಕ ವೈರಸ್​ಅನ್ನು ಪತ್ತೆಹಚ್ಚುತ್ತದೆ ಎಂಬುದನ್ನು ತೋರಿಸಿದ್ದರು.

ಇದನ್ನೂ ಓದಿ: ಗ್ರಾಮೀಣ ಪ್ರದೇಶಗಳಿಗೆ ಪ್ರತ್ಯೇಕ ಕೊವಿಡ್ ಗೈಡ್​ಲೈನ್ಸ್; ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ

Published On - 4:27 pm, Thu, 20 May 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ