Health Tips: ತಿನ್ನಿರಿ, ಜೀರ್ಣಿಸಿಕೊಳ್ಳಿ, ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ

ದಿನವಿಡೀ ಸಕ್ರಿಯವಾಗಿರಲು ನಿಮಗೆ ಸಹಾಯ ಮಾಡುವ ಕೆಲವು ಬೆಳಗ್ಗಿನ ಆರೋಗ್ಯಕರ ಆಹಾರ ಪದ್ದತಿಗಳ ಬಗ್ಗೆ ಮಾಹಿತಿ ನೀಡಿದ್ದು ಇವು ಜೀರ್ಣಶಕ್ತಿಯನ್ನು ಹೆಚ್ಚಿಸಿ ಚಯಾಪಚಯ ಪ್ರಕ್ರಿಯೆ ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ. ಈ ಬಗ್ಗೆ ಇಲ್ಲಿದೆ ಮಾಹಿತಿ.

Health Tips: ತಿನ್ನಿರಿ, ಜೀರ್ಣಿಸಿಕೊಳ್ಳಿ, ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 16, 2023 | 3:02 PM

ಫಿಟ್ನೆಸ್ ಜಗತ್ತಿನಲ್ಲಿ ‘ಚಯಾಪಚಯ’ ಕ್ರಿಯೆ ಎಂಬುದು ಯಾವಾಗಲೂ ಚರ್ಚೆಯಲ್ಲಿರುವ ವಿಷಯ. ಅದಕ್ಕಿಂತ ಹೆಚ್ಚಾಗಿ ನಮ್ಮ ಆರೋಗ್ಯವು ಈ ವ್ಯವಸ್ಥೆಯ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. ಹೆಚ್ಚುವರಿ ತೂಕವನ್ನು ಕಡಿಮೆ ಮಾಡಿಕೊಳ್ಳಲು ಅಥವಾ ಆರೋಗ್ಯಕರ ಕರುಳನ್ನು ಕಾಪಾಡಿಕೊಳ್ಳಲು, ಸರಿಯಾದ ಚಯಾಪಚಯ ಕ್ರಿಯೆಯ ಅಗತ್ಯವಿದೆ. ಹಾಗಾದರೆ ಜೀರ್ಣಕ್ರಿಯೆ ಸರಿಯಾಗಿ ಆಗಲು ಏನು ಮಾಡಬೇಕು? ಕೇಂಬ್ರಿಡ್ಜ್ ನಿಘಂಟಿನ ಪ್ರಕಾರ, ಇದು ನಮ್ಮ ದೇಹದಲ್ಲಿನ ರಾಸಾಯನಿಕ ಪ್ರಕ್ರಿಯೆಯಾಗಿದ್ದು, ಇದು ಶಕ್ತಿಯನ್ನು, ಬೆಳವಣಿಗೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ಕಾರಣವಾಗುತ್ತದೆ. ಇದರರ್ಥ, ನಾವು ಪ್ರತಿದಿನ ತಿನ್ನುವ ಆಹಾರವು ನಮ್ಮ ಚಯಾಪಚಯ ವ್ಯವಸ್ಥೆಯನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮತ್ತು ಪ್ರಪಂಚದಾದ್ಯಂತ ಇರುವ ತಜ್ಞರ ಪ್ರಕಾರ, ದಿನದ ಮೊದಲ ಆಹಾರ ಚಯಾಪಚಯ ಕ್ರಿಯೆಗೆ ಪೂರಕವಾಗಿರುತ್ತದೆ. ಹಾಗಾಗಿ ದಿನವಿಡೀ ಸಕ್ರಿಯವಾಗಿರಲು ನಿಮಗೆ ಸಹಾಯ ಮಾಡುವ ಕೆಲವು ಬೆಳಗ್ಗಿನ ಆರೋಗ್ಯಕರ ಪದ್ದತಿಗಳ ಬಗ್ಗೆ ಮಾಹಿತಿ ನೀಡಿದ್ದು ಇವು ಜೀರ್ಣಶಕ್ತಿಯನ್ನು ಹೆಚ್ಚಿಸಿ ಚಯಾಪಚಯ ಪ್ರಕ್ರಿಯೆ ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ.

ಚಯಾಪಚಯವನ್ನು ಹೆಚ್ಚಿಸಲು ಬೆಳಗಿನ ಉಪಾಹಾರ ಏಕೆ ಮುಖ್ಯ?

ಬೆಳಿಗ್ಗೆ ನೀವು ತಿನ್ನುವ ಆಹಾರ ನಿಮ್ಮ ಪೂರ್ತಿ ದಿನದ ಕೈಗನ್ನಡಿ ಎಂಬ ಮಾತನ್ನು ನೀವು ಕೇಳಿರಬಹುದು. ಇದು ಸತ್ಯವಾದ ಮಾತು. ಏಕೆಂದರೆ ಬೆಳಗಿನ ಉಪಾಹಾರವು ನಮ್ಮ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ. ಬೆಳಿಗ್ಗೆ ಸಮತೋಲಿತ ಆಹಾರ ತಿನ್ನುವುದರಿಂದ ನಿಮ್ಮ ದೇಹವು ಅಗತ್ಯ ಪೋಷಕಾಂಶಗಳಿಂದ ತುಂಬಿರುತ್ತದೆ. ಇದರಿಂದ ನಿಮ್ಮ ಶಕ್ತಿಯ ಮಟ್ಟ ಹೆಚ್ಚಾಗುವ ಜೊತೆಗೆ ದೇಹದಲ್ಲಿನ ನಿರ್ವಿಷೀಕರಣ ಮತ್ತು ಪೋಷಣೆ ಪ್ರಕ್ರಿಯೆಗಳನ್ನು ಸಕ್ರಿಯಗೊಳಿಸುತ್ತದೆ.

ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುವ 6 ಆರೋಗ್ಯಕರ ಪದ್ದತಿಗಳ ಬಗ್ಗೆ ಇಲ್ಲಿದೆ ಮಾಹಿತಿ:

1. ಕಡ್ಡಾಯವಾಗಿ ನೀರು ಕುಡಿಯಿರಿ: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಕರುಳಿನ ಚಲನೆಯನ್ನು ನಿಯಂತ್ರಿಸುವ ಮೂಲಕ ದೇಹದಲ್ಲಿ ನಿರ್ಮಾಣಗೊಂಡಿರುವ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ಚಯಾಪಚಯ ಕ್ರಿಯೆಯ ಪ್ರಕ್ರಿಯೆಗೆ ಮತ್ತಷ್ಟು ಸಹಾಯ ಮಾಡುತ್ತದೆ, ಶಕ್ತಿ, ರೋಗ ನಿರೋಧಕ ಶಕ್ತಿ, ತೂಕ ನಷ್ಟ, ರಕ್ತದಲ್ಲಿನ ಸಕ್ಕರೆ ನಿರ್ವಹಣೆ ಮತ್ತು ಹೆಚ್ಚಿನದನ್ನು ಇದು ಉತ್ತೇಜಿಸುತ್ತದೆ.

2. ಡಿಟಾಕ್ಸ್ ಪಾನೀಯವನ್ನು ಕುಡಿಯಿರಿ: ಮೊದಲೇ ಹೇಳಿದಂತೆ, ಕುಡಿಯುವ ನೀರು ನಿರ್ವಿಷೀಕರಣವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಸರಿಯಾದ ಪ್ರಮಾಣದಲ್ಲಿ ಇತರ ಕೆಲವು ಆರೋಗ್ಯಕರ ಪದಾರ್ಥಗಳನ್ನು ಸೇರಿಸುವುದು ಶುದ್ಧೀಕರಣ ಪ್ರಕ್ರಿಯೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ, ದೇಹದಲ್ಲಿ ಚಯಾಪಚಯ ಮತ್ತು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ನಿಮ್ಮ ಬೆಳಗಿನ ಜೀರ್ಣಕ್ರಿಯೆಗೆ ಕೆಲವು ಡಿಟಾಕ್ಸ್ ನೀರಿನ ಆಯ್ಕೆಗಳಿದ್ದು ನಿಮಗಿಷ್ಟವಾದ ಪಾನೀಯವನ್ನು ಮಾಡಿ ಕುಡಿಯಬಹುದು. ಉದಾಹರಣೆಗೆ ಮರ ಸೇಬುವಿನ (ಪಿಯರ್) ಪಾನೀಯವನ್ನು ನೀವು ಕುಡಿಯುವುದರಿಂದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ ನಿಮ್ಮನ್ನು ಆರೋಗ್ಯಕರವಾಗಿರಿಸುತ್ತದೆ.

3. ಬೆಳಗಿನ ಉಪಾಹಾರವನ್ನು ತಪ್ಪಿಸಬೇಡಿ: ನೀರು ಅಥವಾ ಡಿಟಾಕ್ಸ್ ಪಾನೀಯದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿದ ನಂತರ, ಬೆಳಿಗ್ಗೆ ಸರಿಯಾದ ಉಪಹಾರ ಸೇವಿಸುವುದು ಮುಖ್ಯವಾಗಿರುತ್ತದೆ. ಬೆಳಗಿನ ತಿಂಡಿಯನ್ನು ಬಿಟ್ಟು ಬಿಡುವುದು ನಿಮ್ಮ ಕರುಳಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ದಿನದ ಉಳಿದ ಸಮಯ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ನಿಧಾನಗೊಳ್ಳುತ್ತದೆ. ಅದು ಅಷ್ಟೆ ಅಲ್ಲ. ಇದು ಉರಿಯೂತಕ್ಕೆ ಕಾರಣವಾಗಬಹುದು, ಜೊತೆಗೆ ದೇಹದಲ್ಲಿನ ಇತರ ಪ್ರಮುಖ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತದೆ.

4. ನಿಮ್ಮ ಊಟದಲ್ಲಿ ಪ್ರೋಟೀನ್ ಮತ್ತು ಫೈಬರ್ ಹೆಚ್ಚಾಗಿ ಸೇರಿಸಿ: ಸರಿಯಾದ ಉಪಾಹಾರವನ್ನು ಸೇವಿಸುವುದು ಎಷ್ಟು ಮುಖ್ಯ ಎಂದು ನಮಗೆಲ್ಲರಿಗೂ ತಿಳಿದಿದೆ. ಅದರ ಜೊತೆಗೆ ಊಟದಲ್ಲಿ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಅಂದರೆ ವಿಶೇಷವಾಗಿ ಪ್ರೋಟೀನ್ ಮತ್ತು ಫೈಬರ್ ಅನ್ನು ಸೇರಿಸಬೇಕು. ಈ ಪೋಷಕಾಂಶಗಳು ನಿಮಗೆ ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿರಲು ಸಹಾಯ ಮಾಡುತ್ತದೆ. ಇದರಿಂದ ನೀವು ಪದೇ ಪದೇ ಕುರುಕಲು ತಿಂಡಿ ತಿನ್ನುವುದನ್ನು ತಪ್ಪಿಸಿ, ತೂಕ ಹೆಚ್ಚಾಗುವುದನ್ನು ತಪ್ಪಿಸುತ್ತದೆ.

ಇದನ್ನೂ ಓದಿ:Health Tips for 2023: ನಿಮ್ಮನ್ನು ಆರೋಗ್ಯಕರವಾಗಿರಿಸಿಕೊಳ್ಳಲು ಈ ಸಿಂಪಲ್ ಟಿಪ್ಸ್ ಪಾಲಿಸಿ

5. ಅತೀಯಾದ ಸಕ್ಕರೆ ಸೇವನೆಯನ್ನು ತಪ್ಪಿಸಿ: ನಿಮ್ಮಲ್ಲಿ ಅನೇಕರು ಸ್ವಲ್ಪ ಜ್ಯೂಸ್ ಕುಡಿಯುವುದರಿಂದಲೋ ಅಥವಾ ಸ್ವೀಟ್ ತಿನ್ನುವುದರೊಂದಿಗೆ ದಿನವನ್ನು ಪ್ರಾರಂಭಿಸಲು ಇಷ್ಟಪಡುತ್ತೀರಿ. ಅಥವಾ ತಿಂಡಿ, ಊಟದ ಜೊತೆ ಸಕ್ಕರೆ ಸೇರಿಸಿದ ದ್ರವ ಪದಾರ್ಥಗಳನ್ನು ಸೇವಿಸುತ್ತೀರಿ ಆದರೆ ಇದು ನಿಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದರ ಬಗ್ಗೆ ನಿಮಗೆ ಅರಿವಿದೆಯಾ? ಕೃತಕ ಮತ್ತು ಪ್ಯಾಕೇಜ್ ಮಾಡಿದವುಗಳನ್ನು ಕುಡಿಯುವುದರಿಂದ ಅಥವಾ ಸೇವಿಸುವುದರಿಂದ ನಿಜವಾದ ಪೋಷಕಾಂಶಗಳ ಬದಲು ಹೆಚ್ಚುವರಿ ಸಕ್ಕರೆ ಸೇರುತ್ತದೆ. ಇದು ನಿಮಗೆ ಅನಗತ್ಯ ಕ್ಯಾಲೊರಿಗಳನ್ನು ನಿಮ್ಮ ದೇಹಕ್ಕೆ ಉಚಿತವಾಗಿ ನೀಡುವುದಲ್ಲದೆ ಚಯಾಪಚಯ ಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ, ಇದರಿಂದ ನಿಮಗೆ ದೇಹ ಭಾರವಾದಂತೆ ಆಗುವುದು ಮತ್ತು ಆಲಸ್ಯ ಉಂಟಾಗುವುದರಲ್ಲಿ ಸಂಶಯವಿಲ್ಲ.

6. ಕೆಫೀನ್ ಸೇವನೆ: ಒಂದು ಕಪ್ ಕಾಫಿ ಅಥವಾ ಚಹಾವಿಲ್ಲದೆ ಬೆಳಿಗ್ಗೆಯನ್ನು ನಾವು ಊಹಿಸಲು ಸಾಧ್ಯವಿಲ್ಲ. ಇದು ನಮಗೆ ಒಂದು ರೀತಿಯ ಅಭ್ಯಾಸ. ನಾವು ಹಾಸಿಗೆಯಿಂದ ಎದ್ದು ನಮ್ಮ ದಿನವನ್ನು ಪ್ರಾರಂಭಿಸಲು ನಮಗೆ ಇದೇ ಸಹಾಯ ಮಾಡುತ್ತದೆ. ಅದಲ್ಲದೆ, ಇದು ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ದೇಹದ ಒಟ್ಟಾರೆ ಕಾರ್ಯನಿರ್ವಹಣೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ನೆನಪಿಡಿ, ಯಾವುದನ್ನಾದರೂ ಅತಿಯಾಗಿ ಸೇವಿಸುವುದರಿಂದ ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ನಿಮ್ಮ ದೇಹದ ಪ್ರಕಾರ ಮತ್ತು ಸಹಿಷ್ಣುತೆಗೆ ಅನುಗುಣವಾಗಿ ಈ ಆರೋಗ್ಯಕರ ಬೆಳಿಗ್ಗೆ ಅನುಸರಿಸಬೇಕಾದ ಆಹಾರ ಪದ್ದತಿಗಳನ್ನು ಆನಂದಿಸಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 10:58 am, Fri, 16 June 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ